Karnataka Agriculture Department Recruitment 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ 632 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ, ವಿದ್ಯಾರ್ಹತೆ ಮತ್ತು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೃಷಿ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಕನಸು ಕಾಣುತ್ತಿರುವ ಯುವಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯ ಕೃಷಿ ಇಲಾಖೆಯಲ್ಲಿ (State Agriculture Department) ಖಾಲಿ ಇರುವ ಒಟ್ಟು 632 ‘ಗ್ರೂಪ್-ಬಿ’ ವೃಂದದ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಇದು ಕೃಷಿ ಪದವೀಧರರಿಗೆ (Agriculture Graduates) ಲಭ್ಯವಾಗಿರುವ ಒಂದು ಸುವರ್ಣಾವಕಾಶವಾಗಿದೆ. ರಾಜ್ಯದ ರೈತರ ಏಳಿಗೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ಈ ನೇರ ನೇಮಕಾತಿಯನ್ನು (Direct Recruitment 2026) ಕೈಗೊಂಡಿದೆ.
ಈ ನೇಮಕಾತಿಯ ವಿಶೇಷತೆ ಎಂದರೆ, ಒಟ್ಟು ಹುದ್ದೆಗಳಲ್ಲಿ ಶೇ. 85 ರಷ್ಟು ಹುದ್ದೆಗಳನ್ನು ಕೃಷಿ ವಿಜ್ಞಾನ ಪದವೀಧರರಿಗೆ ಮೀಸಲಿಡಲಾಗಿದ್ದು, ಉಳಿದ ಶೇ. 15 ರಷ್ಟು ಹುದ್ದೆಗಳನ್ನು ಕೃಷಿ ಇಂಜಿನಿಯರಿಂಗ್ (Agricultural Engineering) ಹಾಗೂ ಇತರ ಸಂಬಂಧಿತ ತಾಂತ್ರಿಕ ಪದವೀಧರರಿಗೆ (Technical Graduates) ಮೀಸಲಿಡಲಾಗಿದೆ.
ಒಟ್ಟು ಹುದ್ದೆಗಳ ವಿವರ (Vacancy Details)
ಈ ಬೃಹತ್ ನೇಮಕಾತಿಯಡಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:
- ಕೃಷಿ ಅಧಿಕಾರಿ (Agriculture Officer – AO) 81
- ಸಹಾಯಕ ಕೃಷಿ ಅಧಿಕಾರಿ (Assistant Agriculture Officer – AAO) 551
- ಒಟ್ಟು (Total Vacancies) 632
ಇದನ್ನೂ ಓದಿ: Affordable Electric Scooters: ಅರ್ಧ ಬೆಲೆಗೆ ಸಿಗ್ತಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು | ಬಂಪರ್ ಆಫರ್
ಆಕರ್ಷಕ ವೇತನ ಶ್ರೇಣಿ (Salary Scale / Pay Scale)
ಸರ್ಕಾರಿ ಉದ್ಯೋಗದ ಅತಿ ದೊಡ್ಡ ಆಕರ್ಷಣೆ ಎಂದರೆ ಭದ್ರತೆ ಮತ್ತು ಉತ್ತಮ ವೇತನ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೆಳಗಿನಂತೆ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ:
- ಕೃಷಿ ಅಧಿಕಾರಿ (AO): ₹69,250 ರಿಂದ ₹1,34,200 ವರೆಗೆ (ಪ್ರತಿ ತಿಂಗಳಿಗೆ)
- ಸಹಾಯಕ ಕೃಷಿ ಅಧಿಕಾರಿ (AAO): ₹65,950 ರಿಂದ ₹1,24,900 ವರೆಗೆ (ಪ್ರತಿ ತಿಂಗಳಿಗೆ)
ಪ್ರಮುಖ ದಿನಾಂಕಗಳು (Important Dates)
ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆನ್‌ಲೈನ್ ಮೂಲಕ ಮಾತ್ರ ನಡೆಯಲಿದ್ದು, ಅಭ್ಯರ್ಥಿಗಳು ಈ ಕೆಳಗಿನ ದಿನಾಂಕಗಳನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 19-04-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-05-2026
- ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ 12-05-2026
- ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ 06-06-2026 ಮತ್ತು 07.06.2026
ಸೂಚನೆ: ಜೂನ್ ತಿಂಗಳಲ್ಲೇ KEA ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ತಮ್ಮ ಪರೀಕ್ಷಾ ಸಿದ್ಧತೆಯನ್ನು ಆರಂಭಿಸುವುದು ಸೂಕ್ತ.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?

ವಯೋಮಿತಿ ಅರ್ಹತೆ (Age Limit Criteria)
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಿವಿಧ ವರ್ಗಗಳ ಆಧಾರದ ಮೇಲೆ ಗರಿಷ್ಠ ವಯೋಮಿತಿಯನ್ನು ಕೆಳಕಂಡAತೆ ನಿಗದಿಪಡಿಸಲಾಗಿದೆ:
- ಸಾಮಾನ್ಯ ಅರ್ಹತೆ (General Merit – GM) 40 ವರ್ಷಗಳು
- ಪ್ರವರ್ಗ 2A, 2B, 3A ಮತ್ತು 3B (OBC Categories) 43 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 (SC / ST / Cat-1) 45 ವರ್ಷಗಳು
ಶೈಕ್ಷಣಿಕ ವಿದ್ಯಾರ್ಹತೆ (Educational Qualification)
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಯನ್ನು (Educational Eligibility) ಹೊಂದಿರಬೇಕು.
