Airtel Scholarship 2026: ಏರ್ಟೆಲ್ ವಿದ್ಯಾರ್ಥಿವೇತನ 2026ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಶುಲ್ಕ, ಹಾಸ್ಟೆಲ್ ವೆಚ್ಚ ನೀಡಲಾಗುತ್ತದೆ. ಅರ್ಜಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರ್ತಿ ಏರ್ಟೆಲ್ ಫೌಂಡೇಶನ್ (Bharti Airtel Foundation) ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದ್ದು; 2026-27ನೇ ಶೈಕ್ಷಣಿಕ ವರ್ಷದ Bharti Airtel Scholarship Program 2026 ಗೆ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಫೌಂಡೇಶನ್ ಭರಿಸಲಿದೆ. ಇದರ ಜೊತೆಗೆ ಉಚಿತ ಲ್ಯಾಪ್ಟಾಪ್, ವಸತಿ ಹಾಗೂ ಆಹಾರ ವೆಚ್ಚಕ್ಕೂ ನೆರವು ನೀಡಲಾಗುತ್ತದೆ.
ಇದನ್ನೂ ಓದಿ: Daughter Property Rights: ಹೆಣ್ಣುಮಕ್ಕಳೇ ಗಮನಿಸಿ: ತಂದೆಯ ಈ ಆಸ್ತಿಗಳ ಮೇಲೆ ನಿಮಗೆ ಹಕ್ಕಿಲ್ಲ | ಪ್ರಮುಖ ಕಾನೂನು ಮಾಹಿತಿ
ವಿದ್ಯಾರ್ಥಿವೇತನದ ಪ್ರಮುಖ ಉದ್ದೇಶ
ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಲ್ಲದೆ ತಮ್ಮ ಶಿಕ್ಷಣವನ್ನು ಮುಂದುವರಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.
ವಿದ್ಯಾರ್ಥಿವೇತನದಿಂದ ದೊರೆಯುವ ಸೌಲಭ್ಯಗಳು
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಹಲವು ರೀತಿಯ ಆರ್ಥಿಕ ನೆರವು ಲಭ್ಯವಾಗಲಿದೆ.
1. ಸಂಪೂರ್ಣ ಶಿಕ್ಷಣ ಶುಲ್ಕ ಭರಣೆ: ಆಯ್ಕೆಯಾದ ವಿದ್ಯಾರ್ಥಿಗಳ ಕೋರ್ಸ್’ನ ವಾರ್ಷಿಕ ಶುಲ್ಕದ 100 ಪ್ರತಿಶತ ಮೊತ್ತವನ್ನು ಫೌಂಡೇಶನ್ ಪಾವತಿಸುತ್ತದೆ. ಎಂಜಿನಿಯರಿಂಗ್ ಪದವಿ (UG) ಅಥವಾ 5 ವರ್ಷಗಳ ಸಂಯೋಜಿತ ಕೋರ್ಸ್ನ ಸಂಪೂರ್ಣ ಅವಧಿಗೂ ಈ ನೆರವು ಮುಂದುವರಿಯುತ್ತದೆ.
2. ಹಾಸ್ಟೆಲ್ ಮತ್ತು ಊಟದ ವೆಚ್ಚ: ಕಾಲೇಜು ಹಾಸ್ಟೆಲ್ನಲ್ಲಿ ವಾಸಿಸುವ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಹಾಗೂ ಮೆಸ್ (Mess) ವೆಚ್ಚವನ್ನು ಸಹ ವಿದ್ಯಾರ್ಥಿವೇತನ ಯೋಜನೆಯಡಿ ಭರಿಸಲಾಗುತ್ತದೆ.
ಇದನ್ನೂ ಓದಿ: Uchita Holige Yantra: ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ
3. ಬಾಡಿಗೆ ವೆಚ್ಚಕ್ಕೆ ನೆರವು: ಒಂದು ವೇಳೆ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್ ಬದಲು ಹೊರಗಡೆ ಪಿಜಿ (PG) ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಅವರ ವಾಸ್ತವಿಕ ಬಾಡಿಗೆಯನ್ನು ಸಹ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.
4. ಉಚಿತ ಲ್ಯಾಪ್ಟಾಪ್: ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೊದಲ ವರ್ಷದ ಆರಂಭದಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿಗೂ ಹೊಸ ಲ್ಯಾಪ್ಟಾಪ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಪ್ರಾಜೆಕ್ಟ್, ಸಂಶೋಧನೆ ಹಾಗೂ ಆನ್ಲೈನ್ ಅಧ್ಯಯನಕ್ಕೆ ಬಹಳ ಸಹಾಯಕವಾಗಲಿದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು?
