Rover Land Survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ | ರಾಜ್ಯಾದ್ಯಂತ ರೋವರ್ ಸರ್ವೇ ಕಾರ್ಯ

Spread the love

ಕರ್ನಾಟಕದಲ್ಲಿ ಭೂಮಾಪನದ (Land surveying) ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನು ಮುಂದೆ ಕೇವಲ ಹತ್ತು ನಿಮಿಷಗಳಲ್ಲೇ ಸಂಪೂರ್ಣ ಜಮೀನು ಸರ್ವೆ (Land survey) ಕಾರ್ಯ ನಿಖರವಾಗಿ ಮುಕ್ತಾಯವಾಗಲಿದೆ. ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದು ರಾಜ್ಯ ಕಂದಾಯ ಇಲಾಖೆ (Department of Revenue) ಅಳವಡಿಸಿಕೊಂಡಿರುವ ಅತ್ಯಾಧುನಿಕ ‘ರೋವರ್’ (Rover technology) ತಂತ್ರಜ್ಞಾನ.

WhatsApp Group Join Now
Telegram Group Join Now

ಈವರೆಗೂ ಭೂಮಾಪನ ಕೆಲಸ ಚೈನ್ ಅಥವಾ ಹಗ್ಗದ ಆಧಾರಿತ ಮಾಪನದಿಂದಲೇ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹಳ ಸಮಯ ಹಿಡಿಯುತ್ತಿತ್ತು. ಹೆಚ್ಚಿನ ಸಿಬ್ಬಂದಿ ಹಾಗೂ ಹೆಚ್ಚು ದೈಹಿಕ ಶ್ರಮ ಬೇಡುತ್ತಿತ್ತು. ಆದರೆ ಈಗ, ಸರ್ಕಾರವು ‘ರೋವರ್’ ಉಪಕರಣದ ಮೂಲಕ ಈ ಸರ್ವೇ ಕಾರ್ಯವನ್ನು ಅತ್ಯಂತ ತ್ವರಿತ ಮತ್ತು ನಿಖರವಾಗಿ ಮಾಡಿ ಮುಗಿಸುತ್ತಿದೆ.

Salary Package Account- ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ | ಮಹತ್ವದ ಮಾಹಿತಿ ಇಲ್ಲಿದೆ…

ಏನಿದು ರೋವರ್ ತಂತ್ರಜ್ಞಾನ?

ಕೇವಲ ಕೇವಲ 800 ಗ್ರಾಂ ತೂಕದ ‘ರೋವರ್’ ಅತ್ಯಾಧುನಿಕ ಜಿಪಿಎಸ್ ಆಧಾರಿತ ಉಪಕರಣವಾಗಿದ್ದು; ಇದು ಭೂಗೋಳಿಯ ಅಕ್ಷಾಂಶ-ರೇಖಾಂಶಗಳನ್ನು ನಿಖರವಾಗಿ ಅಳೆಯಲು ಸಹಾಯ ಮಾಡುತ್ತದೆ. ಇದು Survey of India ಕರ್ನಾಟಕದಲ್ಲಿ ಸ್ಥಾಪಿಸಿರುವ Continuously Operating Reference Stations (CORS)ಗೆ ಸಂಪರ್ಕ ಹೊಂದಿ, ಜಮೀನು ಸರ್ವೇ ನಡೆಸಿದಾಗ ನಿಖರ ಗಡಿ ಗುರುತುಗಳನ್ನು ಗುರುತಿಸಿ, ತಕ್ಷಣ ನಕ್ಷೆ ತಯಾರಿಸಲು ನೆರವಾಗುತ್ತದೆ.

