Shakti Scheme Smart Card 2026: ಶಕ್ತಿ ಯೋಜನೆಯಡಿ ಮಹಿಳೆಯರ ಜೊತೆಗೆ ಪುರುಷರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ | ಅರ್ಜಿ ಸಲ್ಲಿಕೆ ಹೇಗೆ?

Spread the love

WhatsApp Group Join Now
Telegram Group Join Now

Shakti Scheme Smart Card 2026: ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗೆ ಹೈಟೆಕ್ ಟಚ್ ನೀಡುತ್ತಿದೆ. ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ‘ಸ್ಮಾರ್ಟ್ ಕಾರ್ಡ್’ ವಿತರಿಸಲು ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…

ಬೆಳಗ್ಗಿನ ಹೊತ್ತು ಆಫೀಸ್ ಅಥವಾ ಕಾಲೇಜಿಗೆ ಹೋಗುವ ಧಾವಂತ. ಬಸ್ ಹತ್ತಿದ ಕೂಡಲೇ ನಿರ್ವಾಹಕರು ಬಂದು ‘ಟಿಕೆಟ್, ಟಿಕೆಟ್… ಆಧಾರ್ ಕಾರ್ಡ್ ತೋರಿಸಿಮ್ಮಾ’ ಎನ್ನುತ್ತಾರೆ. ಮಹಿಳೆಯರು ತುಂಬಿದ ಬಸ್‌ನಲ್ಲಿ ತಮ್ಮ ಬ್ಯಾಗ್‌ನಿಂದ ಆಧಾರ್ ಕಾರ್ಡ್ ಹುಡುಕಿ ತೆಗೆಯುವಷ್ಟರಲ್ಲಿ ಹೈರಾಣಾಗುತ್ತಾರೆ.

ಇತ್ತ ನಿರ್ವಾಹಕರಿಗೂ ಪ್ರತಿಯೊಬ್ಬರ ಐಡಿ ಕಾರ್ಡ್ ಪರಿಶೀಲಿಸಿ ಜೀರೋ ಟಿಕೆಟ್ (Zero Ticket) ಕೊಡುವುದು ದೊಡ್ಡ ತಲೆನೋವಿನ ಕೆಲಸ. ಕಳೆದ ಕೆಲವು ತಿಂಗಳುಗಳಿAದ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ದಿನನಿತ್ಯ ಕಾಣಸಿಗುವ ದೃಶ್ಯವಿದು.

ಇದನ್ನೂ ಓದಿ: Uchita Holige Yantra: ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ

ಆಧಾರ್ ಕಾರ್ಡಿಗೆ ಮುಕ್ತಿ

ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ (Shakti Scheme) ಮಹಿಳೆಯರ ಪಾಲಿಗೆ ಆರ್ಥಿಕ ಸಂಜೀವಿನಿಯಾಗಿದೆ. ಆದರೆ, ಪ್ರತಿದಿನ ಐಡಿ ಕಾರ್ಡ್ ತೋರಿಸಿ ಟಿಕೆಟ್ ಪಡೆಯುವ ಈ ಪ್ರಕ್ರಿಯೆಗೆ ಶಾಶ್ವತ ಮುಕ್ತಿ ಹಾಡಲು ಸಾರಿಗೆ ಇಲಾಖೆ (Karnataka Transport Department) ಭರ್ಜರಿ ಸಿದ್ಧತೆ ನಡೆಸಿದೆ.

ಹೌದು, ಶಕ್ತಿ ಯೋಜನೆಗೆ ‘ಸ್ಮಾರ್ಟ್ ಕಾರ್ಡ್’ (Smart Card) ಎಂಬ ಡಿಜಿಟಲ್ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದ್ದು, ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷ ಪ್ರಯಾಣಿಕರಿಗೂ ದೊಡ್ಡ ರಿಲೀಫ್ ನೀಡಲಿದೆ.

ಇದನ್ನೂ ಓದಿ: Karnataka New BPL Ration Card : ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ | ಹೊಸ ಅಪ್ಡೇಟ್ ಪ್ರಕಟ

ದಿಢೀರ್ ಸ್ಮಾರ್ಟ್ ಕಾರ್ಡ್ ನಿರ್ಧಾರ ಯಾಕೆ?

ಶಕ್ತಿ ಯೋಜನೆಯಲ್ಲೂ ನಿತ್ಯ ಸುಮಾರು 75.68 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ಕೆಲವರು ನಕಲಿ ಗುರುತಿನ ಚೀಟಿ ಬಳಸುವುದು, ಬೇರೆಯವರ ಆಧಾರ್ ಕಾರ್ಡ್ (Aadhaar Card) ತೋರಿಸಿ ಪ್ರಯಾಣಿಸುವಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದವು.

