Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ‘ಒನ್-ಟೈಮ್ ಬಯೋಮೆಟ್ರಿಕ್’ ಅನ್ನು ಕಡ್ಡಾಯ ಮಾಡಲಾಗಿದೆ. ನವೀಕರಣ ಮಾಡದಿದ್ದರೆ ಹಣ ಬಂದ್ ಆಗಲಿದ್ದು; ನವೀಕರಣ ಹೇಗೆ ಮಾಡಬೇಕು? ಎಂಬ ಸಂಪೂರ್ಣ ವಿವರ ಇಲ್ಲಿದೆ…
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದು ‘ಗೃಹಲಕ್ಷ್ಮಿ ಯೋಜನೆ’ (Gruha Lakshmi Scheme). ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಜಮೆಯಾಗುವ 2,000 ರೂ. ಹಣ, ಲಕ್ಷಾಂತರ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ಆಸರೆಯಾಗಿದೆ.
ಆದರೆ, ಈ ಯೋಜನೆಯ ಕುರಿತು ಇತ್ತೀಚೆಗೆ ನಡೆದ ಸಚಿವ ಸಂಪುಟ ಮಟ್ಟದ ಚರ್ಚೆಗಳಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಅದೇನೆಂದರೆ, ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ‘ಒನ್-ಟೈಮ್ ಬಯೋಮೆಟ್ರಿಕ್’ (One-Time Biometric) ನೀಡಬೇಕು ಎಂಬುದು.
ಯಾವುದೇ ತೊಂದರೆಯಿಲ್ಲದೆ ಪ್ರತಿ ತಿಂಗಳು ಹಣ ಬರುತ್ತಿರುವಾಗ, ಏಕಾಏಕಿ ಈ ಹೊಸ ನಿಯಮ ಯಾಕೆ? ಯಾರೆಲ್ಲಾ ಈ ಪ್ರಕ್ರಿಯೆ ಮಾಡಬೇಕು? ಮಾಡದಿದ್ದರೆ ಏನಾಗುತ್ತದೆ? ಎಂಬ ನಿಮ್ಮೆಲ್ಲಾ ಗೊಂದಲಗಳಿಗೆ ಅತ್ಯಂತ ಸರಳವಾದ, ಸ್ಪಷ್ಟವಾದ ಉತ್ತರ ಇಲ್ಲಿದೆ.
ಇದನ್ನೂ ಓದಿ: RTE Free Education Extended: ಇನ್ಮುಂದೆ 10ನೇ ತರಗತಿವರೆಗೂ ಆರ್ಟಿಇ ಸೀಟು | ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಈ ಹೊಸ ನಿಯಮ ತರಲು ಕಾರಣವೇನು?
ಗೃಹಲಕ್ಷ್ಮಿ ಯೋಜನೆಯು ಸಾಮಾನ್ಯ ಯೋಜನೆಯಲ್ಲ. ರಾಜ್ಯದಲ್ಲಿ ಬರೋಬ್ಬರಿ 1.24 ಕೋಟಿ ಮಹಿಳೆಯರು ಇದರ ಫಲಾನುಭವಿಗಳಾಗಿದ್ದಾರೆ. ಫೆಬ್ರವರಿ ಅಂತ್ಯದವರೆಗೆ ಸರ್ಕಾರ ಈ ಯೋಜನೆಗಾಗಿ 69,783 ಕೋಟಿ ರೂಪಾಯಿಗಳನ್ನು ಡಿಬಿಟಿ (DBT) ಮೂಲಕ ಜನರ ಖಾತೆಗೆ ಹಾಕಿದೆ.
ಜೊತೆಗೆ ಗೃಹಜ್ಯೋತಿ ಯೋಜನೆಗೂ (Gruha Jyothi) 26,115 ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟು ದೊಡ್ಡ ಮಟ್ಟದ ಹಣವನ್ನು ಬಿಡುಗಡೆ ಮಾಡುವಾಗ, ಸರ್ಕಾರ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಕೆಲವು ಆಘಾತಕಾರಿ ಸತ್ಯಗಳು ಬಯಲಾಗಿವೆ:
ಮೃತಪಟ್ಟವರಿಗೂ ಹೋಗುತ್ತಿದೆ ಹಣ: ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ವಯೋಸಹಜವಾಗಿ ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ, ಅವರ ಬ್ಯಾಂಕ್ ಖಾತೆಗಳು ಇನ್ನು ಸಕ್ರಿಯವಾಗಿರುವುದರಿಂದ ಪ್ರತಿ ತಿಂಗಳು 2,000 ರೂ. ಹಣ ಸರ್ಕಾರದ ಬೊಕ್ಕಸದಿಂದ ಆ ಖಾತೆಗಳಿಗೆ ಹೋಗುತ್ತಲೇ ಇದೆ.
