Karnataka State Govt Employees DA Hike – ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ | ಶೇ.2ರಷ್ಟು ಡಿಎ ಹೆಚ್ಚಳಕ್ಕೆ ಸರ್ಕಾರದ ಅನುಮೋದನೆ
Karnataka State Govt Employees DA Hike 2025

ರಾಜ್ಯ ಸರ್ಕಾರಿ ನೌಕರರಿಗೆ ಶೇ.2ರಷ್ಟು ತುಟ್ಟಿಭತ್ಯೆ (Karnataka State Govt Employees DA Hike) ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಅನೊಮೋದನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ಡಿಎ ಹೆಚ್ಚಳ ಕುರಿತ ಶುಭಸುದ್ದಿ ಕಡೆಗೂ ಹೊರ ಬಿದ್ದಿದೆ. ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು; ಶೇ.2ರಷ್ಟು ತುಟ್ಟಿಭತ್ಯೆ (Dearness Allowance) ಹೆಚ್ಚಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿ ದೊರೆತಿದೆ.
ಹಲವಾರು ತಿಂಗಳುಗಳಿಂದ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಬೇಡಿಕೆ ಬರೀ ಬೇಡಿಕೆಯಾಗಿಯೇ ಉಳಿದಿತ್ತು. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಕೂಡ ಮಾಡಲಾಗಿತ್ತು. ಇದೀಗ ಸರ್ಕಾರ ಡಿಎ ಹೆಚ್ಚಳಕ್ಕೆ ಅಧಿಕೃತ ಅನುಮೋದನೆ ನೀಡಿದೆ.
ಇದನ್ನೂ ಓದಿ: PF 100 Percent Withdrawal – ಇನ್ಮುಂದೆ 100% ಪಿಎಫ್ ಹಣ ಹಿಂಪಡೆಯಲು ಅವಕಾಶ | ಉದ್ಯೋಗಿಗಳಿಗೆ ಶುಭಸುದ್ದಿ
ಶೇ.2ರಷ್ಟು ಡಿಎ ಹೆಚ್ಚಳ
ಇದೀಗ ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇಕಡಾ 2ರಷ್ಟು ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. 2025ರ ಜುಲೈ 1ರಿಂದಲೇ ಈ ಹೆಚ್ಚಳ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ನೌಕರರಿಗೆ ಬಾಕಿ ಮೊತ್ತ ಸಹ ದೊರೆಯುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರವು ಸದಾ ಕೇಂದ್ರ ಸರ್ಕಾರದ ಮಾದರಿಯಂತೆ ತುಟ್ಟಿಭತ್ಯೆ ಹೆಚ್ಚಳವನ್ನು ಅನುಸರಿಸುತ್ತಿದ್ದು, ಅಖಿಲ ಭಾರತ ಬೆಲೆ ಸೂಚ್ಯಂಕ (All India Consumer Price Index) ಆಧರಿಸಿ ಕೇಂದ್ರದಿಂದ ಡಿಎ ಹೆಚ್ಚಳ ಘೋಷಣೆ ಹೊರಬಂದ ನಂತರ ರಾಜ್ಯವೂ ತನ್ನ ನೌಕರರಿಗೆ ಅದೇ ಪ್ರಮಾಣದ ಹೆಚ್ಚಳ ನೀಡುವುದು ರೂಢಿಯಾಗಿದೆ. ಈ ಬಾರಿ ಕೂಡ ಅದೇ ಸಂಪ್ರದಾಯ ಮುಂದುವರಿದಿದೆ.

ನೌಕರರು ಮತ್ತು ನಿವೃತ್ತರಿಗೆ ಭಾರೀ ಪ್ರಯೋಜನ
ಸುಮಾರು 7 ಲಕ್ಷಕ್ಕೂ ಅಧಿಕ ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತರು ತುಟ್ಟಿಭತ್ಯೆ ಹೆಚ್ಚಳದ ನೇರ ಪ್ರಯೋಜನ ಪಡೆಯಲಿದ್ದಾರೆ. ತುಟ್ಟಿಭತ್ಯೆ ಹೆಚ್ಚಳವು ನೌಕರರ ಖರ್ಚಿನ ಭಾರವನ್ನು ತಗ್ಗಿಸಲು ನೆರವಾಗುವುದರ ಜೊತೆಗೆ ಅವರ ಆರ್ಥಿಕ ಸ್ಥಿರತೆಯತ್ತ ಸಹಕಾರಿ ಆಗಲಿದೆ.
ಮುಖ್ಯಮಂತ್ರಿಗಳ ಈ ಹೆಜ್ಜೆ ರಾಜ್ಯದ ನೌಕರರಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಿದೆ. ಈ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿಯೇ ಅಧಿಕೃತ ಆದೇಶ ಹೊರ ಬೀಳಲಲಿದ್ದು; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಮುಖ್ಯಮಂತ್ರಿ ಸಿದ್ದರಾಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!