ಇದನ್ನೂ ಓದಿ: Anganawadi Recruitment 2026: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಹಿಳೆಯರಿಗೆ ಭರ್ಜರಿ ಅವಕಾಶ

ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ನಿರ್ಧರಿಸಿದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಗ್ಯಾರಂಟಿ ಯೋಜನೆಗಳು ಕೇವಲ ನೈಜ ಫಲಾನುಭವಿಗಳಿಗೆ ಮಾತ್ರ ತಲುಪಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅದರ ಬೆನ್ನಲ್ಲೇ ನಿನ್ನೆ ಜೂನ್ 8ರಂದು ವಿಧಾನಸೌಧದಲ್ಲಿ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೈರತಿ ಸುರೇಶ್ ಅವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: PMMSY Scheme Subsidy: ಬೈಕ್, ಇ-ರಿಕ್ಷಾ ಖರೀದಿಗೆ ಸರ್ಕಾರದಿಂದ ಸಹಾಯಧನ | ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

ಪುರುಷರಿಗೂ ಸಿಗಲಿದೆ ಸ್ಮಾರ್ಟ್ ಕಾರ್ಡ್ ಲಾಭ! ಹೇಗೆ ಗೊತ್ತಾ?

‘ಶಕ್ತಿ ಯೋಜನೆ ಇರೋದು ಮಹಿಳೆಯರಿಗೆ, ಅದರಲ್ಲಿ ಪುರುಷರಿಗೆ ಏನು ಲಾಭ?’ ಎಂದು ನೀವು ಅಚ್ಚರಿಪಡಬಹುದು. ಸರ್ಕಾರ ತರುತ್ತಿರುವ ಈ ಹೊಸ ಕಾರ್ಡ್ ಕೇವಲ ಬಸ್ ಪಾಸ್ ಅಲ್ಲ. ಇದು ಅತ್ಯಾಧುನಿಕ ತಂತ್ರಜ್ಞಾನದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (National Common Mobility Card – NCMC) ಆಗಿರಲಿದೆ.

ಚಿಲ್ಲರೆ ಕಿರಿಕಿರಿಗೆ ಬ್ರೇಕ್: ಪುರುಷ ಪ್ರಯಾಣಿಕರು ಸಹ ಈ ಸ್ಮಾರ್ಟ್ ಕಾರ್ಡ್ ಪಡೆದು, ತಮ್ಮ ಬ್ಯಾಂಕ್ ಖಾತೆಯ ಮೂಲಕ ಅಥವಾ ನಗದು ನೀಡಿ ಹಣ ರೀಚಾರ್ಜ್ (Recharge) ಮಾಡಿಕೊಳ್ಳಬಹುದು. ಬಸ್ ಹತ್ತಿದ ಮೇಲೆ ನಿರ್ವಾಹಕರಿಗೆ 500 ರೂ. ನೋಟು ಕೊಟ್ಟು ಚಿಲ್ಲರೆಗಾಗಿ (Chillare Problem) ಪರದಾಡುವ ಅಗತ್ಯವಿರುವುದಿಲ್ಲ.

WhatsApp Group Join Now
Telegram Group Join Now

ಇದನ್ನೂ ಓದಿ: Gruhajyothi Gruhalakshmi Beneficiaries New: ಗೃಹಜ್ಯೋತಿ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮ | ಸರ್ಕಾರದ ಕಟ್ಟುನಿಟ್ಟಿನ ಕ್ರಮ

ಟ್ಯಾಪ್ ಅಂಡ್ ಗೋ: ನಿರ್ವಾಹಕರ ಬಳಿ ಇರುವ ಇಟಿಎಂ (ETM) ಯಂತ್ರಕ್ಕೆ ಕಾರ್ಡ್ ಅನ್ನು ಸ್ವೈಪ್ ಅಥವಾ ಟ್ಯಾಪ್ ಮಾಡಿದರೆ ಕ್ಷಣಾರ್ಧದಲ್ಲಿ ಹಣ ಕಡಿತವಾಗಿ ಟಿಕೆಟ್ ಬರುತ್ತದೆ.

ಒಂದೇ ಕಾರ್ಡ್, ಹತ್ತು ಹಲವು ಉಪಯೋಗ: ಈ ಕಾರ್ಡ್ ಅನ್ನು ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಮಾತ್ರವಲ್ಲದೆ, ನಮ್ಮ ಮೆಟ್ರೋ (Namma Metro) ಸೇರಿದಂತೆ ದೇಶಾದ್ಯಂತ ಇರುವ ಇತರ ಸಾರಿಗೆ ವ್ಯವಸ್ಥೆಗಳಲ್ಲೂ ಬಳಸಲು ಅವಕಾಶವಿರುತ್ತದೆ.

Shakti Scheme Smart Card 2026
Shakti Scheme Smart Card 2026

ಇದನ್ನೂ ಓದಿ: Karnataka Gram Panchayat Election 2026: ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರೀನ್ ಸಿಗ್ನಲ್ | ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮಹತ್ವದ ಆದೇಶ

ನಕಲಿ ಪ್ರಯಾಣಿಕರಿಗೆ ಬೀಳಲಿದೆ ಶಾಶ್ವತ ಬ್ರೇಕ್!

