
ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ (Karnataka SSLC, PUC Final Exam Timetable 2026) ಬಿಡುಗಡೆಯಾಗಿದೆ. ಕೆಲವು ವಿಷಯಗಳ ಪರೀಕ್ಷಾ ದಿನಾಂಕ ದಿನಾಂಕ ಬದಲಾಗಿದ್ದು ಪೂರ್ಣ ಮಾಹಿತಿ ಇಲ್ಲಿದೆ…
2026ರ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿದೆ.
ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 1 ನಿಗದಿಯಂತೆ ನಡೆಯಲಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18ರಿಂದ ಏಪ್ರಿಲ್ 2ರ ವರೆಗೆ ವಿಸ್ತರಣೆಯಾಗಿದೆ. ಈ ಮೊದಲು ಏಪ್ರಿಲ್ 1ರ ವರೆಗೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು. ಎರಡೂ ಪರೀಕ್ಷೆಗಳಲ್ಲೂ ಕೆಲ ವಿಷಯಗಳ ದಿನಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…
ದ್ವಿತೀಯ ಪಿಯುಸಿಯ ಗೃಹವಿಜ್ಞಾನ ವಿಷಯದ ಪರೀಕ್ಷೆಯು ಈ ಮೊದಲು ಮಾರ್ಚ್ 5ಕ್ಕೆ ನಿಗದಿಯಾಗಿತ್ತು. ಈಗ ಮಾರ್ಚ್ 11ಕ್ಕೆ ಬದಲಾಗಿದೆ. ಜೀವವಿಜ್ಞಾನ ಹಾಗೂ ಗಣಕ ವಿಜ್ಞಾನ ವಿಷಯಗಳ ಪರೀಕ್ಷೆಯು ಮಾಚ್‌ಧ 11 ರಿಂದ ಮಾರ್ಚ್ 16ಕ್ಕೆ ಬದಲಾಗಿದೆ.
ಇನ್ನು ಗಣಿತ ಪರೀಕ್ಷೆಯನ್ನು ಮಾರ್ಚ್ 16ರ ಬದಲಾಗಿ ಮಾರ್ಚ್ 14 ರಂದು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಿಗದಿಯಾಗಿವೆ. ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 2.15 ರವರೆಗೆ ಸಮಯ ನೀಡಲಾಗಿದೆ.
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾರ್ಚ್ 20ಕ್ಕೆ ನಿಗದಿಯಾಗಿದ್ದ ಗಣಿತ 28ಕ್ಕೆ ನಡೆಯಲಿದೆ. 28ಕ್ಕೆ ನಿಗದಿಯಾಗಿದ್ದ ಸಮಾಜ ವಿಜ್ಞಾನ ವಿಷಯವು ಏಪ್ರಿಲ್ 2ಕ್ಕೆ ಮುಂದೂಡಿಕೆಯಾಗಿದೆ.

ದಿನಾಂಕ ಬದಲಾವಣೆಯಾದ ವಿಷಯಗಳ ವಿವರ
ಎಸ್ಸೆಸ್ಸೆಲ್ಸಿ ಪರೀಕ್ಷೆ-1
- ಮಾರ್ಚ್ 18: ಕನ್ನಡ – ಪ್ರಥಮ ಭಾಷೆ
- ಮಾರ್ಚ್ 23 ವಿಜ್ಞಾನ
- ರ್ಮಾ 25 ಇಂಗ್ಲಿಷ್, ಕನ್ನಡ
- ಮಾರ್ಚ್ 28 ಗಣಿತ
- ಮಾರ್ಚ್ 30 ಹಿಂದಿ, ಎನ್‌ಎಸ್ ಕ್ಯೂಎಫ್ ವಿಷಯಗಳು
- ಏಪ್ರಿಲ್ 01 ಜಿಟಿಎಸ್ ವಿಷಯಗಳು, ಅರ್ಥಶಾಸ್ತ್ರ
- ಏಪ್ರಿಲ್ 02 ಸಮಾಜ ವಿಜ್ಞಾನ
ಎಸ್ಸೆಸ್ಸೆಲ್ಸಿ ಪರೀಕ್ಷೆ-2
- ಮೇ 18: ಕನ್ನಡ- ಪ್ರಥಮ ಭಾಷೆ
- ಮೇ 19: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
- ಮೇ 20: ಇಂಗ್ಲಿಷ್, ಕನ್ನಡ
- ಮೇ 21: ಗಣಿತ
- ಮೇ 22: ಹಿಂದಿ, ಎನ್‌ಎಸ್‌ಕ್ಯೂಎಫ್ ವಿಷಯಗಳು
- ಮೇ 23: ಸಮಾಜ ವಿಜ್ಞಾನ
- ಮೇ 25: ಜೆಟಿಎಸ್ ವಿಷಯಗಳು
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ಪಿಯುಸಿ ಪರೀಕ್ಷೆ 1
- ಫೆಬ್ರವರಿ 28: ಕನ್ನಡ, ಅರೇಬಿಕ್
- ಮಾರ್ಚ್ 02: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ,
- ಮಾರ್ಚ್ 03: ಇಂಗ್ಲಿಷ್
- ಮಾರ್ಚ್ 04: ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 05: ಇತಿಹಾಸ
- ಮಾರ್ಚ್ 06: ಭೌತಶಾಸ್ತ್ರ
- ಮಾರ್ಚ್ 07: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
- ಮಾರ್ಚ್ 09: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
- ಮಾರ್ಚ್ 10: ಅರ್ಥಶಾಸ್ತ್ರ
- ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ
- ಮಾರ್ಚ್ 12: ಹಿಂದಿ
- ಮಾರ್ಚ್ 13: ರಾಜ್ಯಶಾಸ್ತ್ರ
- ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
- ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ
- ಮಾರ್ಚ್ 17: ಹಿಂದುಸ್ಥಾನಿ ಸಂಗೀತ, ಎನ್ ಎಸ್‌ಕ್ಯೂಎಫ್ ವಿಷಯಗಳು
ವಿವರವಾದ ವೇಳಾಪಟ್ಟಿ ಲಿಂಕುಗಳು
- ಎಸ್ಸೆಸ್ಸೆಲ್ಸಿ ಪರೀಕ್ಷೆ 1 ವೇಳಾಪಟ್ಟಿ: Download
- ಎಸ್ಸೆಸ್ಸೆಲ್ಸಿ ಪರೀಕ್ಷೆ 2 ವೇಳಾಪಟ್ಟಿ: Download
- ದ್ವಿತೀಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ: Download
- ದ್ವಿತೀಯ ಪಿಯುಸಿ ಪರೀಕ್ಷೆ 2 ವೇಳಾಪಟ್ಟಿ: Download
- ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್: kseab.karnataka.gov.in



