Karnataka Chaff Cutter Machine Subsidy- ಮೇವು ಕತ್ತರಿಸುವ ಯಂತ್ರ ಖರೀದಿಗೆ 27,844 ರೂ. ಸಹಾಯಧನ | ಹೀಗೆ ಅರ್ಜಿ ಹಾಕಿ…

Spread the love

WhatsApp Group Join Now
Telegram Group Join Now

ರೈತರು ಮತ್ತು ಹೈನುಗಾರರು ಮೇವು ಕತ್ತರಿಸುವ ಯಂತ್ರವನ್ನು (Karnataka Chaff Cutter Machine Subsidy) ಕೃಷಿ ಮತ್ತು ಪಶುಸಂಗೋಪನೆ ಇಲಾಖೆಯಿಂದ ಸರ್ಕಾರದ ಸಹಾಯಧನದಲ್ಲಿ ಖರೀದಿ ಮಾಡಬಹುದಾಗಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…

ಆಧುನಿಕ ಜಗತ್ತಿನಲ್ಲಿ ಎಲ್ಲವೂ ಆಧುನೀಕರಣ, ಯಾಂತ್ರೀಕರಣವಾಗುತ್ತಿದ್ದು; ಅದಕ್ಕೆ ತಕ್ಕಂತೆ ಕೃಷಿ, ಪಶುಪಾಲನೆ ಕ್ಷೇತ್ರ ಕೂಡ ಅಪ್ಡೇಟ್ ಆಗುತ್ತಿದೆ. ಮೊದಲಿನ ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುತ್ತಿದ್ದು ಬಹುತೇಕ ವೈಜ್ಞಾನಿಕ ವಿಧಿ-ವಿಧಾನಗಳು ಚಾಲ್ತಿಗೆ ಬರುತ್ತಿವೆ.

ಈ ನಿಟ್ಟಿನಲ್ಲಿ ಹೈನುಗಾರಿಕೆ ವಲಯದಲ್ಲಿ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರದAತಹ ಹೊಸ ವಿಧಾನಗಳು ಬಳಕೆಯಲ್ಲಿದ್ದು; ಸರ್ಕಾರ ಈ ಯಂತ್ರಗಳ ಖರೀದಿಗೆ ಸಹಾಯಧನ (Subsidy) ನೀಡುವ ಮೂಲಕ ರೈತರು ಮತ್ತು ಹೈನುಗಾರರನ್ನು ಪ್ರೋತ್ಸಾಹಿಸುತ್ತಿದೆ.

ಇದನ್ನೂ ಓದಿ: Agniveer Army Rally Ballari 2025- ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ರ‍್ಯಾಲಿ ನೇಮಕಾತಿ | ರಾಜ್ಯ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ 

ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ

ಪ್ರತಿ ವರ್ಷ ಸಹಾಯಧನ ಲಭ್ಯತೆಯ ಆಧಾರದ ಮೇಲೆ ರಾಜ್ಯದ ಆಯಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಕೃಷಿ ಮತ್ತು ಪಶುಸಂಗೋಪನೆ ಇಲಾಖೆಯಿಂದ ಮೇವು ಕತ್ತರಿಸುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ. ವಿಶೇಷ ಯೋಜನೆಯಡಿ ಕೆಲವೊಮ್ಮೆ ಈ ಯಂತ್ರವನ್ನು ಉಚಿತವಾಗಿಯೂ ವಿತರಣೆ ಮಾಡುವುದುಂಟು.

‘ಕೃಷಿ ಯಾಂತ್ರೀಕರಣ/ Farm Mechanization’ ಯೋಜನೆ ಅಡಿಯಲ್ಲಿ ರೈತರು ಮೇವು ಕತ್ತರಿಸುವ ಯಂತ್ರಕ್ಕೆ (Chaff Cutter) ಸಹಾಯಧನ ಸಿಗಲಿದ್ದು; ಈ ಸಬ್ಸಿಡಿ ಪಡೆಯಲು ಅರ್ಹತೆಗಳೇನು? ವರ್ಗವಾರು ಲಭ್ಯವಿರುವ ಸಬ್ಸಿಡಿ ಎಷ್ಟು? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ತಮ್ಮ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರುವ ರೈತರು ಈ ಸಬ್ಸಿಡಿ ಪಡೆಯಲು ಅರ್ಹರಾಗಿದ್ದು; ಕಳೆದ ಏಳು ವರ್ಷಗಳಲ್ಲಿ ‘ಕೃಷಿ ಯಾಂತ್ರೀಕರಣ’ ಯೋಜನೆಯಡಿ ಈ ಯಂತ್ರವನ್ನು ಸಬ್ಸಿಡಿಯಲ್ಲಿ ಪಡೆದಿರಬಾರದು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ವಿಶೇಷವೆಂದರೆ ಕೃಷಿ ಯಾಂತ್ರೀಕರಣ ಯೊಜನೆಯಡಿ ಮೇವು ಕತ್ತರಿಸುವ ಯಂತ್ರ ಪಡೆಯಲು ಹೈನುಗಾರಿಕೆ ಮಾಡುವ ರೈತರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Karnataka Early Winter- ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಈ ಬಾರಿ ರಣ ಭಯಂಕರ ಚಳಿ | ಹವಾಮಾನ ಇಲಾಖೆ ಎಚ್ಚರಿಕೆ