ಇದನ್ನೂ ಓದಿ: A Kharabu B Kharabu Land: ‘ಅ’ ಖರಾಬು, ‘ಬ’ ಖರಾಬು ಜಮೀನು ಅಂದ್ರೇನು? ರೈತರು ತಪ್ಪದೇ ತಿಳಿಯಬೇಕಾದ ಮಾಹಿತಿ
ಬಡವರ ಹಣ ಶ್ರೀಮಂತರ ಪಾಲು: ಈ ಯೋಜನೆ ಇರುವುದು ಆರ್ಥಿಕವಾಗಿ ಹಿಂದುಳಿದವರಿಗೆ. ಆದರೆ, ಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿಸುವ (Income Tax Payers) ಶ್ರೀಮಂತರು ಸುಳ್ಳು ಮಾಹಿತಿ ನೀಡಿ ಯೋಜನೆಯ ಲಾಭ ಪಡೆಯುತ್ತಿರುವುದು ಸರ್ಕಾರದ ಕಣ್ಣಿಗೆ ಬಿದ್ದಿದೆ.
ಬ್ಯಾಂಕ್ ಸಾಲಕ್ಕೆ ಹಣ ಕಡಿತ: ಸರ್ಕಾರ ಬಡ ಮಹಿಳೆಯರ ಕೈಗೆ ಹಣ ನೀಡಿದರೆ, ಕೆಲವು ಬ್ಯಾಂಕ್ಗಳು ಆ ಮಹಿಳೆಯರು ಈ ಹಿಂದೆ ಮಾಡಿದ್ದ ಹಳೆಯ ಸಾಲಗಳಿಗೆ (Old Bank Loans) ಈ ಗೃಹಲಕ್ಷ್ಮಿ ಹಣವನ್ನು ನೇರವಾಗಿ ಕತ್ತರಿಸಿಕೊಳ್ಳುತ್ತಿವೆ.
ಸಂಪರ್ಕವೇ ಇಲ್ಲದ ಫಲಾನುಭವಿಗಳು: ಬಹಳಷ್ಟು ಮಹಿಳೆಯರ ಮೊಬೈಲ್ ಸಂಖ್ಯೆಗಳು ಬದಲಾಗಿವೆ. ಇದರಿಂದ ಅವರಿಗೆ ಯೋಜನೆಯ ಕುರಿತು ಮಾಹಿತಿ ನೀಡಲು ಅಥವಾ ತಾಂತ್ರಿಕ ದೋಷಗಳಿದ್ದರೆ ತಿಳಿಸಲು ಸಾಧ್ಯವಾಗುತ್ತಿಲ್ಲ.
ಇವೆಲ್ಲವನ್ನೂ ಸರಿಪಡಿಸಿ, ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಮರು-ನೋಂದಣಿ ಪ್ರಕ್ರಿಯೆಗೆ ಮುಂದಾಗಿದೆ.
‘ಜೀವಿತ ಪ್ರಮಾಣ ಪತ್ರ’ ಬೇಡ, ‘ಬಯೋಮೆಟ್ರಿಕ್’ ಸಾಕು!
ಮೊದಲು ಸರ್ಕಾರ, ಫಲಾನುಭವಿಗಳು ತಾವು ಬದುಕಿರುವ ಬಗ್ಗೆ ‘ಜೀವಿತ ಪ್ರಮಾಣ ಪತ್ರ’ (Life Certificate) ತಂದುಕೊಡಬೇಕು ಎಂದು ನಿಯಮ ಮಾಡಲು ಹೊರಟಿತ್ತು. ಆದರೆ, ವಯಸ್ಸಾದ ಅಜ್ಜಿಯರು, ಅನಾರೋಗ್ಯದಿಂದ ಇರುವ ಮಹಿಳೆಯರು ಸರ್ಕಾರಿ ಕಚೇರಿಗೆ ಅಲೆದಾಡಿ ಸರ್ಟಿಫಿಕೇಟ್ ತರುವುದು ಕಷ್ಟ.
