Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

Subsidy Cow Purchase Scheme: ಗ್ರಾಮೀಣ ಮಹಿಳೆಯರಿಗೆ ಸರ್ಕಾರದಿಂದ ಹಸು ಖರೀದಿಗೆ ಭರ್ಜರಿ ಸಬ್ಸಿಡಿಯೊಂದಿಗೆ ಹಸು/ಎಮ್ಮೆ ಮತ್ತು ಹಸು ಮ್ಯಾಟ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ (Women Empowerment) ಮತ್ತೊಂದು ಮಹತ್ವದ ಹೆಜ್ಜೆಯಾಗಿ ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆ ಜಾರಿಯಾಗಿದೆ.

2026ನೇ ಸಾಲಿನ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (DMF/Mining Impact Area Development) ಯೋಜನೆಯಡಿ ಸ್ವಸಹಾಯ ಸಂಘಗಳ (Self Help Group – SHG) ಸದಸ್ಯೆಯರಾಗಿರುವ ಮಹಿಳೆಯರಿಗೆ ಹಸು ಅಥವಾ ಎಮ್ಮೆ ಖರೀದಿಸಲು ಭಾರೀ ಸಹಾಯಧನ (Subsidy) ನೀಡಲಾಗುತ್ತಿದೆ.

ಈ ಯೋಜನೆಯಡಿ ಗಣಿಬಾಧಿತ ಮತ್ತು ಗಣಿಗಾರಿಕೆಯಿಂದ ಪ್ರಭಾವಿತ ಮಹಿಳೆಯರಿಗೆ ಹೈನುಗಾರಿಕೆ (Dairy Farming) ಉತ್ತೇಜನ ನೀಡುವ ಉದ್ದೇಶದಿಂದ ಹಸು/ಎಮ್ಮೆ ಹಾಗೂ ರಬ್ಬರ್ ನೆಲಹಾಸು (Rubber Mat) ವಿತರಿಸಲಾಗುತ್ತಿದೆ.

ಇದನ್ನೂ ಓದಿ: Revive Failed Dry Borewell: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಫೇಲ್ ಆಗಿದೆಯೇ? ಇಲ್ಲಿದೆ ಮರುಜೀವ ನೀಡುವ ಸೂತ್ರ!

ಎಷ್ಟು ಜನರಿಗೆ ಸೌಲಭ್ಯ ಸಿಗಲಿದೆ?

ಒಟ್ಟು 3,179 ಮಹಿಳಾ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರೆಯಲಿದೆ. ವರ್ಗವಾರು ಹಂಚಿಕೆ ಹೀಗಿದೆ:

  • ಪರಿಶಿಷ್ಟ ಜಾತಿ (SC) – 339 ಫಲಾನುಭವಿಗಳು
  • ಪರಿಶಿಷ್ಟ ಪಂಗಡ (ST) – 137 ಫಲಾನುಭವಿಗಳು
  • ಸಾಮಾನ್ಯ ವರ್ಗ (General Category) – 2703 ಫಲಾನುಭವಿಗಳು

ಅರ್ಹ ಮಹಿಳೆಯರಿಗೆ ಒಂದು ಮಿಶ್ರತಳಿ ಹಸು ಅಥವಾ ಎಮ್ಮೆ ಹಾಗೂ ಒಂದು ರಬ್ಬರ್ ನೆಲಹಾಸು ಒದಗಿಸಲಾಗುತ್ತದೆ.

ಇದನ್ನೂ ಓದಿ: Ballari DCC Bank Nemakati 2026: ಡಿಸಿಸಿ ಬ್ಯಾಂಕ್ ನೇರ ನೇಮಕಾತಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಭರ್ಜರಿ ಅವಕಾಶ!

ಹಸು ಮತ್ತು ರಬ್ಬರ್ ನೆಲಹಾಸಿನ ಒಟ್ಟು ವೆಚ್ಚ ಎಷ್ಟು?

ಯೋಜನೆಯಡಿ ನೀಡಲಾಗುವ ಒಂದು ಮಿಶ್ರತಳಿ ಹಸು/ಎಮ್ಮೆ ಹಾಗೂ ಒಂದು ರಬ್ಬರ್ ನೆಲಹಾಸು ಇವೆರಡರ ಒಟ್ಟು ವೆಚ್ಚವನ್ನು ₹63,000 ಎಂದು ನಿಗದಿಪಡಿಸಲಾಗಿದೆ. ಈ ಮೊತ್ತದ ಮೇಲೆ ಸರ್ಕಾರದಿಂದ ನೇರವಾಗಿ ಸಹಾಯಧನ ನೀಡಲಾಗುತ್ತದೆ.

ಎಷ್ಟು ಸಬ್ಸಿಡಿ ಸಿಗಲಿದೆ?

ಈ ಯೋಜನೆಯ ಪ್ರಮುಖ ಆಕರ್ಷಣೆಯೇ ಹೆಚ್ಚಿನ ಪ್ರಮಾಣದ ಸಹಾಯಧನವಾಗಿದೆ.

