Karnataka Gram Panchayat Election 2026: ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರೀನ್ ಸಿಗ್ನಲ್ | ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮಹತ್ವದ ಆದೇಶ

Spread the love

WhatsApp Group Join Now
Telegram Group Join Now

Karnataka Gram Panchayat Election 2026: ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ ವೇಗ ಪಡೆದುಕೊಂಡಿದೆ. 30 ದಿನಗಳಲ್ಲಿ ಮೀಸಲಾತಿ ಅಂತಿಮಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ…

ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆ (Gram Panchayat Election 2026) ಕುರಿತು ಬಹುಕಾಲದಿಂದ ನಿರೀಕ್ಷೆ ಮೂಡಿದ್ದ ಪರಿಸ್ಥಿತಿಯಲ್ಲಿ ಇದೀಗ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಪುನರ್ವಿಂಗಡಣೆ (Ward Delimitation) ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ವಾರ್ಡ್’ವಾರು ಮೀಸಲಾತಿ (Reservation) ನಿಗದಿಪಡಿಸುವ ಕಾರ್ಯ ಆರಂಭವಾಗಿದೆ.

ಇದನ್ನೂ ಓದಿ: KCET Result 2026 Released: ಸಿಇಟಿ ಫಲಿತಾಂಶ ಇಂದು ಪ್ರಕಟ | ರಿಸಲ್ಟ್ ಹೀಗೆ ನೋಡಿ | ಫಲಿತಾಂಶದ ನಂತರ ಏನು ಮಾಡಬೇಕು?

ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದೆ.

ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭವಾಗಿರುವುದಾಗಿ ತಿಳಿಸಿದೆ. ಚುನಾವಣೆಗೆ ಅಗತ್ಯವಾದ ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Dr Rajendra Prasad Scholarship 2026: 10ನೇ, 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ | ಅರ್ಜಿ ಆಹ್ವಾನ

ಹೈಕೋರ್ಟ್’ಗೆ ಸರ್ಕಾರ ನೀಡಿದ ಮಾಹಿತಿ

ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಿಗದಿತ ಅವಧಿಯಲ್ಲಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯ ಚುನಾವಣಾ ಆಯೋಗ (State Election Commission) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಯನ್ನು ಈಗಾಗಲೇ ನಿರ್ಧರಿಸಲಾಗಿದ್ದು, ಮೀಸಲಾತಿ ನಿಗದಿಪಡಿಸುವ ಕಾರ್ಯಕ್ಕಾಗಿ ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಕಡತಗಳನ್ನು ರವಾನಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: LPG Gas Cylinder Delivery: ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ವಾರ ಕಳೆದರೂ ಡೆಲಿವರಿ ಆಗಿಲ್ಲವೇ? ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ!

ವಾರ್ಡ್ ವಿಂಗಡಣೆಗೆ ಹೊಸ ಮಾರ್ಗಸೂಚಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳನ್ನೇ (Polling Stations) ವಾರ್ಡ್’ಗಳಾಗಿ ಪರಿಗಣಿಸಿ ಗಡಿಗಳನ್ನು ಗುರುತಿಸಬೇಕು ಎಂದು ಸರ್ಕಾರ ಸೂಚಿಸಿದೆ.

ವಾರ್ಡುಗಳ ಜನಸಂಖ್ಯೆ ಲೆಕ್ಕಾಚಾರಕ್ಕಾಗಿ ಕೇವಲ 2011ರ ಜನಗಣತಿ (Census 2011) ಅಂಕಿಅಂಶಗಳನ್ನು ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದ ರಾಜ್ಯದಾದ್ಯಂತ ಏಕರೂಪದ ಮಾನದಂಡ ಅನುಸರಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ: Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಸದಸ್ಯರ ಸಂಖ್ಯೆ ಹೇಗೆ ನಿರ್ಧಾರವಾಗುತ್ತದೆ?

ಪ್ರತಿ ವಾರ್ಡಿಗೆ ಎಷ್ಟು ಸದಸ್ಯ ಸ್ಥಾನಗಳು ಸಿಗಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರ ವಿಶೇಷ ಗಣಿತ ಸೂತ್ರವನ್ನು ನೀಡಿದೆ.

