Ration Card Correction Karnataka : ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್’ದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ 20 ದಿನಗಳ ಕಾಲಾವಕಾಶ ಜುಲೈ 31ಕ್ಕೆ ಮುಕ್ತಾಯವಾಗಿದ್ದು; ಇದೀಗ ಪುನಃ 10 ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ (Ration Card Updates) ಕಲ್ಪಿಸಲಾಗಿದೆ.
ಪಡಿತರ ಚೀಟಿದಾರರು ಮತ್ತೆ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಬಗ್ಗೆ ಆಹಾರ ಇಲಾಖೆ ಮಾಹಿತಿ ಹಂಚಿಕೊ೦ಡಿದೆ. ಈ ಅವಧಿಯಲ್ಲಿ ರೇಷನ್ ಕಾಡ್’ðದಾರರು ತಮಗೆ ಅಗತ್ಯವಾದ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳ ಸೌಲಭ್ಯದ ಜತೆಗೆ ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಬಹುದು.
ಮತ್ತೆ ಮತ್ತೆ ಕಾಡಿದ ಸರ್ವರ್ ಸಮಸ್ಯೆ
ಈ ಹಿಂದೆ ಹಲವು ಬಾರಿ ರಾಜ್ಯ ಸರಕಾರ ಎಪಿಎಲ್ (APL Card), ಬಿಪಿಎಲ್ (BPL Card) ಹಾಗೂ ಅಂತ್ಯೋದಯ ಪಡಿತರ ಕಾರ್ಡ್ (Anthyodaya Card) ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು. ಆದರೆ ಬಹುತೇಕರಿಗೆ ಸರ್ವರ್ ಸಮಸ್ಯೆ, ರಜಾ ದಿನಗಳ ನಿಮಿತ್ತ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ವರ್ಷಗಳಿಂದ ಅವಕಾಶ ಕಲ್ಪಿಸಿಲ್ಲ. ಕೊನೆ ಪಕ್ಷ ತಿದ್ದುಪಡಿಗಾದರೂ ಹೆಚ್ಚಿನ ಸಮಯಾವಕಾಶ ನೀಡುವಂತೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತ ಬಂದಿದೆ. ಹೀಗಾಗಿ ಕಳೆದ ತಿಂಗಳು 20 ದಿನಗಳು, ಈ ತಿಂಗಳು ಆಗಸ್ಟ್’ನಲ್ಲಿ ಮತ್ತೆ 10 ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡÀಲಾಗಿದೆ.
ತಿದ್ದುಪಡಿ ದಿನಾಂಕ ಮತ್ತು ಸಮಯ
ಆಗಸ್ಟ್ 1ರಿಂದ 10ರ ವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ 10 ಗಂಟೆಯಿ೦ದ ರಾತ್ರಿ 9 ಗಂಟೆಯ ವರೆಗೆ ಬಯೋಮೆಟ್ರಿಕ್ ಸೌಲಭ್ಯ ಇರುವ ಗ್ರಾಮ ಒನ್ ಕೇಂದ್ರ (Grama One Center), ಕರ್ನಾಟಕ ಒನ್ (karnataka One) ಹಾಗೂ ಬೆಂಗಳೂರು ಒನ್ (Bangalore One) ಕೇಂದ್ರಗಳಲ್ಲಿ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಏನೆಲ್ಲ ತಿದ್ದುಪಡಿ ಮಾಡಬಹುದು?
- ರೇಷನ್ ಕಾರ್ಡ್’ನಲ್ಲಿರುವ ಫಲಾನುಭವಿಗಳ ಮಾಹಿತಿ
- ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ
- ಮೃತಪಟ್ಟ ಕುಟುಂಬ ಸದಸ್ಯರ ಹೆಸರು ತೆಗೆದು ಹಾಕುವುದು
- ಐದು ವರ್ಷದೊಳಗಿನ ಮಕ್ಕಳ ಹೆಸರು ಸೇರ್ಪಡೆ
- ಹೊಸದಾಗಿ ಮದುವೆಯಾಗಿ ಬಂದ ಸೊಸೆಯ ಹೆಸರು ಸೇರ್ಪಡೆ
- ನ್ಯಾಯಬೆಲೆ ಅಂಗಡಿ ಬದಲಾವಣೆ
- ಬೇರೆ ಜಿಲ್ಲೆಗೆ ವರ್ಗಾವಣೆ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ 50 ಲಕ್ಷ ರೇಷನ್ ಕಾರ್ಡ್ ರದ್ದು | ನಿಮ್ಮ ಕಾರ್ಡ್ ಈ ಪಟ್ಟಿಯಲ್ಲಿದೆಯಾ? 50 lakh ration card cancellation
ತಿದ್ದುಪಡಿಗೆ ಬೇಕಾದ ದಾಖಲೆಗಳೇನು?
- ಪ್ರಸ್ತುತ ಇರುವ ರೇಷನ್ ಕಾರ್ಡ್ ಪ್ರತಿ
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ಮಕ್ಕಳು ಮತ್ತು ಹೊಸ ಸೊಸೆಯಂದಿರ ಹೆಸರು ಸೇರ್ಪಡೆಗೆ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ
- ತೀರಿಹೋದ ಹಿರಿಯರ ಮರಣ ಪ್ರಮಾಣ ಪತ್ರ
- ಮೊಬೈಲ್ ನಂಬರ್
ತಿದ್ದುಪಡಿ ಎಲ್ಲಿ ಮಾಡಿಸಬೇಕು?
ರೇಷನ್ ಕಾರ್ಡ್’ನಲ್ಲಿನ ತಿದ್ದುಪಡಿಗಾಗಿ ಗ್ರಾಮ ಒನ್, ಕಾಮನ್ ಸರ್ವೀಸ್ ಸೆಂಟರ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ತಿದ್ದುಪಡಿಗೆ 10 ದಿನಗಳ ಸಮಯ ನೀಡಲಾಗಿದೆ. ಅರ್ಜಿದಾರರು ಆಗಸ್ಟ್ 01 ರಿಂದ 10ರ ನಡುವೆ ಬೆಳಗ್ಗೆ 10ರಿಂದ ರಾತ್ರಿ 09 ಗಂಟೆಯ ಒಳಗೆ ಅಗತ್ಯ ದಾಖಲೆಗಳ ಸಮೇತ ತಿದ್ದುಪಡಿ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.