Karnataka Agriculture Department Jobs: 945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ತಿಂಗಳಿಗೆ ₹1.34 ಲಕ್ಷದವರೆಗೆ ಸಂಬಳ

Spread the love

WhatsApp Group Join Now
Telegram Group Join Now

Karnataka Agriculture Department Jobs: ಕರ್ನಾಟಕ ಕೃಷಿ ಇಲಾಖೆಯಲ್ಲಿ 945 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕೆಇಎ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ…

ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 945 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA – Karnataka Examinations Authority) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಮೇ 30, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ವಿಸ್ತಾರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Ballari DCC Bank Nemakati 2026: ಡಿಸಿಸಿ ಬ್ಯಾಂಕ್ ನೇರ ನೇಮಕಾತಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಭರ್ಜರಿ ಅವಕಾಶ!

ಹುದ್ದೆಗಳ ವಿವರಗಳು (Vacancy Details)

ಈ ನೇಮಕಾತಿ ಅಡಿಯಲ್ಲಿ ಕೃಷಿ ಅಧಿಕಾರಿ (AO – Agricultural Officer) ಮತ್ತು ಸಹಾಯಕ ಕೃಷಿ ಅಧಿಕಾರಿ (AAO – Assistant Agricultural Officer) ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದದ (RPC – Residual Parent Cadre) ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ.

ಕೃಷಿ ಅಧಿಕಾರಿ (AO)

  • ಕಲ್ಯಾಣ ಕರ್ನಾಟಕ (KK): 42 ಹುದ್ದೆಗಳು
  • ಉಳಿಕೆ ವೃಂದ (RPC): 86 ಹುದ್ದೆಗಳು
  • ಒಟ್ಟು: 128 ಹುದ್ದೆಗಳು

ಇದನ್ನೂ ಓದಿ: Revive Failed Dry Borewell: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಫೇಲ್ ಆಗಿದೆಯೇ? ಇಲ್ಲಿದೆ ಮರುಜೀವ ನೀಡುವ ಸೂತ್ರ!

ಸಹಾಯಕ ಕೃಷಿ ಅಧಿಕಾರಿ (AAO)

  • ಕಲ್ಯಾಣ ಕರ್ನಾಟಕ (KK) 231 ಹುದ್ದೆಗಳು
  • ಉಳಿಕೆ ವೃಂದ (RPC) 586 ಹುದ್ದೆಗಳು
  • ಒಟ್ಟು: 817 ಹುದ್ದೆಗಳು

ತಿಂಗಳಿಗೆ ₹1.34 ಲಕ್ಷದವರೆಗೆ ಸಂಬಳ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ಶ್ರೇಣಿಯ ಅನುಸಾರ ತಿಂಗಳಿಗೆ ₹69,250 ರಿಂದ ₹1,34,200ರವರೆಗೆ ಸಂಬಳ ದೊರೆಯಲಿದೆ. ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ವಿವಿಧ ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಇತರ ಸವಲತ್ತುಗಳೂ ಲಭ್ಯವಾಗಲಿವೆ.

ಸರ್ಕಾರಿ ಉದ್ಯೋಗದ ಭದ್ರತೆಯೊಂದಿಗೆ ಉತ್ತಮ ಆದಾಯವೂ ದೊರೆಯುವ ಕಾರಣ ಈ ಹುದ್ದೆಗಳು ಸಾಕಷ್ಟು ಆಕರ್ಷಕವಾಗಿವೆ.

ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ

ಅರ್ಹತಾ ಮಾನದಂಡಗಳು (Eligibility Criteria)

ಶೈಕ್ಷಣಿಕ ಅರ್ಹತೆ: ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು ಬಿಎಸ್ಸಿ ಕೃಷಿ (B.Sc Agriculture), ಬಿಇ / ಬಿಟೆಕ್ (B.E / B.Tech) ತೇರ್ಗಡೆಯಾಗಿರಬೇಕು. ಪದವಿಗಳನ್ನು (Graduation Degree) ಪೂರ್ಣಗೊಳಿಸಿರಬೇಕು:

ವಯೋಮಿತಿ (Age Limit): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ಮೀರಬಾರದು.

ಇದನ್ನೂ ಓದಿ: One Family One LPG Connection: ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಸಂಪರ್ಕ | ಜೂನ್ 1ರಿಂದ ಹೊಸ ನಿಯಮ ಜಾರಿ | ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

ವಯೋಮಿತಿ ಸಡಿಲಿಕೆ (Age Relaxation): ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ:

  • OBC (2A, 2B, 3A, 3B) ಅಭ್ಯರ್ಥಿಗಳಿಗೆ: 3 ವರ್ಷಗಳು
  • SC, ST, Category-1 ಅಭ್ಯರ್ಥಿಗಳಿಗೆ: 5 ವರ್ಷಗಳು
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 10 ವರ್ಷಗಳು

ಇದನ್ನೂ ಓದಿ: KMF Nemakati 2026: ಕೆಎಂಎಫ್ ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ | SSLC, ITI, ಡಿಗ್ರಿ ಆದವರಿಗೆ ಸುವರ್ಣಾವಕಾಶ | ತಿಂಗಳಿಗೆ ರೂ. 1.5 ಲಕ್ಷದವರೆಗೆ ವೇತನ!