ಈ ಯೋಜನೆಯನ್ನು ಕರಾರುವಕ್ಕಾಗಿ ಜಾರಿ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಪ್ರತಿಯೊಬ್ಬ ಫಲಾನುಭವಿಯ ‘ಇ-ಕೆವೈಸಿ’ (e-KYC) ಕಡ್ಡಾಯವಾಗಿ ಮಾಡಿಯೇ ಈ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.

ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…

ಕಾರ್ಡ್ನೊಳಗೆ ಅಳವಡಿಸಿರುವ ‘ಸ್ಮಾರ್ಟ್ ಚಿಪ್’ (Smart Chip) ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಇನ್ನು ಮುಂದೆ ನಿರ್ವಾಹಕರು ಕಾರ್ಡ್ ನೋಡಿ ಟಿಕೆಟ್ ಕೊಡುವಂತಿಲ್ಲ. ಇಟಿಎಂ ಯಂತ್ರದಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಮಾತ್ರ ಟಿಕೆಟ್ ಪ್ರಿಂಟ್ ಆಗುತ್ತದೆ.

ಇದರಿಂದ ನಿತ್ಯ ಎಷ್ಟು ಜನ ಪ್ರಯಾಣಿಸುತ್ತಿದ್ದಾರೆ? ಯಾವ ಮಾರ್ಗದಲ್ಲಿ ಹೆಚ್ಚು ಬಸ್ಸುಗಳ ಅಗತ್ಯವಿದೆ? ಎಂಬ ನಿಖರವಾದ ಡೇಟಾ (Accurate Data) ನೇರವಾಗಿ ಸರ್ಕಾರದ ಸರ್ವರ್‌ಗೆ ರವಾನೆಯಾಗುತ್ತದೆ. ಇದರಿಂದ ಸೋರಿಕೆ ತಪ್ಪುವುದಲ್ಲದೆ, ಸಾರಿಗೆ ನಿಗಮಗಳ ನಿರ್ವಹಣೆಯೂ ಸುಲಭವಾಗಲಿದೆ.

ಇದನ್ನೂ ಓದಿ: LPG Gas Cylinder Delivery: ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ವಾರ ಕಳೆದರೂ ಡೆಲಿವರಿ ಆಗಿಲ್ಲವೇ? ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ!

ಸ್ಮಾರ್ಟ್ ಕಾರ್ಡ್ ಅರ್ಜಿ ಸಲ್ಲಿಕೆ ಹೇಗಿರಲಿದೆ? (How to Apply for Smart Card)

ಸ್ಮಾರ್ಟ್ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರವು ಸಂಪೂರ್ಣ ಡಿಜಿಟಲ್ ಹಾಗೂ ಜನಸಾಮಾನ್ಯರಿಗೆ ಸುಲಭವಾಗುವಂತೆ ರೂಪಿಸುತ್ತಿದೆ.

ಆನ್‌ಲೈನ್ ಪೋರ್ಟಲ್: ಸರ್ಕಾರದ ಅಧಿಕೃತ ಸೇವಾ ಸಿಂಧು (Seva Sindhu) ವೆಬ್‌ಸೈಟ್ ಮೂಲಕ ಕುಳಿತಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಸೇವಾ ಕೇಂದ್ರಗಳು: ಸ್ಮಾರ್ಟ್ಫೋನ್ ಇಲ್ಲದವರು ಅಥವಾ ಆನ್‌ಲೈನ್ ಬಗ್ಗೆ ಅರಿವಿಲ್ಲದವರು ತಮ್ಮ ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಸಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಅಗತ್ಯವಿರುತ್ತದೆ. ಕಾರ್ಡ್ ವಿತರಣೆಯ ಉಸ್ತುವಾರಿಯನ್ನು ಕೆಎಸ್‌ಆರ್‌ಟಿಸಿಗೆ (KSRTC) ನೋಡಲ್ ಏಜೆನ್ಸಿಯಾಗಿ ವಹಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿ ಪ್ರಕಟವಾಗಲಿದೆ.

ಒಟ್ಟಿನಲ್ಲಿ, ಬಸ್ಸುಗಳಲ್ಲಿ ಪ್ರತಿದಿನ ನಡೆಯುವ ಐಡಿ ಕಾರ್ಡ್ ಹುಡುಕಾಟ, ಚಿಲ್ಲರೆ ಗಲಾಟೆಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ. ಒಂದು ಸಣ್ಣ ಸ್ಮಾರ್ಟ್ ಕಾರ್ಡ್ ಹಿಡಿದು ದರ್ಪದಿಂದ, ಯಾವುದೇ ಕಿರಿಕಿರಿಯಿಲ್ಲದೆ ಪ್ರಯಾಣಿಸುವ ಕಾಲ ಹತ್ತಿರವಾಗುತ್ತಿದ್ದು, ರಾಜ್ಯದ ಸಾರಿಗೆ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣದತ್ತ (Digitalization) ಮುಖ ಮಾಡಿದೆ.

Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ


Spread the love
error: Content is protected !!