JobsNews

Agniveer Army Rally Ballari 2025- ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ರ‍್ಯಾಲಿ ನೇಮಕಾತಿ | ರಾಜ್ಯ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

Agniveer Army Rally Ballari 2025

Spread the love

ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 13 ರಿಂದ 18ರ ವರೆಗೆ ಅಗ್ನಿವೀರ್ ನೇಮಕಾತಿ ರ‍್ಯಾಲಿ (Agniveer Army Rally Ballari 2025) ಆಯೋಜಿಸಲಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಬೆಂಗಳೂರಿನ ಸೇನಾ ಪ್ರಧಾನ ಕಚೇರಿ ನೇಮಕಾತಿ ವಲಯದಿಂದ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ರ‍್ಯಾಲಿ ನಡೆಯಲಿದೆ. ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶವಿದೆ.

ರಾಜ್ಯದ ಅಗ್ನಿವೀರ್ ವಿಭಾಗಗಳ ಅರ್ಜಿದಾರರು ಕಳೆದ ಜೂನ್ 30ರಿಂದ ಜುಲೈ 10ರ ವರೆಗೆ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗಾಗಿ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ವಿವೇಕ್ ಜಮೀನ್ದಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Railway JE Recruitment 2025- ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವಿ, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ

ಹುದ್ದೆಗಳ ವಿವರ

10ನೇ ತರಗತಿ ಪಾಸಾದವರಿಗಾಗಿ ಅಗ್ನಿವೀರ್- ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ 8ನೇ ತರಗತಿ ಪಾಸಾದವರಿಗಾಗಿ ಅಗ್ನಿವೀರ್ ಟ್ರೇಡ್ಸ್ ಮನ್ ಹುದ್ದೆಗಳಿಗೆ ಈ ಸೇನಾ ರ‍್ಯಾಲಿ ನಡೆಯಲಿದೆ.

ಯಾವ್ಯಾವ ಜಿಲ್ಲೆ ಅಭ್ಯರ್ಥಿಗಳಿಗೆ ಅವಕಾಶ?

ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ರಾಜ್ಯದ ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

ಇದನ್ನೂ ಓದಿ: KSSIDC Recruitment 2025- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನೇಮಕಾತಿ | ಪಿಯುಸಿ, ಪದವೀಧರರಿಂದ ಅರ್ಜಿ ಆಹ್ವಾನ

ಈ ಜಿಲ್ಲೆಯವರಿಗೆ ಪ್ರತ್ಯೇಕ ಏರ್ಪಾಡು

ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರತ್ಯೇಕ ರ‍್ಯಾಲಿಯನ್ನು ನಡೆಸಲಾಗುತ್ತದೆ.

ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ನೇಮಕಾತಿ ರ‍್ಯಾಲಿಯ ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಆಯ್ಕೆಗೆ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳ ಕಾರ್ಯಕ್ಷಮತೆ, ನೇಮಕಾತಿ ರ‍್ಯಾಲಿಯ ಸಮಯದಲ್ಲಿ ನಡೆಸಿದ ಶಾರೀರಿಕ, ವೈದ್ಯಕೀಯ ಪರೀಕ್ಷೆಗಳು ಮತ್ತು ಅಂತಿಮ ಅರ್ಹತೆಯೇ ಮಾನದಂಡವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: Anganwadi Recruitment 2025- 843 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ಮಹಿಳೆಯರಿಗೆ ಅವಕಾಶ

ಹೊಸ ಪ್ರವೇಶಪತ್ರ ಪರಿಗಣಿಸಿ

ಸೇನಾ ನೇಮಕಾತಿಯ ಆನ್‌ಲೈನ್ ವೆಬ್‌ಸೈಟ್ joinindianarmy.nic.inನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ವೀಕ್ಷಿಸಬಹುದು. ಜತೆಗೆ, ರ‍್ಯಾಲಿಗಾಗಿ ಪ್ರವೇಶಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ನವೆಂಬರ್ 5 ಹೊಸ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರವೇಶಪತ್ರಗಳನ್ನು ಅವರ ಇ-ಮೇಲ್‌ಗೆ ರವಾನಿಸಲಾಗಿದೆ.

ರ‍್ಯಾಲಿ ಬಗ್ಗೆ ಈ ಹಿಂದೆ ನೀಡಲಾಗಿದ್ದ ವಿವರಗಳನ್ನು ಹಿಂಪಡೆಯಲಾಗಿದ್ದು, ಅಭ್ಯರ್ಥಿಗಳು ಈಗಿನ ಮಾಹಿತಿಯನ್ನೇ ಅಧಿಕೃತವಾಗಿ ಪರಿಗಣಿಸಲು ಮನವಿ ಮಾಡಲಾಗಿದೆ. ಹೊಸ ಪ್ರವೇಶಪತ್ರದಲ್ಲಿ ನೀಡಲಾಗಿರುವ ನಿರ್ದಿಷ್ಟ ದಿನಾಂಕಗಳಂದು ನಡೆಯುವ ರ‍್ಯಾಲಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಬೆಂಗಳೂರು ಪ್ರಧಾನ ಕಚೇರಿಯ ನೇಮಕಾತಿ ಅಧಿಕಾರಿಗಳ ಕಚೇರಿಯ ದೂರವಾಣಿ 080-29516517 ಮತ್ತು ಮೊ: 9596605198 ಸಂಪರ್ಕಿಸಬಹುದು.

PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!