SSLC Exam-2 Key Answers- ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಫಲಿತಾಂಶ | ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಿ ಈಗಲೇ ನಿಮ್ಮ ಫಲಿತಾಂಶ ಗೆಸ್ ಮಾಡಿ…

Spread the love

2025ನೇ ಸಾಲಿನ ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶವನ್ನು ವಿದ್ಯಾರ್ಥಿಗಳು ನಿಖರವಾಗಿ ಅಂದಾಜಿಸಲು ಕೀ ಉತ್ತರಗಳನ್ನು (SSLC Exam-2 Key Answers) ಬಿಡುಗಡೆ ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

2025ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-2 ಬರೆದಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇದೀಗ ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು (Key Answers) ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಂದಾಜು ಮಾಡಿಕೊಳ್ಳಲು ಇದು ಸಹಾಯವಾಗಲಿದೆ.

3.16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 (Supplementary/Repeat Exam) ಅನ್ನು ಕಳೆದ ಮೇ 26ರಿಂದ 31ರ ವರೆಗೆ ರಾಜ್ಯದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಬಾರಿ 3.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿದ್ದರು.

ಪರೀಕ್ಷೆ-1ರಲ್ಲಿ ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಅಂಕ ಕಡಿಮೆಯಿಂದ ಉತೀರ್ಣರಾಗದ ವಿದ್ಯಾರ್ಥಿಗಳು ಹಾಗೂ ಫಲಿತಾಂಶವನ್ನು ಮತ್ತಷ್ಟು ಸುಧಾರಿಸಿಕೊಳ್ಳ ಬಯಸುವ ವಿದ್ಯಾರ್ಥಿಗಳು ಸೇರಿ ಒಟ್ಟು 3.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಇದೀಗ ಈ ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಿಖರವಾಗಿ ಅಂದಾಜಿಸಲು ಅನುಕೂಲವಾಗುವಂತೆ ಫಲಿತಾಂಶಕ್ಕೆ ಮುನ್ನ, ಪರೀಕ್ಷಾ ಮಂಡಳಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.

Free Tailoring Machine Scheme- ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ | ಜೂನ್ 30ರ ಒಳಗೆ ಅರ್ಜಿ ಸಲ್ಲಿಸಿ…

2025ನೇ ಸಾಲಿನ ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶವನ್ನು ವಿದ್ಯಾರ್ಥಿಗಳು ನಿಖರವಾಗಿ ಅಂದಾಜಿಸಲು ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ...
SSLC Exam-2 Key Answers Result Date
ಕೀ ಉತ್ತರಗಳ ಮಹತ್ವವೇನು?
  • ಕೀ ಉತ್ತರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಉತ್ತರಗಳನ್ನು ಹೋಲಿಸಿ ಅಂದಾಜು ಅಂಕಗಳನ್ನು ಲೆಕ್ಕಹಾಕಬಹುದು.
  • ಇದು ಫಲಿತಾಂಶ ಪ್ರಕಟಣೆಗೆ ಮುನ್ನ ಪೂರ್ವ ಸಿದ್ಧತೆಯಂತೆ ಉಪಯೋಗವಾಗುತ್ತದೆ.
  • ತಪ್ಪುಗಳು ಎಲ್ಲಿ ನಡೆದಿವೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ.
  • ಮುಂದಿನ ಪರೀಕ್ಷಾ ತಯಾರಿಗೆ ಅಥವಾ ಮತ್ತೆ ಪರೀಕ್ಷೆ ಬರೆವ ಅಗತ್ಯವಿದೆಯೇ ಎಂಬ ನಿರ್ಧಾರಕ್ಕೆ ಸಹಕಾರಿಯಾಗುತ್ತದೆ.
SSLC ಪರೀಕ್ಷೆ 2 ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕರ್ನಾಟಕ SSLC ಪರೀಕ್ಷೆ 2 ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

  • ಹಂತ 1: ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಲು ಮೊದಲಿಗೆ ಅಧಿಕೃತ ವೆಬ್‌ಸೈಟ್ ತೆರೆಯಿರಿ – kseeb.karnataka.gov.in 
  • ಹಂತ 2: ಆಗ School Examination & Assessment ವೆಬ್‌ಸೈಟ್’ನ Objection To Key Answers ಪುಟ ತೆರೆದುಕೊಳ್ಳುತ್ತದೆ.
  • ಹಂತ 3: ಅದರಲ್ಲಿ ವಿಷಯವಾರು ಪಿಡಿಎಫ್ (PDF) ಫೈಲ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ.
  • ಹಂತ 4: ನಿಮಗೆ ಬೇಕಾದ ವಿಷಯದ ಕೀ ಉತ್ತರ ಪಿಡಿಎಫ್ ಫೈಲ್‌ನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಿ.

Karnataka Swavalambi Sarathi Scheme- ಸ್ವಾವಲಂಬಿ ಸಾರಥಿ ಯೋಜನೆ: ಕಾರು, ಗೂಡ್ಸ್ ವಾಹನ ಖರೀದಿಗೆ ₹3 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ | ಜೂನ್ 30ರೊಳಗೆ ಅರ್ಜಿ ಸಲ್ಲಿಸಿ…

ಫಲಿತಾಂಶ ಪ್ರಕಟಣೆ ಯಾವಾಗ?

ಅಧಿಕೃತ ಮಾಹಿತಿಯ ಪ್ರಕಾರ, SSLC ಪರೀಕ್ಷೆ-2ರ ಫಲಿತಾಂಶವು 2025ರ ಜೂನ್ ತಿಂಗಳ ಮಧ್ಯಭಾಗದಲ್ಲಿ ಅಥವಾ ಕೊನೆ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು kseab.karnataka.gov.in ಅಥವಾ karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಬಳಸಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು.

ವಿದ್ಯಾರ್ಥಿಗಳ ಬದುಕಿನಲ್ಲಿ SSLC ಫಲಿತಾಂಶ ಒಂದು ಪ್ರಮುಖ ಹಂತ. ಇದನ್ನು ಆಧರಿಸಿ ಮುಂದಿನ ಪಠ್ಯಕ್ರಮ ಆಯ್ಕೆ ಅಥವಾ ಪಿಯುಸಿ ಪ್ರವೇಶ ನಡೆಯುತ್ತದೆ. ಹೀಗಾಗಿ ಈ ಮೌಲ್ಯಮಾಪನವು ಎಷ್ಟು ನಿಖರವಾಗಿರುತ್ತದೋ ಅಷ್ಟು ಉತ್ತಮ.

ಕೀ ಉತ್ತರಗಳ ಪ್ರಕ್ರಿಯೆ ಈ ನಿಖರತೆಯೊಂದಿಗೇ ಮುಂದಿನ ತಯಾರಿಗೆ ಸಹಕಾರಿಯಾಗಲಿ. ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು! ನಿಮ್ಮ ಪರಿಶ್ರಮ ಫಲ ಕೊಡಲಿ. ಹೆಚ್ಚಿನ ನವೀಕರಣಗಳಿಗೆ mahitimane.com ಪುಟವನ್ನು ನಿಯಮಿತವಾಗಿ ವೀಕ್ಷಿಸುತ್ತಿರಿ.

KCET Counselling 2025- ಜೂನ್ 25ರಿಂದ ಸಿಇಟಿ ಕೌನ್ಸಿಲಿಂಗ್ ಆರಂಭ | ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾಹಿತಿ ಇಲ್ಲಿದೆ


Spread the love
WhatsApp Group Join Now
Telegram Group Join Now
error: Content is protected !!