Gram Panchayat Recruitment 2024 : ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳಲ್ಲಿ ಕೆಳ ಹಂತದ ವಿವಿಧ ಹುದ್ದೆಗಳು ಖಾಲಿ ಇದ್ದು; ಇವುಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯತಿಗಳಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ? ಅವುಗಳ ಭರ್ತಿಗೆ ಮಾನದಂಡಗಳೇನು? ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು? ಅರ್ಜಿ ಸಲ್ಲಿಕೆ ಹೇಗೆ? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…
ಸರಕಾರಿ ನೌಕರರ ಸಂಬಳ ಹೆಚ್ಚಳಕ್ಕೆ ಡೇಟ್ ಫಿಕ್ಸ್ | ನೌಕರರ ನಿಯೋಗಕ್ಕೆ ಸಿಎಂ ಭರವಸೆ Karnataka 7th Pay Commission
ಯಾವೆಲ್ಲ ಹುದ್ದೆಗಳು ಖಾಲಿ ಇವೆ?
ರಾಜ್ಯದಲ್ಲಿ ಒಟ್ಟು 6,026 ಗ್ರಾಮ ಪಂಚಾಯತಿಗಳಿದ್ದು ಇವುಗಳಲ್ಲಿ ಸಾವಿರಾರು ಗ್ರಾಮ ಪಂಚಾಯತಿಗಳಲ್ಲಿ ಕೆಳ ಹಂತದ ನಾಲ್ಕು ವೃಂದದ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಇದೀಗ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಆಯಾ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾಗಳಿಗೆ ಆದೇಶ ನೀಡಿದೆ. ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿವೆ:
- ಬಿಲ್ ಕಲೆಕ್ಟರ್
- ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳು
- ವಾಟರ್ ಆಪರೇಟರ್
- ಸ್ವಚ್ಛತಾಗಾರರು

ನೇಮಕಾತಿ ಮಾನದಂಡಗಳು
ವಯೋ ನಿವೃತ್ತಿಯಿಂದ, ಮುಂಬಡ್ತಿಯಿ೦ದ ಅಥವಾ ಮರಣಹೊಂದಿರುವ ಕಾರಣಗಳಿಂದಾಗಿ ಮೇಲ್ಕಾಣಿಸಿದ ಹುದ್ದೆಗಳು ಖಾಲಿಯಾಗಿದ್ದು; ಈ ನಾಲ್ಕು ವೃಂದದ ಹುದ್ದೆಗಳಲ್ಲಿ ಯಾರು ಕಾರ್ಯನಿರ್ವಹಿಸದೇ ಇದ್ದಲ್ಲಿ, ನೇಮಕಾತಿಯ ಮೀಸಲಾತಿಯನ್ನು ಅನುಸರಿಸಿ ಭರ್ತಿ ಮಾಡಿಕೊಳ್ಳಲು ಪಂಚಾಯತ್ ರಾಜ್ ಆಯುಕ್ತಾಲಯವು ಕೋರಿದೆ.
ಖಾಲಿ ಇರುವ ಸದರಿ ಹುದ್ದೆಗೆ ಸಿಬ್ಬಂದಿಯನ್ನು ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 886 ಗ್ರಾಪಂಕಾ 2016 ದಿನಾಂಕ 29-06-2020ರಲ್ಲಿ ಸೂಚಿಸಿರುವಂತೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ.
ಈ ಹುದ್ದೆಗಳಿಗೆ ವಿದ್ಯಾರ್ಹತೆ ಏನು?
- ಬಿಲ್ ಕಲೆಕ್ಟರ್ ಅಥವಾ ಕರವಸೂಲಿಗಾರರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
- ಇನ್ನು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳು 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
- ಅದೇ ರೀತಿ ವಾಟರ್ ಆಪರೇಟರ್ ಹುದ್ದೆಗಳಿಗೆ ಕನಿಷ್ಠ 7ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಗ್ರಾಮ ಪಂಚಾಯತಿ ಸ್ವಚ್ಛತಾಗಾರರು ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ. ಈ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯತಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗೆ?
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್ ಹಾಗೂ ಸ್ವಚ್ಛತಾಗಾರರು ಹುದ್ದೆಗಳಿಗೆ ಆಯಾ ಜಿಲ್ಲಾ ಪಂಚಾಯ್ತಿಗಳು ನೇಮಕಾತಿ ಅಧಿಸೂಚನೆ ಹೊರಡಿಸಿ, ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿ ಬಿಡುಗಡೆ ಮಾಡಲಿವೆ.
ರಾಜ್ಯದ ವಿವಿಧ ಜಿಲ್ಲೆಗಳ ಜಿಪಂ CEOಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿಲಿದ್ದು; ಹಂತ ಹಂತವಾಗಿ ಅಧಿಸೂಚನೆ ಹೊರಡಿಸಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆ ಅನ್ವಯ ಆಯಾ ಜಿಲ್ಲೆಗಳ ಗ್ರಾಮ ಪಂಚಾಯತಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲಲಿಸಬಹುದಾಗಿದೆ. ಈ ಕುರಿತ ಹೆಚ್ಚನ ಮಾಹಿತಿಗಾಗಿ ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.