One Family One LPG Connection: ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಸಂಪರ್ಕ | ಜೂನ್ 1ರಿಂದ ಹೊಸ ನಿಯಮ ಜಾರಿ | ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

One Family One LPG Connection: ಒಂದು ಕುಟುಂಬಕ್ಕೆ ಒಂದೇ ಎಲ್‌ಪಿಜಿ ಗ್ಯಾಸ್ ಸಂಪರ್ಕ ನಿಯಮ ಜೂನ್ 1ರಿಂದ ಜಾರಿಗೆ ಬರಲಿದೆ. ಈ ಕುರಿತು ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದ ಕೋಟ್ಯಂತರ ಕುಟುಂಬಗಳು ಅಡುಗೆಗಾಗಿ ಎಲ್‌ಪಿಜಿ (LPG) ಗ್ಯಾಸ್ ಅನ್ನು ಅವಲಂಬಿಸಿವೆ. ಇದೇ ಕಾರಣಕ್ಕೆ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ಯಾವುದೇ ನಿಯಮ ಬದಲಾವಣೆಗಳು ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ಇದೀಗ ಕೇಂದ್ರ ಸರ್ಕಾರ ಎಲ್‌ಪಿಜಿ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲು ಮುಂದಾಗಿದ್ದು, ಒಂದೇ ಮನೆಯಲ್ಲಿರುವ ಬಹು ಗ್ಯಾಸ್ ಸಂಪರ್ಕಗಳ ಮೇಲೆ ನಿಯಂತ್ರಣ ಹೇರಲು ನಿರ್ಧರಿಸಿದೆ ಎನ್ನಲಾಗಿದೆ.

ಜೂನ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ, ಒಂದೇ ಅಡುಗೆಮನೆ (Kitchen) ಹೊಂದಿರುವ ಕುಟುಂಬಕ್ಕೆ ಒಂದೇ ಎಲ್‌ಪಿಜಿ ಸಂಪರ್ಕಕ್ಕೆ ಅವಕಾಶ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಿಂದ ಒಂದೇ ಮನೆಯ ಹೆಸರಿನಲ್ಲಿ ಹಲವು ಗ್ಯಾಸ್ ಸಂಪರ್ಕಗಳನ್ನು ಹೊಂದಿರುವವರು ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

ಇದನ್ನೂ ಓದಿ: Aadhaar Card Authentication History Check: ನಿಮಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಬೇರೆಡೆ ಬಳಕೆಯಾಗಿದೆಯೇ? ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ

ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದೇಕೆ?

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ (Energy Supply) ಸರಪಳಿಯಲ್ಲಿ ಹಲವು ಸವಾಲುಗಳು ಎದುರಾಗುತ್ತಿವೆ. ವಿಶೇಷವಾಗಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹೋರ್ಮುಜ್ ಜಲಸಂಧಿ (Strait of Hormuz) ಭಾಗದಲ್ಲಿನ ಅನಿಶ್ಚಿತ ಪರಿಸ್ಥಿತಿ ಎಲ್‌ಪಿಜಿ ಆಮದು ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತ ತನ್ನ ಅಗತ್ಯದ ಬಹುಪಾಲು ಎಲ್‌ಪಿಜಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಲಭ್ಯವಿರುವ ಗ್ಯಾಸ್ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಅನಗತ್ಯ ಹಾಗೂ ದುರ್ಬಳಕೆಯಾಗುತ್ತಿರುವ ಸಂಪರ್ಕಗಳನ್ನು ಗುರುತಿಸಿ ನಿಯಂತ್ರಿಸುವ ಉದ್ದೇಶದಿಂದ ಹೊಸ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: 15 Lakh Fake Old Age Pension Cancelled: 15 ಲಕ್ಷ ಅಕ್ರಮ ವೃದ್ಧಾಪ್ಯ ವೇತನ ರದ್ದು | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಒಂದೇ ಮನೆಯಲ್ಲಿ ಎರಡು ಸಂಪರ್ಕಗಳಿದ್ದರೆ ಏನಾಗುತ್ತದೆ?

ಹೊಸ ನಿಯಮದ ಪ್ರಕಾರ, ಒಂದೇ ಕುಟುಂಬ ಅಥವಾ ಒಂದೇ ಅಡುಗೆಮನೆಗಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿರುವುದು ಪರಿಶೀಲನೆಗೆ ಒಳಪಡಬಹುದು. ನಿಯಮಬಾಹಿರ ಎಂದು ಗುರುತಿಸಲಾದ ಹೆಚ್ಚುವರಿ ಸಂಪರ್ಕಗಳನ್ನು ಸಂಬಂಧಿತ ಗ್ಯಾಸ್ ಕಂಪನಿಗೆ ಹಿಂತಿರುಗಿಸುವಂತೆ ಸೂಚನೆ ನೀಡಬಹುದು.

ಹೆಚ್ಚುವರಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸದಿದ್ದರೆ, ಮೂಲ ಸಂಪರ್ಕದ ಸೇವೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದರೆ, ಗ್ಯಾಸ್ ವಿತರಣೆ ಅಥವಾ ರಿಫಿಲ್ ಸೇವೆ (Refill Service) ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!

