BPL Card in 15 Days: ಈ ವರ್ಗದ ಜನರಿಗೆ ಕೇವಲ 15 ದಿನಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ, ಆದಾಯ ಮಿತಿ ಹೆಚ್ಚಳ ಚಿಂತನೆ ಹಾಗೂ 4.32 ಲಕ್ಷ ಅನರ್ಹ ಪಡಿತರ ಚೀಟಿ ರದ್ದತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹಲವು ಮಹತ್ವದ ಮಾಹಿತಿಗಳನ್ನು ನೀಡಿದ್ದು, ಬಿಪಿಎಲ್ ಕಾರ್ಡ್ (BPL Card) ಪಡೆಯಲು ಕಾಯುತ್ತಿರುವವರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಇದರ ಜೊತೆಗೆ, ನಿಯಮ ಮೀರಿ ಪಡಿತರ ಚೀಟಿ (Ration Card) ಪಡೆದಿದ್ದ ಲಕ್ಷಾಂತರ ಮಂದಿಗೆ ಶಾಕ್ ಕೂಡ ನೀಡಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪನವರು ಹಂಚಿಕೊಂಡಿರುವ ಪ್ರಮುಖ ನಿರ್ಧಾರಗಳು ಹಾಗೂ ಬದಲಾವಣೆಗಳ ವಿವರಣೆ ಇಲ್ಲಿದೆ.
ಇದನ್ನೂ ಓದಿ: Gruha Lakshmi 31st Installment: ಗೃಹಲಕ್ಷ್ಮಿ 31ನೇ ಕಂತಿನ ಹಣ ಬಿಡುಗಡೆ: ಮಹಿಳೆಯರ ಖಾತೆಗೆ ಹಣ ಜಮೆ ಆರಂಭ
ತುರ್ತು ಸಂದರ್ಭದಲ್ಲಿ 15 ದಿನಗಳಲ್ಲೇ ಬಿಪಿಎಲ್ ಕಾರ್ಡ್ (BPL Card for Medical Emergency)
ಸಾಮಾನ್ಯವಾಗಿ ಹೊಸ ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದರೆ, ಅದು ಕೈಸೇರಲು ತಿಂಗಳು, ವರ್ಷಗಳೇ ಬೇಕಾಗಬಹುದು ಎಂಬ ಆತಂಕ ಜನರಲ್ಲಿರುತ್ತದೆ. ಆದರೆ, ತುರ್ತು ಪ್ರಕರಣಗಳಲ್ಲಿ ಕೇವಲ 15 ದಿನಗಳ ಒಳಗೆ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವರು ಭರವಸೆ ನೀಡಿದ್ದಾರೆ.
ತುರ್ತು ಆರೋಗ್ಯ ಸೇವೆಗಳ (Medical Emergency) ಕಾರಣಕ್ಕಾಗಿ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ವಿಳಂಬ ಮಾಡಬಾರದು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Voter ID SIR Status: ಮತದಾರರೇ ಗಮನಿಸಿ | ನಿಮ್ಮ SIR ಯಶಸ್ವಿಯಾಗಿದೆಯೇ? ಮೊಬೈಲ್‌ನಲ್ಲಿಯೇ ನಿಮ್ಮ SIR ಸ್ಟೇಟಸ್ ಚೆಕ್ ಮಾಡಿ..
ಆದಾಯ ಮಿತಿ ಹೆಚ್ಚಳಕ್ಕೆ ಚಿಂತನೆ (Increase in Income Limit)
ಬಿಪಿಎಲ್ ಕಾರ್ಡ್ ಪಡೆಯಲು ಪ್ರಸ್ತುತ ಇರುವ ಆದಾಯದ ಮಿತಿಯನ್ನು ಹೆಚ್ಚಿಸುವಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಬೇಡಿಕೆಯಿದೆ. ಆರ್.ವಿ. ದೇಶಪಾಂಡೆ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಕೂಡ ಈ ಆದಾಯ ಮಿತಿ (Income Limit) ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಸೂಕ್ತ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Cow Rubber Mat Silage Bag Scheme: ಹಸುಗಳಿಗೆ ರಬ್ಬರ್ ಮ್ಯಾಟ್, ಸೈಲೇಜ್ ಬ್ಯಾಗ್ ವಿತರಣೆ | ಪಶು ಇಲಾಖೆಯಿಂದ ಅರ್ಜಿ ಆಹ್ವಾನ

ಅನರ್ಹ ಬಿಪಿಎಲ್ ಕಾರ್ಡ್’ಗಳಿಗೆ ಕೊಕ್ (Cancellation of Ineligible BPL Cards)
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಅಂದರೆ, ಕರ್ನಾಟಕದಲ್ಲಿ ಶೇ. 65ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ಗಳಿವೆ. ಆದರೆ, ಇವರಲ್ಲಿ ಸಾಕಷ್ಟು ಮಂದಿ ನಿಯಮಗಳನ್ನು ಮೀರಿ ಕಾರ್ಡ್ ಪಡೆದಿರುವುದು ಕೇಂದ್ರ ಸರ್ಕಾರದ ಸಮೀಕ್ಷೆಯಿಂದ (Survey) ತಿಳಿದುಬಂದಿದೆ.