ಹಳೆಯ ಚೈನ್ ವಿಧಾನದಲ್ಲಿ ಸರ್ವೇ ಮಾಡಲು 70 ರಿಂದ 180 ನಿಮಿಷ ಹಿಡಿಯುತ್ತಿತ್ತು. ಇದೀಗ ಈ ಕೆಲಸಕ್ಕೆ 10 ನಿಮಿಷ ಸಾಕು. ಅದೇ ರೀತಿ ಹಳೆಯ ಪದ್ಧತಿಯಲ್ಲಿ ನಕ್ಷೆ ತಯಾರಿಸಲು 3ರಿಂದ 5 ಗಂಟೆ ಬೇಕಾಗುತ್ತಿತ್ತು. ರೋವರ್ ತಂತ್ರಜ್ಞಾನದಲ್ಲಿ ತಕ್ಷಣ ನಕ್ಷೆ ತಯಾರಾಗುತ್ತದೆ.

ಹಳೆಯ ಸವೇ ವಿಧಾನಕ್ಕೆ ಕನಿಷ್ಟ ಮೂರು ಜನ ಸಿಬ್ಬಂದಿ ಅಗತ್ಯವಿತ್ತು. ಈಗ ಒಬ್ಬ ಭೂಮಾಪಕ ಸಾಕು. ಮೊದಲೆಲ್ಲ ಹಗ್ಗ, ಸಮತಲಮೇಜು ಸಾಧನಗಳನ್ನು ಬಳಸಲಾಗುತ್ತಿತ್ತು. ಇದೀಗ ಜಿಪಿಎಸ್ ಆಧಾರಿತ ರೋವರ್ ಸಾಧನ, ಟ್ಯಾಬ್ ಮಾತ್ರ ಸಾಕು. ರೋವರ್ ತಂತ್ರಜ್ಞಾನದ ಮೂಲಕ ಅತ್ಯಂತ ನಿಖರವಾಗಿ ಸರ್ವೇ ನಡೆಸಬಹುದಾಗಿದೆ.

Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ

ಕರ್ನಾಟಕದಲ್ಲಿ ಭೂಮಾಪನದ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನು ಮುಂದೆ ಕೇವಲ ಹತ್ತು ನಿಮಿಷಗಳಲ್ಲೇ ಸಂಪೂರ್ಣ ಜಮೀನು ಸರ್ವೆ ಕಾರ್ಯ ನಿಖರವಾಗಿ ಮುಕ್ತಾಯವಾಗಲಿದೆ...
Rover Land Survey
26 ಲಕ್ಷ ಸರ್ವೇ ಪ್ರಕರಣಗಳು ಇತ್ಯರ್ಥ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನಿನ್ನೆ ಏಪ್ರಿಲ್ 10 ರಂದು ವಿದಾನಸೌಧದ ಮೆಟ್ಟಿಲುಗಳ ಮೇಲೆ ನಡೆದ 36ನೇ ‘ರಾಷ್ಟ್ರೀಯ ಭೂಮಾಪನಾ ದಿನಾಚರಣೆ’ಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಕಳೆದ 23 ತಿಂಗಳಲ್ಲಿ 26 ಲಕ್ಷ ಸರ್ವೇ ಪ್ರಕರಣಗಳು ಇತ್ಯರ್ಥವಾಗಿವೆ. ಪ್ರತಿ ದಿನ 5,000 ರಿಂದ 6,000 ಪ್ರಕರಣಗಳು ಸರ್ವೇ ಆಗುತ್ತಿವೆ ಎಂಬುದು ಗಮನಾರ್ಹ ಸಂಗತಿ.

ಅವರು ತಿಳಿಸಿದಂತೆ, 11ಇ ಸ್ಕೆಚ್, ಹದ್ದುಬಸ್ತು, ತತ್ಕಾಲ್ ಪೋಡಿ, ಇ-ಸ್ವತ್ತು, ಸ್ವಾವಲಂಭಿ ಯೋಜನೆ, ಕೆರೆ ಬಂಡಿದಾರಿ, ಭೂ ಪರಿವರ್ತನೆ ಮತ್ತು ಕಂದಾಯ ಅರಣ್ಯ ಗಡಿ ನಿರ್ಣಯ- ಈ ಎಲ್ಲವೂ ಇಲಾಖೆಯ ಪ್ರಮುಖ ಕಾರ್ಯಗಳಾಗಿವೆ. ಇವುಗಳಲ್ಲಿ ಹೆಚ್ಚಿನ ನಿರ್ವಹಣೆಗೂ ರೋವರ್ ತಂತ್ರಜ್ಞಾನ ಬಹುಮಟ್ಟಿಗೆ ಸಹಕಾರಿಯಾಗಲಿದೆ.

MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ

ಸರ್ವೇ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರವು ಈಗಾಗಲೇ 775 ರೋವರ್ ಖರೀದಿಗೆ ಅನುಮತಿ ನೀಡಿದ್ದು, ಇತ್ತೀಚೆಗೆ ಹೆಚ್ಚು 5,000 ರೋವರ್ ಖರೀದಿಗೆ ಅನುಮೋದನೆ ನೀಡಿದೆ. ಪ್ರತಿಯೊಬ್ಬ ಭೂಮಾಪಕರಿಗೂ ಒಂದು ರೋವರ್ ಉಪಕರಣ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಭೂ ಸರ್ವೆಯ ನಿಖರತೆ ಹೆಚ್ಚಿದಂತೆ, ಸಾರ್ವಜನಿಕರಲ್ಲಿ ಜಮೀನು ಹಕ್ಕುಗಳ ಬಗ್ಗೆ ನಂಬಿಕೆ ಉಂಟಾಗುತ್ತದೆ. ಜಮೀನು ಸಂಬಂಧಿತ ವಿವಾದಗಳು ಕಡಿಮೆಯಾಗುತ್ತವೆ. ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತವೆ. ಇದರೊಂದಿಗೆ, ಭೂ ಮಂಜೂರಿ, ಭೂ ಪರಿವರ್ತನೆ ಮತ್ತು ಖಾತಾ ನಿರ್ವಹಣೆಗೆ ಸ್ಪಷ್ಟತೆ ಮತ್ತು ಪಾರದರ್ಶಕತೆ ಬರಲಿದೆ.

ಈ ‘ರೋವರ್’ ತಂತ್ರಜ್ಞಾನ ಅಳವಡಿಕೆಯಿಂದ, ಕರ್ನಾಟಕ ರಾಜ್ಯವು ಭೂಮಾಪನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದೆ. ಇನ್ನು ಮುಂದೆ ನೂರಕ್ಕೆ ನೂರು ಗಣಕೀಕೃತ ಸರ್ವೇ ಪ್ರಕ್ರಿಯೆ, ಡಿಜಿಟಲ್ ನಕ್ಷೆಗಳು, ಹಾಗೂ ಸ್ವಯಂ ಕ್ರಿಯಾ ಸಹಿತ ದಾಖಲೆ ವ್ಯವಸ್ಥೆ ನಮ್ಮದಾಗಲಿದೆ.

ರೋವರ್ ತಂತ್ರಜ್ಞಾನ ಅಳವಡಿಕೆಯಿಂದ ಕರ್ನಾಟಕ ಸರ್ಕಾರವು ಭೂಮಾಪನ ವ್ಯವಸ್ಥೆಯಲ್ಲಿ ನೂತನ ಅಧ್ಯಾಯ ಆರಂಭಿಸಿದೆ. ಈ ಕ್ರಾಂತಿಕಾರಿ ಹೆಜ್ಜೆಯಿಂದ ರಾಜ್ಯದ ಭೂ ಮಾಪನದ ಶ್ರೇಣಿಗೆ ದೇಶದಲ್ಲೇ ಮಾದರಿಯಾಗುವ ಸಾಧ್ಯತೆ ಇದೆ.

PM Surya Ghar Solar Yojana- ನಿಮ್ಮ ಮನೆಗೆ ಉಚಿತ ಸೋಲಾರ್ ಕರೆಂಟ್‌ಗಾಗಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್…


Spread the love
WhatsApp Group Join Now
Telegram Group Join Now
error: Content is protected !!