Karnataka VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಭರ್ಜರಿ ಅವಕಾಶ | ಜಿಲ್ಲಾವಾರು ಹುದ್ದೆಗಳ ಪಟ್ಟಿ ಇಲ್ಲಿದೆ…

Spread the love

WhatsApp Group Join Now
Telegram Group Join Now

Karnataka VAO Recruitment 2026: ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ದಿನಾಂಕ, ಜಿಲ್ಲಾವಾರು ಹುದ್ದೆಗಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ (Government Job) ನಿರೀಕ್ಷೆಯಲ್ಲಿರುವ ಪಿಯುಸಿ (PUC) ಪಾಸಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅವಕಾಶ ದೊರೆತಿದೆ.

ಇದನ್ನೂ ಓದಿ: Navodaya Vidyalaya Class 6 Admission 2027: ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಆರಂಭ | ಉಚಿತ ಶಿಕ್ಷಣಕ್ಕೆ ಇಂದೇ ಅರ್ಜಿ ಸಲ್ಲಿಸಿ

ಕಂದಾಯ ಇಲಾಖೆಯ (Revenue Department) ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 505 ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಈ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Crop Insurance Release: ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು, ಮೊಬೈಲ್‌ನಲ್ಲೇ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಶೈಕ್ಷಣಿಕ ಅರ್ಹತೆ ಏನು?

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ ಪಿಯುಸಿ (10+2) ಅಥವಾ ಅದಕ್ಕೆ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು:

  • ದ್ವಿತೀಯ ಪಿಯುಸಿ (10+2)
  • ಸಿಬಿಎಸ್‌ಇ (CBSE) 12ನೇ ತರಗತಿ
  • ಐಸಿಎಸ್‌ಇ (ICSE) 12ನೇ ತರಗತಿ
  • ಇತರ ರಾಜ್ಯಗಳ 12ನೇ ತರಗತಿ ತತ್ಸಮಾನ ಪರೀಕ್ಷೆ
  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS)
  • ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷದ ಡಿಪ್ಲೊಮಾ
  • ನಿಯಮಾನುಸಾರ ಮಾನ್ಯತೆ ಪಡೆದ 2 ವರ್ಷದ ಐಟಿಐ (ITI) ಕೋರ್ಸ್

ಗಮನಿಸಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶ ಪ್ರಕಟವಾಗದೆ, ಇನ್ನೂ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ರಾಜ್ಯ ಸರ್ಕಾರದ ಇತ್ತೀಚಿನ ಆದೇಶದಂತೆ ಒಂದು ಬಾರಿ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.

  • ಸಾಮಾನ್ಯ ವರ್ಗ (General): 40 ವರ್ಷ
  • ಪ್ರವರ್ಗ 2A, 2B, 3A, 3B: 43 ವರ್ಷ
  • ಎಸ್‌ಸಿ (SC), ಎಸ್‌ಟಿ (ST) ಹಾಗೂ ಪ್ರವರ್ಗ-1: 45 ವರ್ಷ

ಇದಲ್ಲದೆ ಮಾಜಿ ಸೈನಿಕರು (Ex-servicemen), ವಿಶೇಷ ಚೇತನರು (PwD) ಹಾಗೂ ವಿಧವೆಯರಿಗೆ ಸರ್ಕಾರದ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.

ಇದನ್ನೂ ಓದಿ: Podi Process Land Subdivision: ಜಮೀನು ಪೋಡಿ ಮಾಡಿಸಿಕೊಳ್ಳುವುದು ಹೇಗೆ? ರೈತರಿಗೆ ಹಂತ-ಹಂತದ ಮಾಹಿತಿ

ಜಿಲ್ಲಾವಾರು ಹುದ್ದೆಗಳ ವಿವರ

ಒಟ್ಟು 505 ಹುದ್ದೆಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.