WhatsApp Group Join Now
Telegram Group Join Now

ವಾರ್ಡಿನ ಜನಸಂಖ್ಯೆಯನ್ನು ಒಟ್ಟು ಗ್ರಾಮ ಪಂಚಾಯಿತಿ ಜನಸಂಖ್ಯೆಯಿಂದ ಭಾಗಿಸಿ, ಆ ಫಲಿತಾಂಶವನ್ನು ಪಂಚಾಯಿತಿಯ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆಯಿಂದ ಗುಣಿಸಬೇಕು. ಇದರಿಂದ ವಾರ್ಡಿಗೆ ಸಿಗುವ ಸದಸ್ಯ ಸ್ಥಾನಗಳ ಪ್ರಮಾಣ ನಿರ್ಧಾರವಾಗುತ್ತದೆ.

ಇದನ್ನೂ ಓದಿ: PM Awas Yojana: ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ₹2.5 ಲಕ್ಷ ಆರ್ಥಿಕ ನೆರವು | ಪಿಎಂ ಆವಾಸ್ ಯೋಜನೆ ಅರ್ಜಿ ಆಹ್ವಾನ

ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ

ಮೀಸಲಾತಿ ಹಂಚಿಕೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು-1998 (Karnataka Panchayat Raj Rules, 1998) ಅನ್ವಯ ಸರದಿ ಪದ್ಧತಿ (Rotation System) ಅನುಸರಿಸಲಾಗುತ್ತದೆ.

ಅನುಸೂಚಿತ ಜಾತಿ (SC) ಮತ್ತು ಅನುಸೂಚಿತ ಪಂಗಡ (ST) ವರ್ಗಗಳಿಗೆ ಅವರ ಜನಸಂಖ್ಯೆಯ ಅನುಪಾತದಲ್ಲಿ ಸ್ಥಾನಗಳನ್ನು ಮೀಸಲಿಡಬೇಕು. ಲೆಕ್ಕಾಚಾರದ ಪ್ರಕಾರ ಯಾವುದೇ ಸ್ಥಾನ ಸಿಗದಿದ್ದರೂ ಕನಿಷ್ಠ ಒಂದು ಸ್ಥಾನವನ್ನು ಕಡ್ಡಾಯವಾಗಿ ಮೀಸಲಿಡಬೇಕಾಗಿದೆ.

ಇದನ್ನೂ ಓದಿ: BharatPe Flex UPI Loan: ಮೊಬೈಲ್‌ನಲ್ಲೇ ಸಿಗುತ್ತೆ ಬಡ್ಡಿ ಇಲ್ಲದ ಸಾಲ | ಬ್ಯಾಂಕ್ ಖಾತೆಯಲ್ಲಿ ಕಾಸಿಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಿ

ಹಿಂದುಳಿದ ವರ್ಗಗಳಿಗೆ (OBC) ಒಟ್ಟು ಸ್ಥಾನಗಳ ಸರಿಸುಮಾರು ಮೂರನೇ ಒಂದು ಭಾಗ ಮೀಸಲಿರಿಸಲಾಗುತ್ತದೆ. ಇದರಲ್ಲಿ:

  • ಶೇ.80ರಷ್ಟು ಸ್ಥಾನಗಳು ಹಿಂದುಳಿದ ವರ್ಗ ‘ಅ’ (Category-A) ಗೆ,
  • ಶೇ.20ರಷ್ಟು ಸ್ಥಾನಗಳು ಹಿಂದುಳಿದ ವರ್ಗ ‘ಬ’ (Category-B) ಗೆ ಮೀಸಲಾಗುತ್ತವೆ.
Karnataka Gram Panchayat Election 2026
Karnataka Gram Panchayat Election 2026

50% ಮೀಸಲಾತಿ ಮಿತಿ ಕಟ್ಟುನಿಟ್ಟಾಗಿ ಜಾರಿ

ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಮುಖ ಅಂಶವೆಂದರೆ ಒಟ್ಟು ಮೀಸಲಾತಿ ಶೇಕಡಾ 50 ಮೀರಬಾರದು ಎಂಬ ನಿಯಮ.

SC, ST ಮತ್ತು OBC ವರ್ಗಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣ ಯಾವುದೇ ಕಾರಣಕ್ಕೂ ಪಂಚಾಯಿತಿಯ ಒಟ್ಟು ಸ್ಥಾನಗಳ ಶೇ.50 ಕ್ಕಿಂತ ಹೆಚ್ಚಾಗುವಂತಿಲ್ಲ.