ಎಸ್‌ಸಿ ಮತ್ತು ಎಸ್‌ಟಿ ವರ್ಗದವರಿಗೆ ಒಟ್ಟು ವೆಚ್ಚದ 90% ಸಹಾಯಧನ ನೀಡಲಾಗುತ್ತಿದೆ. ಅಂದರೆ ₹63,000 ವೆಚ್ಚದಲ್ಲಿ ಸುಮಾರು ₹56,700 ವರೆಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ.

ಇನ್ನು ಸಾಮಾನ್ಯ ವರ್ಗದವರಿಗೆ ಒಟ್ಟು ವೆಚ್ಚದ 50% ಸಹಾಯಧನ ನೀಡಲಾಗುತ್ತಿದ್ದು; ₹31,500 ವರೆಗೆ ಸರ್ಕಾರದ ನೆರವು ಸಿಗಲಿದೆ.

ಉಳಿದ ಮೊತ್ತವನ್ನು ಫಲಾನುಭವಿಗಳು ತಮ್ಮ ಸ್ವಂತ ಹಣದಿಂದ ಅಥವಾ ಬ್ಯಾಂಕ್ ಸಾಲದ (Bank Loan)ಮೂಲಕ ಭರಿಸಬೇಕಾಗುತ್ತದೆ.

ಇದನ್ನೂ ಓದಿ: Sheep Goat Dairy Farming Training: ಉಚಿತ ಕುರಿ-ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಯಾರು ಅರ್ಜಿ ಸಲ್ಲಿಸಬಹುದು?

WhatsApp Group Join Now
Telegram Group Join Now

ಯೋಜನೆಯ ಪ್ರಯೋಜನ ಪಡೆಯಲು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು. ಕಡ್ಡಾಯ ಅರ್ಹತೆಗಳು ಹೀಗಿವೆ:

  • ಗಣಿಬಾಧಿತ ಅಥವಾ ಪ್ರಭಾವಿತ ಗ್ರಾಮಗಳ ನಿವಾಸಿಯಾಗಿರಬೇಕು
  • ಜಿಪಿಎಲ್‌ಎಫ್ (GPLF) ಮೂಲಕ ಸ್ವಸಹಾಯ ಗುಂಪಿನ ಸದಸ್ಯೆಯಾಗಿರಬೇಕು
  • ಮಹಿಳಾ ಫಲಾನುಭವಿಯಾಗಿರಬೇಕು
  • ಯೋಜನೆಯ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಹೊಂದಿರಬೇಕು
  • ಸ್ಥಳೀಯ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ವಾಸವಾಗಿರಬೇಕು
  • ಸ್ವಸಹಾಯ ಸಂಘದ ಸದಸ್ಯತ್ವ ಹೊಂದಿರುವ ಮಹಿಳೆಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.

ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ

Subsidy Cow Purchase Scheme
Subsidy Cow Purchase Scheme

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಪಿಎಲ್‌ಎಫ್ (GPLF) ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿಯನ್ನು ಕೆಳಕಂಡ ಸ್ಥಳಗಳಿಂದ ಪಡೆಯಬಹುದು:

  • ಸ್ಥಳೀಯ ಪಶು ಆಸ್ಪತ್ರೆ
  • ಪಶು ಚಿಕಿತ್ಸಾಲಯ
  • ಗ್ರಾಮ ಪಂಚಾಯಿತಿ
  • ಹಾಲು ಉತ್ಪಾದಕರ ಸಹಕಾರ ಸಂಘ

ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮೂರು ಪ್ರತಿಗಳಲ್ಲಿ (Triplicate Copies) ಸ್ಥಳೀಯ ಪಶು ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯಕ್ಕೆ ಸಲ್ಲಿಸಬೇಕು.

ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ಅರ್ಜಿ ಸಲ್ಲಿಸಲು ಕೊನೆಯ ದಿನ

ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ. ಕೊನೆಯ ದಿನದವರೆಗೆ ಕಾಯದೆ ಅರ್ಹ ಮಹಿಳೆಯರು ಶೀಘ್ರದಲ್ಲೇ ಅರ್ಜಿ ಸಲ್ಲಿಸುವುದು ಉತ್ತಮ.

ಯಾವ ಯಾವ ಗ್ರಾಮಗಳ ಮಹಿಳೆಯರಿಗೆ ಸೌಲಭ್ಯ?

ಈ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕಿನ ಒಟ್ಟು 187 ಗಣಿಬಾಧಿತ ಅಥವಾ ಗಣಿಗಾರಿಕೆ ಪ್ರಭಾವಿತ ಗ್ರಾಮಗಳು ಆಯ್ಕೆಯಾಗಿವೆ.