ಅರ್ಜಿ ಶುಲ್ಕದ ವಿವರ (Application Fee)

WhatsApp Group Join Now
Telegram Group Join Now

ಅಭ್ಯರ್ಥಿಗಳು ತಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ:

  • ಸಾಮಾನ್ಯ, 2A, 2B, 3A, 3B ಅಭ್ಯರ್ಥಿಗಳಿಗೆ: ರೂ. 750/-
  • SC, ST, Cat-1, PwD (ಅಂಗವಿಕಲ) ಅಭ್ಯರ್ಥಿಗಳಿಗೆ: ರೂ. 500/-
  • ವಿಶೇಷ ಅಭ್ಯರ್ಥಿಗಳಿಗೆ (Special Candidates): ರೂ. 250/-

ಪಾವತಿ ವಿಧಾನ (Payment Mode): ಆನ್‌ಲೈನ್ ಬ್ಯಾಂಕಿಂಗ್, ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.

Karnataka Agriculture Department Jobs
Karnataka Agriculture Department Jobs

ಇದನ್ನೂ ಓದಿ: SBI Apprentice Recruitment 2026: ಎಸ್‌ಬಿಐ ಭರ್ಜರಿ ನೇಮಕಾತಿ 2026: 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡಿಗರಿಗೆ ಸುವರ್ಣಾವಕಾಶ!

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ (Competitive Exam), ದಾಖಲೆಗಳ ಪರಿಶೀಲನೆ (Document Verification) ಹಾಗೂ ವೈಯಕ್ತಿಕ ಸಂದರ್ಶನ (Interview) ಸೇರಿ ಒಟ್ಟು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಆಫ್‌ಲೈನ್ ಓಎಂಆರ್ (Offline OMR Sheet) ಮಾದರಿಯಲ್ಲಿ ನಡೆಯುತ್ತದೆ.

ಗಮನಿಸಿ: ಪರೀಕ್ಷೆಯು ಪತ್ರಿಕೆ-1 ಮತ್ತು ಪತ್ರಿಕೆ-2 ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು 300 ಅಂಕಗಳಿಗೆ ನಡೆಯಲಿದ್ದು, 2 ಗಂಟೆಗಳ ಕಾಲಾವಕಾಶ ಇರುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳ (Negative Marking) ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-ಮೇ-2026
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-ಜೂನ್-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22-ಜೂನ್-2026

ಕೆಇಎ ಪರೀಕ್ಷಾ ವೇಳಾಪಟ್ಟಿ (KEA Exam Schedule)

  • ಕನ್ನಡ ಪರೀಕ್ಷೆ ಪತ್ರಿಕೆ-1: 25ನೇ ಜುಲೈ 2026 (ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ)
  • ಕನ್ನಡ ಪರೀಕ್ಷೆ ಪತ್ರಿಕೆ-2: 25ನೇ ಜುಲೈ 2026 (ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ)

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಅರ್ಜಿ ಸಲ್ಲಿಸುವುದು ಹೇಗೆ? (How to Apply Online)

ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ (Online Application Form) ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಮೊದಲಿಗೆ ಕೆಇಎ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನೀವು ಅರ್ಹರಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ.

ಇದನ್ನೂ ಓದಿ: CET Result: ಜೂನ್ ಮೊದಲ ವಾರ ಸಿಇಟಿ ಫಲಿತಾಂಶ ಪ್ರಕಟ | ಕೆಇಎ ಪ್ರಮುಖ ಮಾಹಿತಿ

ನಿಮ್ಮ ಗುರುತಿನ ಚೀಟಿ, ವಯಸ್ಸಿನ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತ್ತೀಚಿನ ರೆಸ್ಯೂಮ್ ಸಿದ್ಧವಾಗಿಟ್ಟುಕೊಳ್ಳಿ. ಕೆಇಎ ಅಧಿಕೃತ ಲಿಂಕ್ ಕ್ಲಿಕ್ ಮಾಡಿ, ಅಗತ್ಯವಿರುವ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.

ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಗಾತ್ರದಲ್ಲಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ. ನಿಮ್ಮ ಪ್ರವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಕೊನೆಯದಾಗಿ, ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ (Application Number) ಅಥವಾ ಪ್ರಿಂಟ್‌ಔಟ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಇದನ್ನೂ ಓದಿ: 15 Lakh Fake Old Age Pension Cancelled: 15 ಲಕ್ಷ ಅಕ್ರಮ ವೃದ್ಧಾಪ್ಯ ವೇತನ ರದ್ದು | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ (ಆರ್‌ಪಿಸಿ): Download 
  • ಅಧಿಕೃತ ಅಧಿಸೂಚನೆ (ಕೆಕೆ) : Download
  • ಆನ್‌ಲೈನ್ ಅರ್ಜಿ ಲಿಂಕ್: Apply ಮಾಡಿ 
  • ಅಧಿಕೃತ ವೆಬ್‌ಸೈಟ್: cetonline.karnataka.gov.in

PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ


Spread the love
error: Content is protected !!