SSLC Supplementary Exam 2 Result- ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ಫಲಿತಾಂಶ ಜೂನ್ 20ರೊಳಗೆ ಪ್ರಕಟ | KSEAB ಮಹತ್ವದ ಮಾಹಿತಿ ಇಲ್ಲಿದೆ…

Spread the love

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ-2ರ ಫಲಿತಾಂಶ (SSLC Supplementary Exam 2 Result) ಪ್ರಕಟಣೆ ಕುರಿತ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ನಿಖರ ಮಾಹಿತಿ ಸಿಕ್ಕಿದೆ. ಈ ಕುರಿತ ವಿವರ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ SSLC ಪೂರಕ ಪರೀಕ್ಷೆ 2 (Supplementary Exam 2025) ಫಲಿತಾಂಶ ಪ್ರಕಟಣೆಗೆ ದಿನ ಎಣಿಕೆ ಶುರುವಾಗಿದೆ. ಈ ಪರೀಕ್ಷೆಯಲ್ಲಿ ಭಾಗವಹಿಸಿದ 3.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.

ಕಳೆದ ಮೇ 26ರಿಂದ 31ರ ವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ-2 ಅನ್ನು ನಡೆಸಲಾಗಿತ್ತು. ಇದೀಗ, ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷೆಯಲ್ಲಿದ್ದು; ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೂಲಗಳಿಂದ ಪೂರಕ ಪರೀಕ್ಷೆ-2ರ ಫಲಿತಾಂಶ ಪ್ರಕಟಣೆ ಕುರಿತ ನಿಖರ ಮಾಹಿತಿ ಲಭ್ಯವಾಗಿದೆ.

Karnataka Heavy Rain Alert- ರಾಜ್ಯದಲ್ಲಿ 5 ದಿನ ಭಾರಿ ಮಳೆ ಮುನ್ಸೂಚನೆ | ಜೂನ್ 15ರ ವರೆಗೂ ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ

2025ರ SSLC ಮುಖ್ಯ ಪರೀಕ್ಷೆ ಬರೆದ 8.42 ಲಕ್ಷ ವಿದ್ಯಾರ್ಥಿಗಳಲ್ಲಿ 5.24 ಲಕ್ಷ ಜನ ಮಾತ್ರ ಉತ್ತೀರ್ಣರಾಗಿದ್ದು, ಒಟ್ಟಾರೆ ಪಾಸ್ ಶೇಕಡಾವಾರು ಕೇವಲ 62.34% ಆಗಿದೆ.

SSLC ಮುಖ್ಯ ಪರೀಕ್ಷೆಯಲ್ಲಿ ಒಂದು ಅಥವಾ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ಪೂರಕ ಪರೀಕ್ಷೆ-2 ಅನ್ನು ನಡೆಸಲಾಗಿದೆ.

ಈ ಬಾರಿ ಗ್ರೇಸ್ ಮಾರ್ಕ್ಸ್ ಪದ್ಧತಿಯನ್ನು ರದ್ದುಗೊಳಿಸಿರುವುದರಿಂದ ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಪೂರಕ ಪರೀಕ್ಷೆ-2 ಅನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

Bagar Hukum Land Rights- ಬಗರ್ ಹುಕುಂ ಸರ್ಕಾರಿ ಭೂಮಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಜೂನ್ 20ರೊಳಗೆ ಪರೀಕ್ಷೆ 2ರ ಫಲಿತಾಂಶ?

ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ಪ್ರಕಾರ ಕಳೆದ ಜೂನ್ 6ರಿಂದ ಪರೀಕ್ಷೆ-2ರ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ಪರೀಕ್ಷೆಯ ಮುಕ್ತಾಯದ ಬಳಿಕ ಒಂದೂವರೆ ವಾರದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಫಲಿತಾಂಶ ಪ್ರಕಟಣೆ ಕಾರ್ಯ ಭರದಿಂದ ಸಾಗುತ್ತಿದೆ.

ಶೀಘ್ರದಲ್ಲೇ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ಫಲಿತಾಂಶವನ್ನು ಪ್ರಕಟಿಸುವ ನಿರೀಕ್ಷೆ ಇದ್ದು; ಫಲಿತಾಂಶಗಳ ಬಿಡುಗಡೆಯ ಅಧಿಕೃತ ದಿನಾಂಕ ಮತ್ತು ಸಮಯವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಇದೇ ಜೂನ್ 20ರೊಳಗೆ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಣೆ ಕುರಿತ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ನಿಖರ ಮಾಹಿತಿ ಸಿಕ್ಕಿದೆ. ಈ ಕುರಿತ ವಿವರ ಇಲ್ಲಿದೆ...
SSLC Supplementary Exam 2 Result 2025 Updates
ಹಿಂದಿನ ವರ್ಷಗಳ ಫಲಿತಾಂಶ ಪ್ರಕಟಣೆ ದಿನಾಂಕಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಫಲಿತಾಂಶಗಳನ್ನು ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದ ಒಂದು ತಿಂಗಳೊಳಗೆ ಬಿಡುಗಡೆ ಮಾಡಲಾಗುತ್ತದೆ. ಕಳೆದ ವರ್ಷ (2024), ಜೂನ್ 14ರಿಂದ ಜೂನ್ 21ರ ವರೆಗೆ ಪರೀಕ್ಷೆ ನಡೆಸಲಾಗಿತ್ತು. ನಂತರ ಜುಲೈ 10 ರಂದು ಅದರ ಫಲಿತಾಂಶವನ್ನು ಘೋಷಿಸಲಾಗಿತ್ತು.

2023ರಲ್ಲಿ, ಜೂನ್ 12 ಮತ್ತು ಜೂನ್ 19ರ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಪರೀಕ್ಷೆ ನಡೆಸಲಾಗಿತ್ತು. ಜೂನ್ 30 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಅದೇ ರೀತಿ, 2022ರಲ್ಲಿ, ಜೂನ್ 27 ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ಫಲಿತಾಂಶ ಜುಲೈ 21 ರಂದು ಪ್ರಕಟವಾಗಿತ್ತು.

RBI Repo Rate Cut- ಇನ್ಮುಂದೆ ಕಡಿಮೆ ಬಡ್ಡಿಗೆ ಸಾಲ | ಬ್ಯಾಂಕಿನ ಎಲ್ಲಾ ರೀತಿಯ ಸಾಲಗಳಿಗೂ ಕಡಿಮೆ ಬಡ್ಡಿದರ ನಿಗದಿ…

ಈ ವರ್ಷದ ಫಲಿತಾಂಶ ಪ್ರಕಟ ಯಾವಾಗ?

ಕಳೆದ ಜೂನ್ 6ರಿಂದ SSಐಅ ಪೂರಕ ಪರೀಕ್ಷೆ-2 2025 ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಹಿಂದಿನ ವರ್ಷಗಳ ಫಲಿತಾಂಶ ಪ್ರಕಟಣೆಯ ದಿನಾಂಕವನ್ನು ಗಮನಿಸಿದೆ, ಬಹುಶಃ ಜೂನ್ ತಿಂಗಳ 3ನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.

ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ತಮ್ಮ Registration Number ಬಳಸಿ ಅಧಿಕೃತ ವೆಬ್‌ಸೈಟ್ karresults.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶದ ಇತ್ತೀಚಿನ ನವೀಕರಣಗಳಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮತ್ತು ಮಾಹಿತಿ ಮನೆ ಪುಟವನ್ನು ನಿಯಮಿತವಾಗಿ ಪರಿಶೀಲಿಸಬಹುದು.

Arivu Education Loan- ₹5 ಲಕ್ಷ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30 | ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!