  • ಬೆಂಗಳೂರು ನಗರ – 20
  • ಬೆಂಗಳೂರು ಗ್ರಾಮಾಂತರ – 29
  • ಚಿತ್ರದುರ್ಗ – 15
  • ಚಿಕ್ಕಬಳ್ಳಾಪುರ – 21
  • ತುಮಕೂರು – 50
  • ಶಿವಮೊಗ್ಗ – 18
  • ಕೋಲಾರ – 22
  • ಬೆಂಗಳೂರು ದಕ್ಷಿಣ – 30
  • ಮೈಸೂರು – 45
  • ಮಂಡ್ಯ – 50
  • ಹಾಸನ – 35

ಇದನ್ನೂ ಓದಿ: Karnataka Excise Department Recruitment 2026: ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿ | ಪಿಯುಸಿ, ಪದವೀಧರರಿಗೆ ಭರ್ಜರಿ ಅವಕಾಶ!

  • ಉಡುಪಿ – 10
  • ದಕ್ಷಿಣ ಕನ್ನಡ – 20
  • ಚಾಮರಾಜನಗರ – 31
  • ಚಿಕ್ಕಮಗಳೂರು – 10
  • ಬೆಳಗಾವಿ – 48
  • ಬಾಗಲಕೋಟೆ – 16
  • ಗದಗ – 14
  • ಹಾವೇರಿ – 15
  • ಬೀದರ್ – 4
  • ರಾಯಚೂರು – 2
  • ಒಟ್ಟು ಹುದ್ದೆಗಳು: 505
WhatsApp Group Join Now
Telegram Group Join Now

ಇದನ್ನೂ ಓದಿ: Karnataka Gram Panchayat Election 2026: ಗ್ರಾಮ ಪಂಚಾಯಿತಿ ಚುನಾವಣೆಗೆ ಭರ್ಜರಿ ಸಿದ್ಧತೆ | ಎಲ್ಲ ಜಿಲ್ಲಾಧಿಕಾರಿಗಳಿಗೆ ಹೊಸ ಆದೇಶ

Karnataka VAO Recruitment 2026
Karnataka VAO Recruitment 2026

ವೇತನ (Salary) ಎಷ್ಟು?

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ.34,100 ರಿಂದ ರೂ.67,600 ವರೆಗೆ ವೇತನ ಶ್ರೇಣಿ (Pay Scale) ಅನ್ವಯವಾಗುತ್ತದೆ.

ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ವಿವಿಧ ಭತ್ಯೆಗಳು ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯವೂ ದೊರೆಯಲಿದೆ.

ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ

ಪ್ರೊಬೇಷನ್ (Probation) ಅವಧಿ

ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಕಾಲ ಖಾಯಂ ಪೂರ್ವ (Probation) ಅವಧಿಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ನಂತರ ಇಲಾಖೆಯ ನಿಯಮಾನುಸಾರ ಖಾಯಂ ನೇಮಕಾತಿ ದೊರೆಯುತ್ತದೆ.

ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

ಅರ್ಜಿ ಶುಲ್ಕ

ಅಭ್ಯರ್ಥಿಗಳ ವರ್ಗಾನುಸಾರ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

  • ಸಾಮಾನ್ಯ, 2A, 2B, 3A, 3B: ₹750
  • SC, ST, ಪ್ರವರ್ಗ-1, ಮಾಜಿ ಸೈನಿಕರು, ತೃತೀಯ ಲಿಂಗಿ: ₹500
  • ವಿಶೇಷ ಚೇತನರು (PwD): ₹250

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಪರೀಕ್ಷೆ ಹೇಗೆ ನಡೆಯಲಿದೆ?

ಈ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಫ್‌ಲೈನ್ (Offline OMR) ವಿಧಾನದಲ್ಲಿ ಪರೀಕ್ಷೆ ನಡೆಸಲಿದೆ. ಪರೀಕ್ಷೆ ದಿನಾಂಕ: 04 ಅಕ್ಟೋಬರ್ 2026

  • ಪತ್ರಿಕೆ- 1
    ವಿಷಯ: ಸಾಮಾನ್ಯ ಜ್ಞಾನ (General Knowledge)
    ಸಮಯ: ಬೆಳಿಗ್ಗೆ 10.30 ರಿಂದ 12.30
    ಅಂಕಗಳು: 100
    ಅವಧಿ: 2 ಗಂಟೆ