One Family One LPG Connection
One Family One LPG Connection

ಎರಡು ಸಿಲಿಂಡರ್ ಬಳಸುವವರಿಗೆ ಯಾವುದೇ ಸಮಸ್ಯೆಯಿಲ್ಲ

ಬಹುತೇಕ ಕುಟುಂಬಗಳು ಒಂದು ಸಿಲಿಂಡರ್ ಬಳಕೆಯಲ್ಲಿದ್ದಾಗ ಮತ್ತೊಂದು ಸಿಲಿಂಡರ್ ಅನ್ನು ಬ್ಯಾಕಪ್‌ಗಾಗಿ ಇಟ್ಟುಕೊಳ್ಳುತ್ತವೆ. ಇಂತಹ ಗ್ರಾಹಕರಿಗೆ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಡಬಲ್ ಬಾಟಲ್ ಕನೆಕ್ಷನ್ (Double Bottle Connection) ವ್ಯವಸ್ಥೆಯನ್ನು ಸರ್ಕಾರ ಮುಂದುವರಿಸಿದೆ.

ಅಂದರೆ, ಒಂದೇ ಗ್ಯಾಸ್ ಸಂಪರ್ಕದ ಅಡಿಯಲ್ಲಿ ಎರಡು ಸಿಲಿಂಡರ್‌ಗಳನ್ನು ಹೊಂದುವ ಅವಕಾಶ ಹಾಗೆಯೇ ಇರುತ್ತದೆ. ಹೀಗಾಗಿ ಸಿಲಿಂಡರ್ ಮುಗಿದಾಗ ಮತ್ತೊಂದು ಸಿಲಿಂಡರ್ ಬಳಸುವ ಸೌಲಭ್ಯ ಮುಂದುವರಿಯಲಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ

ಪಿಎನ್‌ಜಿ ಸಂಪರ್ಕ ಪಡೆದರೆ ಎಲ್‌ಪಿಜಿ ಹಿಂದಿರುಗಿಸಬೇಕೇ?

ನಗರ ಪ್ರದೇಶಗಳಲ್ಲಿ ಪೈಪ್ ನ್ಯಾಚುರಲ್ ಗ್ಯಾಸ್ (PNG – Piped Natural Gas) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಯಾರಾದರೂ ಪಿಎನ್‌ಜಿ ಸಂಪರ್ಕ ಪಡೆದಿದ್ದರೆ ಅವರು ತಮ್ಮ ಎಲ್‌ಪಿಜಿ ಸಂಪರ್ಕವನ್ನು 30 ದಿನಗಳೊಳಗೆ ಹಿಂದಿರುಗಿಸಬೇಕಾಗಬಹುದು.

ಆದರೆ ಭವಿಷ್ಯದಲ್ಲಿ ಪಿಎನ್‌ಜಿ ಸೌಲಭ್ಯ ಲಭ್ಯವಿಲ್ಲದ ಪ್ರದೇಶಕ್ಕೆ ಸ್ಥಳಾಂತರವಾದರೆ, ಮತ್ತೆ ಎಲ್‌ಪಿಜಿ ಸಂಪರ್ಕ ಪಡೆಯಲು ಅವಕಾಶ ನೀಡುವ ವ್ಯವಸ್ಥೆಯೂ ಇರಲಿದೆ. ಇದಕ್ಕಾಗಿ ವರ್ಗಾವಣೆ ಓಚರ್ (Transfer Voucher) ಪಡೆಯಬಹುದಾಗಿದೆ.

ಇದನ್ನೂ ಓದಿ: Monsoon Delay Karnataka: ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಡೇಟ್ ಫಿಕ್ಸ್ | ಈ ದಿನದಿಂದ ಭಾರೀ ಮಳೆ ಶುರು

ಗ್ರಾಹಕರು ಈಗಲೇ ಏನು ಮಾಡಬೇಕು?

ನಿಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳಿದ್ದರೆ, ಅವುಗಳ ದಾಖಲೆಗಳನ್ನು ಪರಿಶೀಲಿಸುವುದು ಉತ್ತಮ. ಯಾವ ಸಂಪರ್ಕ ಸಕ್ರಿಯವಾಗಿದೆ, ಯಾವುದು ಬಳಕೆಯಲ್ಲಿಲ್ಲ, ಹೆಚ್ಚುವರಿ ಸಂಪರ್ಕದ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.

ಅಗತ್ಯವಿದ್ದರೆ ನಿಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ವಿವರಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಕೆವೈಸಿ (KYC) ದಾಖಲೆಗಳು ಹಾಗೂ ಗ್ರಾಹಕ ಮಾಹಿತಿಯನ್ನು ನವೀಕರಿಸಿಕೊಂಡರೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ದುರ್ಬಳಕೆ ತಡೆಯುವುದೇ ಸರ್ಕಾರದ ಉದ್ದೇಶ

ಗ್ಯಾಸ್ ಸಬ್ಸಿಡಿ (LPG Subsidy) ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಅನಧಿಕೃತ ಬಳಕೆಯನ್ನು ತಡೆಯುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ತಲುಪುವಂತೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಒಂದೇ ಕುಟುಂಬದ ಹೆಸರಿನಲ್ಲಿ ಹಲವು ಸಂಪರ್ಕಗಳನ್ನು ಹೊಂದುವುದರಿAದ ಕೆಲವೊಮ್ಮೆ ವಿತರಣಾ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಇಂತಹ ಸಮಸ್ಯೆಗಳನ್ನು ತಡೆಯುವ ಜೊತೆಗೆ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಹಂಚಿಕೆ ಮಾಡಲು ಸರ್ಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ಹೊಸ ನಿಯಮಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ. ವಿಶೇಷವಾಗಿ ಒಂದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿರುವವರು ತಮ್ಮ ದಾಖಲೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಗ್ಯಾಸ್ ಏಜೆನ್ಸಿಯಿಂದ ಸ್ಪಷ್ಟನೆ ಪಡೆಯುವುದು ಒಳಿತು.

PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್


Spread the love
error: Content is protected !!