Super El Nino: ಹೆಚ್ಚಿದ ತಾಪಮಾನ ಈ ವರ್ಷ ಬರಗಾಲದ ಛಾಯೆ? | ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

Spread the love

WhatsApp Group Join Now
Telegram Group Join Now

Super El Nino: ಈ ವರ್ಷ ಹೆಚ್ಚಿದ ತಾಪಮಾನ ಮತ್ತು ಸೂಪರ್ ಎಲ್ ನಿನೋ ಪರಿಣಾಮದಿಂದ ಭಾರತದಲ್ಲಿ ಬರದ ಭೀತಿ ಹೆಚ್ಚಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ವರ್ಷ ಬೇಸಿಗೆಯ ತಾಪಮಾನ (Heat Wave) ಸಾಮಾನ್ಯಕ್ಕಿಂತ ತುಂಬಾ ಹೆಚ್ಚಾಗಿ ಕಂಡುಬರುತ್ತಿರುವುದು ದೇಶದ ಜನರನ್ನು ಕಂಗೆಡಿಸಿದೆ. ಅವಧಿಗೂ ಮುನ್ನವೇ ಆರಂಭವಾದ ಬಿರುಬೇಸಿಗೆ (Early Summer Impact) ಜನಜೀವನವನ್ನು ಅಸ್ತವ್ಯಸ್ತಗೊಳಿಸಿಜe.

ಇದೇ ಸಮಯದಲ್ಲಿ ಭೀಕರ ಬರಗಾಲದ (Drought Risk) ಭೀತಿ ದೇಶದ ಮುಂದೆ ದೊಡ್ಡ ಪ್ರಶ್ನೆಯಾಗಿ ನಿಂತಿದೆ. ಇದರ ಹಿಂದೆ ಪ್ರಮುಖ ಕಾರಣವಾಗಿ ಕಾಣಿಸಿಕೊಳ್ಳುತ್ತಿರುವುದು ‘ಎಲ್ ನಿನೋ’ (El Nino Effect) ಎಂಬ ಜಾಗತಿಕ ಹವಾಮಾನ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ: Early Monsoon India 2026: ಬಿಸಿಲಿಗೆ ಬ್ರೇಕ್: ಮೇ ಅಂತ್ಯದಲ್ಲೇ ಮುಂಗಾರು ಎಂಟ್ರಿ | ಕರ್ನಾಟಕಕ್ಕೆ ಯಾವಾಗ ಮುಂಗಾರು ಮಳೆ?

ದೇಶವೇ ಉರಿಯುತ್ತಿದೆ (Rising Temperature Crisis)

ಹಿಂದಿನ ವರ್ಷಗಳಿಗಿಂತ ಈ ಬಾರಿ ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನವು ಗಮನಾರ್ಹವಾಗಿ ಏರಿಕೆಯಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಅದೇ ರೀತಿ ಉತ್ತರ ಭಾರತದ ಪಂಜಾಬ್, ದೆಹಲಿ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದ್ದು, ಜನರು ಬಿಸಿಗಾಳಿಯ (Heatwave) ತೀವ್ರತೆಗೆ ತತ್ತರಿಸಿದ್ದಾರೆ.

ಈ ಪರಿಸ್ಥಿತಿ ಹಲವೆಡೆ ‘ಅಘೋಷಿತ ಲಾಕ್‌ಡೌನ್’ (Unofficial Lockdown) ತರಹದ ಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಹೊರಗೆ ಬರಲು ಜನರು ಹೆದರುವ ಸ್ಥಿತಿ ಉಂಟಾಗಿದೆ.

ಇದನ್ನೂ ಓದಿ: Karnataka High Court Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಕರ್ನಾಟಕ ಹೈಕೋರ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ ನಿನೋ: ಮಳೆಯ ಮೇಲೆ ಪರಿಣಾಮ (El Nino Impact on Monsoon)

‘ಎಲ್ ನಿನೋ’ ಎಂಬುದು ಪೆಸಿಫಿಕ್ ಮಹಾಸಾಗರದಲ್ಲಿ (Pacific Ocean) ಸಂಭವಿಸುವ ಒಂದು ನೈಸರ್ಗಿಕ ಹವಾಮಾನ ಪ್ರಕ್ರಿಯೆ (Climate Phenomenon).

