ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಾದ್ಯಂತ ವಿವಿಧ ವೃತ್ತಗಳಲ್ಲಿ 2,964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದಾದ್ಯಂತ ವಿವಿಧ ವೃತ್ತಗಳಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ (Circle Based Officer- CBO) ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಸ್ಥಳೀಯ ಭಾಷಾ ಜ್ಞಾನವಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು; ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
ಎಸ್‌ಬಿಐ ಅಧಿಸೂಚನೆಯ ಪ್ರಕಾರ, ಈ ಬಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಪದವೀಧರರಿಗೆ ಉತ್ತಮ ಅವಕಾಶ ದೊರೆಯುತ್ತಿದೆ. ದೇಶಾದ್ಯಂತ ಒಟ್ಟು 2,964 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; ಕರ್ನಾಟಕದ ರಾಜಧಾನಿಯಾದ ಬೆಂಗಳೂರು ವೃತ್ತಕ್ಕೆ 280 ಹುದ್ದೆಗಳು ಮೀಸಲಾಗಿವೆ.
ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ
ಕೆಲವು ರಾಜ್ಯಗಳ ರಾಜಧಾನಿಯನ್ನು ಆಯ್ದುಕೊಂಡು ಒಂದು ಸರ್ಕಲ್ (ವೃತ್ತ) ಎಂದು ಪರಿಗಣಿಸಿ, ಆ ವೃತ್ತದ ವ್ಯಾಪ್ತಿಗೆ ಒಂದೆರಡು ರಾಜ್ಯಗಳು ಒಳಪಡುತ್ತವೆ. ಈ ವೃತ್ತಗಳಲ್ಲಿ ಕಾರ್ಯನಿರ್ವಹಿಸಲು ಕೂಡ ಅಭ್ಯರ್ಥಿಗಳು ಆಯಾ ರಾಜ್ಯಗಳ ಸ್ಥಳೀಯ ಭಾಷಾ ಜ್ಞಾನ ಹೊಂದಿರ ಬೇಕಾಗುತ್ತದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೇಮಕ ನಡೆಯಲಿರುವುದರಿಂದ, ಇಲ್ಲಿನ ಹುದ್ದೆಗಳಿಗೆ ಕನ್ನಡ ಮಾತನಾಡಲು, ಬರೆಯಲು ಬರುವ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ನೇಮಕಕ್ಕೆ ಬೆಂಗಳೂರಿನಲ್ಲೂ ಪರೀಕ್ಷಾ ಕೇಂದ್ರ ಇರಲಿದೆ. ಆದರೆ, ಅಭ್ಯರ್ಥಿಗಳಿಗೆ ಬೇರೆ ರಾಜ್ಯದ ಸ್ಥಳೀಯ ಭಾಷೆ ತಿಳಿದಿದ್ದರೆ ಅರ್ಜಿ ಸಲ್ಲಿಸುವ ಅವಕಾಶವಿದೆ.

ಅರ್ಹತೆಗಳೇನು?
ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇತರೆ ತತ್ಸಮಾನ ಪದವಿಗಳು (B.E/B.Tech, CA, Cost Accountant, etc.) ಹೊಂದಿರುವ ಅಭ್ಯರ್ಥಿಗಳೂ ಅರ್ಹರಾಗಿರುತ್ತಾರೆ.
ವಯೋಮಿತಿ ಮತ್ತು ಅನುಭವ: 30 ವರ್ಷ ಒಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು; ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇದೆ. ವಾಣಿಜ್ಯ ಬ್ಯಾಂಕ್ ಅಥವಾ ಶೆಡ್ಯೂಲ್‌ಡ್ ಬ್ಯಾಂಕ್‌ನಲ್ಲಿ ಕನಿಷ್ಠ ಎರಡು ವರ್ಷಗಳ ಬ್ಯಾಂಕಿಂಗ್ ಅನುಭವ ಕಡ್ಡಾಯವಾಗಿದೆ.
ಭಾಷಾ ಜ್ಞಾನ: ಬೆಂಗಳೂರಿನಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವುದು ಕಡ್ಡಾಯವಾಗಿದೆ.ಇತರೆ ರಾಜ್ಯಗಳ ನೇಮಕಾತಿಗೆ ಕೂಡಾ ಆ ರಾಜ್ಯದ ಸ್ಥಳೀಯ ಭಾಷೆ ಜ್ಞಾನ ಹೊಂದಿರುವುದು ಅಗತ್ಯ.
