ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board- RRB) ಮತ್ತೊಂದು ಬೃಹತ್ ನೇಮಕಾತಿ (Railway Recruitment) ಅಧಿಸೂಚನೆಯನ್ನು ಹೊರಡಿಸಿದೆ. ಕಳೆದ ಮಾರ್ಚ್ 19ರಂದು ಪ್ರಕಟಣೆ ಹೊರಡಿಸಿರುವ ಆರ್‌ಆರ್‌ಬಿ, ಒಟ್ಟು 9,970 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.
ದೇಶದ 16 ರೈಲ್ವೆ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಕೋಲ್ಕತ ಮೆಟ್ರೋ ರೈಲಿಗಾಗಿ 255 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು; ಒಟ್ಟು ಹುದ್ದೆಗಳ ಸಂಖ್ಯೆ 10,195ಕ್ಕೆ ತಲುಪಲಿದೆ. ರಾಜ್ಯದ ನೈಋತ್ಯ ರೈಲ್ವೆ ವಿಭಾಗದಲ್ಲಿ ಬರೋಬ್ಬರಿ 796 ಹುದ್ದೆಗಳು ಮೀಸಲಿಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪೂರ್ಣಗೊಳಿಸಿರಬೇಕು. ಫಿಟ್ಟರ್, ಎಲೆಕ್ನಿಷಿಯನ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಮಿಲ್‌ರೈಟ್, ಮೆಂಟೇನೆನ್ಸ್ ಮೆಕಾನಿಕ್, ಮೆಕಾನಿಕ್ (ರೇಡಿಯೋ, ಟಿವಿ), ಎಲೆಕ್ಟ್ರಾನಿಕ್ ಮೆಕಾನಿಕ್, ಮೆಕಾನಿಕ್ (ಮೋಟಾರ್ ವೆಹಿಕಲ್) ವೈರ್‌ಮನ್, ಟ್ರ‍್ಯಾಕ್ಟರ್ ಮೆಕಾನಿಕ್, ಆರ್ಮೇಚರ್ ಆ್ಯಂಡ್ ಕಾಯ್ಲ್ ವೈಂಡರ್, ಮೆಕಾನಿಕ್ (ಡೀಸೆಲ್), ಹೀಟ್ ಇಂಜಿನ್, ಟರ್ನರ್, ಮಷಿನಿಸ್ಟ್, ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಷನಿ೦ಗ್ ಮೆಕಾನಿಕ್ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರು ಅರ್ಜಿ ಸಲ್ಲಿಸಬಹುದು.
ಇನ್ನು, ಎಸ್‌ಎಸ್‌ಎಲ್‌ಸಿ ಬಳಿಕ ಇದೇ ಟ್ರೇಡ್‌ನಲ್ಲಿ ಅಪ್ರೆಂಟೀಸ್ ಶಿಪ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಬಳಿಕ ಮೆಕಾನಿಕಲ್, ಇಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಇಂಜಿನಿಯರಿ೦ಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪಡೆದವರು, ಇಂಜಿನಿಯರಿ೦ಗ್ ಪದವಿ ಪಡೆದವರು ಕೂಡ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ವೇತನ ಮತ್ತು ವಯೋಮಿತಿ
ಸಾಮಾನ್ಯವಾಗಿ 18-30 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ವಿವಿಧ ಮೀಸಲಾತಿಗೆ ಸಂಬAಧಿಸಿದAತೆ ವಯೋಮಿತಿ ಸಡಿಲಿಕೆ ಇರಲಿದೆ. ಏಳನೇ ವೇತನ ಆಯೋಗದ ಅನ್ವಯಿಸುವಂತೆ ಲೆವೆಲ್-2 ಹುದ್ದೆಗಳು ಇವಾಗಿದ್ದು, 19,900 ರೂ. ಆರಂಭಿಕ ವೇತನ ಇರಲಿದೆ.
ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ?
2024ರ ಎಎಲ್‌ಪಿ ಹುದ್ದೆಗಳ ನೇಮಕಾತಿಗೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮುಗಿದಿದ್ದು, ಎರಡನೇ ಹಂತದ ಪರೀಕ್ಷೆ ಮಾರ್ಚ್ 19ರಂದು ನಿಗದಿಯಾಗಿತ್ತು. ಆದರೆ, ಕೆಲವಡೆ ಇನ್ನೂ ಪರೀಕ್ಷೆ ನಡೆಸಬೇಕಿದ್ದು, ಶೀಘ್ರದಲ್ಲಿಯೇ ನಡೆಸುವುದಾಗಿ ಬೆಂಗಳೂರು ಆರ್‌ಆರ್‌ಬಿ ತಿಳಿಸಿದೆ.
ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಹಂತವು ಅರ್ಹತಾದಾಯಕವಾಗಿದ್ದು, ಈ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ. ಎರಡನೇ ಹಂತದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ.
ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ ಕುರಿತಂತೆ ಆರ್‌ಆರ್‌ಬಿ ಸದ್ಯಕ್ಕೆ ಪ್ರಕಟಣೆ ಹೊರಡಿಸಿದ್ದು; ಸದ್ಯದಲ್ಲಿಯೇ ಅಧಿಕೃತ ಅಧಿಸೂಚನೆ ಪ್ರಕಟಿಸಲಿದೆ. ಅರ್ಜಿ ಸಲ್ಲಿಕೆ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನಿರಕ್ಷಿಸಿ…