Police Constable Recruitment 2026: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3,991 ಸಿವಿಲ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಪಾಸಾದವರು ಅರ್ಜಿ ಅಲ್ಲಿಸಬಹುದಾಗಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ನೋದು ನಮ್ಮ ನಾಡಿನ ಲಕ್ಷಾಂತರ ಯುವಜನತೆಯ ಬಹುದೊಡ್ಡ ಕನಸು. ನೀವೂ ಕೂಡ ಇಂಥದೊಂದು ಕನಸು ಹೊತ್ತುಕೊಂಡು ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿದ್ದರೆ, ನಿಮಗೊಂದು ಭರ್ಜರಿ ಸಿಹಿಸುದ್ದಿ ಇಲ್ಲಿದೆ.
ಹೌದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) ಬರೋಬ್ಬರಿ 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (Civil Police Constable) ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ವಿಶೇಷವೆಂದರೆ, ಈ ಬಾರಿ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ವಹಿಸಲಾಗಿದ್ದು, ಪಾರದರ್ಶಕ ನೇಮಕಾತಿಯ ಭರವಸೆ ಮೂಡಿದೆ.
ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…
ಹುದ್ದೆಗಳ ಹಂಚಿಕೆ ಹೇಗಿದೆ?
ಒಟ್ಟು 3,991 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಹಾಗೂ ಉಳಿಕೆ ಮೂಲ ವೃಂದ (RPC) ಎಂದು ಎರಡು ವಿಭಾಗಗಳಾಗಿ ವಿಂಗಡಿಸಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 596 ಹುದ್ದೆಗಳನ್ನು ಮೀಸಲಿಡಲಾಗಿದೆ.
ಉಳಿಕೆ ಮೂಲ ವೃಂದದಲ್ಲಿ 3,395 ಹುದ್ದೆಗಳಿವೆ. ನೇಮಕಾತಿಯಲ್ಲಿ ಪುರುಷರು, ಮಹಿಳೆಯರು ಹಾಗೂ ಸೇವಾನಿರತರಿಗೆ ಮಾತ್ರವಲ್ಲದೆ ತೃತೀಯ ಲಿಂಗಿ ಅಭ್ಯರ್ಥಿಗಳಿಗೂ (Transgender Candidates) ಅವಕಾಶ ಕಲ್ಪಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
ಯಾರೆಲ್ಲ ಅರ್ಜಿ ಹಾಕಬಹುದು?
ಹಾಗಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು ಅಂತೀರಾ? ನೀವೇನಾದರೂ ದ್ವಿತೀಯ ಪಿಯುಸಿ (2nd PUC) ಪಾಸ್ ಆಗಿದ್ದರೆ ಧಾರಾಳವಾಗಿ ಅರ್ಜಿ ಸಲ್ಲಿಸಬಹುದು.
ಪಿಯುಸಿಗೆ ಸಮಾನವಾದ ಸಿ.ಬಿ.ಎಸ್.ಇ (CBSE) ಅಥವಾ ಐ.ಎಸ್.ಸಿ (ISC) ಮಂಡಳಿಯ 12ನೇ ತರಗತಿ ಪಾಸಾದವರು, ಮೂರು ವರ್ಷದ ಡಿಪ್ಲೊಮಾ (Diploma) ಅಥವಾ ಎರಡು ವರ್ಷದ ಐಟಿಐ (ITI Course) ಮುಗಿಸಿದವರಿಗೂ ಅವಕಾಶವಿದೆ.
ಆದರೆ ಒಂದು ವಿಚಾರ ನೆನಪಿರಲಿ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ನಿಮ್ಮ ಕೈಯಲ್ಲಿ ರಿಸಲ್ಟ್ ಇರಲೇಬೇಕು. ಸುಮ್ಮನೆ ಪರೀಕ್ಷೆ ಬರೆದು ರಿಸಲ್ಟ್ಗಾಗಿ ಕಾಯುತ್ತಿರುವವರು ಅರ್ಜಿ ಹಾಕುವಂತಿಲ್ಲ.
