Gruhalakshmi Yojana Diwali Payment- ಗೃಹಲಕ್ಷ್ಮಿ ಯೋಜನೆಗೆ ಎರಡು ವರ್ಷ: ಮಹಿಳೆಯರ ಖಾತೆಗೆ ದೀಪಾವಳಿಗೆ 2000 ರೂ. ಹಣ ಜಮಾ
Gruhalakshmi Yojana Diwali Payment 2025

ದೀಪಾವಳಿಗೆ ಗೃಹಲಕ್ಷ್ಮಿ ಯೋಜನೆ 2000 ರೂ. ಹಣ ಜಮಾ (Gruhalakshmi Yojana Diwali Payment) ಆಗಲಿದ್ದು; ಈ ತನಕ ಸಂದಾಯವಾದ ಕಂತುಗಳೆಷ್ಟು? ಬಾಕಿ ಉಳಿದಿರುವ ಕಂತುಗಳೆಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡು ಕಳೆದ ಆಗಸ್ಟ್ ತಿಂಗಳಿಗೆ ಬರೋಬ್ಬರಿ ಎರಡು ವರ್ಷ ಪೂರ್ಣಗೊಂಡಿದೆ. ಇದೀಗ 24ನೇ ಕಂತಿನ ಹಣ ಸಂದಾಯಕ್ಕೆ ದಿನಗಣನೆ ಶುರುವಾಗಿದೆ.
ಇದನ್ನೂ ಓದಿ: Raitara Bele Nashta Parihara- ರೈತರ ಬೆಳೆನಷ್ಟ ಪರಿಹಾರ ಹೆಚ್ಚಳ | ಯಾವ ಬೆಳೆಗೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ಮಾಹಿತಿ
ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ ಆಗಲಿದ್ದು; ಹಬ್ಬಕ್ಕೆ ಮಹಿಳೆಯರ ಖಾತೆಗೆ 2,000 ರೂ. ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
‘ಹಾಸನಾಂಬೆ’ ದರ್ಶನ ಸಂದರ್ಭದಲ್ಲಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಜುಲೈ ತಿಂಗಳು ಕಂತು ಸಂದಾಯ ಮಾಡಲಾಗಿದೆ. ಇದೀಗ ದೀಪಾವಳಿ ಹೊತ್ತಿಗೆ ಆಗಸ್ಟ್ ತಿಂಗಳು ಕಂತಿನ ಹಣ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ.

ಎಷ್ಟು ಕಂತಿನ ಹಣ ಸಂದಾಯವಾಗಿದೆ?
ಗೃಹಲಕ್ಷ್ಮಿ ಯೋಜನೆಯು 2023ರ ಆಗಸ್ಟ್ ತಿಂಗಳಿಂದ ಆರಂಭಗೊಂಡಿದ್ದು 2025ರ ಆಗಸ್ಟ್ ತಿಂಗಳಿಗೆ ಭರ್ತಿ ಎರಡು ವರ್ಷ ಮುಗಿಯಲಿದೆ. ಈಗಾಗಲೇ ಎಲ್ಲಾ 23 ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ.
ಇದೀಗ ಆಗಸ್ಟ್ ತಿಂಗಳ 24ನೇ ಕಂತು ಸಂದಾಯವಾದರೆ ಒಟ್ಟು 24 ತಿಂಗಳು ಅಂದರೆ ಎರಡು ವರ್ಷದ ಎಲ್ಲಾ ಕಂತಿನ ಹಣವನ್ನು ಮಹಿಳೆಯರು ಪಡೆದಂತಾಗುತ್ತದೆ. ಅಲ್ಲಿಗೆ ಪ್ರತೀ ಫಲಾನುಭವಿಗೂ ಬರೋಬ್ಬರಿ 48,000 ಸಿಕ್ಕಿದಂತಾಗುತ್ತದೆ!
ಇದನ್ನೂ ಓದಿ: Free Sheep Goat Farming Training – ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ | ಊಟ, ವಸತಿಯೊಂದಿಗೆ 13 ದಿನಗಳ ಶಿಬಿರ
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳೆಷ್ಟು?
ಮೊದಲೇ ಹೇಳಿದಂತೆ ಈತನಕ ಒಟ್ಟು 23 ಕಂತುಗಳು ಸಂದಾಯವಾಗಿದ್ದು; ಇದೀಗ ಎರಡು ಕಂತುಗಳು ಅಂದರೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಕಂತುಗಳು ಮಾತ್ರ ಬಾಕಿ ಉಳಿದಿವೆ.
ಆಗಸ್ಟ್ ಕಂತು ದೀಪಾವಳಿ ಸಮಯಕ್ಕೆ ಸಂದಾಯವಾಗಲಿದ್ದು; ಸೆಪ್ಟೆಂಬರ್ ತಿಂಗಳ ಹಣವನ್ನು ಇದೇ ಅಕ್ಟೋಬರ್ ಅಂತ್ಯದೊಳಗೇ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ತಾಂತ್ರಿಕ ಕಾರಣಗಳಿಂದ ಕೆಲವು ಜಿಲ್ಲೆಗಳ ಫಲಾನುಭವಿಗಳಿಗೆ ಎಲ್ಲಾ ಕಂತಿನ ಹಣ ಸಿಕ್ಕಿಲ್ಲ. ಆದರೆ, ಸಿಗದೇ ಉಳಿದ ಬಾಕಿ ಕಂತಿನ ಹಣವೆಲ್ಲ ಒಟ್ಟಿಗೇ ಜಮಾ ಆಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.



