New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

Spread the love

WhatsApp Group Join Now
Telegram Group Join Now

New BPL Card Income Limit Hike: ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ಯೋಚಿಸುತ್ತಿದೆ. ಏನಿದು ಹೊಸ ನಿಯಮ? ಸರ್ಕಾರದ ಮುಂದಿನ ಕ್ರಮಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಹೊಸ ಬಿಪಿಎಲ್ (BPL Card) ಕಾರ್ಡ್ ಪಡೆಯಲು ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಹೊರಬಿದ್ದಿದೆ. ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದ್ದು; ಹೆಚ್ಚಿನ ಆದಾಯ ಹೊಂದಿದವರಿಗೂ ಬಿಪಿಎಲ್ ಕಾರ್ಡ್ ಸಿಗುವ ನಿರೀಕ್ಷೆ ಹುಟ್ಟಿಕೊಂಡಿದೆ.

ಹೌದು, ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ವಾರ್ಷಿಕ ಕುಟುಂಬ ಆದಾಯ ಮಿತಿಯನ್ನು (Annual Family Income Limit) 1.20 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಮಹತ್ವದ ಶಿಫಾರಸು ಮಾಡಿದೆ.

ಈ ಶಿಫಾರಸು ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವ ಕುಟುಂಬಗಳಲ್ಲಿ ಆಶಾಭಾವನೆ ಮೂಡಿಸಿದೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ಜಾರಿ | ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕಾ? ತಕ್ಷಣ ಈ ಕೆಲಸ ಮಾಡಿ…

ಹಳೆಯ ಆದಾಯ ಮಿತಿ ಅನರ್ಹ?

2017ರಲ್ಲಿ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ವಿತರಣೆಗೆ ಹಲವು ಕಠಿಣ ಮಾನದಂಡಗಳನ್ನು ಜಾರಿಗೆ ತಂದಿತ್ತು. ಆ ಸಮಯದಲ್ಲಿ ವಾರ್ಷಿಕ 1.20 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಲಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ, ಆಹಾರ ಸಾಮಗ್ರಿಗಳ ಬೆಲೆ, ವಿದ್ಯುತ್ ಶುಲ್ಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗರ ಪ್ರದೇಶಗಳಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲೂ ಬದುಕಿನ ಖರ್ಚು ಗಣನೀಯವಾಗಿ ಹೆಚ್ಚಾಗಿದೆ.

ಇದರಿಂದಾಗಿ ತಿಂಗಳಿಗೆ 20 ರಿಂದ 25 ಸಾವಿರ ರೂ. ಆದಾಯ ಗಳಿಸುವ ಅನೇಕ ಕುಟುಂಬಗಳು ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೂ ಹಳೆಯ ಆದಾಯ ಮಿತಿ ಕಾರಣದಿಂದ ಅವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂಬ ಅಸಮಾಧಾನ ಬಹುಕಾಲದಿಂದ ಕೇಳಿಬರುತ್ತಿತ್ತು.

ಈ ಹಿನ್ನೆಲೆಯಲ್ಲೇ ಆಡಳಿತ ಸುಧಾರಣಾ ಆಯೋಗ, ಇಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ಇದನ್ನೂ ಓದಿ: Post Matric Prize Money Scholarship 2026: ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ

ಆದಾಯ ಮಿತಿ 3 ಲಕ್ಷ ರೂ.ಗೆ ಏರಿದರೆ ಏನು ಬದಲಾವಣೆ?

ಪ್ರಸ್ತುತ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದರೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ. ಆದರೆ ಈ ಮಿತಿ 3 ಲಕ್ಷ ರೂ.ಗೆ ಏರಿಸಿದರೆ, ರಾಜ್ಯದ ಲಕ್ಷಾಂತರ ಕುಟುಂಬಗಳು ಹೊಸದಾಗಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ವಿಶೇಷವಾಗಿ:

  • ಖಾಸಗಿ ಉದ್ಯೋಗದಲ್ಲಿರುವ ಕಡಿಮೆ ಸಂಬಳದ ಕುಟುಂಬಗಳು
  • ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರು
  • ದಿನಗೂಲಿ ಮತ್ತು ಅಸ್ಥಿರ ಉದ್ಯೋಗದ ಕುಟುಂಬಗಳು
  • ಸಣ್ಣ ರೈತರು, ಕೂಲಿ ಕಾರ್ಮಿಕರು
  • ಮಧ್ಯಮ ವರ್ಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು

ಇವರಿಗೆ ಸರ್ಕಾರದ ಆಹಾರ ಭದ್ರತಾ ಯೋಜನೆಗಳ (Food Security Schemes) ಲಾಭ ದೊರೆಯುವ ಸಾಧ್ಯತೆ ಹೆಚ್ಚಾಗಲಿದೆ.

