Crop Insurance Release: ರಾಜ್ಯ ಸರ್ಕಾರ ಬೆಳೆ ವಿಮೆ ಪರಿಹಾರ ಬಿಡುಗಡೆ ಪ್ರಕ್ರಿಯೆಗೆ ವೇಗ ನೀಡಿದ್ದು; ₹585.72 ಕೋಟಿ ಮಂಜೂರು ಮಾಡಿದೆ. ಈಗಾಗಲೇ ₹243.44 ಕೋಟಿ ಜಮೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾವಿರಾರು ರೈತರು ಬೆಳೆ ನಷ್ಟದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಳೆ ವಿಮೆ ಪರಿಹಾರ (Crop Insurance Compensation) ಬಿಡುಗಡೆ ಪ್ರಕ್ರಿಯೆಗೆ ವೇಗ ನೀಡಿದೆ.
ಹಂತ ಹಂತವಾಗಿ ಪರಿಹಾರದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಇನ್ನೂ ಉಳಿದ ಮೊತ್ತವನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ.
ಇದನ್ನೂ ಓದಿ: Podi Process Land Subdivision: ಜಮೀನು ಪೋಡಿ ಮಾಡಿಸಿಕೊಳ್ಳುವುದು ಹೇಗೆ? ರೈತರಿಗೆ ಹಂತ-ಹಂತದ ಮಾಹಿತಿ
ರೈತರಿಗೆ ಎಷ್ಟು ಪರಿಹಾರ ಮಂಜೂರಾಗಿದೆ?
ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದ ರೈತರಿಗೆ ಒಟ್ಟು ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಈ ಪೈಕಿ ₹243.44 ಕೋಟಿ ಮೊತ್ತವನ್ನು ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಇದರ ಜೊತೆಗೆ ಮತ್ತೊಂದು ₹225 ಕೋಟಿ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು, ಉಳಿದ ಅರ್ಹ ರೈತರಿಗೆ ಶೀಘ್ರದಲ್ಲೇ ಹಣ ತಲುಪುವ ನಿರೀಕ್ಷೆ ಇದೆ. ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈ ಪರಿಹಾರ ಮೊತ್ತ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಲಿದೆ.

ಬರ ಘೋಷಣೆಗೆ ಸರ್ಕಾರದ ಸಿದ್ಧತೆ
ಮುಂಗಾರು ಮಳೆಯ ಕೊರತೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ತೀವ್ರ ಹಿನ್ನಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬರಪೀಡಿತ ಪ್ರದೇಶಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದೆ.
ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ
ಮುಖ್ಯಮAತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆಯಂತೆ, ಸತತ ಮೂರು ವಾರ ಮಳೆಯಾಗದ ಅಥವಾ ಸಾಮಾನ್ಯ ಮಳೆಯ ಶೇ.60ಕ್ಕಿಂತ ಕಡಿಮೆ ಮಳೆ ದಾಖಲಾಗಿರುವ ಪ್ರದೇಶಗಳನ್ನು ಸರ್ಕಾರದ ಮಾನದಂಡಗಳ ಪ್ರಕಾರ ಪರಿಶೀಲಿಸಿ ಬರ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಸಂಬAಧ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ (CEO) ಮಾಹಿತಿ ಕೇಳಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ
ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗಿದೆ?
ಈ ಬಾರಿ ವಾಡಿಕೆಯಂತೆ ಮಳೆ ಸುರಿಯದ ಕಾರಣ ರಾಜ್ಯದ ಅನೇಕ ಭಾಗಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಅಂಕಿ-ಅAಶಗಳ ಪ್ರಕಾರ, 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ಎದುರಾಗಿ ಕೇವಲ ಸುಮಾರು 29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ.
ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
ಹಲವೆಡೆ ಬಿತ್ತಿದ ಬೀಜಗಳು ಮೊಳಕೆಯೇ ಒಡೆಯದೆ ಉಳಿದಿದ್ದು, ಇನ್ನೂ ಕೆಲವು ಕಡೆ ತೇವಾಂಶದ ಕೊರತೆಯಿಂದ ಬೆಳೆ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಈ ವರ್ಷದ ಇಳುವರಿಯ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.
ಗದಗ, ಹಾವೇರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ ಕಂಡುಬಂದಿದೆ.
ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ
ಮೊಬೈಲ್ನಲ್ಲೇ ಬೆಳೆ ವಿಮೆ ಸ್ಟೇಟಸ್ (Status) ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬೆಳೆ ವಿಮೆ ಪರಿಹಾರದ ಸ್ಥಿತಿ (Crop Insurance Status) ಅನ್ನು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಪರಿಶೀಲಿಸಬಹುದು. ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ:
- ಅಧಿಕೃತ samrakshane.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ.