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

  • ಪತ್ರಿಕೆ – 2
    ಸಾಮಾನ್ಯ ಕನ್ನಡ
    ಸಾಮಾನ್ಯ ಇಂಗ್ಲಿಷ್
    ಕಂಪ್ಯೂಟರ್ ಜ್ಞಾನ (Computer Knowledge)
    ಸಮಯ: ಮಧ್ಯಾಹ್ನ 2.30 ರಿಂದ 4.30
    ಅಂಕಗಳು: 100
    ಅವಧಿ: 2 ಗಂಟೆ

ಋಣಾತ್ಮಕ ಮೌಲ್ಯಮಾಪನ (Negative Marking) ಇದ್ದು; ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕನಿಷ್ಠ 35% ಅಂಕಗಳು ಕಡ್ಡಾಯವಾಗಿವೆ.

ಇದನ್ನೂ ಓದಿ: Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

ಅಭ್ಯರ್ಥಿಗಳು ಪ್ರತ್ಯೇಕ ಕನ್ನಡ ಭಾಷಾ ಪರೀಕ್ಷೆ (Kannada Language Test)ಯನ್ನೂ ಉತ್ತೀರ್ಣರಾಗಬೇಕು. ಈ ಪರೀಕ್ಷೆಗೆ ಗರಿಷ್ಠ 150 ಅಂಕಗಳಿದ್ದು; ಕನಿಷ್ಠ 50 ಅಂಕ ಪಡೆಯಬೇಕು. ಈ ಪರೀಕ್ಷೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಂತರ ಪ್ರಕಟಿಸಲಿದೆ.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳು, ಭಾವಚಿತ್ರ (Photo), ಸಹಿ (Signature) ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಅಭ್ಯರ್ಥಿಗಳಿಗೆ ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಉದ್ಯೋಗಾವಕಾಶ, ಸ್ಪರ್ಧೆ ಹಾಗೂ ತಮ್ಮ ಆದ್ಯತೆಯನ್ನು ಪರಿಗಣಿಸಿ ಜಿಲ್ಲೆಯ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡುವುದು ಸೂಕ್ತ.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

ಈ ನೇಮಕಾತಿ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ನೀಡಿರುವ ಮಹತ್ವದ ಉದ್ಯೋಗಾವಕಾಶವಾಗಿದೆ. ಒಟ್ಟು 505 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ಭರ್ತಿಯಾಗುತ್ತಿರುವುದರಿಂದ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: KSP Armed Police Constable Recruitment 2026: ಕರ್ನಾಟಕ ಪೊಲೀಸ್ ನೇಮಕಾತಿ 2026: 1600 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಭರ್ಜರಿ ಅವಕಾಶ

ಪ್ರಮುಖ ದಿನಾಂಕಗಳು

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ದಿನಾಂಕಗಳನ್ನು ತಪ್ಪದೇ ಗಮನಿಸಬೇಕು.

  • ಆನ್‌ಲೈನ್ ಅರ್ಜಿ ಆರಂಭ: 11 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ: 30 ಜುಲೈ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 31 ಜುಲೈ 2026

ಇದನ್ನೂ ಓದಿ: BPL Card Cancellation: 14 ಲಕ್ಷ ಜನರ ಬಿಪಿಎಲ್ ರೇಷನ್ ಕಾರ್ಡ್ ರದ್ದು? ಸಚಿವ ಮುನಿಯಪ್ಪ ಮಹತ್ವದ ಸುಳಿವು

ಪ್ರಮುಖ ಲಿಂಕುಗಳು

  • ಅಧಿಸೂಚನೆ (ಆರ್‌ಪಿಸಿ): Download 
  • ಅಧಿಸೂಚನೆ (ಕೆಕೆ): Download 
  • ಅರ್ಜಿ ಲಿಂಕ್: Apply ಮಾಡಿ 
  • ಅಧಿಕೃತ ಜಾಲತಾಣ: kandaya.karnataka.gov.in

Karnataka Excise Department Recruitment 2026: ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿ | ಪಿಯುಸಿ, ಪದವೀಧರರಿಗೆ ಭರ್ಜರಿ ಅವಕಾಶ!


Spread the love
error: Content is protected !!