ಕೃಷಿ ಅಧಿಕಾರಿ (Agriculture Officer) ಮತ್ತು ಸಹಾಯಕ ಕೃಷಿ ಅಧಿಕಾರಿ (Assistant Agriculture Officer) ಎರಡೂ ಹುದ್ದೆಗಳನ್ನು ಶೇ. 85 ಮತ್ತು ಶೇ. 15 ರ ಕೋಟಾದಡಿ ವಿಂಗಡಿಸಲಾಗಿದೆ.
ಶೇ. 85 ರಷ್ಟು ಹುದ್ದೆಗಳಿಗೆ (ಕೃಷಿ ಪದವೀಧರರಿಗೆ ಮಾತ್ರ):
- ಬಿ.ಎಸ್ಸಿ. (ಕೃಷಿ) (B.Sc in Agriculture) ಅಥವಾ ಬಿ.ಎಸ್ಸಿ. (ಆನರ್ಸ್) ಕೃಷಿ ಪದವಿ (B.Sc Honours Agriculture) ಹೊಂದಿರಬೇಕು.
ಶೇ. 15 ರಷ್ಟು ಹುದ್ದೆಗಳಿಗೆ (ಇತರ ತಾಂತ್ರಿಕ ಮತ್ತು ಸಂಬಂಧಿತ ಪದವೀಧರರಿಗೆ): ಕೆಳಕಂಡ ಯಾವುದಾದರೂ ಒಂದು ಪದವಿಯನ್ನು ಪೂರ್ಣಗೊಳಿಸಿರಬೇಕು:
- ಬಿ.ಟೆಕ್ – ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ / ಆಹಾರ ತಂತ್ರಜ್ಞಾನ (B.Tech in Food Science & Technology)
- ಬಿ.ಎಸ್ಸಿ. / ಬಿ.ಎಸ್ಸಿ. (ಆನರ್ಸ್) – ಕೃಷಿ ಮಾರುಕಟ್ಟೆ ಮತ್ತು ಸಹಕಾರ (B.Sc in Agricultural Marketing & Co-operation)
- ಬಿ.ಎಸ್ಸಿ. (ಆನರ್ಸ್) – ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ (B.Sc Agri-Business Management)
- ಬಿ.ಎಸ್ಸಿ. ಅಥವಾ ಬಿ.ಟೆಕ್ – ಕೃಷಿ ಜೈವಿಕ ತಂತ್ರಜ್ಞಾನ (B.Sc / B.Tech in Agricultural Bio-Technology)
- ಬಿ.ಎಸ್ಸಿ. ಅಥವಾ ಬಿ.ಟೆಕ್ – ಅಗ್ರಿಕಲ್ಚರಲ್ ಇಂಜಿನಿಯರಿಂಗ್ (B.Sc / B.Tech in Agricultural Engineering)
ಗಮನಿಸಬೇಕಾದ ಪ್ರಮುಖ ಸೂಚನೆಗಳು
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ (ಅಂದರೆ 10-05-2026 ರೊಳಗೆ) ಅಭ್ಯರ್ಥಿಯು ಪದವಿ ಪೂರೈಸಿ ಅಧಿಕೃತ ಅಂಕಪಟ್ಟಿಯನ್ನು ಹೊಂದಿರಬೇಕು. ಅಂತಿಮ ವರ್ಷದ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಅಭ್ಯರ್ಥಿಯು ಪಡೆದಿರುವ ಪದವಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಥವಾ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದಲೇ ಆಗಿರಬೇಕು.
ಅಂಚೆ ತೆರಪಿ (Correspondence Course) ಅಥವಾ ದೂರಶಿಕ್ಷಣದ (Distance Education) ಮೂಲಕ ಪಡೆದ ತಾಂತ್ರಿಕ ಪದವಿಗಳನ್ನು ಈ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ರೆಗ್ಯುಲರ್ ತರಗತಿಗಳಿಗೆ ಹಾಜರಾಗಿ ಪಡೆದ ಪದವಿ ಮಾತ್ರ ಮಾನ್ಯವಾಗಿರುತ್ತದೆ.
ಇದನ್ನೂ ಓದಿ: SBI Personal Loan: ಕೇವಲ ಒಂದು ಮಿಸ್ ಕಾಲ್ ಕೊಡಿ | ₹50 ಲಕ್ಷವರೆಗೆ SBI ಲೋನ್ ಸಿಗುತ್ತೆ
ಅರ್ಜಿ ಸಲ್ಲಿಸುವುದು ಹೇಗೆ? (How to Apply?)
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್ ಮುಖಾಂತರ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ತಪ್ಪು ಮಾಹಿತಿ ನೀಡಿದರೆ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗುತ್ತದೆ. ಆದ್ದರಿಂದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ಸರಿಯಾದ ಮಾಹಿತಿಯನ್ನು ಮಾತ್ರ ಭರ್ತಿ ಮಾಡಿ.
ಪ್ರಮುಖ ಲಿಂಕುಗಳು
- ಅಧಿಸೂಚನೆ (ಆರ್‌ಪಿಸಿ): Download
- ಅಧಿಸೂಚನೆ (ಎಚ್‌ಕೆ): Download
- ಅರ್ಜಿ ಲಿಂಕ್ (ಆರ್‌ಪಿಸಿ): Apply ಮಾಡಿ
- ಅರ್ಜಿ ಲಿಂಕ್ (ಎಚ್‌ಕೆ): Apply ಮಾಡಿ
- ಅಧಿಕೃತ ಜಾಲತಾಣ: cetonline.karnataka.gov.in/kea
PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.