Irrigation Subsidy- ರೈತರಿಗೆ ಕೃಷಿಭಾಗ್ಯ ಯೋಜನೆಯಡಿ ನೀರಾವರಿ ಸಹಾಯಧನ | ರೈತರಿಂದ ಅರ್ಜಿ ಆಹ್ವಾನ

Spread the love

ಕೃಷಿ ಭಾಗ್ಯ ಯೋಜನೆಯಡಿ ನೀರಾವರಿ ವ್ಯವಸ್ಥೆ (Irrigation system) ಕಲ್ಪಿಸಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಮಳೆ ನೀರಿನ ಆಧಾರದ ಮೇಲೆ ಕೃಷಿ ನಡೆಸುವ ರಾಜ್ಯದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಕೃಷಿ ಭಾಗ್ಯ ಯೋಜನೆ’ಯನ್ನು (Krishi Bhagya Scheme) ರೂಪಿಸಿದೆ. ಈ ಯೋಜನೆಯಡಿ ರೈತರಿಗೆ ವಿವಿಧ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನ ಒದಗಿಸಲಾಗುತ್ತದೆ.

ಮಳೆಯಾಶ್ರಿತ ರೈತರು ಮಳೆ ಅವಲಂಬನೆ ಕೃಷಿಯಿಂದಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ನೀರಿನ ಕೊರತೆಯಿಂದಾಗಿ ಬೆಳೆ ನಾಶ, ಆರ್ಥಿಕ ಮುಗ್ಗಟ್ಟು ಮತ್ತು ಆತ್ಮಹತ್ಯೆ ಪ್ರಕರಣಗಳೆಲ್ಲ ಈ ಪರಿಸ್ಥಿತಿಗೆ ಕಾರಣವಾಗಿವೆ. ಈ ಹಿನ್ನಲೆಯಲ್ಲಿ, ‘ಕೃಷಿ ಭಾಗ್ಯ’ ಯೋಜನೆಯು ರೈತರಿಗೆ ಉಪಯುಕ್ತವಾಗಿದೆ.

Gram Panchayat E-Swathu- ಇನ್ಮುಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಪಂಚಾಯತ್ ರಾಜ್ ಹೊಸ ಅಧಿನಿಯಮ ಜಾರಿ

ಯಾರಿಗೆ ಎಷ್ಟೆಷ್ಟು ಸಹಾಯಧನ ಸಿಗುತ್ತದೆ?

ಈ ಯೋಜನೆಯಡಿಯಲ್ಲಿ, ವಿವಿಧ ವರ್ಗದ ರೈತರಿಗೆ ನಿಗದಿತ ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತದೆ. ಅಂದರೆ ರೈತರ ಆರ್ಥಿಕ ಸ್ಥಿತಿಗತಿ, ಹಿಡುವಳಿ ಪ್ರಮಾಣ, ಜಾತಿ, ಪಂಗಡಗಳಿಗೆ ಅನುಗುಣವಾಗಿ ಸಹಾಯಧನವನ್ನು ಈ ಕೆಳಗಿನಂತೆ ವಿಂಗಡಣೆ ಮಾಡಲಾಗಿದೆ.

  • ಸಾಮಾನ್ಯ ವರ್ಗದ ರೈತರು: ಶೇ.40 ರಿಂದ ಶೇ.90ರ ವರೆಗೆ
  • ಪರಿಶಿಷ್ಟ ಜಾತಿ/ಪಂಗಡ ರೈತರು: ಶೇ.50 ರಿಂದ ಶೇ.90ರ ವರೆಗೆ
ಯಾವೆಲ್ಲ ನೀರಾವರಿ ಘಟಕಗಳಿಗೆ ಸಹಾಯಧನ ಸಿಗುತ್ತದೆ?