ಒಟ್ಟು ಅನರ್ಹ ಕಾರ್ಡ್’ಗಳು: ರಾಜ್ಯದಲ್ಲಿ 7.76 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಆಹ್ವಾನ | ಯಾವ ದಾಖಲೆಗಳು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಎಪಿಎಲ್ ಆಗಿ ಪರಿವರ್ತನೆ (BPL to APL Conversion): ಈ ಪೈಕಿ ಈಗಾಗಲೇ 4.32 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ ಕಾರ್ಡ್ (APL Card) ಗಳಾಗಿ ಪರಿವರ್ತಿಸಲಾಗಿದೆ. (ಶೇ. 65ರಷ್ಟು ಪರಿಷ್ಕರಣೆ ಮುಕ್ತಾಯವಾಗಿದೆ).
ಮುಂಬರುವ ಕ್ರಮ: ಇನ್ನುಳಿದ 2.88 ಲಕ್ಷ ಅನುಮಾನಾಸ್ಪದ ಕಾರ್ಡ್’ಗಳ ಪರಿಷ್ಕರಣೆ ಪ್ರಕ್ರಿಯೆಯನ್ನು ಮುಂದಿನ 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.
ಅನರ್ಹರನ್ನು ಹೊರಹಾಕುವುದರಿಂದ, ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲು ಅನುಕೂಲವಾಗುತ್ತದೆ.
ಪಾರದರ್ಶಕತೆಗಾಗಿ ಸ್ಮಾರ್ಟ್ ಪಿಡಿಎಸ್ (Smart PDS)
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ತೂಕದ ಮೋಸ ಹಾಗೂ ಅಕ್ರಮಗಳನ್ನು ತಡೆಯಲು ಸರ್ಕಾರ ಸ್ಮಾರ್ಟ್ ಪಿಡಿಎಸ್ (Smart PDS) ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಇದನ್ನೂ ಓದಿ: Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ
ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಾಸ್ (e-PoS) ಯಂತ್ರಗಳ ಜೊತೆಗೆ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು (Electronic Weighing Machines) ಅಳವಡಿಸಲಾಗುತ್ತಿದೆ.
ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದರಿಂದ ಗ್ರಾಹಕರಿಗೆ ನಿಖರವಾದ ತೂಕದ ಪಡಿತರ ಸಿಗಲಿದೆ. ಅಲ್ಲದೆ, ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕಾನೂನು ಮಾಪನ ಶಾಸ್ತ್ರ ಇಲಾಖೆಯ 17 ಗ್ರಾಹಕ ಜಾಗೃತಿ ವಾಹನಗಳಿಗೆ ಚಾಲನೆ ನೀಡಲಾಗಿದೆ.
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನ್ಯಾಯಬೆಲೆ ಅಂಗಡಿ (Fair Price Shops for SC/ST)
ರಾಜ್ಯದಲ್ಲಿರುವ ಒಟ್ಟು 20,000 ನ್ಯಾಯಬೆಲೆ ಅಂಗಡಿಗಳ (Fair Price Shops) ಪೈಕಿ, 3,888 ಅಂಗಡಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ ಒಳಮೀಸಲಾತಿ ಅನ್ವಯ ಹಂಚಿಕೆ ಮಾಡಲು ಸೂಚಿಸಲಾಗಿದೆ.
ಗ್ರಾಮೀಣ ಪ್ರದೇಶ (Rural Area): 500 ಕಾರ್ಡ್’ಗಳಿರುವ ಪ್ರದೇಶದಲ್ಲಿ ಒಂದು ನ್ಯಾಯಬೆಲೆ ಅಂಗಡಿ.
ನಗರ ಪ್ರದೇಶ (Urban Area): 800 ಕಾರ್ಡ್’ಗಳಿರುವ ಪ್ರದೇಶದಲ್ಲಿ ಒಂದು ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆ ಸಮುದಾಯದ ಯುವಕರಿಗೆ ಉದ್ಯೋಗಾವಕಾಶವೂ ಸಿಕ್ಕಂತಾಗುತ್ತದೆ.
ಇಲಾಖೆಯ ಬಲವರ್ಧನೆ
ಇಲಾಖೆಯ ಕೆಲಸ ಕಾರ್ಯಗಳನ್ನು ಇನ್ನಷ್ಟು ಚುರುಕುಗೊಳಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಹೊಸದಾಗಿ 376 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಯುವಶಕ್ತಿ ಉದ್ಯೋಗ ಸಬಲೀಕರಣದಡಿ ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.