ಇದರಿಂದಾಗಿ ಆ ನಿಯಮವನ್ನು ಕೈಬಿಟ್ಟಿತು. ಅದಕ್ಕೆ ಬದಲಾಗಿ, ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ಕೇವಲ ಬೆರಳಚ್ಚು (Biometric) ನೀಡುವ ಅತ್ಯಂತ ಸುಲಭವಾದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: Ather Cheap Electric Scooter: ₹1 ಲಕ್ಷಕ್ಕೆ ಅಥರ್ ಎಲೆಕ್ಟ್ರಿಕ್ ಸ್ಕೂಟರ್ | ಪೆಟ್ರೋಲ್ ಬೈಕ್ಗೆ ಬಿಗ್ ಶಾಕ್

ನವೀಕರಣ ಮಾಡಿಕೊಳ್ಳುವುದು ಹೇಗೆ? (How to Renew?)
ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಪ್ರತಿಯೊಬ್ಬರೂ ಈ ಪ್ರಕ್ರಿಯೆಯನ್ನು ಮಾಡುವುದು ಕಡ್ಡಾಯ. ಇದು ಮುಗಿಯಲು ಕೇವಲ ಐದು ನಿಮಿಷ ಸಾಕು:
ಎಲ್ಲಿಗೆ ಹೋಗಬೇಕು?: ನಿಮ್ಮ ಮನೆಯ ಹತ್ತಿರವಿರುವ ಬೆಂಗಳೂರು ಒನ್ (Bangalore One) ಅಥವಾ ಕರ್ನಾಟಕ ಒನ್ (Karnataka One) ಕೇಂದ್ರಗಳಿಗೆ ಭೇಟಿ ನೀಡಿ.
ಏನು ಒದಗಿಸಬೇಕು?: ನೀವು ಪ್ರಸ್ತುತ ಬಳಸುತ್ತಿರುವ, ನಿಮ್ಮ ಬಳಿ ಇರುವ ಆಕ್ಟಿವ್ ಮೊಬೈಲ್ ಸಂಖ್ಯೆಯನ್ನು (Active Mobile Number) ಸಿಬ್ಬಂದಿಗೆ ನೀಡಿ.
ಇದನ್ನೂ ಓದಿ: Water Powered Hydrogen Stove: ಗ್ಯಾಸ್ ಸಿಲಿಂಡರ್ ಬೇಡ; ಕೇವಲ ನೀರಿನಿಂದಲೇ ಉರಿಯುವ ಹೊಸ ಒಲೆ ಬಂತು!
ಬೆರಳಚ್ಚು ನೀಡಿ: ಬಳಿಕ ಅಲ್ಲಿನ ಯಂತ್ರದ ಮೇಲೆ ನಿಮ್ಮ ಬೆರಳಚ್ಚು (Fingerprint) ಇಟ್ಟರೆ, ನಿಮ್ಮ ಖಾತೆ ಯಶಸ್ವಿಯಾಗಿ ನವೀಕರಣ (Renewal) ಆಗುತ್ತದೆ.
ನೆನಪಿರಲಿ: ಇದು ಕೇವಲ ಒಂದೇ ಬಾರಿ ಮಾಡುವ ಪ್ರಕ್ರಿಯೆ. ಪ್ರತಿ ತಿಂಗಳು ಹೋಗಿ ಬೆರಳಚ್ಚು ನೀಡುವ ಅಗತ್ಯವಿಲ್ಲ.
ಇದನ್ನೂ ಓದಿ: Super El Nino: ಹೆಚ್ಚಿದ ತಾಪಮಾನ ಈ ವರ್ಷ ಬರಗಾಲದ ಛಾಯೆ? | ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
ಯಾರ ಖಾತೆಗೆ ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತದೆ?
ಸರ್ಕಾರದ ಈ ಹೊಸ ‘ಕ್ಲೀನ್-ಅಪ್’ ಪ್ರಕ್ರಿಯೆಯಲ್ಲಿ ಈ ಕೆಳಗಿನವರ ಗೃಹಲಕ್ಷ್ಮಿ ಹಣ ಕಟ್ ಆಗುವುದು ಖಚಿತ:
ಆದಾಯ ತೆರಿಗೆ ಕಟ್ಟುವವರು: ನಿಮ್ಮ ಬಳಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೂ, ನಿಮ್ಮ ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಕಟ್ಟುತ್ತಿದ್ದರೆ ನಿಮಗೆ ಇನ್ಮುಂದೆ ಹಣ ಬರುವುದಿಲ್ಲ.
