Karnataka Property Registration- ಮೇ 26ರಿಂದ ಆಸ್ತಿಗಳ ನೋಂದಣಿಗೆ ಹೊಸ ನಿಯಮ | ಜನಸಾಮಾನ್ಯರಿಗೆ ತಿಳಿದಿರಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

Spread the love

ಮೇ 26ರಿಂದ ಆಸ್ತಿ ನೋಂದಣಿಯಲ್ಲಿ (Karnataka Property Registration) ಡಿಜಿಟಲ್ ಆಗಲಿದ್ದು; ಕಾಗದದ ವ್ಯವಹಾರ ಸಂಪೂರ್ಣ ನಿಲ್ಲಲಿದೆ. ಇನ್ಮುಂದೆ ಡಿಜಿಟಲ್ ಸಹಿ, ಇ-ಸ್ಟಾಂಪ್ ಕಡ್ಡಾಯ. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯದಲ್ಲಿ ಆಸ್ತಿ ಹಸ್ತಾಂತರ, ಖರೀದಿ ಹಾಗೂ ಇತರೆ ದಾಖಲೆಗಳ ನೋಂದಣಿ ಪ್ರಕ್ರಿಯೆಯು ಮೇ 26, 2025ರಿಂದ ಹೊಸ ತಿರುವು ಪಡೆಯಲಿದೆ. ಉಪ-ನೋಂದಾಣಿಧಿಕಾರಿ ಕಚೇರಿ (Sub Registrar Office) ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣ ಆಗಲಿವೆ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ಜಾರಿಗೊಳ್ಳುತ್ತಿರುವ ‘ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ- 2025’ (Karnataka property registration rules 2025) ಅನ್ವಯ, ಎಲ್ಲಾ ದಾಖಲೆ ಕಾರ್ಯಗಳು ಡಿಜಿಟಲ್ ತಂತ್ರಜ್ಞಾನ ಆಧಾರಿತವಾಗಲಿದ್ದು, ಕಾಗದ ಆಧಾರಿತ ಸಾಂಪ್ರದಾಯಿಕ ವಿಧಾನಗಳು ಹಂತ ಹಂತವಾಗಿ ಕೊನೆಗೊಳ್ಳಲಿವೆ.

Ration Card New Rules- ರೇಷನ್ ಕಾರ್ಡ್ ಅರ್ಜಿ | ಇನ್ಮುಂದೆ ಕಠಿಣ ನಿಯಮ | 25 ಲಕ್ಷ ಕಾರ್ಡುಗಳ ರದ್ದತಿ?

ಇ-ಸ್ಟಾಂಪ್ ಬಳಕೆ ಕಡ್ಡಾಯ

ಈ ಹೊಸ ವ್ಯವಸ್ಥೆಯಂತೆ, ಇನ್ನು ಮುಂದೆ ಕಾಗದದ ಸ್ಟಾಂಪ್ ಪೇಪರ್‌ಗಳ ಬಳಕೆಗೆ ಅಂತ್ಯವಾಗುತ್ತದೆ. ಸ್ಟಾಂಪ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ಡಿಜಿಟಲ್ ಇ-ಸ್ಟಾಂಪ್ ಮೂಲಕವೇ ದಾಖಲೆಗಳನ್ನು ರಿಜಿಸ್ಟರ್ ಮಾಡಬೇಕು. ಇದು ನಕಲಿ ಸ್ಟಾಂಪ್, ಮರುಬಳಕೆ ಅಥವಾ ದುರುಪಯೋಗದಂತಹ ಅನೇಕ ಕಾನೂನು ಸಮಸ್ಯೆಗಳನ್ನು ತಡೆಯಲು ನೆರವಾಗಲಿದೆ.

ಡಿಜಿಟಲ್ ಮೂಲಕ ಸ್ಟಾಂಪ್ ಹಣ ಪಾವತಿ

ಹಿಂದಿನಂತೆ ಸಿಬ್ಬಂದಿ ಮೂಲಕ (ಮ್ಯಾನ್ಯುವಲ್) ಸ್ಟಾಂಪ್ ವಿತರಣೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಎಲ್ಲಾ ಹಣ ಪಾವತಿ ಪ್ರಕ್ರಿಯೆಗಳು ಇನ್ಮುಂದೆ ಡಿಜಿಟಲ್ ಆಗಲಿವೆ. ಇದು ಹಣದ ಲೆಕ್ಕಪತ್ರ ಪಾರದರ್ಶಕತೆ ಹಾಗೂ ಲಂಚ-ಭ್ರಷ್ಟಾಚಾರ ತಡೆಗೆ ಸಹಕಾರಿಯಾಗಲಿದೆ.

ಡಿಜಿಟಲ್ ಸಹಿ, ಬಯೋಮೆಟ್ರಿಕ್ ದೃಢೀಕರಣ

ದಾಖಲೆಗಳ ಮೇಲೆ ಅಧಿಕಾರಿಗಳು ಮಾಡಲಿರುವ ಸಹಿಗೆ ಡಿಜಿಟಲ್ ಸಹಿ ಕಡ್ಡಾಯವಾಗಿದ್ದು, ಆ ಸಹಿಯನ್ನು ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಮೂಲಕ ದೃಢೀಕರಿಸಬೇಕು. ಸಹಿ ಮಾಡುವ ಪ್ರಾಧಿಕಾರಿಯ ವ್ಯಕ್ತಿತ್ವ ಸ್ಪಷ್ಟವಾಗಿ ಪತ್ತೆಯಾಗದೆ ಬೇರೆಯವರು ಸಹಿ ಮಾಡುವ ಸಾಧ್ಯತೆಯೇ ಇಲ್ಲ.