- Season ವಿಭಾಗದಲ್ಲಿ Kharif (ಖಾರೀಫ್) ಆಯ್ಕೆ ಮಾಡಿ.
- ನಂತರ Check Status / Application Status ಆಯ್ಕೆಯನ್ನು ಕ್ಲಿಕ್ ಮಾಡಿ.
- Mobile Number ಆಯ್ಕೆ ಮಾಡಿಕೊಂಡು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಪರದೆಯಲ್ಲಿ ಕಾಣುವ Captcha Code ಅನ್ನು ನಮೂದಿಸಿ Search ಮೇಲೆ ಕ್ಲಿಕ್ ಮಾಡಿ.
- ನಂತರ ಸಂಬಂಧಿಸಿದ Select ಆಯ್ಕೆಯನ್ನು ಆರಿಸಿ.
- ಕೊನೆಯಲ್ಲಿ View Details ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಪರಿಹಾರದ ಸಂಪೂರ್ಣ ಮಾಹಿತಿ ಹಾಗೂ ಹಣ ಜಮೆಯಾದ ವಿವರವನ್ನು ನೋಡಬಹುದು.
ಕೊನೆಯಲ್ಲಿ View Details ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಪರಿಹಾರದ ಸಂಪೂರ್ಣ ಮಾಹಿತಿ ಹಾಗೂ ಹಣ ಜಮೆಯಾದ ವಿವರವನ್ನು ನೋಡಬಹುದು.
ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು
ಬೆಳೆ ವಿಮೆ ಯೋಜನೆಯ ಪ್ರಯೋಜನವೇನು?
ಬೆಳೆ ವಿಮೆ ಯೋಜನೆ (Crop Insurance Scheme) ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಪ್ರಮುಖ ಯೋಜನೆಯಾಗಿದೆ. ಬರ, ಅತಿವೃಷ್ಟಿ, ಪ್ರವಾಹ, ಗಾಳಿ, ಕೀಟ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದಾಗ ರೈತರಿಗೆ ಪರಿಹಾರ ದೊರೆಯುವಂತೆ ಈ ಯೋಜನೆ ರೂಪಿಸಲಾಗಿದೆ.
ಪರಿಹಾರ ಹಣ ದೊರಕುವುದರಿಂದ ರೈತರು ಮುಂದಿನ ಕೃಷಿ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ಸಹಾಯವಾಗುತ್ತದೆ. ಬೆಳೆ ನಷ್ಟದಿಂದ ಉಂಟಾಗುವ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ.
ರೈತರು ಗಮನಿಸಬೇಕಾದ ವಿಷಯ
ಬೆಳೆ ವಿಮೆ ಪರಿಹಾರ ಮೊತ್ತವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ (DBT – Direct Benefit Transfer) ಜಮಾ ಮಾಡುತ್ತಿದೆ. ಆದ್ದರಿಂದ ರೈತರು ತಮ್ಮ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಯ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ಪರಿಹಾರ ಹಣದ ಕುರಿತು ಯಾವುದೇ ಸಂದೇಹ ಇದ್ದರೆ ಸಮೀಪದ ಕೃಷಿ ಇಲಾಖೆ ಕಚೇರಿ ಅಥವಾ ಸಂಬAಧಿತ ಅಧಿಕೃತ ಪೋರ್ಟಲ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ: Karnataka Fasal Bima Yojana: ಮಳೆ ಕೈಕೊಟ್ಟರೆ ಚಿಂತೆ ಬೇಡ! ರೈತರ ಖಾತೆಗೆ ಬರಲಿದೆ ಬೆಳೆ ವಿಮೆ ಹಣ
ರಾಜ್ಯದಲ್ಲಿ ಬರಗಾಲದ ಪರಿಣಾಮ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ವೇಗ ನೀಡಿರುವುದು ರೈತರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಆಸರೆಯಾಗಲಿದೆ. ಈಗಾಗಲೇ ನೂರಾರು ಕೋಟಿ ರೂಪಾಯಿ ರೈತರ ಖಾತೆಗೆ ಜಮೆಯಾಗಿದೆ.
ಇನ್ನುಳಿದ ಮೊತ್ತವೂ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಜೊತೆಗೆ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆಗೆ ಅಗತ್ಯ ಕ್ರಮ ಕೈಗೊಂಡಿರುವುದರಿAದ ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಪರಿಹಾರ ಹಾಗೂ ನೆರವು ದೊರೆಯುವ ಸಾಧ್ಯತೆ ಇದೆ.
Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.