ಇದನ್ನೂ ಓದಿ: RTE Free Education Extended: ಇನ್ಮುಂದೆ 10ನೇ ತರಗತಿವರೆಗೂ ಆರ್‌ಟಿಇ ಸೀಟು | ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರಲ್ಲ?

ರಾಜ್ಯ ಸರ್ಕಾರ ಈಗಾಗಲೇ ಕೆಲವು ವರ್ಗಗಳನ್ನು ಬಿಪಿಎಲ್ ಕಾರ್ಡ್ ಸೌಲಭ್ಯದಿಂದ ಹೊರಗಿಟ್ಟಿದೆ. ಸರ್ಕಾರದ ಪ್ರಸ್ತುತ ನಿಯಮಗಳ ಪ್ರಕಾರ ಕೆಳಗಿನವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ:

  • ಆದಾಯ ತೆರಿಗೆ ಪಾವತಿಸುವವರು
  • ಸರ್ಕಾರಿ ನೌಕರರು
  • ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕಾಯಂ ಸಿಬ್ಬಂದಿ
  • ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ
  • ವಕೀಲರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ಸ್
  • ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು
  • ನಾಲ್ಕು ಚಕ್ರ ವಾಹನ ಹೊಂದಿರುವವರು (ಆಟೋ ಮತ್ತು ಟ್ರ‍್ಯಾಕ್ಟರ್ ಹೊರತುಪಡಿಸಿ)
  • ನೋಂದಾಯಿತ ಗುತ್ತಿಗೆದಾರರು
  • ಎಪಿಎಂಸಿ ಟ್ರೇಡರ್ಸ್ ಮತ್ತು ಕಮಿಷನ್ ಏಜೆಂಟ್ಸ್
  • ಬೀಜ ಮತ್ತು ಗೊಬ್ಬರ ಡೀಲರ್ಸ್
  • ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ನೌಕರರು
WhatsApp Group Join Now
Telegram Group Join Now

ಇವರನ್ನು ಆರ್ಥಿಕವಾಗಿ ಸಮರ್ಥ ವರ್ಗ ಎಂದು ಪರಿಗಣಿಸಿ ಬಿಪಿಎಲ್ ಸೌಲಭ್ಯದಿಂದ ಹೊರಗಿಡಲಾಗಿದೆ.

ಇದನ್ನೂ ಓದಿ: A Kharabu B Kharabu Land: ‘ಅ’ ಖರಾಬು, ‘ಬ’ ಖರಾಬು ಜಮೀನು ಅಂದ್ರೇನು? ರೈತರು ತಪ್ಪದೇ ತಿಳಿಯಬೇಕಾದ ಮಾಹಿತಿ

New BPL Card Income Limit Hike
New BPL Card Income Limit Hike

ನಿಯಮ ಉಲ್ಲಂಘಿಸಿ ಪಡೆದ ಕಾರ್ಡ್’ಗಳು ರದ್ದು

ಸರ್ಕಾರ ಈಗಾಗಲೇ ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್’ಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಪರಿಶೀಲನೆ ಆರಂಭಿಸಿದೆ. ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದಿರುವ ಕುಟುಂಬಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಅಧಿಕೃತ ಮಾಹಿತಿಯ ಪ್ರಕಾರ ಇದುವರೆಗೆ ಸುಮಾರು 4,56,675 ಬಿಪಿಎಲ್ ಕಾರ್ಡ್’ಗಳನ್ನು ರದ್ದುಪಡಿಸಲಾಗಿದೆ. ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಬೇಕು ಎಂಬ ಉದ್ದೇಶವನ್ನು ಇಲಾಖೆ ಹೊಂದಿದೆ.

ಇದನ್ನೂ ಓದಿ: PM-KISAN Father Son Eligibility Rules: ತಂದೆ-ಮಗ ಇಬ್ಬರೂ ಪಿಎಂ-ಕಿಸಾನ್ ಹಣ ಪಡೆಯಬಹುದಾ? ಸರ್ಕಾರದ ಹೊಸ ನಿಯಮ ಏನು ಹೇಳುತ್ತದೆ? ಸಂಪೂರ್ಣ ಮಾಹಿತಿ

ಹೊಸ ಬಿಪಿಎಲ್ ಕಾರ್ಡ್’ಗೆ ಭಾರೀ ಬೇಡಿಕೆ

ರಾಜ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ಗಾಗಿ ಜನರಿಂದ ಭಾರೀ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಅವುಗಳಲ್ಲಿ ಲಕ್ಷಾಂತರ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಮಾಹಿತಿಯ ಪ್ರಕಾರ ಸುಮಾರು 3,27,309 ಹೊಸ ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ.

ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (Karnataka One) ಮತ್ತು ಗ್ರಾಮ ಒನ್ (Grama One) ಕೇಂದ್ರಗಳ ಮೂಲಕ ಹಲವು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಕಾರ್ಡ್ ಸಿಕ್ಕಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ಕುಟುಂಬಗಳು ನಾಲ್ಕೈದು ವರ್ಷಗಳಿಂದ ಕಾಯುತ್ತಿದ್ದರೂ ಯಾವುದೇ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಇದನ್ನೂ ಓದಿ: LPG Cylinder New Rules: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್ | ಮೇ 1ರಿಂದಲೇ ಸರ್ಕಾರದ ಹೊಸ ನಿಯಮಗಳು ಜಾರಿ

ಜನಪ್ರತಿನಿಧಿಗಳಿಂದಲೂ ಸರ್ಕಾರದ ಮೇಲೆ ಒತ್ತಡ

ಹೊಸ ಬಿಪಿಎಲ್ ಕಾರ್ಡ್ ವಿತರಣೆಯನ್ನು ವೇಗಗೊಳಿಸಬೇಕು ಎಂಬ ಬೇಡಿಕೆ ಕೇವಲ ಸಾರ್ವಜನಿಕರಿಂದ ಮಾತ್ರವಲ್ಲ, ಜನಪ್ರತಿನಿಧಿಗಳಿಂದಲೂ ಕೇಳಿಬರುತ್ತಿದೆ.

ಶಾಸಕರು, ಸಂಸದರು ಹಾಗೂ ಸ್ಥಳೀಯ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಿ ಅರ್ಹ ಕುಟುಂಬಗಳಿಗೆ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಅಂಶವನ್ನು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ

ಸರ್ಕಾರದ ಅಂತಿಮ ನಿರ್ಧಾರವೇನು?

ಸದ್ಯಕ್ಕೆ ಆದಾಯ ಮಿತಿ ಹೆಚ್ಚಿಸುವ ಕುರಿತು ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ ಆಡಳಿತ ಸುಧಾರಣಾ ಆಯೋಗ ನೀಡಿರುವ ಶಿಫಾರಸಿನ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಒಮ್ಮೆ ಸರ್ಕಾರ ಅಧಿಕೃತವಾಗಿ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಏರಿಸುವ ನಿರ್ಧಾರ ಕೈಗೊಂಡರೆ, ಲಕ್ಷಾಂತರ ಕುಟುಂಬಗಳಿಗೆ ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಅವಕಾಶ ದೊರೆಯಬಹುದು.

ಇದನ್ನೂ ಓದಿ: SBI Stree Shakti Package Loan: ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್ | ಮಹಿಳೆಯರಿಗೆ ₹10 ಲಕ್ಷವರೆಗೆ ಮೇಲಾಧಾರ ರಹಿತ ಸಾಲ

ಬಿಪಿಎಲ್ ಕಾರ್ಡ್ ಎಂಬುದು ಕೇವಲ ಪಡಿತರ ಚೀಟಿ ಅಲ್ಲ; ಅದು ಅನೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬದುಕಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ದಾಖಲೆ. ಇಂದಿನ ಕಾಲಘಟ್ಟದಲ್ಲಿ ಹಳೆಯ ಆದಾಯ ಮಿತಿಗಳು ವಾಸ್ತವ ಪರಿಸ್ಥಿತಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಹೀಗಾಗಿ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಏರಿಸುವ ಪ್ರಸ್ತಾವನೆ ಜಾರಿಗೆ ಬಂದರೆ, ನಿಜವಾದ ಅಗತ್ಯವಿರುವ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುವ ಸಾಧ್ಯತೆ ಹೆಚ್ಚಾಗಲಿದೆ. ಇದೀಗ ಎಲ್ಲರ ದೃಷ್ಟಿಯೂ ಸರ್ಕಾರದ ಅಂತಿಮ ತೀರ್ಮಾನದತ್ತ ನೆಟ್ಟಿದೆ.

Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ಜಾರಿ | ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕಾ? ತಕ್ಷಣ ಈ ಕೆಲಸ ಮಾಡಿ…


Spread the love
error: Content is protected !!