ಮೇ 26ರಿಂದ ಆಸ್ತಿ ನೋಂದಣಿಯಲ್ಲಿ ಡಿಜಿಟಲ್ ಆಗಲಿದ್ದು; ಇನ್ಮುಂದೆ ಡಿಜಿಟಲ್ ಸಹಿ, ಇ-ಸ್ಟಾಂಪ್ ಕಡ್ಡಾಯ. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ...
Karnataka Property Registration Digital Rules 2025

Home Loan Low Interest Banks- ಕಡಿಮೆ ಬಡ್ಡಿಗೆ ಸಾಲ | ಯಾವ ಬ್ಯಾಂಕ್ ಉತ್ತಮ? | ಟಾಪ್ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಈ ಹೊಸ ವ್ಯವಸ್ಥೆಯಿಂದ ಜನರಿಗೆ ಏನು ಲಾಭ?

ಅತ್ಯಧಿಕ ಪಾರದರ್ಶಕತೆ: ಡಿಜಿಟಲ್ ಸಹಿ, ಆಧಾರ್ ಲಿಂಕ್, ಬಯೋಮೆಟ್ರಿಕ್ ದೃಢೀಕರಣ ಇವುಗಳಿಂದ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಕಲು ಸಾಧ್ಯವಿಲ್ಲ.

ಅರ್ಜಿದಾರರಿಗೆ ಸುಲಭವಾದ ವ್ಯವಸ್ಥೆ: ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ, ಇ-ಸ್ಟಾಂಪ್ ಪಾವತಿ ಮಾಡಿ, ರಿಜಿಸ್ಟ್ರೇಶನ್ ಪಡೆಯುವುದು ಜನತೆಗೆ ಹೆಚ್ಚಿದ ಅನುಕೂಲವನ್ನು ಒದಗಿಸುತ್ತದೆ. ಕಚೇರಿಗಳ ಸುತ್ತ ಏಜೆಂಟ್‌ಗಳ ಹಾವಳಿ ಕಡಿಮೆಯಾಗಲಿದೆ.

ಹೊಂದಾಣಿಕೆ ಮತ್ತು ಸುರಕ್ಷತೆ: ಎಲ್ಲಾ ದಾಖಲೆಗಳು ಡಿಜಿಟಲ್ ಆಗುವುದರಿಂದ ದೋಷವಿಲ್ಲದ ದಾಖಲೆ ವ್ಯವಸ್ಥೆ ನಿರ್ಮಾಣವಾಗುತ್ತದೆ. ಯಾವುದೇ ಆಸ್ತಿ ವಿವಾದವಿದ್ದರೂ ದಾಖಲೆ ತಕ್ಷಣ ಲಭ್ಯವಾಗುತ್ತದೆ.

RTE Karnataka 2025- ಆರ್‌ಟಿಇ 2025-26: ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗೆ ಅರ್ಜಿ ಆಹ್ವಾನ | ಮೇ 28ರ ವರೆಗೆ ಅವಕಾಶ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಸ್ಯೆಗಳು ಮತ್ತು ಸವಾಲುಗಳು
  • ಇಂಟರ್‌ನೆಟ್ ಸಂಪರ್ಕ ಹಾಗೂ ಡಿಜಿಟಲ್ ಜ್ಞಾನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಈ ವ್ಯವಸ್ಥೆ ಅಳವಡಿಸುವುದು ಆರಂಭದಲ್ಲಿ ಕಠಿಣವಾಗಬಹುದು.
  • ಈ ಹೊಸ ನಿಯಮವು ಮುಂದಿನ ದಾಖಲಾತಿಗಳಿಗೆ ಮಾತ್ರ ಅನ್ವಯವಾಗುತ್ತದೆಯಾ ಅಥವಾ ಹಿಂದಿನ ದಾಖಲೆಗಳಿಗೂ ಅನ್ವಯವಾಗುತ್ತದೆಯಾ ಎಂಬುದು ಸ್ಪಷ್ಟವಿಲ್ಲ.
  • ಸರ್ವರ್ ಸಮಸ್ಯೆ, OTP ವಿಳಂಬ, ಬಯೋಮೆಟ್ರಿಕ್ ವ್ಯತ್ಯಾಸ ಇವುಗಳಿಂದ ಸಾರ್ವಜನಿಕರು ಕೆಲವೊಂದು ಸಂದರ್ಭಗಳಲ್ಲಿ ತೊಂದರೆ ಎದುರಿಸಬಹುದು.

ಕರ್ನಾಟಕ ಸರ್ಕಾರದ ಈ ಹೆಜ್ಜೆಯು ಆಸ್ತಿ ನೋಂದಣಿ ವಹಿವಾಟಿನಲ್ಲಿ ಮಹತ್ತರವಾಗಿದೆ. ಈ ಮೂಲಕ ಆಸ್ತಿ ನೋಂದಣಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಡೆಯುವುದು, ಸಾರ್ವಜನಿಕರಿಗೆ ಸುರಕ್ಷಿತ ದಾಖಲೆ ವ್ಯವಸ್ಥೆ ಒದಗಿಸುವುದು ಹಾಗೂ ಆಧುನಿಕ ತಂತ್ರಜ್ಞಾನವನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ.

Ration Card New Rules- ರೇಷನ್ ಕಾರ್ಡ್ ಅರ್ಜಿ | ಇನ್ಮುಂದೆ ಕಠಿಣ ನಿಯಮ | 25 ಲಕ್ಷ ಕಾರ್ಡುಗಳ ರದ್ದತಿ?


Spread the love
WhatsApp Group Join Now
Telegram Group Join Now
error: Content is protected !!