ಇದು ಸಾಮಾನ್ಯವಾಗಿ 2ರಿಂದ 7 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ. ಈ ಪ್ರಕ್ರಿಯೆ ನಡೆದಾಗ ಪೆಸಿಫಿಕ್ ಸಮುದ್ರದ ಮೇಲ್ಮೈ ನೀರಿನ ತಾಪಮಾನ (Sea Surface Temperature) ಹೆಚ್ಚಳವಾಗುತ್ತದೆ.

ಇದರ ಪರಿಣಾಮವಾಗಿ ಮುಂಗಾರು ಮಾರುತಗಳು (Monsoon Winds) ದುರ್ಬಲಗೊಳ್ಳುತ್ತವೆ. ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಜಾಗತಿಕ ಹವಾಮಾನ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಈ ಬಾರಿ ವಿಜ್ಞಾನಿಗಳು ಸೂಚಿಸುತ್ತಿರುವಂತೆ ‘ಸೂಪರ್ ಎಲ್ ನಿನೋ’ (Super El Nino) ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ಸಾಮಾನ್ಯ ಎಲ್ ನಿನೋಗೆ ಹೋಲಿಸಿದರೆ ಹೆಚ್ಚು ಪ್ರಬಲವಾಗಿದ್ದು, ತಾಪಮಾನ ಏರಿಕೆ 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಬಹುದು.

ಇದನ್ನೂ ಓದಿ: e-Swathu Service Karnataka: ರಾಜ್ಯದ ಜನತೆಗೆ ಸಿಹಿಸುದ್ದಿ | ಇನ್ಮುಂದೆ ಗ್ರಾಮ ಒನ್ ಕೇಂದ್ರದಲ್ಲಿಯೇ ಸಿಗಲಿದೆ ‘ಇ-ಸ್ವತ್ತು’ ಸೇವೆ

ಏಷ್ಯಾದ ಮೇಲೆ ಪರಿಣಾಮ (Impact on Asia)

ಈ ಹವಾಮಾನ ಬದಲಾವಣೆ ಭಾರತಕ್ಕಷ್ಟೇ ಸೀಮಿತವಲ್ಲ. ಇಡೀ ಏಷ್ಯಾ ಖಂಡಕ್ಕೂ ಇದರ ಪರಿಣಾಮ ತಟ್ಟುವ ಸಾಧ್ಯತೆ ಇದೆ. ಮಳೆಯ ಪ್ರಮಾಣದಲ್ಲಿ ಕುಸಿತ, ಬಿಸಿಗಾಳಿ ಹೆಚ್ಚಳ, ನೀರಿನ ಅಭಾವ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಆತಂಕವಿದೆ.

Super El Nino
Super El Nino

ಲಾ ನಿನಾ: ಆಶಾಕಿರಣ (La Nina Effect)

WhatsApp Group Join Now
Telegram Group Join Now

ಎಲ್ ನಿನೋಗೆ ವಿರುದ್ಧವಾದ ಪ್ರಕ್ರಿಯೆಯೇ ‘ಲಾ ನಿನಾ’. ಈ ಸಂದರ್ಭದಲ್ಲಿ ಪೆಸಿಫಿಕ್ ಸಮುದ್ರದ ತಳಭಾಗದ ತಣ್ಣನೆಯ ನೀರು ಮೇಲಕ್ಕೆ ಬರುತ್ತದೆ. ಇದರಿಂದ ಮಾರುತಗಳು ಬಲವಾಗುತ್ತವೆ. ಮಳೆ ಪ್ರಮಾಣ ಹೆಚ್ಚಾಗುತ್ತದೆ.

ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಲಾ ನಿನಾ ಪ್ರಭಾವ ಕಡಿಮೆ ಇರುವುದರಿಂದ, ಎಲ್ ನಿನೋ ಪ್ರಭಾವವೇ ಹೆಚ್ಚು ಕಾಣಿಸುತ್ತಿದೆ.

ಇದನ್ನೂ ಓದಿ: Karnataka Agriculture Department Recruitment 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ ಬೃಹತ್ ಉದ್ಯೋಗಾವಕಾಶ | 632 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೃಷಿ ಕ್ಷೇತ್ರದ ಮೇಲೆ ಭಾರೀ ಪರಿಣಾಮ (Impact on Agriculture)

ಭಾರತ ಕೃಷಿ ಪ್ರಧಾನ ದೇಶ. ದೇಶದ ಸುಮಾರು 70% ಮಳೆಯು ಮುಂಗಾರಿನ ಅವಧಿಯಲ್ಲಿ ಬರುತ್ತದೆ. ಈ ಮಳೆಯ ಮೇಲೆ ದೇಶದ ಲಕ್ಷಾಂತರ ರೈತರು ಅವಲಂಬಿತರಾಗಿದ್ದಾರೆ.

