Karnataka Drought Declaration: ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿ, ಬರಪೀಡಿತ ತಾಲೂಕುಗಳ ಘೋಷಣೆ, ರೈತರಿಗೆ ಸಿಗುವ ಬೆಳೆ ಹಾನಿ ಪರಿಹಾರ ಹಾಗೂ ಸರ್ಕಾರದ ಪ್ರಮುಖ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ (Rainfall Deficit) ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.
ಈ ತಿಂಗಳ ಅಂತ್ಯದ ವೇಳೆಗೆ ಬರಪೀಡಿತ ತಾಲೂಕುಗಳನ್ನು (Drought-hit Taluks) ಅಧಿಕೃತವಾಗಿ ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ (Farmers Compensation) ಒದಗಿಸಲು ಸರ್ಕಾರ ತೀರ್ಮಾನಿಸಿದೆ.
ಇದನ್ನೂ ಓದಿ: e-Swathu New Committee: ಇ-ಸ್ವತ್ತು ಪಡೆಯುವುದು ಇನ್ನು ಸುಲಭ! ಸರ್ಕಾರದಿಂದ ಮಹತ್ವದ ನಿರ್ಧಾರ
ಬರ ಘೋಷಣೆಗೆ ತಿರಾಂತ್ಯದವರೆಗೆ ಕಾಯುತ್ತಿರುವುದು ಏಕೆ?
ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ‘ಈಗಲೇ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದರೆ ಕೆಲವು ತಾಲೂಕುಗಳು ಪಟ್ಟಿಯಿಂದ ಕೈಬಿಟ್ಟು ಹೋಗುವ ಅಪಾಯವಿದೆ.
ಹೀಗಾಗಿ ನಿಖರವಾದ ಮಾಹಿತಿಯೊಂದಿಗೆ (Accurate Data) ತಿಂಗಳ ಕೊನೆಗೆ ಬರ ಘೋಷಣೆ ಮಾಡೋಣ” ಎಂದು ತಿಳಿಸಿದ್ದಾರೆ. ಇದಕ್ಕೆ ಸಂಪುಟದ ಇತರ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: BPL Card in 15 Days: ಕೇವಲ 15 ದಿನಗಳಲ್ಲಿ ಸಿಗಲಿದೆ ಬಿಪಿಎಲ್ ಕಾರ್ಡ್ | ಹೊಸ ನಿಯಮಗಳ ಸಂಪೂರ್ಣ ಮಾಹಿತಿ
ರಾಜ್ಯದ ಪ್ರಸ್ತುತ ಜಲ ಮತ್ತು ಮಳೆಯ ಪರಿಸ್ಥಿತಿ (Current Situation))
ರಾಜ್ಯದಲ್ಲಿ ಈ ಬಾರಿ ಶೇ.60 ರಷ್ಟು ಮಳೆ ಕೊರತೆಯಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಸ್ಥಿತಿಗತಿ ಹೀಗಿದೆ:
-
ಮಳೆ ಕೊರತೆ (Scarcity of Rain): ಒಟ್ಟು 178 ತಾಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಮಲೆನಾಡಿನಲ್ಲಿ ಶೇ.43 ಹಾಗೂ ಕರಾವಳಿಯಲ್ಲಿ ಶೇ.35 ರಷ್ಟು ಮಳೆ ಕಡಿಮೆಯಾಗಿದೆ. ಕೇವಲ 158 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
-
ಗಂಭೀರ ಪರಿಸ್ಥಿತಿ: 20 ತಾಲೂಕುಗಳಲ್ಲಿ ಮಳೆಯೇ ಆಗಿಲ್ಲ. ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.
ಇದನ್ನೂ ಓದಿ: Gruha Lakshmi eKYC Rumours: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಮಹತ್ವದ ಸ್ಪಷ್ಟನೆ: ಹಣ ಜಮಾ ಬಗ್ಗೆ ಮಾಹಿತಿ
-
ಜಲಾಶಯಗಳ ಸ್ಥಿತಿ (Water Level in Dams): ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಕೇವಲ ಶೇ.40 ರಷ್ಟು ಮಾತ್ರ ನೀರು ಸಂಗ್ರಹವಿದೆ. ಜಲವಿದ್ಯುತ್ ಜಲಾಶಯಗಳಲ್ಲಿ ಇದು ಕೇವಲ ಶೇ.23 ರಷ್ಟಿದೆ.
-
ಕೆರೆಗಳ ಒಡಲು ಬರಿದು: 3,235 ಸಣ್ಣ ನೀರಾವರಿ ಕೆರೆಗಳು ಹಾಗೂ 32,504 ಜಿ.ಪಂ ಕೆರೆಗಳ ಪೈಕಿ ಬಹುಪಾಲು (27,450 ಕೆರೆಗಳು) ಶೇ.50 ಕ್ಕಿಂತ ಕಡಿಮೆ ನೀರು ಹೊಂದಿವೆ.
ರೈತರಿಗೆ ಸಿಎಂ ಮನವಿ: ಜಲಾಶಯಗಳಲ್ಲಿ ನೀರಿಲ್ಲದ ಕಾರಣ, ಈಗಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ (Drinking Water) ಮಾತ್ರ ಬಳಸಲಾಗುತ್ತದೆ. ಹಾಗಾಗಿ ಅಣೆಕಟ್ಟಿನ ನೀರಿನ ಭರವಸೆಯ ಮೇಲೆ ರೈತರು ಬೆಳೆ ಹಾಕಬಾರದು ಎಂದು ಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Voter ID SIR Status: ಮತದಾರರೇ ಗಮನಿಸಿ | ನಿಮ್ಮ SIR ಯಶಸ್ವಿಯಾಗಿದೆಯೇ? ಮೊಬೈಲ್ನಲ್ಲಿಯೇ ನಿಮ್ಮ SIR ಸ್ಟೇಟಸ್ ಚೆಕ್ ಮಾಡಿ..

