ಪಿಎಂ ಸೂರ್ಯ ಘರ್ ಯೋಜನೆಯಡಿ (PM Surya Ghar Muft Bijli Yojana) ಮನೆಗೆ ಉಚಿತ ಸೋಲಾರ್ ವಿದ್ಯುತ್ (Solar Rooftop System) ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಜಾರಿಗೆ ಬಂದು ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 7,821 ಮನೆಗಳು ಸೋಲಾರ್ ವಿದ್ಯುತ್ ಪ್ರಯೋಜನ ಪಡೆದುಕೊಂಡಿವೆ.
ದೇಶದಲ್ಲಿ ಈವರೆಗೆ 10 ಲಕ್ಷ ಮನೆಗಳಿಗೆ ಸೋಲಾರ್ ಘಟಕ ಅಳವಡಿಸಲಾಗಿದೆ. ಕೇಂದ್ರ ಸರಕಾರ 2027ರೊಳಗೆ ಒಂದು ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ.
ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಪಡೆದ ಮನೆಗಳ ವಿವರ
ಸೂರ್ಯ ಘರ್ ಯೋಜನೆಯಡಿ ಸೋಲಾರ್ ವಿದ್ಯುತ್ ಪಡೆಯಲು ಕರ್ನಾಟಕದಲ್ಲಿ ಒಟ್ಟು 5.70 ಲಕ್ಷ+ ಜನ ನೋಂದಣಿ ಮಾಡಿಕೊಂಡಿದ್ದು; 1.90 ಲಕ್ಷ+ ಅರ್ಜಿಗಳು ಸಲ್ಲಿಕೆಯಾಗಿವೆ. ಎಸ್ಕಾಂವೈಸ್ ಅರ್ಜಿ ಸಲ್ಲಿಕೆ ವಿವರ ಈ ಕೆಳಗಿನಂತಿದೆ:
- ಬೆಸ್ಕಾಂ (BESCOM): 3,650
- ಹೆಸ್ಕಾಂ (HESCOM): 1,300
- ಸೆಸ್ಕಾಂ (GESCOM): 941
- ಜೆಸ್ಕಾಂ (JESCOM): 430
- ಮೆಸ್ಕಾಂ (MESCOM): 1,500+
ಸ್ವಂತ ಮನೆ, ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಮಳಿಗೆಗಳಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ.
Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ

ಭರ್ಜರಿ ಸಬ್ಸಿಡಿ (Subsidy) ಮತ್ತು ಸಾಲ ಸೌಲಭ್ಯ
ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಅಡಿಯಲ್ಲಿ ಬರೋಬ್ಬರಿ ಶೆ.60ರಷ್ಟು ಸಬ್ಸಿಡಿ ದೊರೆಯುತ್ತಿದೆ. ಘಟಕವಾರು ಸಬ್ಸಿಡಿ ವಿವರ ಈ ಕೆಳಗಿನಂತಿದೆ:
- 1-2 ಕಿ.ವ್ಯಾಟ್ ಘಟಕ: ₹30,000 ಸಬ್ಸಿಡಿ
- 2-3 ಕಿ.ವ್ಯಾಟ್ ಘಟಕ: ₹18,000 ಸಬ್ಸಿಡಿ
- 3 ಕಿ.ವ್ಯಾಟ್ ಮೇಲ್ಪಟ್ಟ ಘಟಕ: ₹78,000 ಸಬ್ಸಿಡಿ
ಸಾಲ ಸೌಲಭ್ಯದ (Loan Facility) ವಿವರ ನೋಡುವುದಾದರೆ, 12 ರಾಷ್ಟಿçÃಕೃತ ಬ್ಯಾಂಕುಗಳಿAದ ಸಾಲ ಸೌಲಭ್ಯವಿದ್ದು; ಕೇವಲ ಶೇ. 6.75 ಬಡ್ಡಿದರದಲ್ಲಿ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯವಿದೆ.
