Karnataka School Academic Calendar 2026: ರಾಜ್ಯದ ಶಾಲೆಗಳ ಆರಂಭಕ್ಕೆ ಮುಹೂರ್ತ ಫಿಕ್ಸ್ | ಈ ಬಾರಿಯ ರಜೆ, ಪರೀಕ್ಷೆಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

Spread the love

WhatsApp Group Join Now
Telegram Group Join Now

Karnataka School Academic Calendar 2026: 2026-27ನೇ ಸಾಲಿನ ಕರ್ನಾಟಕ ಶಾಲಾ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆಯಾಗಿದೆ. ಜೂನ್ 1ರಿಂದ ಶಾಲೆ ಆರಂಭ, ದಸರಾ ಮತ್ತು ಬೇಸಿಗೆ ರಜೆಗಳ ಪಟ್ಟಿ, ಹೊಸ ನಿಯಮಗಳ ಕಂಪ್ಲೀಟ್ ಡೀಟೇಲ್ಸ್ ಓದಿ…

ಬೇಸಿಗೆಯ ಬಿಸಿಲಿನ ಜೊತೆಗೆ ಮಕ್ಕಳ ರಜೆಯ ಮಜಾ ಜೋರಾಗಿದೆ. ಬೆಳಗಾದರೆ ಸಾಕು ಆಟ, ಟಿವಿ, ಮೊಬೈಲ್ ಅಂತ ಕಾಲ ಕಳೆಯುತ್ತಿರುವ ಮಕ್ಕಳಿಗೊಂದು ಕಡೆ ಮುಂದಿನ ತರಗತಿಯ ಸಂಭ್ರಮ.

ಆದರೆ, ಮನೆಯಲ್ಲಿ ಪೋಷಕರಿಗೆ ‘ಅಯ್ಯೋ ಈ ಬಾರಿ ಶಾಲೆ ಯಾವಾಗ ಶುರುವಾಗುತ್ತಪ್ಪ? ಸಮವಸ್ತ್ರ, ಪುಸ್ತಕದ ಕಥೆ ಏನು?’ ಎಂಬ ಆತಂಕ ಇದ್ದೇ ಇರುತ್ತದೆ. ಇನ್ನು ಶಿಕ್ಷಕರಿಗಂತೂ ಮುಂದಿನ ವರ್ಷದ ಪಾಠ-ಪ್ರವಚನಗಳನ್ನು ಪ್ಲಾನ್ ಮಾಡಿಕೊಳ್ಳುವ ಧಾವಂತ. ಈ ಎಲ್ಲಾ ಲೆಕ್ಕಾಚಾರಗಳಿಗೂ ಶಿಕ್ಷಣ ಇಲಾಖೆ ಇದೀಗ ಅಧಿಕೃತವಾಗಿ ಬ್ರೇಕ್ ಹಾಕಿದೆ.

ಹೌದು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ (Academic Calendar 2026) ಅನ್ನು ರಿಲೀಸ್ ಮಾಡಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳೆಂಬ ಭೇದವಿಲ್ಲದೆ, ರಾಜ್ಯದ ಮೂಲೆ ಮೂಲೆಯಲ್ಲೂ ಒಂದೇ ರೀತಿಯ ಕಲಿಕಾ ವ್ಯವಸ್ಥೆ ಇರಬೇಕು ಎನ್ನುವುದು ಈ ಕ್ಯಾಲೆಂಡರ್‌ನ ಹಿಂದಿರುವ ಮುಖ್ಯ ಉದ್ದೇಶ.

ಇದನ್ನೂ ಓದಿ: SSB Constable Recruitment 2026- 10ನೇ ಪಾಸ್ ಮಾಡಿದವರಿಗೆ ಸರ್ಕಾರಿ ಉದ್ಯೋಗ | SSBನಲ್ಲಿ ಕಾನ್‌ಸ್ಟೆಬಲ್‌ – ಟ್ರೇಡ್ಸ್‌ಮನ್ ಹುದ್ದೆಗಳ ನೇಮಕಾತಿ

ಜೂನ್ 1ಕ್ಕೆ ಶಾಲೆಯ ಗೇಟ್ ಓಪನ್! (School Reopening Dates)

