ಇಂದಿನಿಂದ ಕಂದಾಯ ಇಲಾಖೆಯ (Karnataka Revenue Department) ಹೊಸ ನಿಯಮ ಜಾರಿಗೆ ತಂದಿದ್ದು; ಇದರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ (Digital Property Registration) ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಹೌದು, ಮೇ 26, 2025ರಿಂದ ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ ಹೊಸ ನಿಯಮ ಜಾರಿಯಾಗಿದೆ. ಈ ನಿಯಮದಡಿ ಇನ್ನು ಮುಂದೆ ಆಸ್ತಿ ನೋಂದಣಿ ಕಾರ್ಯವ್ಯವಹಾರಗಳು ಸಂಪೂರ್ಣ ಡಿಜಿಟಲ್ ಆಗಿದ್ದು, ಇ-ಸಹಿ (ಡಿಜಿಟಲ್ ಸಹಿ) ಕಡ್ಡಾಯವಾಗಿರಲಿದೆ.
ಎಲ್ಲವೂ ಆನ್‌ಲೈನ್
ಕಂದಾಯ ಇಲಾಖೆ ‘ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ – 2025’ (Karnataka property registration rules 2025) ಅನ್ನು ಜಾರಿಗೆ ತಂದಿದ್ದು, ಇದರ ಅನ್ವಯ ಎಲ್ಲಾ ರೀತಿಯ ಆಸ್ತಿ ದಾಖಲೆಗಳ ನೋಂದಣಿಯನ್ನು ಆನ್‌ಲೈನ್ ಮೂಲಕ ಮಾತ್ರವೇ ನಡೆಸಬೇಕಾಗಿದೆ.
ಈ ಮಸೂದೆ ರಾಜ್ಯಪಾಲರ ಅನುಮೋದನೆ ಪಡೆದ ಬಳಿಕ ಅಧಿಕೃತವಾಗಿ ಜಾರಿಯಾಗಿದೆ. ಹೊಸ ಕಾಯ್ದೆ ಮೂಲಕ ಎಲ್ಲಾ ಆಸ್ತಿ ನೋಂದಣಿ ಮತ್ತು ದಾಖಲೆಗಳ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿರಲಿದೆ.
ಆನ್‌ಲೈನ್ ಮೂಲಕವೇ ಎಲ್ಲ ಡೀಡ್ ದಾಖಲೆಗಳು
ಈ ಹೊಸ ವ್ಯವಸ್ಥೆಯ ಮೂಲಕ ಇನ್ನು ಮುಂದೆ ಈ ಕೆಳಗಿನ ಎಲ್ಲಾ ದಾಖಲೆಗಳ ನೋಂದಣಿಯನ್ನು ಆನ್‌ಲೈನ್ ಮೂಲಕಲೇ ಮಾಡಬೇಕಾಗುತ್ತದೆ:
- ಸೇಲ್ ಡೀಡ್ (Sale Deed)
- ಲೀಸ್ ಡೀಡ್ (Lease Deed)
- ಗಿಫ್ಟ್ ಡೀಡ್ (Gift Deed)
- ಇತರ ಆಸ್ತಿ ಸಂಬಂಧಿತ ದಾಖಲೆಗಳು

ಡಿಜಿಟಲ್ ಆಸ್ತಿ ನೋಂದಣಿಯ ಹಂತಗಳು
ಇಂದಿನಿಂದ ಆಸ್ತಿ ನೋಂದಣಿ ಪ್ರಕ್ರಿಯೆಯ ಎಲ್ಲಾ ಹಂತಗಳು ತಂತ್ರಜ್ಞಾನ ಆಧಾರಿತವಾಗಲಿವೆ. ಇನ್ನು ಜಾರಿಯಾಗಲಿರುವ ಡಿಜಿಟಲ್ ಆಸ್ತಿ ನೋಂದಣಿಯ ಹಂತಗಳು ಹೀಗಿವೆ:
- ಡಿಜಿಟಲ್ ಡಾಕ್ಯುಮೆಂಟ್ ತಯಾರಿಕೆ: ನಿಗದಿತ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಡೀಡ್ ತಯಾರಿಸಲು ಅವಕಾಶ.
- ಇ-ಸಹಿ (E-Signature): ಆಧಾರ್ ಆಧಾರಿತ ಸಹಿ ವ್ಯವಸ್ಥೆ, ಇದರ ಮೂಲಕ ದೃಢೀಕರಣವು ಸುರಕ್ಷಿತವಾಗಿ ಜರುಗುತ್ತದೆ.
