KMF – SHIMUL Recruitment 2026: ಕೆಎಂಎಫ್- ಶಿಮುಲ್ 194 ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ ನಡೆಯುತ್ತಿದ್ದು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವೀಧರರಿಗೆ ಭಾರೀ ಅವಕಾಶವಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ ಇಲ್ಲಿದೆ..
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL) ತನ್ನಲ್ಲಿ ಖಾಲಿ ಇರುವ ಬರೋಬ್ಬರಿ 194 ವಿವಿಧ ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಕೃತ ಅಧಿಸೂಚನೆ (Official Notification) ಪ್ರಕಟಿಸಿದೆ.
ಸರ್ಕಾರಿ ವಲಯದ ಸೌಲಭ್ಯಗಳಿರುವ, ಉತ್ತಮ ಭವಿಷ್ಯ ರೂಪಿಸಬಲ್ಲ ಈ ಕೆಲಸಗಳಿಗೆ ನೀವೂ ಅರ್ಜಿ ಹಾಕಲು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಬನ್ನಿ, ಯಾವೆಲ್ಲಾ ಹುದ್ದೆಗಳಿವೆ, ಯಾರು ಅರ್ಜಿ (Online Application) ಸಲ್ಲಿಸಬಹುದು ಅನ್ನೋದನ್ನ ವಿವರವಾಗಿ ನೋಡೋಣ.
ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? (Post Details)
ಒಟ್ಟು 194 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪಾಸ್ ಆದವರಿಂದ ಹಿಡಿದು ಸ್ನಾತಕೋತ್ತರ ಪದವೀಧರರಿಗೂ (Postgraduates) ಅವಕಾಶಗಳಿವೆ. ನಿಮ್ಮ ಓದಿಗೆ ತಕ್ಕಂತೆ ಯಾವ ಹುದ್ದೆ ಸೂಕ್ತ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ:
ಅಧಿಕಾರಿ ಹುದ್ದೆಗಳು
ನೀವು ಪಶುವೈದ್ಯಕೀಯ ವಿಜ್ಞಾನದಲ್ಲಿ ಬಿ.ವಿ.ಎಸ್ಸಿ (BVSc), ಮಾನವ ಸಂಪನ್ಮೂಲ ವಿಭಾಗದಲ್ಲಿ ಎಂಬಿಎ (MBA HR), ಅಥವಾ ಬಿ.ಎಸ್ಸಿ ಅಗ್ರಿ (BSc Agriculture) ಮಾಡಿದ್ದರೆ, ಸಹಾಯಕ ವ್ಯವಸ್ಥಾಪಕರಾಗಿ ಸೇರಬಹುದು. ಈ ಹುದ್ದೆಗಳಿಗೆ 83,700 ರೂ. ನಿಂದ 1,55,200 ರೂ. ವರೆಗೆ ಅತ್ಯಾಕರ್ಷಕ ವೇತನ (Salary) ಸಿಗಲಿದೆ.
ಇದನ್ನೂ ಓದಿ: Karnataka Zilla Taluk Panchayat Elections: ಅಕ್ಟೋಬರ್‌ನಲ್ಲಿ ಜಿ.ಪಂ, ತಾ.ಪಂ ಚುನಾವಣೆ? ಸರ್ಕಾರದಿಂದ ಮಹತ್ವದ ಮಾಹಿತಿ
ತಾಂತ್ರಿಕ ಹಾಗೂ ಮಾರುಕಟ್ಟೆ ವಿಭಾಗ
ಬಿಇ (BE Mechanical / Electrical), ಬಿ.ಟೆಕ್ ಡೈರಿ ಟೆಕ್ನಾಲಜಿ (B.Tech Dairy Technology), ಎಂ.ಎಸ್ಸಿ ಅಥವಾ ಬಿ.ಕಾಂ/ಬಿಬಿಎಂ ಮಾಡಿದವರಿಗೆ ತಾಂತ್ರಿಕ ಅಧಿಕಾರಿ, ಎಂಐಎಸ್ ಅಧಿಕಾರಿ ಹಾಗೂ ಮಾರುಕಟ್ಟೆ ಅಧಿಕಾರಿ (Marketing Officer) ಹುದ್ದೆಗಳಿವೆ. ಇವರಿಗೆ 69,250 ರೂ. ನಿಂದ 1,34,200 ರೂ. ವರೆಗೆ ಸಂಬಳ ಇರುತ್ತದೆ.
ಸಹಾಯಕ ಹಾಗೂ ಕೆಮಿಸ್ಟ್ ದರ್ಜೆ ಹುದ್ದೆಗಳು
ಯಾವುದೇ ಪದವಿ (Degree) ಜೊತೆಗೆ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು, ನೀವು ಆಡಳಿತ ಸಹಾಯಕ, ವಿಸ್ತರಣಾಧಿಕಾರಿ ಹುದ್ದೆಗಳಿಗೆ ಪ್ರಯತ್ನಿಸಬಹುದು.