ಇದನ್ನೂ ಓದಿ: LPG Cylinder New Rules: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗೆ ಹೊಸ ರೂಲ್ಸ್ | ಮೇ 1ರಿಂದಲೇ ಸರ್ಕಾರದ ಹೊಸ ನಿಯಮಗಳು ಜಾರಿ
ರದ್ದಾದ ಕಾರ್ಡ್ ಹೊಂದಿರುವವರು: ಇತ್ತೀಚೆಗಷ್ಟೇ ಆಹಾರ ಇಲಾಖೆಯು ಸುಮಾರು 2 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್’ಗಳನ್ನು (ತೆರಿಗೆ ಕಟ್ಟುವ ಕಾರಣಕ್ಕಾಗಿ) ರದ್ದುಪಡಿಸಿ ಎಪಿಎಲ್ಗೆ ವರ್ಗಾಯಿಸಿದೆ. ಅಂಥವರಿಗೂ ಈ ಸೌಲಭ್ಯ ರದ್ದಾಗಲಿದೆ.
ಬಯೋಮೆಟ್ರಿಕ್ ನೀಡದವರು: ಸರ್ಕಾರ ನೀಡುವ ಗಡುವಿನೊಳಗೆ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಕೊಳ್ಳದವರ ಬ್ಯಾಂಕ್ ಖಾತೆಗಳು ತಾನಾಗಿಯೇ ಸ್ಥಗಿತಗೊಳ್ಳುತ್ತವೆ.
ಇದನ್ನೂ ಓದಿ: LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ
ಅರ್ಹರಿಗೆ ಆತಂಕ ಬೇಡ: ಸಚಿವರ ಭರವಸೆ
ಈ ಹೊಸ ನಿಯಮದ ಬಗ್ಗೆ ಅನೇಕರಲ್ಲಿ, ‘ನಮ್ಮ ಹೆಸರನ್ನೂ ಡಿಲೀಟ್ ಮಾಡಿಬಿಡುತ್ತಾರಾ?’ ಎಂಬ ಭಯ ಕಾಡುತ್ತಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟ ಅಭಯ ನೀಡಿದ್ದಾರೆ.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?
‘ನಾವು ಯಾವ ಫಲಾನುಭವಿಯ ಹೆಸರನ್ನೂ ಏಕಾಏಕಿ ಡಿಲೀಟ್ ಮಾಡುತ್ತಿಲ್ಲ. ಇದು ಕೇವಲ ಒಂದು ಬಾರಿಯ ತಪಾಸಣಾ ಪ್ರಕ್ರಿಯೆಯಷ್ಟೇ. ನಿಜವಾದ ಮತ್ತು ಅರ್ಹ ಮಹಿಳೆಯರು ಭಯಪಡುವ ಅಗತ್ಯವಿಲ್ಲ. ನೀವು ಕೇವಲ ಒಮ್ಮೆ ಬಯೋಮೆಟ್ರಿಕ್ ನೀಡಿದರೆ ಸಾಕು, ನಿಮ್ಮ ಹಣ ಎಂದಿನAತೆ ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಕೇವಲ ಮೃತಪಟ್ಟವರ ಹೆಸರಿನಲ್ಲಿ ದುರ್ಬಳಕೆಯಾಗುತ್ತಿರುವ ಹಣವನ್ನು ಉಳಿಸಲು ಈ ಹೆಜ್ಜೆ ಇಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ, ಜನರ ತೆರಿಗೆ ಹಣ ಪೋಲಾಗಬಾರದು ಮತ್ತು ನೈಜ ಬಡವರಿಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರದ ಈ ‘ಬಯೋಮೆಟ್ರಿಕ್ ಅಪ್ಡೇಟ್’ ಉತ್ತಮವಾದ ನಡೆಯಾಗಿದೆ. ಶೀಘ್ರದಲ್ಲೇ ಸರ್ಕಾರ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಲಿದ್ದು, ಫಲಾನುಭವಿಗಳು ತಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಮರು-ನೋಂದಣಿಗೆ ಸಿದ್ಧರಿರುವುದು ಒಳಿತು.
PhonePe Personal Loan- ₹5 ಲಕ್ಷದ ವರೆಗೆ ಫೋನ್ಪೇ ಪರ್ಸನಲ್ ಲೋನ್ | ಮೊಬೈಲ್ನಲ್ಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.