ಹುದ್ದೆಗಳ ಸ್ಥಳೀಯತೆಯ ಮಹತ್ವ
ಎಸ್‌ಬಿಐನ ಸಿಬಿಒ ನೇಮಕಾತಿ Circle-Based Recruitment ಆಗಿದ್ದು, ಪ್ರತಿಯೊಂದು ವೃತ್ತದೊಳಗಿನ ರಾಜ್ಯಗಳು/ಜಿಲ್ಲೆಗಳಿಗಾಗಿ ಮಾತ್ರ ನೇಮಕಾತಿ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಯು ನಿಯೋಜನೆಯಾದ ವೃತ್ತದೊಳಗಿನ ಶಾಖೆಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ವರ್ಗಾವಣೆ ಅಥವಾ ವೃತ್ತ ಬದಲಾವಣೆಗೆ ಅವಕಾಶವಿರುವುದಿಲ್ಲ.
ಮಾಸಿಕ ವೇತನ, ಭತ್ಯೆ ಎಷ್ಟು?
48480-2000/7-62480-2340/2- 67160-2680/7-85920 ವೇತನ ಶ್ರೇಣಿ ಹೊಂದಿದ್ದು; 48,480 ರಿಂದ 85,920 ರೂ. ವರೆಗೆ ಮೂಲ ವೇತನ ನಿಗದಿಪಡಿಸಲಾಗಿದೆ.
ಇದರ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ನಗರ ಪರಿಹಾರ ಭತ್ಯೆಗಳು (CCA) ಹಾಗೂ ಇತರ ಭತ್ಯೆಗಳು ಕೂಡ ಅನ್ವಯವಾಗಲಿವೆ.
ಅರ್ಜಿ ಶುಲ್ಕವೆಷ್ಟು?
ಎಸ್‌ಸಿ/ಎಸ್‌ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ. ಈ ವರ್ಗದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ. ಉಳಿದೆಲ್ಲಾ ಅಭ್ಯರ್ಥಿಗಳಿಗೆ 150 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಅಭ್ಯರ್ಥಿಗಳು ನೇರವಾಗಿ ಬ್ಯಾಂಕಿನ ವೆಬ್ ಸೈಟ್‌ನಿಂದ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಯಾವುದೇ ಅಭ್ಯರ್ಥಿಗೆ ಮುದ್ರಿತ ಪ್ರವೇಶಪತ್ರ ಕಳುಹಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರು ತಿಂಗಳು ಪ್ರೊಬೆಷನರಿ ಅವಧಿ ಇರುತ್ತದೆ.
UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ
ಪರೀಕ್ಷಾ ಪೂರ್ವ ತರಬೇತಿ
ಬ್ಯಾಂಕ್ ವತಿಯಿಂದ, ಎಸ್ಸಿ/ಎಸ್‌ಟಿ/ಒಬಿಸಿ/ ಧಾರ್ಮಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ಅಗತ್ಯವಿದ್ದವರು ಅರ್ಜಿ ಸಲ್ಲಿಸುವಾಗಲೇ ಅರ್ಜಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಬೇಕಾಗುತ್ತದೆ.
ಪರೀಕ್ಷೆಗೆ ವಸ್ತುನಿಷ್ಠ ಮಾದರಿಯ 120 ಅಂಕಗಳ ಪ್ರಶ್ನೆಗಳಿದ್ದರೆ, ವಿವರಣಾತ್ಮಕ ಮಾದರಿಗೆ 50 ಅಂಕಗಳ ಪ್ರಶ್ನೆಗಳಿರುತ್ತವೆ. ವಸ್ತುನಿಷ್ಠ ಮಾದರಿಯಲ್ಲಿ ಇಂಗ್ಲಿಷ್ ಭಾಷಾ ಜ್ಞಾನ, ಬ್ಯಾಂಕಿಂಗ್ ನಾಲೇಜ್, ಜನರಲ್ ಅವೇರ್ನೆಸ್ ಮತ್ತು ಕಂಪ್ಯೂಟರ್ ನಾಲೆಜ್‌ಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
ವಿವರಣಾತ್ಮಕ ಮಾದರಿಯು ಇಂಗ್ಲಿಷ್ ಭಾಷಾ ಜ್ಞಾನವನ್ನು ಪರೀಕ್ಷಿಸುವ ಪತ್ರ ಬರವಣಿಗೆ ಮತ್ತು ಪ್ರಬಂಧಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಶಗಳಿರುವುದಿಲ್ಲ. ಇದರಲ್ಲಿ ಅರ್ಹತೆ ಪಡೆದವರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಈಗಾಗಲೇ ಆರಂಭವಾಗಿದೆ
- ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 29-05-2025
- ಆನ್‌ಲೈನ್ ಪರೀಕ್ಷೆ ನಡೆಯುವುದು: ಜುಲೈ, 2025
ಅಧಿಸೂಚನೆ: Download
ಅರ್ಜಿ ಸಲ್ಲಿಕೆ ಲಿಂಕ್: Apply Now