ಮಳೆ ಕಡಿಮೆಯಾದರೆ ಅಕ್ಕಿ, ಹತ್ತಿ, ಸೋಯಾಬಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಮಣ್ಣಿನ ತೇವಾಂಶ (Soil Moisture) ಕುಸಿಯುತ್ತದೆ. ಚಳಿಗಾಲದ ಬೆಳೆಗಳಿಗೂ ಹಾನಿ ಉಂಟಾಗುತ್ತದೆ. ಕೃಷಿ ಉತ್ಪಾದನೆ ಕಡಿಮೆಯಾದರೆ ಆಹಾರ ದರ ಏರಿಕೆ ಸಂಭವಿಸುತ್ತದೆ.

ಇದನ್ನೂ ಓದಿ: Affordable Electric Scooters: ಅರ್ಧ ಬೆಲೆಗೆ ಸಿಗ್ತಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು | ಬಂಪರ್ ಆಫರ್

ಮಳೆ ಕೊರತೆ: ಈಗಾಗಲೇ ಸಂಕೇತ (Rainfall Deficit Warning)

2026ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಮಳೆ ಪ್ರಮಾಣವು ಶೇ.60ರಷ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಇದು ಮುಂದಿನ ಮುಂಗಾರಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯ ಸೂಚನೆ.

ಇತಿಹಾಸ ಹೇಳುವುದೇನು? (Historical Trends)

ಎಲ್ ನಿನೋ ಪ್ರಭಾವ ಇದ್ದಾಗಲೂ ಎಲ್ಲ ವರ್ಷಗಳಲ್ಲಿ ಬರಗಾಲವಾಗಿಲ್ಲ. ಹಿಂದಿನ ದಾಖಲೆಗಳನ್ನು ನೋಡಿದರೆ 17 ಬಾರಿ ಎಲ್ ನಿನೋ ಪ್ರಭಾವ ಕಂಡುಬAದಿದೆ. 5 ಬಾರಿ ಉತ್ತಮ ಮಳೆಯಾಗಿದೆ. 6 ಬಾರಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ.

ಉದಾಹರಣೆಗೆ, 2009ರಲ್ಲಿ ಎಲ್ ನಿನೋ ಇದ್ದರೂ ದೇಶದಲ್ಲಿ ಶೇ.78.2ರಷ್ಟು ಮಳೆಯಾಗಿದೆ. ಇದರಿಂದ ಎಲ್ಲವೂ ನಕಾರಾತ್ಮಕವಾಗಿರಲೇ ಬೇಕೆಂಬುದಿಲ್ಲ ಎಂಬ ಆಶಾವಾದ ಉಳಿದಿದೆ.

ಇದನ್ನೂ ಓದಿ: SBI Personal Loan: ಕೇವಲ ಒಂದು ಮಿಸ್ ಕಾಲ್ ಕೊಡಿ | ₹50 ಲಕ್ಷವರೆಗೆ SBI ಲೋನ್ ಸಿಗುತ್ತೆ

ದೇಶದ ಮುಂದೆ ದೊಡ್ಡ ಸವಾಲು 

ಈ ವರ್ಷ ಹೆಚ್ಚಿದ ತಾಪಮಾನ ಮತ್ತು ‘ಸೂಪರ್ ಎಲ್ ನಿನೋ’ ಭೀತಿ ದೇಶದ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೃಷಿ, ನೀರು, ವಿದ್ಯುತ್ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೂ ಇತಿಹಾಸದ ಅನುಭವಗಳು ಕೆಲವು ಮಟ್ಟಿಗೆ ಆಶಾವಾದವನ್ನು ನೀಡುತ್ತವೆ.

ಸರ್ಕಾರ ಮತ್ತು ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡರೆ, ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಸಾಧ್ಯತೆ ಇದೆ. ಜನರೂ ಸಹ ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯವಾಗಿದೆ.

Early Monsoon India 2026: ಬಿಸಿಲಿಗೆ ಬ್ರೇಕ್: ಮೇ ಅಂತ್ಯದಲ್ಲೇ ಮುಂಗಾರು ಎಂಟ್ರಿ | ಕರ್ನಾಟಕಕ್ಕೆ ಯಾವಾಗ ಮುಂಗಾರು ಮಳೆ?


Spread the love
error: Content is protected !!