2026-27ನೇ ಸಾಲಿನ ನರೇಗಾ ಯೋಜನೆಯಡಿ ರೈತರು ಸರ್ಕಾರದಿಂದ 5 ಲಕ್ಷ ರೂ. ವರೆಗೂ ನೆರವು (MGNREGA Farmers Financial Assistance) ಪಡೆಯಲು ಅವಕಾಶ ನೀಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ನರೇಗಾ ಯೋಜನೆಯಡಿ ರೈತರು ವೈಯಕ್ತಿಕ ಕಾಮಗಾರಿಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ. 2026-27ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಯಲ್ಲಿ ಭಾಗವಹಿಸಿ ವೈಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೋರಿದೆ.
ಇದನ್ನೂ ಓದಿ: E-Swasthu Andolana- ಇ-ಸ್ವತ್ತು ಆಂದೋಲನ | ಗ್ರಾಮ ಪಂಚಾಯತಿ ವ್ಯಾಪ್ತಿಯ 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು
5 ಲಕ್ಷ ರೂ. ಆರ್ಥಿಕ ನೆರವು
ಹಳ್ಳಿಗಳಲ್ಲಿ ರೈತರು ತಮ್ಮದೇ ಹೊಲ, ತೋಟ, ಗದ್ದೆಗಳಲ್ಲಿ ಕೆಲಸ ಮಾಡಿ ಅನುದಾನ ಪಡೆಯಲು ನರೇಗಾ ಯೋಜನೆಯಡಿ 100 ದಿನಗಳ ಉದ್ಯೋಗ ಒದಗಿಸಲಾಗುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಪ್ರತೀ ಕುಟುಂಬಕ್ಕೆ 150 ದಿನ ಉದ್ಯೋಗ ಖಾತ್ರಿ ನೀಡಲಾಗುತ್ತದೆ.
ಈ ಅವಕಾಶ ಬಳಸಿಕೊಂಡು ರೈತರು ತೋಟಗಾರಿಕೆ, ರೇಷ್ಮೆ, ಜಾನುವಾರು ಶೆಡ್ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿಕೊಳ್ಳಲು ತಲಾ ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿ ವರೆಗೆ ‘ನೆರವು’ ಪಡೆಯಬಹುದಾಗಿದೆ.
ಯಾರಿಗೆಲ್ಲ ಸಿಗಲಿದೆ ಈ ನೆರವು?
ನರೇಗಾ ಯೋಜನೆಯಡಿ ಗ್ರಾಮದ ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ, ಕೆರೆ-ಕಟ್ಟೆ ನಿರ್ಮಾಣ, ಗುಂಡುತೋಪು ನಿರ್ಮಾಣದಂತಹ ಸಮುದಾಯ ಕಾರ್ಯಗಳಿಗೆ ಈ ಅನುದಾನ ಪಡೆಯಬಹುದು. ಜೊತೆಗೆ ತಮ್ಮದೇ ಹೊಲ, ತೋಟ, ಕೊಟ್ಟಿಗೆ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿಗಳಿಗೂ ಆರ್ಥಿಕ ನೆರವು ಸಿಗುತ್ತದೆ.
ಸಣ್ಣ ಮತ್ತು ಅತೀ ಸಣ್ಣ ರೈತರು, ಎಸ್‌ಸಿ/ಎಸ್‌ಟಿ ಸಮುದಾಯದವರು, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ಅಂಗವಿಕಲ ಸದಸ್ಯರುಳ್ಳ ಕುಟುಂಬಗಳು, ವಸತಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಗ್ರಾಮೀಣ ಭಾಗದ ಫಲಾನುಭವಿಗಳು ವೈಯಕ್ತಿಕ ಕಾಮಗಾರಿಗಳಿಗೆ ಆರ್ಥಿಕ ನೆರವು ಪಡೆಯಬಹುದಾಗಿದೆ.
ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…
ಯಾವ್ಯಾವ ಕಾಮಗಾರಿಗೆ ಸಹಾಯಧನ?
ರೈತರು ತಮ್ಮದೇ ಸ್ವಂತ ಜಮೀನುಗಳಲ್ಲಿ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ತೆರೆದ ಬಾವಿ, ಕೋಳಿ ಶೆಡ್, ಆಡು/ಕುರಿ ಶೆಡ್, ಹಂದಿ ಶೆಡ್ ಕುರಿ/ಮೇಕೆ ಕೊಟ್ಟಿಗೆ ನಿರ್ಮಾಣಕ್ಕೆ ನೆರವು ಪಡೆಯಲು ಅವಕಾಶವಿದೆ.
ಬಚ್ಚಲು ಗುಂಡಿ, ಮೀನು ಕೃಷಿ ಕೊಳ, ಕಂದಕ ಬದು ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ, ತೆರೆದ ಬಾವಿ, ಅಜೋಲಾ ಘಟಕ, ಎರೆಹುಳು ಗೊಬ್ಬರ ತೊಟ್ಟಿ, ಇಂಗು ಗುಂಡಿ ನಿರ್ಮಾಣ, ಕೃಷಿ ಅರಣ್ಯ, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿಗೂ ಸಹಾಯಧನ ಸಿಗುತ್ತದೆ.

ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ?
- ಕುರಿ/ಮೇಕೆ ಕೊಟ್ಟಿಗೆ: ₹70,000
- ಬಚ್ಚಲು ಗುಂಡಿ: ₹14,000
- ದನದ ಕೊಟ್ಟಿಗೆ (4 ದನಗಳಿಗೆ): ₹57,000
- ಕೋಳಿ ಶೇಡ್: ₹62,000
- ಮೀನು ಕೃಷಿ ಕೊಳ: ₹1 ಲಕ್ಷ
- ಕಂದಕ ಬದು ನಿರ್ಮಾಣ: ₹35,000
- ಹಂದಿ ಕೊಟ್ಟಿಗೆ ನಿರ್ಮಾಣ: ₹87,000
- ಕೊಳವೆ ಬಾವಿ ಮರುಪೂರಣ ಘಟಕ: ₹27,000
- ಎರೆಹುಳು ಘಟಕ: ₹27,000
- ತೆರೆದ ಬಾವಿ: ₹1.50 ಲಕ್ಷ
- ಅಜೋಲಾ ಘಟಕ: ₹17,000
- ಕೃಷಿ ಹೊಂಡ: ₹77,000
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ತೋಟಗಾರಿಕೆ ಬೆಳೆಗಳಿಗೆ ಸಿಗುವ ನೆರವು
- ಅಡಿಕೆ: ₹1,68,000
- ತೆಂಗು: ₹66,000
- ಗೇರು: ₹63,000
- ಮಾವು/ಸಪೋಟ: ₹56,000
- ದಾಳಿಂಬೆ: ₹69,000
- ಸೀಬೆ: ₹1,31,000
- ತಾಳೆ: ₹34,000
- ಚಕ್ಕೆ ದಾಲ್ಚಿನ್ನಿ: ₹1,74,000
- ಲವಂಗ: ₹50,000
- ಕಾಳುಮೆಣಸು: ₹1,09,000
- ನಿಂಬೆ/ಮೊಸಂಬಿ/ಕಿತ್ತಳೆ: ₹49,000
- ಹುಣಸೆ: ₹1,18,000
- ನೇರಳೆ: ₹54,000
- ಸೀತಾಫಲ: ₹58,000
- ಬಾರೆ: ₹48,000
- ನುಗ್ಗೆ: ₹70,000
- ನೆಲ್ಲಿ: ₹1,69,000
- ಅಂಜೂರ: ₹88,000
- ಹಲಸು: ₹54,000
- ದ್ರಾಕ್ಷಿ: ₹4,72,000
- ವೀಳೆದೆಲೆ (ಅರ್ಧ ಎಕರೆಗೆ): ₹28,000
- ಕರೀಬೇವು (ಅರ್ಧ ಎಕರೆಗೆ): ₹60,000
- ಕಾಫಿ: ₹1,68,000
- ಬೆಣ್ಣೆ ಹಣ್ಣು: ₹51,000
- ಅಪ್ಪೇಮಿಡಿ ಮಾವು: ₹94,000
- ಜಾಯಿಕಾಯಿ: ₹25,000
- ಹಿಪ್ಪು ನೇರಳೆ ನರ್ಸರಿ ಅಭಿವೃದ್ದಿ: ₹1,28,000
- ಡ್ರಾಗನ್ ಪ್ರೋಟ್ಸ್: ₹1,54,000
ಈ ನರೇಗಾ ನೆರವು ಪಡೆಯುವುದು ಹೇಗೆ?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಉದ್ಯೋಗ ಚೀಟಿ ಅಥವಾ ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಜಾಬ್ ಕಾರ್ಡ್ ಪಡೆಯಬಹುದು.
ಜಾಬ್ ಕಾರ್ಡ್ ಪಡೆದ ನಂತರ ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಬೇಕು ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರಮೊಬೈಲ್ ಅಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಕಳೆದ ಅಕ್ಟೋಬರ್ 02 ರಿಂದ ಇದೇ ನವೆಂಬರ್ 30ರ ವರೆಗೆ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಸಭೆ’ಗಳು ನಡೆಯುತ್ತಿದ್ದು; ಮರೆಯದೇ ಈ ಗ್ರಾಮ ಸಭೆಗಳಲ್ಲಿ ಭಾಗಿಯಾಗಿ ನರೇಗಾ ಅನುದಾನ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
- ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ: 8277506000
- ನರೇಗಾ ವೈಯಕ್ತಿಕ ಕಾಮಗಾರಿಗಳು ಕುರಿತ ಸರ್ಕಾದ ಆದೇಶ ಪ್ರತಿ : Download

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.