ಚಿತ್ರದುರ್ಗ ತಾಲ್ಲೂಕು: ಒಟ್ಟು 51 ಗ್ರಾಮಗಳು ಯೋಜನೆಗೆ ಒಳಪಟ್ಟಿವೆ. ಡಿ.ಮದಕರಿಪುರ, ಭೀಮಸಮುದ್ರ, ಸಿರಿಗೆರೆ, ಹಿರೇಗುಂಟನೂರು, ಪಾಳ್ಯ, ರಾಮಾಪುರ, ನೆಲ್ಲಿಕಟ್ಟೆ, ದೊಡ್ಡಾಪುರ, ಜಮ್ಮೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಪಟ್ಟಿಯಲ್ಲಿವೆ.

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಹೊಳಲ್ಕೆರೆ ತಾಲ್ಲೂಕು: ಒಟ್ಟು 72 ಗ್ರಾಮಗಳು ಯೋಜನೆಯ ವ್ಯಾಪ್ತಿಯಲ್ಲಿದ್ದು, ಕೇಶವಾಪುರ, ಮತ್ತಿಘಟ್ಟ, ಬಸವಪುರ, ಬ್ರಹ್ಮಪುರ, ಪಂಪಾಪುರ, ಗುಂಡಿಕೆರೆ, ಅಮೃತಾಪುರ, ತೇಕಲವಟ್ಟಿ, ರಂಗಸಮುದ್ರ, ಮುತ್ತುಗದೂರು ಸೇರಿದಂತೆ ಅನೇಕ ಗ್ರಾಮಗಳು ಸೇರಿವೆ.

ಹೊಸದುರ್ಗ ತಾಲ್ಲೂಕು: ಒಟ್ಟು 64 ಗ್ರಾಮಗಳು ಯೋಜನೆಗೆ ಆಯ್ಕೆಯಾಗಿದ್ದು, ಕೆಂಚಿಹಳ್ಳಿ, ಲಕ್ಕಿಹಳ್ಳಿ, ಕಾಂಚೀಪುರ, ಮುಗಿಲೋಡು, ಮತ್ತೋಡು, ಬಾಲೇನಹಳ್ಳಿ, ನಾಗತಿಹಳ್ಳಿ, ವೆಂಗಲಾಪುರ, ಗಿರಿಯಾಪುರ, ಕಪ್ಪಗೆರೆ ಸೇರಿದಂತೆ ಹಲವು ಗ್ರಾಮಗಳು ಒಳಗೊಂಡಿವೆ.

ಯೋಜನೆಯ ಅಧಿಕೃತ ಪಟ್ಟಿಯಲ್ಲಿ ಉಲ್ಲೇಖಿಸಿರುವ 187 ಗ್ರಾಮಗಳ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು?

ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು.

  • ಚಿತ್ರದುರ್ಗ ತಾಲ್ಲೂಕು: ಮುಖ್ಯ ಪಶುವೈದ್ಯಾಧಿಕಾರಿ, ಡಾ. ಜಿ. ಇಂದಿರಾಬಾಯಿ, ಮೊಬೈಲ್: 9482943111
  • ಹೊಳಲ್ಕೆರೆ ತಾಲ್ಲೂಕು: ಮುಖ್ಯ ಪಶುವೈದ್ಯಾಧಿಕಾರಿ, ಡಾ. ರಂಗಸ್ವಾಮಿ, ಮೊಬೈಲ್: 9972965479
  • ಹೊಸದುರ್ಗ ತಾಲ್ಲೂಕು: ಮುಖ್ಯ ಪಶುವೈದ್ಯಾಧಿಕಾರಿ, ಡಾ. ಸಿ. ಶಿವಪ್ಪ, ಮೊಬೈಲ್: 9449783775

ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ

ಮಹಿಳೆಯರಿಗೆ ಉತ್ತಮ ಅವಕಾಶ

ಗ್ರಾಮೀಣ ಮಹಿಳೆಯರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ ಸ್ವಂತ ಆದಾಯ ಗಳಿಸುವ ಅವಕಾಶ ಒದಗಿಸುವ ಮಹತ್ವದ ಯೋಜನೆಯಿದು. ವಿಶೇಷವಾಗಿ ಎಸ್‌ಸಿ ಮತ್ತು ಎಸ್‌ಟಿ ವರ್ಗದ ಮಹಿಳೆಯರಿಗೆ 90% ರಷ್ಟು ಭಾರೀ ಸಹಾಯಧನ ನೀಡುತ್ತಿರುವುದು ಗಮನಾರ್ಹ.

ಗಣಿಬಾಧಿತ ಗ್ರಾಮಗಳಲ್ಲಿ ವಾಸಿಸುವ ಮತ್ತು ಸ್ವಸಹಾಯ ಸಂಘದ ಸದಸ್ಯತ್ವ ಹೊಂದಿರುವ ಮಹಿಳೆಯರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಹೈನುಗಾರಿಕೆ ಉದ್ಯಮ (Dairy Enterprise) ಆರಂಭಿಸಿ ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬಹುದು.

ಜೂನ್ 10 ಕೊನೆಯ ದಿನವಾಗಿರುವುದರಿಂದ ಅರ್ಹರು ತಡಮಾಡದೆ ತಮ್ಮ ಸಮೀಪದ ಪಶು ಆಸ್ಪತ್ರೆ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್


Spread the love
error: Content is protected !!