Auto Taxi Loan Subsidy- ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಸರ್ಕಾರದ ಸಬ್ಸಿಡಿ | ಈಗಲೇ ಅರ್ಜಿ ಹಾಕಿ
ಹೆಚ್ಚಿನ ವಿದ್ಯುತ್ ಮಾರಾಟ ಮಾಡಲು ಅವಕಾಶ
ಅಳವಡಿಸಿದ ಸೋಲಾರ್ ಘಟಕದಿಂದ ಮನೆ ಉಪಯೋಗಕ್ಕೆ ಬಳಸಿ ಹೆಚ್ಚುವರಿ ವಿದ್ಯುತ್‌ನ್ನು ಆಯಾ ಎಸ್ಕಾಂ ಸಂಸ್ಥೆಗೆ 25 ವರ್ಷಗಳ ಕಾಲ ಮಾರಾಟ ಮಾಡಬಹುದಾಗಿದೆ. ಸಬ್ಸಿಡಿ ಇಲ್ಲದ ಘಟಕದಿಂದ ಪ್ರತಿ ಯೂನಿಟ್‌ಗೆ ₹3.80 ದರ ನಿಗದಿಪಡಿಸಲಾಗಿದೆ.
ಇನ್ನು ಸಬ್ಸಿಡಿ ಪಡೆದ 1-2 ಕಿ.ವ್ಯಾಟ್ ಘಟಕಗಳಿಗೆ ಪ್ರತಿ ಯೂನಿಟ್‌ಗೆ ₹2.25, 2-3 ಕಿ.ವ್ಯಾಟ್ ಘಟಕಗಳಿಗೆ ಪ್ರತಿ ಯೂನಿಟ್‌ಗೆ ₹2.43 ಹಾಗೂ 3 ಕಿ.ವ್ಯಾಟ್ ಮೇಲ್ಪಟ್ಟ ಘಟಕಗಳಿಗೆ ಪ್ರತಿ ಯೂನಿಟ್‌ಗೆ ₹2.62 ದರ ನಿಗದಿಪಡಿಸಲಾಗಿದೆ.
ಗ್ರಾಹಕರಿಗೆ ಸಿಗುವ ಪ್ರಯೋಜನೆಗಳು
- ಸೋಲಾರ್ ಘಟಕ ಸ್ಥಾಪಿಸಿದ 5 ವರ್ಷದಲ್ಲಿ ಹಾಕಿದಬಂಡವಾಳ ವಾಪಾಸಾಗಲಿದೆ.
- ಮುಂದಿನ 20 ವರ್ಷಗಳಲ್ಲಿ ₹10 ರಿಂದ ₹15 ಲಕ್ಷ ಆದಾಯ ಗಳಿಸಬಹುದು.
- 40 ವರ್ಷಗಳ ವರೆಗೆ ಮನೆಗೆ ಪ್ರತೀ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಪಡೆಯಬಹುದು.
ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರಕಾರ, ಈ ಯೋಜನೆಯಿಂದ ದೇಶದ ಮನೆ ಮನೆಗೂ ವಿದ್ಯುತ್ ಸ್ವಾವಲಂಬನೆ ಸಿಗಲಿದ್ದು; ಆಸಕ್ತ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಸೂರ್ಯ ಘರ್ ಯೋಜನೆಯಡಿ ಅರ್ಜಿ ಸಲ್ಲಿಕೆ ಹೇಗೆ?
ತಮ್ಮ ಮನೆಗೆ ಸೋಲಾರ್ ಘಟಕ ಅಳವಡಿಸಿಕೊಳ್ಳಲು ಆಸಕ್ತಿ ಇರುವವರು ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ’ ವೆಬ್‌ಸೈಟ್’ನಲ್ಲಿ ನೇರವಾಗಿ ಮತ್ತು ಅಷ್ಟೇ ತ್ವರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲೇ ಹೇಳಿದಂತೆ pmsuryaghar.gov.inನಲ್ಲಿ ಈಗ ಐದೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದಕ್ಕಾಗಿ ಮೊದಲಿಗೆ pmsuryaghar.gov.in ವೆಬ್‌ಸೈಟ್‌ಗೆ ಭೆಟಿ ನೀಡಿ. ನಂತರ ಅಲ್ಲಿ Apply for Rooftop Solar ಕ್ಲಿಕ್ ಮಾಡಿ. ನಿಮ್ಮ ಡಿಸ್ಕಾಂ ಆಯ್ಕೆಮಾಡಿ. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿ. ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