ಈ ಯೋಜನೆಯಡಿಯಲ್ಲಿ ಒಟ್ಟು ಆರು ಪ್ರಮುಖ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ. ರೈತರು ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿತಗೊಳಿಸಲಾಗುತ್ತಿದೆ:

1. ಕ್ಷೇತ್ರ ಬದು ನಿರ್ಮಾಣ: ಜಮೀನಿನಲ್ಲಿ ಬಿದ್ದ ಮಳೆ ನೀರಿನ ಸದುಪಯೋಗಕ್ಕಾಗಿ ಕೃಷಿ ಭೂಮಿಯಲ್ಲಿ ಬದು ನಿರ್ಮಿಸುವುದು. ಇದು ನೆಲದ ತೇವಾಂಶವನ್ನು ಇಂಗಿಸಿ ಸಂಗ್ರಹಿಸಲು ನೆರವಾಗುತ್ತದೆ.

PMAY Scheme- ಸ್ವಂತ ಮನೆ ಕನಸಿಗೆ ಸರ್ಕಾರದ ನೆರವು | ನಿಮ್ಮದೇ ಆದ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿಗಾಗಿ ಹೀಗೆ ಅರ್ಜಿ ಹಾಕಿ…

2. ಕೃಷಿ ಹೊಂಡ ನಿರ್ಮಾಣ: ಮಳೆಗಾಲದ ಸಮಯದಲ್ಲಿ ನೀರನ್ನು ಸಂಗ್ರಹಿಸಲು ಈ ಕೆಳಗಿನಂತೆ ವಿವಿಧ ಅಳತೆ ಪ್ರಕಾರದ ಹೊಂಡ ನಿರ್ಮಿಸಲು ಅವಕಾಶವಿದೆ:

  • 10x10x3 ಮೀ.
  • 12x12x3 ಮೀ.
  • 15x15x3 ಮೀ.
  • 18x18x3 ಮೀ.
  • 21x21x3 ಮೀ.

3. ಕೃಷಿ ಹೊಂಡದ ಸುತ್ತ ತಂತಿ ಬೇಲಿ: ಅನಾಹುತಗಳಿಂದ ರಕ್ಷಣೆಗಾಗಿ ತಂತಿ ಬೇಲಿ ಸಹಾಯಧನದಲ್ಲಿ ಲಭ್ಯವಿದೆ. ಇದು ಮನುಷ್ಯ ಹಾಗೂ ಪ್ರಾಣಿಗಳ ಸುರಕ್ಷತೆಗಾಗಿ ಕಡ್ಡಾಯವಾಗಿದೆ.

4. ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್‌ಸೆಟ್: ಕೃಷಿ ಹೊಂಡದಿಂದ ನೀರನ್ನು ಎತ್ತಿ ಬೆಳೆಗಳಿಗೆ ಸರಬರಾಜು ಮಾಡಲು ಈ ಘಟಕ ಅನಿವಾರ್ಯವಾಗಿದೆ. ರೈತರು ತಮ್ಮ ಅವಶ್ಯಕತೆ ಪ್ರಕಾರ ಪಂಪ್ ಆಯ್ಕೆ ಮಾಡಿಕೊಳ್ಳಬಹುದು.

ಕೃಷಿ ಭಾಗ್ಯ ಯೋಜನೆಯಡಿ ನೀರಾವರಿ ವ್ಯವಸ್ಥೆ ಕಲ್ಪಿಸಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Irrigation Subsidy Krishi Bhagya Scheme

Rover Land Survey- ಇನ್ಮುಂದೆ ಕೇವಲ ಹತ್ತು ನಿಮಿಷದಲ್ಲೇ ಭೂಮಿ ಸರ್ವೇ | ರಾಜ್ಯಾದ್ಯಂತ ರೋವರ್ ಸರ್ವೇ ಕಾರ್ಯ

5. ಹನಿ/ತುಂತುರು ನೀರಾವರಿ ವ್ಯವಸ್ಥೆ: ನೀರಿನ ಉಳಿತಾಯಕ್ಕೆ ಬಹುಪಾಲು ಕೊಡುವ ಈ ಪದ್ದತಿಗೆ ಸಹ ಸಹಾಯಧನ ಸಿಗುತ್ತದೆ. ಇದು ನೀರನ್ನು ನೇರವಾಗಿ ಬೆಳೆಗಳ ಬೇರುಗಳಿಗೆ ತಲುಪಿಸುವ ವ್ಯವಸ್ಥೆಯಾಗಿದ್ದು, ಶೇಕಡಾ 60ರಷ್ಟು ನೀರನ್ನು ಉಳಿಸಲು ನೆರವಾಗುತ್ತದೆ.

