ವಾರದಲ್ಲಿ ಎರಡು ದಿನ ರಜೆ ಬೇಡಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ (Bank Employees Strike) ಕರೆ ನೀಡಿದ್ದಾರೆ. ನಿಜಕ್ಕೂ ಇವರ ಬೇಡಿಕೆಗೆ ಬಲ ಸಿಗುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಮತ್ತೊಂದು ಮಹತ್ವದ ಚರ್ಚೆಗೆ ತೆರೆ ಬಿದ್ದಿದೆ. ವಾರದಲ್ಲಿ ಐದು ದಿನಗಳ ಕೆಲಸ, ಎರಡು ದಿನ ರಜೆ ಎಂಬ ಬೇಡಿಕೆಯನ್ನು ಮುಂದಿಟ್ಟು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ (Bank Employees Protest) ಕರೆ ನೀಡಿದ್ದಾರೆ. ಈ ಮುಷ್ಕರದಿಂದಾಗಿ ದೇಶದಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (Public Sector Banks) ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Sukanya Samriddhi Yojana- ಹೆಣ್ಣುಮಕ್ಕಳ ಭವಿಷ್ಯ ಭದ್ರವಾಗಿಸುವ ಸುಕನ್ಯಾ ಸಮೃದ್ಧಿ ಯೋಜನೆ | ಮಗಳ ಮದುವೆಗೆ 69 ಲಕ್ಷ ಹಣ
Reason Behind the Strike – ಮುಷ್ಕರಕ್ಕೆ ಕಾರಣವೇನು?
ಕಳೆದ ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆ ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದೆ ಮುಕ್ತಾಯವಾದ ಹಿನ್ನೆಲೆ, ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (UFBU) ಮುಷ್ಕರಕ್ಕೆ ಮುಂದಾಗಿದೆ.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆ ಎಂದರೆ, ಈಗಿರುವಂತೆ ತಿಂಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರವಲ್ಲದೆ, ಎಲ್ಲ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸಬೇಕು ಎಂಬುದು.
ಈ ಬೇಡಿಕೆಗೆ ಸಂಬಂಧಿಸಿ 2024ರ ಮಾರ್ಚ್’ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ವೇಳೆ, ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (IBA) ಮತ್ತು ಯುಎಫ್‌ಬಿಯು ನಡುವೆ ಒಪ್ಪಂದವಾಗಿತ್ತು. ಆದರೆ, ಸರ್ಕಾರದಿಂದ ಅಂತಿಮ ಅನುಮೋದನೆ ಸಿಗದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ
Employees’ Stand – ಬ್ಯಾಂಕ್ ನೌಕರರ ವಾದವೇನು?
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (AIBOC) ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ಅವರ ಪ್ರಕಾರ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ನಾವು ಸಮ್ಮತಿಸಿದ್ದೇವೆ. ಹೀಗಾಗಿ ಪ್ರತಿ ಶನಿವಾರ ರಜೆ ನೀಡಿದರೂ ಕೆಲಸದ ದಿನಗಳು ಅಥವಾ ಉತ್ಪಾದಕತೆ ನಷ್ಟವಾಗುವುದಿಲ್ಲ.
ಇನ್ನೊಂದೆಡೆ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು, ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಯಾವುದೇ ಸ್ಪಷ್ಟ ಭರವಸೆ ದೊರಕಲಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯವಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Govt Employee Pension Withholding- ಇಂಥ ಸರ್ಕಾರಿ ನೌಕರರ ಪಿಂಚಣಿ ಮುಟ್ಟುಗೋಲು: ಹೊಸ ಕಠಿಣ ನಿಯಮ ಜಾರಿ

What Impact Will the Strike Have? – ಮುಷ್ಕರದಿಂದ ಏನು ಪರಿಣಾಮ?
ಈ ಮುಷ್ಕರದ ನೇರ ಪರಿಣಾಮ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಗ್ರಾಹಕರ ಮೇಲೆ ಬೀಳುವ ಸಾಧ್ಯತೆ ಹೆಚ್ಚು. ಭಾರತೀಯ ಸ್ಟೇಟ್ ಬ್ಯಾಂಕ್ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅಡಚಣೆ ಉಂಟಾಗಲಿದೆ.
