ಸರ್ಕಾರಿ ನೌಕರರು (Govt Employees) ‘ಸಂಬಳ ಪ್ಯಾಕೇಜ್ ಯೋಜನೆ’ (Salary Package Account) ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಏನಿದು ಸಂಬಳ ಪ್ಯಾಕೇಜ್ ಖಾತೆ? ಇದರಿಂದೇನು ಪ್ರಯೋಜನ? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಹಣಕಾಸು ಸುರಕ್ಷತೆ ಹಾಗೂ ಕುಟುಂಬದ ಹಿತಾಸಕ್ತಿಯ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಳೆದ ಜನವರಿ 30, 2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಎಲ್ಲ ಸರ್ಕಾರಿ ನೌಕರರು ತಮ್ಮ ಸಂಬಳ ಖಾತೆಗಳನ್ನು ಬ್ಯಾಂಕ್‌ಗಳ ‘ಸಂಬಳ ಪ್ಯಾಕೇಜ್’ ಯೋಜನೆ ಅಡಿಯಲ್ಲಿ ತೆರೆಯುವುದು ಕಡ್ಡಾಯವಾಗಿದೆ.
‘ಸಂಬಳ ಪ್ಯಾಕೇಜ್’ ಯೋಜನೆ ಅಡಿಯಲ್ಲಿ ಹಲವು ಉಚಿತ ಪ್ರಯೋಜನಗಳಿದ್ದರೂ ಕೂಡ ಅನೇಕ ರಾಜ್ಯ ಸರ್ಕಾರಿ ನೌಕರರು ಇನ್ನೂ ಅವುಗಳ ಲಾಭ ಪಡೆಯುತ್ತಿಲ್ಲ. ಬ್ಯಾಂಕ್‌ಗಳು ಒದಗಿಸುತ್ತಿರುವ ‘ಸಂಬಳ ಪ್ಯಾಕೇಜ್’ ಯೋಜನೆಗಳು ನೌಕರರಿಗೆ ಸಾಕಷ್ಟು ಆರ್ಥಿಕ ಲಾಭ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆಯಲು ಏಪ್ರಿಲ್ ತಿಂಗಳ ಒಳಗಾಗಿ ಸಂಬಳ ಪ್ಯಾಕೇಜ್ ಖಾತೆ ತೆರೆಯಲು ಆದೇಶಿಸಲಾಗಿದೆ.
8th Pay Commission Delay- ಸರಕಾರಿ ನೌಕರರ ಸಂಬಳ ಏರಿಕೆಗೆ ತಾತ್ಕಾಲಿಕ ತಡೆ | 8ನೇ ವೇತನ ಆಯೋಗ ಜಾರಿಗೆ ವಿಳಂಬ
ಸಂಬಳ ಪ್ಯಾಕೇಜ್ ಯೋಜನೆಯ ಪ್ರಯೋಜನಗಳು
ಕೆಲವು ಅಧಿಕಾರಿ, ನೌಕರರು ‘ಸಂಬಳ ಪ್ಯಾಕೇಜ್’ ಪ್ರಯೋಜನಗಳ ಬಗ್ಗೆ ಅರಿವಿಲ್ಲದೆ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಪ್ಯಾಕೇಜ್‌ಗಳನ್ನು ಪಡೆಯುತ್ತಿಲ್ಲ. ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳು ಸರ್ಕಾರಿ ನೌಕರರಿಗೆ ನೀಡುವ ಪ್ಯಾಕೇಜ್‌ಗಳಲ್ಲಿ ಈ ಕೆಳಗಿನ ಅನೇಕ ಆಕರ್ಷಕ ಸೌಲಭ್ಯಗಳಿವೆ.
- ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ಅಂದರೆ ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇಡುವ ಅಗತ್ಯವಿಲ್ಲ.
- 2 ರಿಂದ 3 ತಿಂಗಳ ನಿವ್ವಳ ಸಂಬಳದ ಮಟ್ಟದ ಮುಂಗಡ ಹಣ (ಓವರ್‌ಡ್ರಾಫ್ಟ್ ಸೌಲಭ್ಯ) ಪಡೆಯಬಹುದು.
- ಕಡಿಮೆ ಬಡ್ಡಿದರದಲ್ಲಿ ಮನೆ ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಗೃಹಸಾಲ ಸಿಗುತ್ತದೆ.
- ಡೆಬಿಟ್ ಕಾರ್ಡ್, ಡಿಮ್ಯಾಂಡ್ ಡ್ರಾಫ್ಟ್, ಎಸ್‌ಎಂಎಸ್ ಸೇವೆಗಳಂತಹ ಉಚಿತ ಬ್ಯಾಂಕಿಂಗ್ ಸೌಲಭ್ಯಗಳು ಉಚಿತವಾಗಿ ಸಿಗುತ್ತದೆ.
- ಹೆಚ್ಚುವರಿ ಪ್ರೀಮಿಯಂ ಇಲ್ಲದೆ ವೈಯಕ್ತಿಕ ಅಪಘಾತ ವಿಮೆ ದೊರೆಯುತ್ತದೆ.
- ಆಭರಣ, ಡಾಕ್ಯುಮೆಂಟ್‌ಗಳನ್ನು ಸುರಕ್ಷಿತವಾಗಿ ಇರಿಸಲು ರಿಯಾಯಿತಿ ದರದಲ್ಲಿ ಬ್ಯಾಂಕ್ ಲಾಕರ್‌ಗಗಳು ಸಿಗುತ್ತವೆ.