ಒಂದು ವೇಳೆ ಮೀಸಲಾತಿ ಪ್ರಮಾಣ 50 ಶೇಕಡಾವನ್ನು ಮೀರಿದರೆ, SC ಹಾಗೂ ST ವರ್ಗಗಳ ಸ್ಥಾನಗಳನ್ನು ಕಡಿತಗೊಳಿಸದೆ, OBC ವರ್ಗಕ್ಕೆ ಮೀಸಲಾಗಿರುವ ಸ್ಥಾನಗಳನ್ನು ಕಡಿತಗೊಳಿಸಿ ಮಿತಿಯೊಳಗೆ ತರಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

ಮಹಿಳೆಯರಿಗೆ ಶೇ.50 ಕಡ್ಡಾಯ ಮೀಸಲಾತಿ

ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಪ್ರತಿನಿಧಿತ್ವ ಹೆಚ್ಚಿಸಲು ಸರ್ಕಾರ ಮತ್ತೊಮ್ಮೆ ಶೇ.50 ಮೀಸಲಾತಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.

SC, ST, OBC ಮತ್ತು ಸಾಮಾನ್ಯ ವರ್ಗ ಸೇರಿ ಪ್ರತಿಯೊಂದು ವರ್ಗದಲ್ಲೂ ಕನಿಷ್ಠ ಅರ್ಧದಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರಬೇಕು.

ಉದಾಹರಣೆಗೆ ಒಂದು ವರ್ಗದಲ್ಲಿ ಮೂರು ಸ್ಥಾನಗಳಿದ್ದರೆ, ಅದರಲ್ಲಿ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಮಹಿಳಾ ಮೀಸಲಾತಿ ಲೆಕ್ಕಾಚಾರದಲ್ಲಿ ಅಪೂರ್ಣಾಂಶ (Fraction) ಬಂದರೂ ಅದನ್ನು ಪೂರ್ಣ ಸ್ಥಾನವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?

ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮೊದಲು ಜಿಲ್ಲಾಧಿಕಾರಿಗಳು ವಾರ್ಡುವಾರು ಜನಸಂಖ್ಯೆ ಹಾಗೂ ಸದಸ್ಯ ಸ್ಥಾನಗಳ ಕರಡು ಅಧಿಸೂಚನೆ (Draft Notification) ಪ್ರಕಟಿಸಲಿದ್ದಾರೆ. ನಂತರ ಸಾರ್ವಜನಿಕರಿಂದ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: One Family One LPG Connection: ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಸಂಪರ್ಕ | ಜೂನ್ 1ರಿಂದ ಹೊಸ ನಿಯಮ ಜಾರಿ | ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

30 ದಿನಗಳಲ್ಲಿ ಅಂತಿಮ ಅಧಿಸೂಚನೆ

ಸರ್ಕಾರದ ನಿರ್ದೇಶನದ ಪ್ರಕಾರ ಜಿಲ್ಲಾಧಿಕಾರಿಗಳು ಕರಡು ಅಧಿಸೂಚನೆ ಪ್ರಕಟಿಸಿದ ನಂತರ ಗರಿಷ್ಠ 30 ದಿನಗಳೊಳಗೆ ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರ (Gazette Notification) ದಲ್ಲಿ ಪ್ರಕಟಿಸಬೇಕು.

ಅದರ ಪ್ರತಿಯನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಚುನಾವಣೆ ಯಾವಾಗ?

ರಾಜ್ಯ ಸರ್ಕಾರ ಹೈಕೋರ್ಟ್ಗೆ ನೀಡಿರುವ ಮಾಹಿತಿಯ ಪ್ರಕಾರ, ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಅಗತ್ಯವಾದ ಮೀಸಲಾತಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಇದೇ ವೇಳೆ ಜಿಲ್ಲಾ ಪಂಚಾಯಿತಿ (ZP) ಹಾಗೂ ತಾಲೂಕು ಪಂಚಾಯಿತಿ (TP) ಚುನಾವಣೆಗಳಿಗೆ ಸಂಬAಧಿಸಿದ ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಮುಂದಿನ ಎಂಟು ವಾರಗಳೊಳಗೆ ಪ್ರಕಟಿಸುವುದಾಗಿ ಸರ್ಕಾರ ತಿಳಿಸಿದೆ.

ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆಗಳು ಅಂತಿಮ ಹಂತ ತಲುಪುತ್ತಿದ್ದು, ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ.

ಗ್ರಾಮೀಣ ಪ್ರದೇಶಗಳ ಜನಪ್ರತಿನಿಧಿಗಳ ಆಯ್ಕೆಗಾಗಿ ನಡೆಯಲಿರುವ 2026ರ ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯದ ರಾಜಕೀಯ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಲಿದೆ.

Gruhalakshmi Hana Bandh: ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ನಿಮಗೆ ಹಣ ಬೇಕಾ? ತಕ್ಷಣ ಈ ಕೆಲಸ ಮಾಡಿ…


Spread the love
error: Content is protected !!