ಈ ಬ್ಯಾಂಕುಗಳ ಶಾಖೆಗಳಲ್ಲಿ ಠೇವಣಿ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್, ಪಾಸ್‌ಬುಕ್, ಡಿಡಿ, ಸಾಲ ಸಂಬಂಧಿತ ಸೇವೆಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ. ಕೆಲ ಪ್ರದೇಶಗಳಲ್ಲಿ ಎಟಿಎಂಗಳಲ್ಲಿ ನಗದು ಲಭ್ಯತೆ ಸಮಸ್ಯೆಯಾಗಬಹುದು ಎಂಬ ಎಚ್ಚರಿಕೆಯನ್ನು ಕೂಡ ಬ್ಯಾಂಕ್‌ಗಳು ನೀಡಿವೆ.
ಇದನ್ನೂ ಓದಿ: LIC Smart Pension Plan 2026- ಪತಿ-ಪತ್ನಿಗೆ ಜೀವನಪೂರ್ತಿ ಪಿಂಚಣಿ | ಎಲ್‌ಐಸಿ ಹೊಸ ಯೋಜನೆ
Banks Unaffected by the Strike – ಸೇವೆಗೆ ಧಕ್ಕೆ ಇಲ್ಲದ ಬ್ಯಾಂಕುಗಳು
ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಸೇರಿದಂತೆ ಖಾಸಗಿ ವಲಯದ ಎಲ್ಲಾ ಬ್ಯಾಂಕುಗಳು ಎಂದಿನಂತೆ ತೆರೆದಿರುತ್ತವೆ. ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗದ ಕಾರಣ, ಅವುಗಳ ವಹಿವಾಟು ಎಂದಿನಂತೆ ನಡೆಯಲಿದೆ.
ಸಮಾಧಾನದ ಸಂಗತಿ ಏನೆಂದರೆ, ಯುಪಿಐ, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಹಣ ವರ್ಗಾವಣೆ ಇತ್ಯಾದಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೀಗಾಗಿ, ತುರ್ತು ಹಣಕಾಸು ವ್ಯವಹಾರಗಳಿಗೆ ಡಿಜಿಟಲ್ ಮಾರ್ಗವನ್ನು ಬಳಸಿಕೊಳ್ಳಬಹುದು.
Five-Day Work Week: Yes or No? – ಐದು ದಿನಗಳ ಬ್ಯಾಂಕ್ ಕೆಲಸ- ಬೇಕೇ? ಬೇಡವೇ?
ಐಟಿ, ಕಾರ್ಪೊರೇಟ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಯಲ್ಲಿದೆ. ಬ್ಯಾಂಕ್ ನೌಕರರೂ ಕೂಡ ಹೆಚ್ಚಿನ ಕೆಲಸದ ಒತ್ತಡ, ಮಾನಸಿಕ ಒತ್ತಡ ಮತ್ತು ಕೆಲಸ-ಜೀವನ ಸಮತೋಲನದ ಕೊರತೆ ಬಗ್ಗೆ ಮಾತನಾಡುತ್ತಿದ್ದಾರೆ.
ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಜನಸಾಮಾನ್ಯರ ನಿತ್ಯದ ಅವಶ್ಯಕತೆಗೆ ನೇರವಾಗಿ ಸಂಬಂಧಿಸಿದಿರುವುದರಿಂದ, ಸರ್ಕಾರ ಈ ವಿಷಯದಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
What’s Next? – ಮುಂದೇನು?
ಈ ಮುಷ್ಕರದ ನಂತರ ಸರ್ಕಾರ ಮತ್ತು ಬ್ಯಾಂಕ್ ಸಂಘಟನೆಗಳ ನಡುವೆ ಮತ್ತೊಮ್ಮೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಎಲ್ಲ ಶನಿವಾರ ರಜೆ ಎಂಬ ಬೇಡಿಕೆ ಈಡೇರಿದರೆ, ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲಿ ಇದು ದೊಡ್ಡ ಬದಲಾವಣೆಯಾಗಲಿದೆ.
Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.