Karnataka Bele Parihara- ರಾಜ್ಯದ ರೈತರಿಗೆ ಗರಿಷ್ಠ ₹2,500 ಬೆಳೆ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಕಾರಣ ರೈತರು (Farmers) ತೀವ್ರ ಸಂಕಷ್ಟದಲ್ಲಿದ್ದಾರೆ. ಅನ್ನದಾತರಿಗೆ ನೆರವಾಗಲು, ಬರಪೀಡಿತ ತಾಲೂಕುಗಳ (Drought-hit taluks) ರೈತರಿಗೆ ತಕ್ಷಣದ ಪರಿಹಾರವಾಗಿ ಗರಿಷ್ಠ 2,500 ರೂಪಾಯಿ ಬೆಳೆ ಪರಿಹಾರ (Crop Relief) ಬಿಡುಗಡೆ ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರದ ನೆರವಿಗೆ ಕಾಯದೆ ರಾಜ್ಯ ಸರ್ಕಾರವು ತನ್ನದೇ ವಿಪತ್ತು ನಿಧಿಯಿಂದ ಈ ಹಣವನ್ನು ವಿತರಿಸಲು ಮುಂದಾಗಿದೆ. ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: LPG, PNG New Rules- ನವೆಂಬರ್ 1ರಿಂದ LPG, PNG ಗ್ರಾಹಕರಿಗೆ ಹೊಸ ನಿಯಮ? ಸಿಲಿಂಡರ್ ಬುಕ್ಕಿಂಗ್ ಮುನ್ನ ಈ ಮಾಹಿತಿ ತಿಳಿಯಿರಿ
ಯಾರಿಗೆ ಸಿಗಲಿದೆ ಈ ಪರಿಹಾರ? (Who will get the relief?)
ಸುಮಾರು 45 ರಿಂದ 50 ಲಕ್ಷ ರೈತರಿಗೆ ಈ ಪರಿಹಾರದ ಹಣ ಸಿಗಲಿದ್ದು, ಇದಕ್ಕಾಗಿ ಒಟ್ಟು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರತಿಯೊಬ್ಬರಿಗೂ ನಿಖರವಾಗಿ 2,500 ರೂಪಾಯಿ ಸಿಗುವುದಿಲ್ಲ; ಬದಲಾಗಿ ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ಆಧರಿಸಿ ಪರಿಹಾರದ ಮೊತ್ತ (Relief Amount) ನಿರ್ಧಾರವಾಗುತ್ತದೆ.
ಗರಿಷ್ಠ ಎರಡು ಹೆಕ್ಟೇರ್ ಜಮೀನಿಗೆ ಮಾತ್ರ ಈ ಪರಿಹಾರ ಅನ್ವಯವಾಗಲಿದ್ದು, ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಗತ್ಯವಿದೆಯೇ? (Is there a need to apply?)
ಈ ಹಣ ಪಡೆಯಲು ರೈತರು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸರ್ಕಾರವೇ ಫ್ರೂಟ್ಸ್ ತಂತ್ರಾಂಶದ (FRUITS Portal) ದಾಖಲೆಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸುತ್ತದೆ. ಪರಿಹಾರ ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು ಹಾಗೂ ಅವರ ಹೆಸರಿನಲ್ಲಿ ಎಫ್‌ಐಡಿ (FID) ಇರಬೇಕು.
ಜಮೀನಿನ ಪಹಣಿ (RTC), ಬೆಳೆ ಸಮೀಕ್ಷೆ (Crop Survey) ವಿವರಗಳು ಕರಾರುವಕ್ಕಾಗಿರಬೇಕು ಮತ್ತು ಶೇಕಡಾ 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರಬೇಕು. ಎಲ್ಲ ದಾಖಲೆಗಳು ಸರಿಯಿದ್ದರೆ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ (DBT) ಮೂಲಕ ಹಣ ಜಮೆಯಾಗುತ್ತದೆ.
ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check status on Mobile?)
ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಮೊಬೈಲ್‌ನಲ್ಲೇ (Mobile Check) ಸುಲಭವಾಗಿ ಪರಿಶೀಲಿಸಬಹುದು. ಗೂಗಲ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಪರಿಹಾರ ವೆಬ್‌ಸೈಟ್ parihara.karnataka.gov.in ಗೆ (Parihara Website) ಭೇಟಿ ನೀಡಿ. ಅಲ್ಲಿ ಪಾವತಿ ಸ್ಥಿತಿ (Payment Status) ಅಥವಾ ಫಲಾನುಭವಿಗಳ ವಿವರ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ಎಫ್‌ಐಡಿ ಅಥವಾ ಆಧಾರ್ ನಂಬರ್ ನಮೂದಿಸಿ ಸರ್ಚ್ (Search) ಮಾಡಿದರೆ ಹಣ ಜಮೆಯಾದ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಒಂದು ವೇಳೆ ವಿವರ ಕಾಣಿಸದಿದ್ದರೆ ಹಣ ತಿರಸ್ಕೃತವಾಗಿದೆ ಎಂದು ಅರ್ಥವಲ್ಲ, ಫಲಾನುಭವಿಗಳ ಮಾಹಿತಿ ಅಪ್‌ಡೇಟ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು.
ಇದನ್ನೂ ಓದಿ: Karnataka Local Body Elections: ಫೆಬ್ರವರಿ ಒಳಗೆ ಗ್ರಾ.ಪಂ ಚುನಾವಣೆ: ಜಿ.ಪಂ, ತಾ.ಪಂ ಅಖಾಡಕ್ಕೂ ಕಹಳೆ!
ಹಣ ಜಮೆಯಾಗದಿದ್ದರೆ ಏನು ಮಾಡಬೇಕು? (What to do if money is not credited?)
ಕೆಲವು ಬಾರಿ ಎಲ್ಲ ದಾಖಲೆಗಳಿದ್ದರೂ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ. ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್ (NPCI Mapping) ಆಗದಿರುವುದು, ಫ್ರೂಟ್ಸ್ ನೋಂದಣಿಯಲ್ಲಿನ ತಪ್ಪುಗಳು, ಆಧಾರ್ ಹಾಗೂ ಪಹಣಿಯಲ್ಲಿ ಹೆಸರು ಬೇರೆ ಬೇರೆ ಇರುವುದು ಇದಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.
ಇಂತಹ ಸಮಸ್ಯೆಗಳಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು. ಪರಿಹಾರದ ಹಣ ಕೊಡಿಸುತ್ತೇವೆ ಎಂದು ಬರುವ ಮಧ್ಯವರ್ತಿಗಳನ್ನು ನಂಬಬೇಡಿ ಮತ್ತು ನಿಮ್ಮ ಬ್ಯಾಂಕ್ ಒಟಿಪಿ (OTP) ಹಾಗೂ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಪರಿಹಾರ ಅಧಿಕೃತ ವೆಬ್‌ಸೈಟ್: parihara.karnataka.gov.in
Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.