ಶಾಲಾ ಮಕ್ಕಳ ಕಲಿಕೆ ಸುಧಾರಿಸುವ ಮೂಲಕ ಫಲಿತಾಂಶ ಪ್ರಮಾಣ ಹೆಚ್ಚಿಸುವ ಹಿನ್ನಲೆಯಲ್ಲಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education & Literacy) 2025-26ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಯಮವನ್ನು ಸಂಪೂರ್ಣ ಬದಲಿಸಲು ನಿರ್ಧರಿಸಿದೆ.
ಈಗಾಗಲೇ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ (Webcasting system) ಜಾರಿಯಲ್ಲಿದೆ. ಇದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿಯುತ್ತಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿರುವುದನ್ನು ಪತ್ತೆ ಹಚ್ಚಲು ನಡೆಸಲಾದ ಹಲವು ಸಮೀಕ್ಷೆಗಳೂ ಇದನ್ನು ದೃಢಪಡಿಸಿವೆ.
ಈ ಹಿನ್ನಲೆಯಲ್ಲಿ ಪ್ರಾಥಮಿಕ ಹಂತದಿ೦ದಲೇ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ನೈಪುಣ್ಯತೆ ಹೆಚ್ಚಿಸಲು ಪಾಠ ಅಧಾರಿತ ಮೌಲ್ಯಮಾಪನ (Lesson-Based Assessment – LBA) ಪದ್ಧತಿಯನ್ನು ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದೆ.
Karnataka 2nd PUC Result 2025- ದ್ವಿತೀಯ ಪಿಯುಸಿ ಫಲಿತಾಂಶ 2025 | ಮಹತ್ವದ ಮಾಹಿತಿ ಇಲ್ಲಿದೆ…
ಹೊಸ ಪರೀಕ್ಷಾ ನಿಯಮಗಳು ಹೇಗಿರಲಿವೆ?
ಸದ್ಯಕ್ಕೆ ಶಾಲಾ ಮಕ್ಕಳಿಗೆ ನಾಲ್ಕು ಕಿರು ಪರೀಕ್ಷೆಗಳು, ಎರಡು ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಪದ್ಧತಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸೂಕ್ತವಾಗಿ ಗುರುತಿಸಲು ವಿಫಲವಾಗಿರುವುದರಿಂದ ಹೊಸ ಮಾರ್ಗದರ್ಶನ ರೂಪಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ ಪ್ರತಿ ಪಾಠದ ನಂತರ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಸಣ್ಣ ಪ್ರಶ್ನೆಗಳು, ಬಿಟ್ಟ ಸ್ಥಳ ತುಂಬಿಸುವ ಪ್ರಶ್ನೆಗಳು, ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳು ಹಾಗೂ ಬಹು ಆಯ್ಕೆಯ ಪ್ರಶ್ನೆಗಳು (Multiple Choice Question- MCQ) ಸೇರಲಿವೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಪರೀಕ್ಷೆಯ ನಂತರ, ಉತ್ತರ ಪತ್ರಿಕೆಗಳನ್ನು ಮೊಬೈಲ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿದರೆ ತಕ್ಷಣವೇ ಮೌಲ್ಯಮಾಪನ ನಡೆದು ಕೂಡಲೇ ಅಂಕಗಳನ್ನು ಪ್ರದರ್ಶಿಸಲಾಗುವುದು.
Karnataka SSLC Result 2025- ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ: ಪ್ರಮುಖ ಮಾಹಿತಿ ಇಲ್ಲಿದೆ…
ಈ ಹೊಸ ಪದ್ಧತಿಯ ಪ್ರಯೋಜನಗಳು
ವಿದ್ಯಾರ್ಥಿಗಳು ಪಾಠವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ತಕ್ಷಣವೇ ತಮ್ಮ ದೋಷಗಳನ್ನು ಪರಿಹರಿಸಿ, ಸರಿಯಾದ ಮಾರ್ಗದಲ್ಲಿ ಕಲಿಯಲು ಈ ಪದ್ಧತಿ ಸಹಾಯ ಮಾಡುತ್ತದೆ.
ಈ ಹೊಸ ಪರೀಕ್ಷಾ ನಿಯಮಗಳಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದೇ? ಅಥವಾ ಇದು ಅವರ ಕಲಿಕೆಗೆ ಸಹಾಯಕರಾಗುವುದೇ? ಎಂಬುದು ಮುಂದಿನ ವರ್ಷಗಳ ಅನುಭವದಿಂದ ತಿಳಿಯಲಿದೆ. ಆದರೆ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಈ ಕ್ರಮ ಉಪಯುಕ್ತವಾಗಲಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.