ಈ ವಿದ್ಯಾರ್ಥಿವೇತನ ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಿರುವುದಿಲ್ಲ. ಕೆಲವು ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
2025ನೇ NIRF (National Institutional Ranking Framework) ಶ್ರೇಯಾಂಕದ ಪ್ರಕಾರ ದೇಶದ ಟಾಪ್ 50 ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
ಮೊದಲ ವರ್ಷದ ಎಂಜಿನಿಯರಿಂಗ್ ಪದವಿ ಅಥವಾ 5 ವರ್ಷಗಳ ಸಂಯೋಜಿತ ಕೋರ್ಸ್’ಗೆ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹ ವಿಭಾಗಗಳು
ಕೆಳಗಿನ ತಾಂತ್ರಿಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
- ಕಂಪ್ಯೂಟರ್ ಸೈನ್ಸ್ (Computer Science)
- ಮಾಹಿತಿ ತಂತ್ರಜ್ಞಾನ (Information Technology – IT)
- ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ (Electronics & Communication)
- ಟೆಲಿಕಾಂ (Telecommunication)
- ಡೇಟಾ ಸೈನ್ಸ್ (Data Science)
- ಏರೋಸ್ಪೇಸ್ (Aerospace)
- ಕೃತಕ ಬುದ್ಧಿಮತ್ತೆ (Artificial Intelligence – AI)
- ಇಂಟರ್ನೆಟ್ ಆಫ್ ಥಿಂಗ್ಸ್ (Internet of Things – IoT)
- ರೊಬೋಟಿಕ್ಸ್ (Robotics)
- ಇತರೆ ಉದಯೋನ್ಮುಖ ತಂತ್ರಜ್ಞಾನ ವಿಭಾಗಗಳು

ಕುಟುಂಬದ ಆದಾಯ ಮಿತಿ
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ಸೇರಿ 8 ಲಕ್ಷ ರೂಪಾಯಿಗಳನ್ನು ಮೀರಿರಬಾರದು.
ಇದಲ್ಲದೆ, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈಗಾಗಲೇ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಿಂದ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.
ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…
ಆಯ್ಕೆ ಪ್ರಕ್ರಿಯೆಯಲ್ಲಿ ಯಾರಿಗೆ ಆದ್ಯತೆ?
ಭಾರ್ತಿ ಏರ್ಟೆಲ್ ಫೌಂಡೇಶನ್ ಕೆಲವು ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದೆ. ಆ ಪ್ರಕಾರ ಈ ಕೆಳಕಂಡ ವರ್ಗದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ವಿಶೇಷ ಪರಿಗಣನೆ ನೀಡಲಾಗುತ್ತದೆ:
- ವಿದ್ಯಾರ್ಥಿನಿಯರು (Girls)
- ವಿಕಲಚೇತನರು (Persons with Disabilities)
- ಒಂಟಿ ಪೋಷಕರ ಮಕ್ಕಳು
- ಅನಾಥ ವಿದ್ಯಾರ್ಥಿಗಳು
- ಟ್ರಾನ್ಸ್ಜೆಂಡರ್ ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ
ಈ ವಿದ್ಯಾರ್ಥಿವೇತನ ಕೇವಲ ಆರ್ಥಿಕ ನೆರವಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವುದಕ್ಕೂ ಒತ್ತು ನೀಡಲಾಗಿದೆ.
ಮತ್ತೊಬ್ಬ ವಿದ್ಯಾರ್ಥಿಗೆ ನೆರವು: ವಿದ್ಯಾರ್ಥಿವೇತನದ ಸಹಾಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉತ್ತಮ ಉದ್ಯೋಗ ಪಡೆದ ನಂತರ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಕನಿಷ್ಠ ಒಬ್ಬ ಬಡ ವಿದ್ಯಾರ್ಥಿಯ ಶಿಕ್ಷಣದ ಜವಾಬ್ದಾರಿಯನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.
ಪರಿಸರ ಸಂರಕ್ಷಣೆ: ವಿದ್ಯಾರ್ಥಿವೇತನದ ಅವಧಿಯಲ್ಲಿ ಪ್ರತಿವರ್ಷ ಕನಿಷ್ಠ 5 ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಇದನ್ನೂ ಓದಿ: Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
- ಆಧಾರ್ ಕಾರ್ಡ್ ಅಥವಾ ಸರ್ಕಾರದ ಮಾನ್ಯ ಗುರುತಿನ ಚೀಟಿ
- ಕಾಲೇಜು ಪ್ರವೇಶ ರಶೀದಿ (Admission Receipt)
- 12ನೇ ತರಗತಿ ಅಂಕಪಟ್ಟಿ
- JEE ಅಂಕಪಟ್ಟಿ
- ಪೋಷಕರ ಆದಾಯ ಪ್ರಮಾಣಪತ್ರ ಅಥವಾ ITR ಪ್ರತಿಗಳು
- ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಉದ್ದೇಶದ ಹೇಳಿಕೆ (Statement of Purpose – SOP)
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಭಾರ್ತಿ ಏರ್ಟೆಲ್ ಫೌಂಡೇಶನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡೈರೆಕ್ಟ್ ಅರ್ಜಿ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ ಗಮನಿಸಿ.
ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?
ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2026
- ಅಧಿಕೃತ ಜಾಲತಾಣ: bhartiairtelfoundation.org
- ಅರ್ಜಿ ಲಿಂಕ್: Apply ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.