Karnataka Mungaru Male Munsuchane: ಕರ್ನಾಟಕ್ಕೆ ಮುಂಗಾರು ಭರ್ಜರಿ ಎಂಟ್ರಿ | ಈ ವರ್ಷ ಮಳೆ ಎಷ್ಟು? ಹವಾಮಾನ ಇಲಾಖೆಯ ಹೊಸ ಎಚ್ಚರಿಕೆ

Spread the love

WhatsApp Group Join Now
Telegram Group Join Now

Karnataka Mungaru Male Munsuchane: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ವರ್ಷ ವಾಡಿಕೆಗಿಂತ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ಣ ವಿವರ ಇಲ್ಲಿದೆ…

ರಾಜ್ಯದಲ್ಲಿ ಬಹು ನಿರೀಕ್ಷಿತ ನೈಋತ್ಯ ಮುಂಗಾರು (Southwest Monsoon) ಕೊನೆಗೂ ಶುಕ್ರವಾರ (ಜೂನ್ 5) ರಾತ್ರಿ ಕರಾವಳಿ ಭಾಗಕ್ಕೆ ಪ್ರವೇಶಿಸಿದೆ. ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಮುಂಗಾರು ಮಲೆನಾಡಿನ ಘಟ್ಟ ಪ್ರದೇಶಗಳನ್ನು ದಾಟಿ ಬಯಲು ಸೀಮೆ ಭಾಗಕ್ಕೂ ವ್ಯಾಪಿಸಲಿದೆ.

ಈಗಾಗಲೇ ಮುಂಗಾರು ಪೂರ್ವ ಮಳೆಯ (Pre-Monsoon Rain) ಪರಿಣಾಮವಾಗಿ ಹಲವೆಡೆ ರೈತರು ಹೊಲದ ಕೆಲಸಗಳನ್ನು ಆರಂಭಿಸಿದ್ದಾರೆ. ಆದರೆ ಕೃಷಿ ಇಲಾಖೆ ರೈತರಿಗೆ ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ (Sowing) ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಮುಂದುವರಿಯುವAತೆ ಸಲಹೆ ನೀಡಿದೆ.

ಇದನ್ನೂ ಓದಿ: 8ne Veytana Ayoga: ಸರ್ಕಾರಿ ನೌಕರರ ಸಂಬಳ 4 ಪಟ್ಟು ಹೆಚ್ಚಳ? 8ನೇ ವೇತನ ಆಯೋಗದ ದೊಡ್ಡ ಅಪ್ಡೇಟ್

ಈ ವರ್ಷ ಮಳೆ ಎಷ್ಟು?

ಈ ಹಿಂದೆ ಭಾರತೀಯ ಹವಾಮಾನ ಇಲಾಖೆ (India Meteorological Department – IMD) ಈ ಬಾರಿಯ ಮುಂಗಾರು ಮೇ 25ರ ಸುಮಾರಿಗೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು. ಆದರೆ ವಾಸ್ತವದಲ್ಲಿ ಮುಂಗಾರು ವಾಡಿಕೆಗಿಂತ ಸುಮಾರು ಒಂದು ವಾರ ತಡವಾಗಿ ರಾಜ್ಯದತ್ತ ಪ್ರವೇಶಿಸಿದೆ.

ಅದರ ಜೊತೆಗೆ ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯನ್ನೂ ಇಲಾಖೆ ವ್ಯಕ್ತಪಡಿಸಿತ್ತು. ಆರಂಭಿಕ ಮುನ್ಸೂಚನೆಯಲ್ಲಿ ವಾಡಿಕೆಯ ಶೇ.93ರಷ್ಟು ಮಳೆಯಾಗಲಿದೆ ಎಂದು ಹೇಳಲಾಗಿತ್ತು.

ಆದರೆ ಇತ್ತೀಚಿನ ಪರಿಷ್ಕೃತ ಮುನ್ಸೂಚನೆಯ ಪ್ರಕಾರ ಈ ಪ್ರಮಾಣ ಮತ್ತಷ್ಟು ಇಳಿಕೆಯಾಗಿದ್ದು, ಈ ಬಾರಿ ವಾಡಿಕೆಯ ಶೇ.90ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Police Constable Recruitment 2026: 3,991 ಸಿವಿಲ್ ಕಾನ್‌ಸ್ಟೇಬಲ್‌  ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಡಿಪ್ಲೊಮಾ, ಐಟಿಐ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್

ಶೇ.90ರಷ್ಟು ಮಳೆ ಸಾಕೇ?

ತಜ್ಞರ ಅಭಿಪ್ರಾಯದ ಪ್ರಕಾರ, ಒಟ್ಟಾರೆ ಮಳೆ ಪ್ರಮಾಣ ಸ್ವಲ್ಪ ಕಡಿಮೆ ಇದ್ದರೂ ಅದು ನಾಲ್ಕು ತಿಂಗಳ ಮುಂಗಾರು ಅವಧಿಯಾದ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಮಾನವಾಗಿ ಹಂಚಿಕೆಯಾದರೆ ಕೃಷಿಗೆ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ.