- ಇ-ಸ್ಟಾಂಪಿಂಗ್ (E-Stamping): ಸರಕಾರಿ ಸ್ಟಾಂಪ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಡಾಕ್ಯುಮೆಂಟ್‌ಗಳ ಮಾನ್ಯತೆಯನ್ನು ಪಡೆಯಬೇಕು.
- ಇ-ಚಲನ್ ಪಾವತಿ (E-Challan Payment): ನೋಂದಣಿ ಶುಲ್ಕವನ್ನು ಬ್ಯಾಂಕ್ ಅಥವಾ ಪಾವತಿ ಗೇಟ್‌ವೇ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಯಾಗಲಿದೆ.
- ಬಯೋಮೆಟ್ರಿಕ್ ದೃಢೀಕರಣ (Authentication): ಕೈ ಬೆರಳು ಗುರುತು ಅಥವಾ ಐರಿಸ್ ಸ್ಕ್ಯಾನ್ (ಕಣ್ಣಿನ ಗುರುತು) ಮೂಲಕ ಸೈನ್ ಅನ್ನು ದೃಢೀಕರಿಸಲಾಗುತ್ತದೆ.
- ಅಧಿಕೃತ ಲಿಂಕ್ ಮಾಡಿದ ಸಹಿ: ಜಿಲ್ಲಾಧಿಕಾರಿ ಅಥವಾ ನಿರ್ದಿಷ್ಟ ಪ್ರಾಧಿಕಾರದ ಅಧಿಕೃತ ಡಿಜಿಟಲ್ ಸಹಿಯನ್ನು ಲಿಂಕ್ ಮಾಡಲಾಗುತ್ತದೆ.
Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…
ಸಾರ್ವಜನಿಕರಿಗೆ ಉಪಯೋಗಗಳು
ಈ ಹೊಸ ವ್ಯವಸ್ಥೆಯು ಸಾರ್ವಜನಿಕರಿಗೆ ಅನೇಕ ರೀತಿಯಲ್ಲಿ ಲಾಭದಾಯಕವಾಗಲಿದೆ:
- ಕಚೇರಿಗಳಿಗೆ ಓಡಾಟ ಕಡಿಮೆಯಾಲಿದೆ
- ಮಧ್ಯವರ್ತಿಗಳ ಅವಲಂಬನೆ ತಪ್ಪುತ್ತದೆ
- ಸಮಯ ಮತ್ತು ಹಣದ ಉಳಿತಾಯವಾಗುತ್ತದೆ
- ನಕಲಿ ಡಾಕ್ಯುಮೆಂಟ್ ಸೃಷ್ಠಿಗೆ ಕಡಿವಾಣ ಬೀಳುತ್ತದೆ
- ಹೆಚ್ಚು ಭದ್ರತೆ ಮತ್ತು ಸುರಕ್ಷತೆ ಸಿಗುತ್ತದೆ
- ಆನ್‌ಲೈನ್ ಟ್ರ‍್ಯಾಕಿಂಗ್ ಸೌಲಭ್ಯ ಸಿಗಲಿದೆ
ಈ ನೂತನ ಡಿಜಿಟಲ್ ವ್ಯವಸ್ಥೆ ಕರ್ನಾಟಕ ರಾಜ್ಯದಲ್ಲಿ ಆಸ್ತಿ ನೋಂದಣಿಯ ಪಾರದರ್ಶಕತೆ, ಸುರಕ್ಷತೆ ಮತ್ತು ಸಾರ್ವಜನಿಕ ಅನುಕೂಲತೆಯ ನವ ಯುಗಕ್ಕೆ ದಾರಿ ತೋರಿಸುತ್ತಿದೆ. ನಾಗರಿಕರು ಈ ವ್ಯವಸ್ಥೆಗೆ ಬೆಂಬಲ ನೀಡುವುದು ಮಾತ್ರವಲ್ಲದೆ, ತಾವು ಈ ವ್ಯವಸ್ಥೆಯನ್ನು ಬಳಸುವಲ್ಲಿ ತಾಂತ್ರಿಕ ಜ್ಞಾನವನ್ನೂ ಬೆಳೆಸಿಕೊಳ್ಳಬೇಕಿದೆ.