ಮೇವು ಕತ್ತರಿಸುವ ಯಂತ್ರವನ್ನು ಕೃಷಿ ಮತ್ತು ಪಶುಸಂಗೋಪನೆ ಇಲಾಖೆಯಿಂದ ಸರ್ಕಾರದ ಸಹಾಯಧನದಲ್ಲಿ ಖರೀದಿ ಮಾಡಬಹುದಾಗಿದ್ದು; ಈ ಕುರಿತ ಮಾಹಿತಿ ಇಲ್ಲಿದೆ...
Karnataka Chaff Cutter Machine Subsidy
3 ಎಚ್.ಪಿ ಮೇವು ಕತ್ತರಿಸುವ ಯಂತ್ರದ ಸಬ್ಸಿಡಿ ವಿವರ

3 ಎಚ್.ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರವನ್ನು (Chaff Cutter) ಪಡೆಯಲು ಸಾಮಾನ್ಯ ವರ್ಗದ ರೈತರಿಗೆ ಹಾಗೂ ಎಸ್‌ಸಿ/ಎಸ್‌ಟಿ ವರ್ಗದ ರೈತರಿಗೆ ಸಹಾಯಧನ ಬೇರೆ ಬೇರೆಯಾಗಿದೆ. ಯಂತ್ರದ ಒಟ್ಟು ಬೆಲೆ, ಸಹಾಯಧನ ಹಾಗೂ ರೈತರ ವಂತಿಗೆಯ ವಿವರ ಹೀಗಿದೆ:

ಪ.ಜಾತಿ/ ಪ.ಪಂಗಡ ವರ್ಗದ ರೈತರಿಗೆ

  • ಯಂತ್ರದ ಒಟ್ಟು ಬೆಲೆ: 49,594
  • ಸಹಾಯಧನ (ಸಬ್ಸಿಡಿ): 27,844
  • ರೈತರ ವಂತಿಕೆ: 21,750/-

ಸಾಮಾನ್ಯ ವರ್ಗದ ರೈತರಿಗೆ

  • ಯಂತ್ರದ ಒಟ್ಟು ಬೆಲೆ: 49,594
  • ಸಹಾಯಧನ (ಸಬ್ಸಿಡಿ): 15,469
  • ರೈತರ ವಂತಿಕೆ: 34,125

ಗಮನಾರ್ಹವೆಂದರೆ ಆಯಾ ಕಂಪನಿ ಮತ್ತು ಯಂತ್ರದ ಮಾಡೆಲ್ ಆಧಾರದ ಮೇಲೆ ಬೆಲೆ ಮತ್ತು ಸಬ್ಸಿಡಿ ನಿಗದಿಪಡಿಸಲಾಗುತ್ತದೆ. ಆಯಾ ಜಿಲ್ಲೆ, ತಾಲೂಕುಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಈ ಸಹಾಯಧನವನ್ನು ನೀಡಲಾಗುತ್ತದೆ.

WhatsApp Group Join Now
Telegram Group Join Now

ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಹೇಗೆ ಅರ್ಜಿ ಸಲ್ಲಿಸಬೇಕು?

ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ ಪಡೆಯಲು ಆಸಕ್ತ ರೈತರು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಥವಾ ಕರ್ನಾಟಕ ಸರ್ಕಾರದ ‘ಕೆ-ಕಿಸಾನ್’ ವೆಬ್‌ಸೈಟ್ ಮೂಲಕವೂ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದ್ದು; ಈ ಲೇಖನದ ಕೊನೆಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಲಿಂಕ್ ನೀಡಲಾಗಿದೆ. ಜೊತೆಗೆ ಅರ್ಜಿ ಸಲ್ಲಿಸುವ ವಿಧಾನ ಕುರಿತ ಪಿಡಿಎಫ್ ಕೈಪಿಡಿ ಲಿಂಕ್ ಕೂಡ ನೀಡಲಾಗಿದೆ ಗಮನಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ
  • ಅರ್ಜಿದಾರರ ಪೋಟೋ
  • ಬಾಂಡ್ ಪೇಪರ್
  • ರೇಶನ್ ಕಾರ್ಡ್
  • ಮೊಬೈಲ್ ನಂಬರ್

ಅರ್ಜಿ ಲಿಂಕ್: Apply Now
ಅರ್ಜಿ ಸಲ್ಲಿ ವಿಧಾನದ ಕೈಪಿಡಿ: Download

Gramathana Map Information- ನಿಮ್ಮೂರಿನ ನಕ್ಷೆ ನಿಮಗೆ ಗೊತ್ತಾ? | ಪ್ರತಿಯೊಬ್ಬರೂ ಅರಿತಿರಬೇಕಾದ ಗ್ರಾಮಠಾಣಾ ನಕ್ಷೆ ಮಾಹಿತಿ ಇಲ್ಲಿದೆ…


Spread the love
error: Content is protected !!