ಇದನ್ನೂ ಓದಿ: Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ವಯೋಮಿತಿಯಲ್ಲಿ ಭರ್ಜರಿ ಸಡಿಲಿಕೆ
ಪೊಲೀಸ್ ಹುದ್ದೆ ಎಂದಾಕ್ಷಣ ವಯಸ್ಸಿನ ಮಿತಿ ದೊಡ್ಡ ತಡೆಗೋಡೆಯಾಗಿರುತ್ತದೆ. ಆದರೆ, ಈ ಬಾರಿ ರಾಜ್ಯ ಸರ್ಕಾರ ವಯೋಮಿತಿಯಲ್ಲಿ ಬರೋಬ್ಬರಿ 5 ವರ್ಷಗಳ ಸಡಿಲಿಕೆಯನ್ನು (Age Relaxation) ನೀಡಿ ಆಕಾಂಕ್ಷಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 33 ವರ್ಷದವರೆಗೆ, ಹಿಂದುಳಿದ ವರ್ಗ (2A, 2B, 3A, 3B) ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳು 35 ವರ್ಷದವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷದವರೆಗೆ ಅವಕಾಶ ಕಲ್ಪಿಸಲಾಗಿದೆ.
ದೈಹಿಕ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ
ಕೇವಲ ಓದಿನಲ್ಲಿ ಮುಂದಿದ್ದರೆ ಸಾಲದು, ಪೊಲೀಸ್ ಕೆಲಸಕ್ಕೆ ದೈಹಿಕ ಫಿಟ್ನೆಸ್ (Physical Fitness) ಕೂಡ ಅಷ್ಟೇ ಮುಖ್ಯ. ಪುರುಷ ಅಭ್ಯರ್ಥಿಗಳು ಕನಿಷ್ಠ 168 ಸೆಂ.ಮೀ ಎತ್ತರ ಇರಲೇಬೇಕು.
ಎದೆ ಸುತ್ತಳತೆ 86 ಸೆಂ.ಮೀ ಇದ್ದು, ಉಸಿರು ಎಳೆದುಕೊಂಡಾಗ 5 ಸೆಂ.ಮೀ ವಿಸ್ತರಣೆ ಆಗಬೇಕು. ಇನ್ನು ಮಹಿಳಾ ಅಭ್ಯರ್ಥಿಗಳಿಗೆ ಬರುವುದಾದರೆ, ಕನಿಷ್ಠ 157 ಸೆಂ.ಮೀ ಎತ್ತರ ಹಾಗೂ ಕನಿಷ್ಠ 45 ಕೆ.ಜಿ ತೂಕವಿರಬೇಕು.
ಇದನ್ನೂ ಓದಿ: Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ ಹೇಗೆ?
ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳುವುದಾದರೆ, ಮೊದಲಿಗೆ KEA ವತಿಯಿಂದ 100 ಅಂಕಗಳ ಲಿಖಿತ ಪರೀಕ್ಷೆ (Written Exam) ನಡೆಯುತ್ತದೆ. ಇಲ್ಲಿ ನೆಗೆಟಿವ್ ಮಾರ್ಕಿಂಗ್ (Negative Marking) ಕೂಡ ಇರಲಿದ್ದು, ಒಂದು ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗುತ್ತದೆ.
ಇದರಲ್ಲಿ ಪಾಸ್ ಆದವರನ್ನು 1:5 ಅನುಪಾತದಲ್ಲಿ ದೈಹಿಕ ಸಹಿಷ್ಣುತೆ ಪರೀಕ್ಷೆಗೆ (Physical Test) ಕರೆದು, ಕೊನೆಗೆ ವೈದ್ಯಕೀಯ ತಪಾಸಣೆ ನಡೆಸಿ ಮೆರಿಟ್ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ.
ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?
ಅರ್ಜಿ ಸಲ್ಲಿಕೆ ಎಂದು? ಶುಲ್ಕವೆಷ್ಟು?
ಜೂನ್ 08, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ (Apply Online) ಶುರುವಾಗಲಿದ್ದು, ಜುಲೈ 03, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 750, ಹಾಗೂ ಎಸ್ಸಿ/ಎಸ್ಟಿ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ರೂ. 500 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಆಸಕ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.inಗೆ ಭೇಟಿ ನೀಡಿ ಈಗಲೇ ಅರ್ಜಿ ಸಲ್ಲಿಸಿ. ಆಗಸ್ಟ್ 02 ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಈಗಿನಿಂದಲೇ ಸಿದ್ಧತೆ ಶುರುಮಾಡಿ. ಆಲ್ ದ ಬೆಸ್ಟ್!
ಪ್ರಮುಖ ಲಿಂಕುಗಳು
- ಅಧಿಸೂಚನೆ (ಉಳಿಕೆ ಮೂಲ ವೃಂದ – RPC): Download
- ಅಧಿಸೂಚನೆ (ಕಲ್ಯಾಣ ಕರ್ನಾಟಕ – Download
- ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: ಶೀಘ್ರದಲ್ಲೇ ಬಿಡುಗಡೆ (ಜೂನ್ 8ರಿಂದ)

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.