PMAY Housing Loan Subsidy- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ₹2.67 ಲಕ್ಷ ವರೆಗೆ ಸಹಾಯಧನ | ಪಿಎಂ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

Spread the love

ಪಿಎಂ ಆವಾಸ್ (PMAY) ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದ ಸಹಾಯಧನ (PMAY Housing Loan Subsidy) ಪಡೆದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬ ನಾಗರಿಕರ ಕನಸಾಗಿದೆ. ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಈ ಕನಸು ಪೂರೈಕೆ ಅನೇಕರಿಗೆ ಕಷ್ಟಕರ. ಇಂಥವರ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ (PMAY) ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಈ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಸಬ್ಸಿಡಿ ಜೊತೆಗೆ ಕಡಿಮೆ ಬಡ್ಡಿದರದದಲ್ಲಿ ಬ್ಯಾಂಕ್ ಲೋನ್ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಡಿಸೆಂಬರ್ 31, 2025ರ ಒಳಗೆ ಅರ್ಜಿ ಸಲ್ಲಿಸುವ ಮೂಲಕ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು.

Prize Money Scholarship 2025- SSLC, PUC, ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹35,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಆಹ್ವಾನ

ನಗರ ಮತ್ತು ಗ್ರಾಮೀಣ ಭಾಗದವರಿಗೆ ಅವಕಾಶ

2015ರಲ್ಲಿ ‘ಎಲ್ಲರಿಗೂ ಮನೆ’ (Housing for All) ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡ ಪಿಎಂ ಆವಾಸ್ ಈ ಯೋಜನೆಯು, ದೇಶದ ಬಡ, ಅಲ್ಪ ಮತ್ತು ಮಧ್ಯಮ ಆದಾಯ ವರ್ಗದವರಿಗೆ ಪಕ್ಕಾ ಮನೆ ನೀಡುವ ಗುರಿಯನ್ನಿಟ್ಟುಕೊಂಡಿದೆ. ಯೋಜನೆಯು ಎರಡು ವಿಭಾಗಗಳಾಗಿದೆ:

  1. PMAY-Urban (ನಗರ ಪ್ರದೇಶ)
  2. PMAY-Gramin (ಗ್ರಾಮೀಣ ಪ್ರದೇಶ)

ಪಿಎಂ ಆವಾಸ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 92.61 ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ಕರ್ನಾಟಕದಲ್ಲಿ ಲಕ್ಷಾಂತರ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಸ್ವಂತ ಮನೆ ನಿರ್ಮಿಸಿಕೊಂಡಿದ್ದಾರೆ.

ಪಿಎಂ ಆವಾಸ್ (PMAY) ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದ ಸಹಾಯಧನ ಪಡೆದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
PMAY Housing Loan Subsidy 2025 Urban Gramin
ಯಾರಿಗೆ ಎಷ್ಟು ಸಹಾಯಧನ ಸಿಗುತ್ತದೆ?

ನಗರ ಮತ್ತು ಗ್ರಾಮೀಣ ಭಾಗದ ಫಲಾನುಭವಿಗಳನ್ನು ಅವರವರ ಕೌಟಂಬಿಕ ವಾರ್ಷಿಕ ಆದಾಯದ ಆಧಾರದಲ್ಲಿ ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಈ ವರ್ಗಗಳ ವಾರ್ಷಿಕ ಆದಾಯ ಮಿತಿ, ಗರಿಷ್ಠ ಸಾಲ ಮೊತ್ತ, ಸಬ್ಸಿಡಿ, ಮನೆ ಗಾತ್ರ ಹಾಗೂ ಷರತ್ತಿನ ವಿವರ ಈ ಕೆಳಗಿನಂತಿದೆ:

1. EWS (ಆರ್ಥಿಕವಾಗಿ ಹಿಂದುಳಿದ ವರ್ಗ)

  • ವಾರ್ಷಿಕ ಆದಾಯ: ₹6 ಲಕ್ಷದ ಒಳಗೆ
  • ಗರಿಷ್ಠ ಸಾಲ ಮೊತ್ತ: ₹6 ಲಕ್ಷ
  • ಸಹಾಯಧನ: ₹2.67 ಲಕ್ಷ
  • ಮನೆ ಗಾತ್ರ: 30 ಚದರ ಮೀ.
  • ಷರತ್ತು: ಆಸ್ತಿ ಕಡ್ಡಾಯವಾಗಿ ಮಹಿಳೆಯ ಹೆಸರಿನಲ್ಲಿರಬೇಕು

2. LIG (ಕಡಿಮೆ ಆದಾಯದ ವರ್ಗ)

  • ವಾರ್ಷಿಕ ಆದಾಯ: ₹6-₹12 ಲಕ್ಷ
  • ಗರಿಷ್ಠ ಸಾಲ ಮೊತ್ತ: ₹9 ಲಕ್ಷ
  • ಸಹಾಯಧನ: ₹2.35 ಲಕ್ಷ
  • ಮನೆ ಗಾತ್ರ: 60 ಚದರ ಮೀ.
  • ಷರತ್ತು: ಆಸ್ತಿ ಕಡ್ಡಾಯವಾಗಿ ಮಹಿಳೆಯ ಹೆಸರಿನಲ್ಲಿರಬೇಕು

KCET Counselling Updates- ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭ | ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…