ಕುಡಿಯುವ ನೀರು ಮತ್ತು ಅನುದಾನ ಬಿಡುಗಡೆ (Fund Allocation)
ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಈಗಾಗಲೇ ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ:
-
ಅನುದಾನ: ಕುಡಿಯುವ ನೀರಿನ ಸಮಸ್ಯೆ (Drinking Water Crisis) ಬಗೆಹರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ. ನಂತೆ ಒಟ್ಟು 379 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
-
ಹೆಚ್ಚುವರಿ ಹಣ: ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ಮತ್ತೊಂದು 1 ಕೋಟಿ ರೂ. ನೀಡಲಾಗುತ್ತದೆ. ಶಾಸಕರ ನೇತೃತ್ವದಲ್ಲಿ ಈ ಹಣವನ್ನು ಸಮರ್ಪಕವಾಗಿ ಬಳಸಲು ಸೂಚಿಸಲಾಗಿದೆ.
-
ಕೇಂದ್ರದ ನೆರವು (Central Relief Funds): ಕೇಂದ್ರ ಸರ್ಕಾರಕ್ಕೆ ಮುಂದಿನ 15 ದಿನಗಳಲ್ಲಿ ಬರ ಪರಿಸ್ಥಿತಿಯ ವರದಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಕೇಂದ್ರದ ತಂಡ ಭೇಟಿ ನೀಡಿದಾಗ ನಿಖರ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಧಿಕಾರಿಗಳಿಗೆ ಸರ್ಕಾರದ ಖಡಕ್ ಸೂಚನೆಗಳು
ಬರ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ:
-
ನಕಲಿ ಬಿಲ್ಗಳಿಗೆ ಬ್ರೇಕ್: ಗುತ್ತಿಗೆದಾರರ ಹಳೆಯ ಕಾಮಗಾರಿಗಳಿಗೆ ಹೊಸ ಬಿಲ್ ಮಾಡಿದರೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು.
-
ವಿಡಿಯೋ ಕಡ್ಡಾಯ: ಹೊಸದಾಗಿ ಕೊಳವೆ ಬಾವಿ (Borewells) ಕೊರೆಯಿಸುವಾಗ ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯ.
ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ
-
ರೈತರ ಹಿತರಕ್ಷಣೆ: ಸಣ್ಣ ಮತ್ತು ಅತೀ ಸಣ್ಣ ರೈತರ (Small and Marginal Farmers) ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ.
-
ಗುಳೆ ತಡೆ (Preventing Migration): ವಿಬಿ ಜಿ ರಾಮ್ಜಿ ಯೋಜನೆಯಡಿ ಕಾಮಗಾರಿಗಳನ್ನು ಶುರು ಮಾಡಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಮೂಲಕ ಜನರು ಕೆಲಸ ಅರಸಿ ಬೇರೆಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ
ಯಾವ್ಯಾವ ರೈತರಿಗೆ ಏನೇನು ಪರಿಹಾರ ಸಿಗಲಿದೆ? (Crop Loss Compensation)
ಕಳೆದ 2023ರಲ್ಲಿ ತೀವ್ರ ಬರ ಉಂಟಾದಾಗ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಆ ಸಮಯದಲ್ಲಿ ಗರಿಷ್ಠ 5 ಎಕರೆ ಜಮೀನಿನ ಮಿತಿಯೊಳಗೆ ರೈತರಿಗೆ ಈ ಕೆಳಗಿನಂತೆ ಬೆಳೆ ಹಾನಿ ಪರಿಹಾರವನ್ನು (Crop Loss Compensation) ನೀಡಲಾಗಿತ್ತು. ಈ ಬಾರಿಯೂ ಇದೇ ಮಾದರಿಯ ಪರಿಹಾರ ಸಿಗುವ ನಿರೀಕ್ಷೆಯಿದೆ:
- ಮಳೆಯಾಶ್ರಿತ ಜಮೀನು (Rainfed Land) ₹8,500
- ನೀರಾವರಿ ಜಮೀನು (Irrigated Land) ₹17,000
- ಬಹುವಾರ್ಷಿಕ ತೋಟಗಾರಿಕೆ ಬೆಳೆ (Horticulture Crops) ₹22,500
ಒಟ್ಟಾರೆಯಾಗಿ, ಮಳೆ ಕೊರತೆಯಿಂದ ಕಂಗಾಲಾಗಿರುವ ಅನ್ನದಾತರಿಗೆ ನೆರವಾಗಲು ರಾಜ್ಯ ಸರ್ಕಾರವು ಸಮೀಕ್ಷೆಯನ್ನು ಚುರುಕುಗೊಳಿಸಿದೆ. ಮುಂಬರುವ ಕೆಲವೇ ವಾರಗಳಲ್ಲಿ ಅಧಿಕೃತವಾಗಿ ಬರ ಘೋಷಣೆಯಾಗಲಿದ್ದು, ಪರಿಹಾರ ಪ್ಯಾಕೇಜ್ (Relief Package) ಕುರಿತ ಸ್ಪಷ್ಟ ಚಿತ್ರಣ ರೈತರಿಗೆ ಸಿಗಲಿದೆ.
2023ರಲ್ಲಿ ಬರ ಪರಿಹಾರ ಆದೇಶ ಪ್ರತಿ ಓದಲು ಇಲ್ಲಿ ಕ್ಲಿಕ್ ಮಾಡಿ
PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.