Hingaru Male Arbhata- ಹಿಂಗಾರು ಮಳೆ ಆರ್ಭಟ | ಕರ್ನಾಟಕದಲ್ಲಿ ಅಕ್ಟೋಬರ್ 26ರ ವರೆಗೂ ಭಾರೀ ಮಳೆ
Hingaru Male Arbhata October

ರಾಜ್ಯಾದ್ಯಂತ ಹಿಂಗಾರು ಮಳೆ (Hingaru Male Arbhata) ಬಿರುಸುಗೊಂಡಿದ್ದು; ಅಕ್ಟೋಬರ್ 26ರ ವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ…
ಸರಿಯಾಗಿ ದೀಪಾವಳಿ ಹೊತ್ತಿಗೆ ರಾಜ್ಯದಲ್ಲಿ ಹಿಂಗಾರು ಮಳೆ ಬಿರುಸುಗೊಂಡಿದೆ. ಬಂಗಾಳ ಉಪಸಾಗರದ ದಕ್ಷಿಣ ಭಾಗದಲ್ಲಿ ನಾಳೆ ಅಕ್ಟೋಬರ್ 21ರಂದು ವಾಯುಭಾರ ಕುಸಿತ ಉಂಟಾಗುವ ಸಂಭವವಿದೆ.
ಇದರಿAದಾಗಿ ಅಕ್ಟೋಬರ್ 19ರ ಭಾನುವಾರದಿಂದಲೇ ರಾಜ್ಯದಲ್ಲಿ ಮಳೆ ಬಿರುಸುಗೊಂಡಿದ್ದು; ಅಕ್ಟೋಬರ್ 26ರ ವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: E-Swathu- ಇನ್ಮುಂದೆ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಕೇವಲ 15 ದಿನಗಳಲ್ಲಿ ಇ-ಸ್ವತ್ತು ವಿತರಣೆ | ಹೊಸ ಅಧಿಸೂಚನೆ ಬಿಡುಗಡೆ
ಎಲ್ಲೆಲ್ಲಿ ಮಳೆ ಮುನ್ಸೂಚನೆ ಇದೆ?
ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ವಿಜ್ಞಾನಿ ಸಿ ಎಸ್ ಪಾಟೀಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ರಾಜ್ಯದಲ್ಲಿ ಆಗುವ ಮಳೆ ಮಾಹಿತಿಯನ್ನು ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 26ರ ವರೆಗೂ ಅಧಿಕ ಮಳೆಯಾಗಲಿದೆ.
ಇನ್ನು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 26ರ ವರೆಗೂ ಸಾಧಾರಣ ಮಳೆಯಾಗಲಿದೆ.
ಇದನ್ನೂ ಓದಿ: Gruhalakshmi Yojana Diwali Payment- ಗೃಹಲಕ್ಷ್ಮಿ ಯೋಜನೆಗೆ ಎರಡು ವರ್ಷ: ಮಹಿಳೆಯರ ಖಾತೆಗೆ ದೀಪಾವಳಿಗೆ 2000 ರೂ. ಹಣ ಜಮಾ

ವ್ಯಾಪಕ ಮಳೆಯಾಗುವ ಜಿಲ್ಲೆಗಳು
ಅಕ್ಟೋಬರ್ 26ರ ವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದ್ದು; ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಈ ಕೆಳಕಂಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ:
- ಉಡುಪಿ
- ದಕ್ಷಿಣ ಕನ್ನಡ
- ತುಮಕೂರು
- ಕೋಲಾರ
- ಚಿತ್ರದುರ್ಗ
- ದಾವಣಗೆರೆ
- ಚಿಕ್ಕಬಳ್ಳಾಪುರ
- ಬೆಂಗಳೂರು
- ರಾಮನಗರ
- ಮಂಡ್ಯ
- ಮೈಸೂರು
- ಚಾಮರಾಜನಗರ
- ಚಿಕ್ಕಮಗಳೂರು
- ಹಾಸನ
- ಕೊಡಗು
ಇದನ್ನೂ ಓದಿ: Raitara Bele Nashta Parihara- ರೈತರ ಬೆಳೆನಷ್ಟ ಪರಿಹಾರ ಹೆಚ್ಚಳ | ಯಾವ ಬೆಳೆಗೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ಮಾಹಿತಿ
ಡಿಸೆಂಬರ್ 15ರ ವರೆಗೂ ಹಿಂಗಾರು ಮಳೆ ಆರ್ಭಟ
ಕಳೆದ ಅಕ್ಟೋಬರ್ 16ರಂದು ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಆರಂಭಗೊಂಡಿದ್ದು; ಇದು ಡಿಸೆಂಬರ್ ಅಂತ್ಯದ ವರೆಗೂ ಮುಂದುವರೆಯಲಿದೆ. ಆದರೆ ನವೆಂಬರ್‌ನಲ್ಲಿ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ.
ಇನ್ನು ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಮುಂದುವರೆಯುವ ಸಂಭವವಿದೆ. ರಾಜ್ಯಾದ್ಯಂತ ಡಿಸೆಂಬರ್ 15ರಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