- ಸಂಬಳ ಪ್ಯಾಕೇಜ್ ಖಾತೆಯಿಂದ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೂ ಹೆಚ್ಚಿನ ಲಾಭ ಸಿಗಲಿದೆ.
ಅತ್ಯಂತ ಕಡಿಮೆ ಪ್ರೀಮಿಯಂ’ನಲ್ಲಿ ವಿಮಾ ಸೌಲಭ್ಯ
ಸರ್ಕಾರದ ಸ್ವಂತ ವಿಮಾ ಯೋಜನೆಗಳು ಕೂಡ ‘ಸಂಬಳ ಪ್ಯಾಕೇಜ್ ಖಾತೆ’ ಹೊಂದಿರುವ ನೌಕರರಿಗೆ ಲಭ್ಯವಿದೆ. ಈ ಯೋಜನೆಗಳು ಬಹಳ ಕಡಿಮೆ ಮೊತ್ತದ ಪ್ರೀಮಿಯಂನಲ್ಲಿ ಪ್ರಭಾವಶಾಲಿ ವಿಮಾ ಸುರಕ್ಷತೆ ಒದಗಿಸುತ್ತವೆ. ಅತೀ ಕಡಿಮೆ ವಾರ್ಷಿಕ ಪ್ರೀಮಿಯಂ ಪಾವತಿಸಿ ಈ ಕೆಳಗಿನ ವಿಮಾ ಪ್ರಯೋಜನ ಕೂಡ ಪಡೆಯಬಹುದಾಗಿದೆ.
- ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಅಡಿಯಲ್ಲಿ ವಾರ್ಷಿಕ ಪ್ರೀಮಿಯಂ: ₹436 ಆಗಿದ್ದು ವಿಮಾ ಮೊತ್ತ: ₹2 ಲಕ್ಷ ಲಭ್ಯವಿದೆ.
- ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ (PMSBY) ವಾರ್ಷಿಕ ಪ್ರೀಮಿಯಂ: ₹20 ಆಗಿದ್ದು ಇದಕ್ಕೂ ಕೂಡ ಅಪಘಾತದ ಮರಣಕ್ಕೆ ವಿಮಾ ಮೊತ್ತ: ₹2 ಲಕ್ಷ ಸಿಗಲಿದೆ.

Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ
ಸಂಬಳ ಪ್ಯಾಕೇಜ್ ಖಾತೆಗೆ ನೌಕರರು ಏನು ಮಾಡಬೇಕು?
ಸರ್ಕಾರಿ ನೌಕರರು ತಮ್ಮ ಸಂಬಳ ಪಡೆಯುವ ಬ್ಯಾಂಕ್‌ಗೆ ಭೇಟಿ ನೀಡಿ, ‘ಸಂಬಳ ಪ್ಯಾಕೇಜ್ ಖಾತೆ’ಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಬೇಕು. ಪ್ಯಾಕೇಜ್‌ಗಾಗಿ ಆಯ್ಕೆ ಮಾಡುವುದು ಸ್ವಯಂ ಪ್ರೇರಿತವಾದರೂ ಈಗ ಅದು ಕಡ್ಡಾಯವಾಗಿದೆ.
ನೌಕರರು ಸ್ಯಾಲರಿ ಪ್ಯಾಕೇಜ್ ಖಾತೆ ಆಯ್ಕೆ ಮಾಡುವ ಮೊದಲು ರಾಷ್ಟ್ರೀಯಕೃತ ಬ್ಯಾಂಕುಗಳ ಕೊಡುಗೆಗಳನ್ನು ಹೋಲಿಸಿ, ಸ್ಥಳೀಯ ಶಾಖೆ ಲಭ್ಯತೆ ಮತ್ತು ಸೇವಾ ಗುಣಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಭಾರತದ ರಾಷ್ಟ್ರೀಯಕೃತ ಬ್ಯಾಂಕುಗಳ ಪಟ್ಟಿ ಈ ಕೆಳಗಿನಂತಿದೆ:
- ಎಸ್‌ಬಿಐ (SBI)
- ಬ್ಯಾಂಕ್ ಆಫ್ ಬಡೋದಾ
- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
- ಕ್ಯಾನರಾ ಬ್ಯಾಂಕ್
- ಯೂನಿಯನ್ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಬ್ಯಾಂಕ್ ಆಫ್ ಇಂಡಿಯಾ
- ಯುಸಿಒ ಬ್ಯಾಂಕ್
- ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಬಹುತೇಕ ಬ್ಯಾಂಕುಗಳಲ್ಲಿ ಈ ಸೇವೆಗಳು ಉಚಿತವಾಗಿರುವುದರಿಂದ ಯಾವ ಅನುಕೂಲವನ್ನೂ ಕಳೆದುಕೊಳ್ಳಬೇಡಿ. ಈ ಪ್ಯಾಕೇಜ್‌ನಲ್ಲಿ ಭಾಗಿಯಾಗುವುರಿಂದ ನೇರವಾಗಿ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಹಲವು ಅನುಕೂಲವಾಗಲಿದೆ. ತಕ್ಷಣವೇ ನಿಮ್ಮ ಬ್ಯಾಂಕ್‌ನ್ನು ಸಂಪರ್ಕಿಸಿ, ಸಂಬಳ ಪ್ಯಾಕೇಜ್‌ಗಾಗಿ ಮನವಿ ಸಲ್ಲಿಸಿ.