ಮೇ ತಿಂಗಳು ಮುಗಿಯುತ್ತಿದ್ದಂತೆ ಶಾಲೆಗಳತ್ತ ಹೆಜ್ಜೆ ಹಾಕಲು ಶಿಕ್ಷಕರು ಸಿದ್ಧರಾಗಬೇಕು. ಮೇ 29ರಂದೇ ಶಿಕ್ಷಕರು ಶಾಲೆಗೆ ಮರಳಲಿದ್ದು, ಮರುದಿನವೇ (ಮೇ 30) ‘ಶಾಲೆ ಕಡೆ ಬನ್ನಿ’ ಎಂಬ ದಾಖಲಾತಿ ಆಂದೋಲನ ಶುರುವಾಗಲಿದೆ.

ಇನ್ನು ಜೂನ್ 1 ಬಂತು ಅಂದರೆ ಸಾಕು, ಶಾಲೆಯ ಗೇಟುಗಳು ವಿದ್ಯಾರ್ಥಿಗಳಿಗಾಗಿ ಅಧಿಕೃತವಾಗಿ ತೆರೆದುಕೊಳ್ಳುತ್ತವೆ, ಪೂರ್ಣ ಪ್ರಮಾಣದಲ್ಲಿ ಪಾಠಗಳು ಶುರುವಾಗುತ್ತವೆ.

ಇದನ್ನೂ ಓದಿ: Affordable Electric Scooters: ಅರ್ಧ ಬೆಲೆಗೆ ಸಿಗ್ತಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು | ಬಂಪರ್ ಆಫರ್

ರಜೆಗಳ ಲೆಕ್ಕಾಚಾರ ಹೇಗಿದೆ? (List of School Holidays)

ಶಾಲೆ ಅಂದ ತಕ್ಷಣ ಮಕ್ಕಳಿಗೆ ನೆನಪಾಗೋದೇ ರಜೆ! ಈ ಬಾರಿಯೂ ಹಬ್ಬದ ಸಂಭ್ರಮಕ್ಕೆ ಕೊರತೆಯಿಲ್ಲ. ಅಕ್ಟೋಬರ್ 3 ರಿಂದ 21ರವರೆಗೆ ಭರ್ಜರಿ 19 ದಿನಗಳ ಕಾಲ ದಸರಾ ರಜೆ ಸಿಗಲಿದೆ.

ಆಮೇಲೆ ಎರಡನೇ ಅವಧಿಯ (ಸೆಕೆಂಡ್ ಟರ್ಮ್) ಓದಿ ಸುಸ್ತಾಗುವ ಮಕ್ಕಳಿಗೆ, 2027ರ ಏಪ್ರಿಲ್ 11 ರಿಂದ ಮೇ 28ರ ತನಕ ದೀರ್ಘವಾದ ಬೇಸಿಗೆ ರಜೆ ಸಿಗಲಿದೆ. ಊರ ಜಾತ್ರೆ, ಸ್ಥಳೀಯ ಹಬ್ಬಗಳಿಗೂ ಶಾಲಾ ಹಂತದಲ್ಲೇ 4 ದಿನ ರಜೆ ಕೊಡುವ ಅವಕಾಶವನ್ನು ಇಲಾಖೆ ನೀಡಿದೆ.

ಇದನ್ನೂ ಓದಿ: Bank vs Post Office Investment: ಬ್ಯಾಂಕ್ ವರ್ಸಸ್ ಪೋಸ್ಟ್ ಆಫೀಸ್ | ನಿಮ್ಮ ಹಣ ಎಲ್ಲಿ ಹೆಚ್ಚು ಸುರಕ್ಷಿತ? ಇಲ್ಲಿದೆ ಸಂಪೂರ್ಣ ಮಾಹಿತಿ

ಓದು ಮಾತ್ರವಲ್ಲ, ಆಟಕ್ಕೂ ಇದೆ ಅವಕಾಶ

ಒಟ್ಟು 365 ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದು 245 ದಿನ ಮಾತ್ರ. ಅದರಲ್ಲಿ ಬರೀ ಪುಸ್ತಕ ಹಿಡಿದು ಕೂರಲು 181 ದಿನ ಮೀಸಲು. ಉಳಿದಂತೆ ಪರೀಕ್ಷೆಗೆ 26 ದಿನ ಹಾಗೂ ಮಕ್ಕಳ ಅಚ್ಚುಮೆಚ್ಚಿನ ಆಟ-ಪಾಠ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 24 ದಿನ ಮೀಸಲಿಡಲಾಗಿದೆ. ಅಂದರೆ, ಓದಿನ ಜೊತೆಗೆ ಮಕ್ಕಳ ಖುಷಿ ಹಾಗೂ ಪ್ರತಿಭೆಗೂ ಈ ಬಾರಿ ಒತ್ತು ನೀಡಲಾಗಿದೆ.