3. MIG-1 (ಮಧ್ಯಮ ಆದಾಯ ವರ್ಗ – ಫೇಸ್ 1)

  • ವಾರ್ಷಿಕ ಆದಾಯ: ₹12-₹18 ಲಕ್ಷ
  • ಗರಿಷ್ಠ ಸಾಲ ಮೊತ್ತ: ₹12 ಲಕ್ಷ
  • ಸಹಾಯಧನ: ₹2.30 ಲಕ್ಷ
  • ಮನೆ ಗಾತ್ರ: 160 ಚದರ ಮೀ.
  • ಷರತ್ತು: ಆಸ್ತಿ ಕಡ್ಡಾಯವಾಗಿ ಮಹಿಳೆಯ ಹೆಸರಿನಲ್ಲಿರಬೇಕು

4. MIG-2 (ಮಧ್ಯಮ ಆದಾಯ ವರ್ಗ – ಫೇಸ್ 2)

  • ವಾರ್ಷಿಕ ಆದಾಯ: ₹18 ಲಕ್ಷದವರೆಗೆ
  • ಗರಿಷ್ಠ ಸಾಲ ಮೊತ್ತ: ₹12 ಲಕ್ಷ
  • ಸಹಾಯಧನ: ₹2.30 ಲಕ್ಷ
  • ಮನೆ ಗಾತ್ರ: 200 ಚದರ ಮೀ.
  • ಷರತ್ತು: ಆಸ್ತಿ ಮಹಿಳೆಯ ಹೆಸರಿನಲ್ಲಿ ಕಡ್ಡಾಯವಿಲ್ಲ

PM Kisan 20th Installment- ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2,000 ಜಮಾ | ಹಣ ಜಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
  • ಆಧಾರ್ ಕಾರ್ಡ್ (ಅರ್ಜಿದಾರ ಹಾಗೂ ಕುಟುಂಬದ ಸದಸ್ಯರದ್ದು)
  • ಬ್ಯಾಂಕ್ ಖಾತೆ ವಿವರಗಳು (ಆಧಾರ್ ಲಿಂಕ್ ಆಗಿರುವುದು ಕಡ್ಡಾಯ)
  • ಭೂಮಿ ದಾಖಲಾತಿ (ನಿವೇಶನದ ಪತ್ರ/ಸರ್ವೇ ನಂ./ಪಟಾ)
  • ವಸತಿ ಪ್ರಮಾಣ ಪತ್ರ (ನಗರ ಅಥವಾ ಗ್ರಾಮ ಪಂಚಾಯತ್‌ನಿಂದ)
  • ಆದಾಯ ಪ್ರಮಾಣ ಪತ್ರ (ತಾಲೂಕು ಕಚೇರಿಯಿಂದ)
  • ಫೋಟೋ ಹಾಗೂ ಸಹಿ
  • ಮನೆ ಇಲ್ಲದಿರುವ ಬಗ್ಗೆ ಅಫಿಡವಿಟ್ (ನೋಟರಿ ದೃಢೀಕೃತ)
ಪಿಎಂ ಆವಾಸ್ ಯೋಜನೆಗೆ ಬೆಂಬಲ ನೀಡುವ ಬ್ಯಾಂಕುಗಳು

ಹೆಚ್ಚು ಅಂಗೀಕೃತ ಬ್ಯಾಂಕುಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಈ ಯೋಜನೆಗೆ ಸಾಲ ಸೌಲಭ್ಯ ಒದಗಿಸುತ್ತವೆ. ಪ್ರಮುಖ ಬ್ಯಾಂಕುಗಳ ಪಟ್ಟಿ ಹೀಗಿದೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಬ್ಯಾಂಕ್ ಆಫ್ ಬರೋಡಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • HDFC ಲಿಮಿಟೆಡ್
  • ICICI ಬ್ಯಾಂಕ್
  • ಕೆನರಾ ಬ್ಯಾಂಕ್
  • LIC ಹೌಸಿಂಗ್ ಫೈನಾನ್ಸ್
  • ಇಂಡಿಯಾ ಬೂಲ್ಸ್ ಹೌಸಿಂಗ್

DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?

ಅರ್ಜಿ ಸಲ್ಲಿಸುವ ವಿಧಾನ

ಫಲಾನುಭವಿಗಳು ಈ ಕೆಳಗಿನ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ:

PMAY Urban: pmaymis.gov.in
PMAY Gramin: pmayg.nic.in

  • ವೆಬ್‌ಸೈಟ್ ಮುಖಪುಟದಲ್ಲ್ಲಿ ‘Citizen Assessment’ ವಿಭಾಗದಲ್ಲಿ ಅರ್ಜಿದಾರನ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು.
  • ಇಲ್ಲವೇ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, CSC (Customer Service Center) ಅಥವಾ ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಡಿಸೆಂಬರ್ 31, 2025

ಅರ್ಜಿಯ ಪರಿಶೀಲನೆಯ ನಂತರ ಲೋನ್ ಮಂಜೂರು ಆಗಿ, ಸಬ್ಸಿಡಿ ಹಣವನ್ನು ನೇರವಾಗಿ DBT (Direct Benefit Transfer) ಮೂಲಕ ಫಲಾನುಭವಿಯ ಖಾತೆಗೆ ಜಮೆ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಮ್ಮದೇ ಆದ ಮನೆ ನಿರ್ಮಿಸಿಕೊಳ್ಳಲು ಒಂದು ಮಹತ್ವದ ಅವಕಾಶವಾಗಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಮನೆಗೆ ಮೊದಲ ಹೆಜ್ಜೆ ಇಡಿ!

ಅರ್ಜಿ ಸಲ್ಲಿಕೆ ಲಿಂಕುಗಳು

Five Days Work Week- ಕಾರ್ಮಿಕರಿಗೆ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ | ಕಾರ್ಮಿಕ ಇಲಾಖೆ ಮಹತ್ವದ ಅಪ್ಡೇಟ್ಸ್ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!