ಹಾಗೆಯೇ ಬಿ.ಎಸ್ಸಿ (ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ) ಓದಿದವರಿಗೆ ಕೆಮಿಸ್ಟ್ ಹುದ್ದೆಗಳಿವೆ. ಲೆಕ್ಕ ಸಹಾಯಕ (Accounts Assistant) ಹುದ್ದೆಗೆ ಬಿ.ಕಾಂ ಹಾಗೂ ಟ್ಯಾಲಿ (Tally) ಸರ್ಟಿಫಿಕೇಟ್ ಕಡ್ಡಾಯ. ಈ ಹುದ್ದೆಗಳ ವೇತನ ಶ್ರೇಣಿ 44,425 ರೂ. ನಿಂದ 99,400 ರೂ. ವರೆಗಿದೆ.
ಕಿರಿಯ ತಾಂತ್ರಿಕರು (Junior Technicians)
ಅತಿ ಹೆಚ್ಚು ಅಂದರೆ 50 ಹುದ್ದೆಗಳು ಈ ವಿಭಾಗದಲ್ಲಿವೆ. ಕೇವಲ ಎಸ್‌ಎಸ್‌ಎಲ್‌ಸಿ (SSLC) ಜೊತೆಗೆ ಎಲೆಕ್ಟ್ರಿಕಲ್, ಫಿಟ್ಟರ್, ವೆಲ್ಡರ್ ನಂತಹ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ (ITI / NTC / NAC) ಮುಗಿಸಿದವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದರ ಆರಂಭಿಕ ವೇತನವೇ 34,100 ರೂ. ಇರುತ್ತದೆ!

ವಯೋಮಿತಿ ಎಷ್ಟಿರಬೇಕು? (Age Limit & Relaxation)
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಲೇಬೇಕು. ಖುಷಿಯ ವಿಚಾರವೆಂದರೆ, ಸರ್ಕಾರದ ವಿಶೇಷ ಆದೇಶದಂತೆ ಈ ಬಾರಿ ಗರಿಷ್ಠ ವಯೋಮಿತಿಯಲ್ಲಿ ಎಲ್ಲಾ ವರ್ಗದವರಿಗೂ 5 ವರ್ಷಗಳ ಸಡಿಲಿಕೆ (Age Relaxation) ನೀಡಲಾಗಿದೆ! ಇದರನ್ವಯ ಗರಿಷ್ಠ ವಯೋಮಿತಿ ಹೀಗಿದೆ:
- ಸಾಮಾನ್ಯ ವರ್ಗದವರಿಗೆ (General/UR): 40 ವರ್ಷ
- ಹಿಂದುಳಿದ ವರ್ಗಗಳಿಗೆ (2A, 2B, 3A, 3B): 43 ವರ್ಷ
- ಪ.ಜಾ, ಪ.ಪಂ ಮತ್ತು ಪ್ರವರ್ಗ-1 ಕ್ಕೆ (SC/ST/Cat-1): 45 ವರ್ಷ
ವಿಶೇಷ ಸೂಚನೆ: ವಿಕಲಚೇತನರು ಹಾಗೂ ವಿಧವೆಯರಿಗೆ ನಿಯಮಾನುಸಾರ 10 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕವೆಷ್ಟು? (Application Fee)
ಅರ್ಜಿಯನ್ನು ಮತ್ತು ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕವೇ (Online Payment) ಸಲ್ಲಿಸಬೇಕು ಎಂಬುದನ್ನು ಮರೆಯದಿರಿ.
- ಸಾಮಾನ್ಯ ಹಾಗೂ ಇತರ ಎಲ್ಲಾ ಹಿಂದುಳಿದ ವರ್ಗಗಳಿಗೆ: 1000 ರೂ.
- SC, ST, Cat-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ಕೇವಲ 500 ರೂ.
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗುವ ದಿನ: 14 ಜೂನ್ 2026
- ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಕಟ್ಟಲು ಕೊನೆಯ ದಿನ: 14 ಜುಲೈ 2026
ಇದನ್ನೂ ಓದಿ: Uchita Holige Yantra: ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ
ಅರ್ಜಿ ಹಾಕುವುದು ಹೇಗೆ? (How to Apply)
ನೀವು ಈ ಹುದ್ದೆಗಳಿಗೆ ಅರ್ಹರಾಗಿದ್ದರೆ ತಕ್ಷಣವೇ ಶಿಮುಲ್‌ನ ಅಧಿಕೃತ ವೆಬ್‌ಸೈಟ್ shimul.coop ಗೆ ಭೇಟಿ ನೀಡಿ. ಅಥವಾ ನಾವು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು (Official Notification) ಸಂಪೂರ್ಣವಾಗಿ ಓದಿಕೊಳ್ಳಿ.
ನೀವು ಅರ್ಹರಿದ್ದರೆ ಕೂಡಲೆ ಕೆಳಗೆ ನೀಡಿರುವ ಶಿಮುಲ್‌ನ ಅಧಿಕೃತ ಅರ್ಜಿ ಲಿಂಕ್ ಬಳಸಿಕೊಂಡು ಆನ್‌ಲೈನ್ ಮೂಲಕ (Apply Online) ನಿಮ್ಮ ಅರ್ಜಿ ಸಲ್ಲಿಸಿ. ಕೊನೆ ಕ್ಷಣದ ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಆದಷ್ಟು ಬೇಗ ಅಪ್ಲೈ ಮಾಡಿ, ಉದ್ಯೋಗದ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ! ಆಲ್ ದ ಬೆಸ್ಟ್.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.