Karnataka School Academic Calendar 2026
Karnataka School Academic Calendar 2026

ಇಲಾಖೆಯ ಖಡಕ್ ರೂಲ್ಸ್ (Important Department Guidelines)

ಈ ಬಾರಿ ಶಿಕ್ಷಣ ಇಲಾಖೆ ಮಕ್ಕಳ ಹಿತದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ. ಜೂನ್ ಮೊದಲ ವಾರದಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕ ಸಿಗಲೇಬೇಕು ಎಂದು ಖಡಕ್ ಆದೇಶ ನೀಡಿದೆ.

ಇನ್ನೊಂದು ಇಂಟರೆಸ್ಟಿAಗ್ ವಿಚಾರ ಅಂದರೆ, ಮಳೆ ಬಂತು, ಬಂದ್ ಆಯ್ತು ಅಂತ ಶಾಲೆಗೆ ದಿಢೀರ್ ರಜೆ ಘೋಷಣೆ ಮಾಡಿದರೆ, ಆ ದಿನದ ಪಾಠವನ್ನು ಮುಂದಿನ ಯಾವುದಾದರೂ ರಜಾ ದಿನಗಳಲ್ಲಿ (ಉದಾಹರಣೆಗೆ ಭಾನುವಾರ ಅಥವಾ ಬೇರೆ ಸರ್ಕಾರಿ ರಜೆ) ಶಾಲೆ ನಡೆಸಿ ಕವರ್ ಮಾಡಲೇಬೇಕು ಅಂತ ಬಿಇಒಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: TVS iQube Electric Scooter: ಪೆಟ್ರೋಲ್ ಟೆನ್ಶನ್‌ಗೆ ಬ್ರೇಕ್ | ಒಂದೇ ಚಾರ್ಜ್’ಗೆ ಬರೋಬ್ಬರಿ 212 ಕಿ.ಮೀ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಇಲ್ಲಿದೆ

ಜೊತೆಗೆ, ಕರಾವಳಿ ಸೇರಿದಂತೆ ಕ್ರಿಶ್ಚಿಯನ್ ವಿದ್ಯಾರ್ಥಿಗಳು ಹೆಚ್ಚಿರುವ ಭಾಗಗಳಲ್ಲಿ, ಅವರ ಅನುಕೂಲಕ್ಕಾಗಿ ದಸರಾ ರಜೆಯನ್ನು ಸ್ವಲ್ಪ ಕಟ್ ಮಾಡಿ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ರಜೆಯಾಗಿ ಅಡ್ಜಸ್ಟ್ ಮಾಡುವ ವಿಶೇಷ ಅಧಿಕಾರವನ್ನೂ ಡಿಡಿಪಿಐಗಳಿಗೆ ನೀಡಲಾಗಿದೆ.

ಒಟ್ಟಿನಲ್ಲಿ, ಮುಂಬರುವ ಶೈಕ್ಷಣಿಕ ವರ್ಷವು ಪಕ್ಕಾ ಪ್ಲಾನ್‌ನೊಂದಿಗೆ ಶುರುವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಕ್ಕಳ ಕಲಿಕೆಗೆ ಈ ವರ್ಷ ಯಾವುದೇ ಅಡ್ಡಿಯಾಗುವುದಿಲ್ಲ.

ಸರ್ಕಾರದ ಅಧಿಕೃತ ರಜಾ ಪಟ್ಟಿ ಪ್ರಕಟಣೆ: Download

Free Textbooks for PUC Students: ಇನ್ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಸಿಗಲಿದೆ ಉಚಿತ ಪಠ್ಯಪುಸ್ತಕ | ರಾಜ್ಯ ಸರ್ಕಾರದ ಮಹತ್ವದ ಘೋಷಣೆ


Spread the love
error: Content is protected !!