6. ಪಾಲಿಥೀನ್ ಹೊದಿಕೆ: ಬೇಸಿಗೆಯ ಸಮಯದಲ್ಲಿ ಹೊಂಡದ ನೀರು ನೆಲದಲ್ಲಿ ಇಂಗದಂತೆ ತಡೆಯಲು ಹೊಂಡದ ಒಳಭಾಗದಲ್ಲಿ ಪಾಲಿಥೀನ್ ಶೀಟ್ ಅಳವಡಿಕೆಗೂ ಸಹಾಯಧನ ಸಿಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ರೈತರು ತಮ್ಮ ಹೋಬಳಿಯ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ (Raitha Samparka Kendra) ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ, ಅದನ್ನು ಕೆ-ಕಿಸಾನ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುತ್ತದೆ. ಅರ್ಜಿ ಮಂಜೂರಾತಿ ಪ್ರಕ್ರಿಯೆ ಹಿರಿತನದ ಆಧಾರ ಹಾಗೂ ಪ್ರದೇಶದ ಗುರಿ ನಿಗದಿ ಆಧಾರದ ಮೇಲೆ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ:

  • ಭರ್ತಿ ಮಾಡಿದ ಅರ್ಜಿ ನಮೂನೆ
  • ರೈತರ ಭಾವಚಿತ್ರ
  • ಎಫ್‌ಐಡಿ ನಂಬರ್ ಅಥವಾ ಆಧಾರ್ ಕಾರ್ಡ್ ಪ್ರತಿ
  • ಪಹಣಿ ನಕಲು (ಜಮೀನಿನ ದಾಖಲೆ)
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ (ಅಕೌಂಟ್ ವಿವರಗಳು)

Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…

ಮಹತ್ವದ ದಿನಾಂಕ ಮತ್ತು ಜಿಲ್ಲೆಗಳು

2025ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗ ಆರಂಭವಾಗಿದ್ದು; ಸದ್ಯಕ್ಕೆ ಹಾವೇರಿ ಜಿಲ್ಲೆಯ ರೈತರು ಏಪ್ರಿಲ್ 22, 2025ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡಬಹುದು.

‘ಕೃಷಿ ಭಾಗ್ಯ ಯೋಜನೆ’ ರೈತರ ಕೃಷಿ ಜೀವನದಲ್ಲಿ ನಿರ್ಣಾಯಕ ಬದಲಾವಣೆ ತರಬಲ್ಲ ಯೋಜನೆಯಾಗಿದೆ. ಇದು ಮಳೆ ನೀರಿನ ಸೂಕ್ತ ಬಳಕೆ, ಬೆಳೆಗಳ ಉತ್ತಮ ಬೆಳವಣಿಗೆ ಮತ್ತು ನೀರಾವರಿಯ ನಿರಂತರತೆಗಾಗಿ ಅತ್ಯಂತ ಅವಶ್ಯಕ ಯೋಜನೆ. ರೈತರು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ತಮ್ಮ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ.

ಕೃಷಿಭಾಗ್ಯ ಯೋಜನೆ ಕುರಿತ ಸರಕಾದ ನಡಾವಳಿ ಹಾಗೂ ಯೋಜನೆಯ ಸಮಗ್ರ ಮಾರ್ಗಸೂಚಿ ಓದಲು ಇಲ್ಲಿ ಕ್ಲಿಕ್ ಮಾಡಿ…

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
WhatsApp Group Join Now
Telegram Group Join Now
error: Content is protected !!