Govt SchemesNews

E-Swasthu Andolana- ಇ-ಸ್ವತ್ತು ಆಂದೋಲನ | ಗ್ರಾಮ ಪಂಚಾಯತಿ ವ್ಯಾಪ್ತಿಯ 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು

E-Swasthu Andolana

Spread the love

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ಇ-ಸ್ವತ್ತು (E-Swasthu Andolana) ಪ್ರಕ್ರಿಯೆಯನ್ನು ಸರಳಗೊಳಿಸಿದ್ದು; ರಾಜ್ಯದ ಒಂದು ಕೋಟಿ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲು ನಿರ್ಧರಿಸಿದೆ.

WhatsApp Group Join Now
Telegram Group Join Now

ಇದು ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು; ಸದರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಸಿಇಓ ಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Agniveer Army Rally Ballari 2025- ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ರ‍್ಯಾಲಿ ನೇಮಕಾತಿ | ರಾಜ್ಯ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಪಿಡಿಓ ಗಳಿಗೆ ವಿಶೇಷ ತರಬೇತಿ

ಗ್ರಾಮೀಣ ಪ್ರದೇಶದ ಅಕ್ರಮ ಆಸ್ತಿಗಳಿಗೂ ಇ-ಸ್ವತ್ತು ನೀಡುವ ಮೂಲಕ ಎಲ್ಲಾ ಆಸ್ತಿಗಳನ್ನು ಅಕ್ರಮಗೊಳಿಸುವ ಮೂಲಕ ಸಂಪನ್ಮೂಲ ಕ್ರೂಢೀಕರಿಸುವುದು ಸರ್ಕಾರದ ಗುರಿಯಾಗಿದೆ. ಈ ಸಂಬಂಧ ಈಚೆಗೆ ಸರ್ಕಾರ ‘ರಾಜ್ಯಪತ್ರ’ ಹೊರಡಿಸಿದ್ದು; ಈ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಇ-ಸ್ವತ್ತು ಸಮರ್ಪಕ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ.

ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿರುವ ನಿಯಮಾವಳಿಗಳ ಪ್ರಕಾರ ಇ-ಸ್ವತ್ತು ವಿತರಣೆ ಮಾಡಬೇಕಿದೆ. ಸದರಿ ನಿಯಮಾವಳಿಗಳನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಮನನ ಮಾಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ವ್ಯವಸ್ಥೆ ಮಾಡಲು ಜಿ.ಪಂ ಸಿಇಓಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ಇ-ಸ್ವತ್ತು ಪ್ರಕ್ರಿಯೆಯನ್ನು ಸರಳಗೊಳಿಸಿದ್ದು; 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲು ನಿರ್ಧರಿಸಿದೆ...
E-Swasthu Andolana
15 ದಿನಗಳಲ್ಲೇ ಇ-ಸ್ವತ್ತು ವಿತರಣೆ

ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ಅಂದರೆ ಅಜೀ ಸಲ್ಲಿಸಿದ 15 ದಿನದಲ್ಲೇ ಪ್ರಮಾಣ ಪತ್ರ ವಿತರಣೆ ಆಗಲಿದೆ.

ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karnataka Early Winter- ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಈ ಬಾರಿ ರಣ ಭಯಂಕರ ಚಳಿ | ಹವಾಮಾನ ಇಲಾಖೆ ಎಚ್ಚರಿಕೆ

ಯಾವೆಲ್ಲ ಆಸ್ತಿಗಳಿಗೆ ಇ-ಸ್ವತ್ತು (ಬಿ-ಖಾತಾ) ಸಿಗಲಿದೆ?

ಮೊದಲೇ ಹೇಳಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳಿಗೂ ಇ-ಸ್ವತ್ತು ಸೃಜಿಸಲಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ಸಂಸ್ಥೆಗೆ ಸೇರಿದ ಭೂಮಿಗಳಿಗೆ ಇ-ಸ್ವತ್ತು (ಬಿ-ಖಾತಾ) ಸಿಗುವುದಿಲ್ಲ

ಜೊತೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (ತಿದ್ದುಪಡಿ) ಜಾರಿಯಾದ ನಂತರ ಅಭಿವೃದ್ಧಿಯಾದ ಯಾವುದೇ ಹೊಸ ಸ್ವತ್ತಿಗೆ ‘ಬಿ-ಖಾತಾ ನೀಡಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ: Gramathana Map Information- ನಿಮ್ಮೂರಿನ ನಕ್ಷೆ ನಿಮಗೆ ಗೊತ್ತಾ? | ಪ್ರತಿಯೊಬ್ಬರೂ ಅರಿತಿರಬೇಕಾದ ಗ್ರಾಮಠಾಣಾ ನಕ್ಷೆ ಮಾಹಿತಿ ಇಲ್ಲಿದೆ…

ಬೇಕಾಗುವ ದಾಖಲೆಗಳು
  • ಭೂ ನೋಂದಣಿ ಪ್ರಮಾಣ ಪತ್ರ
  • ಭೂ ಮಂಜೂರಾತಿ ಆದೇಶ
  • ಕರೆಂಟ್ ಬಿಲ್, ಋಣಭಾರ ಪ್ರಮಾಣ ಪತ್ರ (ಇಸಿ)
  • ಏಪ್ರಿಲ್ 2025ಕ್ಕಿಂತಲೂ ಹಿಂದಿನ ತೆರಿಗೆ ಪಾವತಿ ರಸೀದಿ
  • ಭೂ ಪರಿವರ್ತನೆ ಆದೇಶ (ಇದ್ದರೆ ಮಾತ್ರ)
  • ಬಡಾವಣೆ ಅನುಮೋದಿತ ವಿನ್ಯಾಸ (ಇದ್ದರೆ ಮಾತ್ರ)
  • ನೋಂದಾಯಿತ ಪರಿತ್ಯಾಜನಾ ಪತ್ರ

Karnataka Chaff Cutter Machine Subsidy- ಮೇವು ಕತ್ತರಿಸುವ ಯಂತ್ರ ಖರೀದಿಗೆ 27,844 ರೂ. ಸಹಾಯಧನ | ಹೀಗೆ ಅರ್ಜಿ ಹಾಕಿ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!