JobsNews

KVAFSU Bidar Recruitment 2025- ಪದವಿ, ಪಿಯುಸಿ ಪಾಸಾದವರಿಗೆ ಕರ್ನಾಟಕ ಪಶು ಯೂನಿವರ್ಸಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ…

KVAFSU Bidar Recruitment 2025

Spread the love

ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಎಸ್‌ಡಿಎ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ (KVAFSU Bidar Recruitment 2025) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ (Karnataka Veterinary, Animal and Fisheries Sciences University – KVAFSU) ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ವಿಶ್ವವಿದ್ಯಾಲಯವು ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ (SDA) ಹಾಗೂ ಸ್ಟೆನೋಗ್ರಾಫರ್ (Stenographer) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಅವಕಾಶ ದೊರಕುವುದು ಉದ್ಯೋಗಾರ್ಹರಿಗೆ ಉತ್ತಮ ವೃತ್ತಿ ಅವಕಾಶವಾಗಿದೆ. ಸರ್ಕಾರದ ವೇತನ ಶ್ರೇಣಿ, ಸೇವಾ ಭದ್ರತೆ ಹಾಗೂ ನಿವೃತ್ತಿ ಸೌಲಭ್ಯಗಳು ಈ ಹುದ್ದೆಗಳ ಪ್ರಮುಖ ಆಕರ್ಷಣೆಗಳಾಗಿವೆ.

ಇದನ್ನೂ ಓದಿ: PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ ವಿವರ

ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ (SDA): ಕಚೇರಿ ಆಡಳಿತ ಹಾಗೂ ದಾಖಲೆ ನಿರ್ವಹಣೆಗೆ ಸಂಬAಧಿಸಿದ ಕೆಲಸವನ್ನು ಹೊಂದಿರುವ ಈ ಹುದ್ದೆಗೆ ಯಾವುದೇ ಪದವಿ (Degree) ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಟೆನೋಗ್ರಾಫರ್ (Stenographer): ಕಚೇರಿ ಸಂವಹನ, ಟೈಪಿಂಗ್, ಸ್ಟೆನೋ ಗ್ರಾಫಿಕ್ ಟಿಪ್ಪಣಿಗಳ ರಚನೆ ಕಾರ್ಯವ್ಯಾಪ್ತಿ ಹೊಂದಿರುವ ಈ ಹುದ್ದೆಗೆ ಪಿಯುಸಿ ಪಾಸಾಗಿರಬೇಕು. ಜೊತೆಗೆ Senior Grade Typewriting (Kannada & English) ಪ್ರಮಾಣಪತ್ರ ಹೊಂದಿರಬೇಕು.

ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಎಸ್‌ಡಿಎ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ...
KVAFSU Bidar Recruitment 2025
ಮಾಸಿಕ ವೇತನ

ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 34,100 ರೂ. ರಿಂದ 67,600 ರೂ. ವರೆಗೆ ಹಾಗೂ ಸ್ಟೆನೋಗ್ರಾಫರ್ ಹುದ್ದೆಗೆ 44,425 ರೂ. ರಿಂದ 83,700 ರೂ. ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಜೊತೆಗೆ ಸರ್ಕಾರಿ ಸವಲತ್ತುಗಳು ಅನ್ವಯವಾಗಲಿವೆ.

ಇದನ್ನೂ ಓದಿ: PF Fast Refund- ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್ ಹಣ ಖಾತೆಗೆ ಜಮಾ | ಇಪಿಎಫ್‌ಒ ಹೊಸ ವ್ಯವಸ್ಥೆ ಜಾರಿ

ಅರ್ಜಿ ಶುಲ್ಕ

ಮೇಲ್ಕಾಣಿಸಿದ ಉದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಅದಕ್ಕಾಗಿ Karnataka Veterinary, Animal and Fisheries Sciences University ಹೆಸರಿನಲ್ಲಿ Demand Draft (DD) ಪಡೆದು ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 30 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದ್ದು, ಆ ದಿನದೊಳಗೆ ಅರ್ಜಿಯನ್ನು ತಲುಪುವಂತೆ ಅಂಚೆ ಮೂಲಕ ಕಳುಹಿಸಿಕೊಡಬೇಕು. ವಿಳಂಬವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ನಮೂನೆ ವಿವಿಯ ಅಧಿಕೃತ ವೆಬ್‌ಸೈಟ್ kvafsu.edu.inನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಅದನ್ನು ಡೌನ್‌ಲೋಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಪೂರ್ಣಗೊಳಿಸಿ, ನಿಗದಿತ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕಳಿಸಬೇಕಾದ ವಿಳಾಸ:
The Registrar,
Karnataka Veterinary, Animal and Fisheries Sciences University,
Nandinagar, P.B.No-06,
Bidar – 585226

ಇದನ್ನೂ ಓದಿ: Sub Inspector Recruitment- 3,073 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

ಮುಖ್ಯ ಸೂಚನೆಗಳು

ಅರ್ಜಿ ಪೂರಕ ದಾಖಲೆಗಳು (ಶೈಕ್ಷಣಿಕ ಪ್ರಮಾಣಪತ್ರ, ಟೈಪಿಂಗ್ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಕಾಸ್ಟ್ ಸರ್ಟಿಫಿಕೇಟ್, ಇತ್ಯಾದಿ) ಸೇರಿಸಿ ಕಳುಹಿಸಬೇಕು.

ಎಲ್ಲ ದಾಖಲೆಗಳೂ ಸ್ವಯಂ ದೃಢೀಕರಿಸಿದ ನಕಲು (self-attested copies) ಆಗಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿಯನ್ನು ಕಳುಹಿಸಬೇಕು.

ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 30-10-2025

Karnataka 994 PDO Vacancies- 994 ಪಿಡಿಒ ಹುದ್ದೆ ಖಾಲಿ | ನೇಮಕಾತಿ ಯಾವಾಗ? ಜಿಲ್ಲಾವಾರು ಖಾಲಿ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!