ಆದರೆ ಕೆಲವೇ ದಿನಗಳಲ್ಲಿ ಅತಿಹೆಚ್ಚು ಮಳೆ ಸುರಿದು ನಂತರ ದೀರ್ಘಕಾಲ ಮಳೆ ಕಾಣಿಸದ ಪರಿಸ್ಥಿತಿ ನಿರ್ಮಾಣವಾದರೆ ಬೆಳೆಗಳಿಗೆ ತೊಂದರೆ ಉಂಟಾಗಬಹುದು. ಉದಾಹರಣೆಗೆ, ಒಂದು ದಿನದಲ್ಲಿ 100 ಮಿಲಿಮೀಟರ್‌ಗಿಂತ ಹೆಚ್ಚು ಮಳೆ ಸುರಿದು ಬಳಿಕ ಹಲವು ವಾರಗಳ ಕಾಲ ಒಣಹವೆ ಮುಂದುವರಿದರೆ ಬೆಳೆಗಳ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: LPG Gas Cylinder Delivery: ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ವಾರ ಕಳೆದರೂ ಡೆಲಿವರಿ ಆಗಿಲ್ಲವೇ? ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ!

Karnataka Mungaru Male Munsuchane
Karnataka Mungaru Male Munsuchane

ಕರ್ನಾಟಕದಲ್ಲಿ ಮುಂಗಾರು ಹೇಗಿರಲಿದೆ?

ಪ್ರಸ್ತುತ ಮುಂಗಾರು ಕರಾವಳಿ ಭಾಗವನ್ನು ತಲುಪಿದ್ದು, ಮಲೆನಾಡು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ತಜ್ಞರ ಪ್ರಕಾರ, ಮಲೆನಾಡು ಪ್ರದೇಶಗಳಲ್ಲಿ ಒಂದೇ ಸಲ ಅಧಿಕ ಪ್ರಮಾಣದ ಮಳೆ ಸುರಿದರೆ ಅದರ ಪರಿಣಾಮವಾಗಿ ಬಯಲು ಸೀಮೆ ಭಾಗಗಳಲ್ಲಿ ಮಳೆ ಪ್ರಮಾಣ ತುಸು ಕಡಿಮೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Gruhalakshmi Hana Bandh: ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ನಿಮಗೆ ಹಣ ಬೇಕಾ? ತಕ್ಷಣ ಈ ಕೆಲಸ ಮಾಡಿ…

WhatsApp Group Join Now
Telegram Group Join Now

ಹೀಗಾಗಿ ರೈತರು ಮಳೆಯ ಪ್ರಮಾಣ, ಸ್ಥಳೀಯ ಹವಾಮಾನ ಮುನ್ಸೂಚನೆ (Weather Forecast) ಹಾಗೂ ಕೃಷಿ ಇಲಾಖೆಯ ಸಲಹೆಗಳನ್ನು ಗಮನಿಸಿ ಬಿತ್ತನೆ ಕಾರ್ಯ ಕೈಗೊಳ್ಳುವುದು ಉತ್ತಮ.

ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ಸ್ವಲ್ಪ ದುರ್ಬಲವಾಗುವ ಸಾಧ್ಯತೆ ಇದ್ದರೂ, ಮಳೆ ಸಮರ್ಪಕವಾಗಿ ಹಂಚಿಕೆಯಾಗಿದರೆ ಕೃಷಿ ಕ್ಷೇತ್ರಕ್ಕೆ ದೊಡ್ಡ ತೊಂದರೆ ಎದುರಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಬಿತ್ತನೆಗೆ ಆತುರ ಬೇಡ

ಕೃಷಿ ತಜ್ಞರ ಪ್ರಕಾರ, ಮುಂಗಾರು ಆರಂಭವಾದ ತಕ್ಷಣ ಉತ್ತಮ ಪ್ರಮಾಣದಲ್ಲಿ ಮಳೆ ಸುರಿದು ಭೂಮಿ ಸಮರ್ಪಕವಾಗಿ ತೇವಾಂಶವನ್ನು ಹೀರಿಕೊಂಡ ಬಳಿಕ ಬಿತ್ತನೆ ಮಾಡಿದರೆ ಬೆಳೆಗಳು ಉತ್ತಮವಾಗಿ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಮುಂದೆ ಮಳೆಯ ಕೊರತೆ ಉಂಟಾದರೂ ಆರಂಭಿಕ ಹಂತದಲ್ಲಿ ಬೆಳೆಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗುವುದಿಲ್ಲ.

ಎಲ್‌ನಿನೋ (El Nino) ಪರಿಣಾಮದಿಂದ ಈ ವರ್ಷ ಮಳೆ ಪ್ರಮಾಣದಲ್ಲಿ ಸ್ವಲ್ಪ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಯೋಜಿತ ಕೃಷಿ ಮಾಡಲು ಸೂಚಿಸಿದೆ.

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಆದರೆ ಕಡಿಮೆ ಅವಧಿಯ ಬೆಳೆಯಾದ ಹೆಸರು ಕಾಳು (Green Gram) ಸೇರಿದಂತೆ ಸುಮಾರು 75 ದಿನಗಳಲ್ಲಿ ಕೊಯ್ಲಿಗೆ ಬರುವ ಬೆಳೆಗಳ ಬಿತ್ತನೆಯನ್ನು ಈಗಲೇ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆಗೆ ಜುಲೈ 15ರವರೆಗೂ ಕಾಲಾವಕಾಶ ಇರುವುದರಿಂದ ಮಳೆಯ ಸ್ಥಿತಿಗತಿಯನ್ನು ಗಮನಿಸಿ ನಂತರ ಬಿತ್ತನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

Karnataka Gram Panchayat Election 2026: ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರೀನ್ ಸಿಗ್ನಲ್ | ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮಹತ್ವದ ಆದೇಶ


Spread the love
error: Content is protected !!