PM Kisan 24th Installment Release Date: ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ ಹಣ: ಅಕ್ಟೋಬರ್ 30ಕ್ಕೆ ₹2,000 ಜಮೆ!

Spread the love

WhatsApp Group Join Now
Telegram Group Join Now

PM Kisan 24th Installment Release Date: ಪಿಎಂ ಕಿಸಾನ್ 24ನೇ ಕಂತಿನ ಹಣ ರೈತರ ಖಾತೆಗೆ ಜಮೆ! ₹2,000 ಹಣ ಪಡೆಯಲು ಇ-ಕೆವೈಸಿ ಮಾಡುವುದು ಹೇಗೆ ಮತ್ತು ಸ್ಟೇಟಸ್ ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ…

ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಕಾಯುತ್ತಿದ್ದ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ (24th Installment) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಕೇಂದ್ರ ಸರ್ಕಾರ ರೈತರ ಕೃಷಿ ಖರ್ಚಿಗೆ ನೆರವಾಗಲು ಪ್ರತಿ ವರ್ಷ 6,000 ರೂಪಾಯಿ ನೀಡುತ್ತದೆ. ಈ ಹಣ ಒಟ್ಟಿಗೆ ಬರುವುದಿಲ್ಲ. ಬದಲಿಗೆ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ (DBT). ಈಗಾಗಲೇ ದೇಶಾದ್ಯಂತ 23 ಕಂತುಗಳ ಹಣ ಯಶಸ್ವಿಯಾಗಿ ರೈತರ ಕೈಸೇರಿದೆ.

ಇದನ್ನೂ ಓದಿ: Govt Employees DA Hike: ತುಟ್ಟಿಭತ್ಯೆ (DA) ಹೆಚ್ಚಳ: ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಭರ್ಜರಿ ಏರಿಕೆ

24ನೇ ಕಂತಿನ ಹಣ ಯಾವಾಗ ಬಿಡುಗಡೆ?

ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರು ನೀಡಿರುವ ಮಾಹಿತಿ ಪ್ರಕಾರ, ಇದೇ ಅಕ್ಟೋಬರ್ 30 ರಂದು ಬೆಳಿಗ್ಗೆ 10 ರಿಂದ 11 ಗಂಟೆಯ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಅಂದೇ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ.

ಇದನ್ನೂ ಓದಿ: Karnataka Rain Update: ಸೈಕ್ಲೋನ್ ಅಬ್ಬರ | ಕರ್ನಾಟಕದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ | ಧಾರಾಕಾರ ಮಳೆ ಮುನ್ಸೂಚನೆ

ಹಣ ಪಡೆಯಲು ಇ-ಕೆವೈಸಿ (e-KYC) ಕಡ್ಡಾಯ

ಈ ಹಣ ಕೈಸೇರಲು ಒಂದು ಮುಖ್ಯ ಕೆಲಸ ಮಾಡುವುದು ಕಡ್ಡಾಯ. ಪ್ರತಿಯೊಬ್ಬ ರೈತರೂ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಿರಲೇಬೇಕು. ಒಂದು ವೇಳೆ ಇ-ಕೆವೈಸಿ ಆಗಿಲ್ಲದಿದ್ದರೆ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Karnataka Local Body Elections: ಫೆಬ್ರವರಿ ಒಳಗೆ ಗ್ರಾ.ಪಂ ಚುನಾವಣೆ: ಜಿ.ಪಂ, ತಾ.ಪಂ ಅಖಾಡಕ್ಕೂ ಕಹಳೆ!

ಇ-ಕೆವೈಸಿ ಮಾಡಿಸುವುದು ಹೇಗೆ?

ಇ-ಕೆವೈಸಿ ಮಾಡಿಸುವುದು ತುಂಬಾನೇ ಸುಲಭ. ನಿಮ್ಮ ಊರಿನ ಗ್ರಾಮ ಒನ್ (Grama One), ಕರ್ನಾಟಕ ಒನ್ ಅಥವಾ ಹತ್ತಿರದ ಸಿಎಸ್‌ಸಿ (CSC) ಕೇಂದ್ರಕ್ಕೆ ಹೋಗಿ. ಜೊತೆಯಲ್ಲಿ ಆಧಾರ್ ಕಾರ್ಡ್ (Aadhaar Card) ಮತ್ತು ಮೊಬೈಲ್ ಒಯ್ಯಿರಿ. ಅಲ್ಲಿ ಹೆಬ್ಬೆರಳು ಕೊಟ್ಟು ಬಯೋಮೆಟ್ರಿಕ್ (Biometric) ಮೂಲಕ ಕೆಲವೇ ನಿಮಿಷಗಳಲ್ಲಿ ಈ ಕೆಲಸ ಮುಗಿಸಬಹುದು.

ಇದನ್ನೂ ಓದಿ: HDFC Bank Parivartan Scholarship 2026: ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಕಾಲರ್‌ಶಿಪ್ 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ಆರ್ಥಿಕ ನೆರವು

ಸ್ಮಾರ್ಟ್‌ಫೋನ್ ಬಳಸುವ ರೈತರಾದರೆ ನೀವೇ ಮನೆಯಲ್ಲೇ ಮಾಡಿಕೊಳ್ಳಬಹುದು. ‘ಪಿಎಂ ಕಿಸಾನ್’ ಅಧಿಕೃತ ಆ್ಯಪ್ (PM Kisan App) ಡೌನ್‌ಲೋಡ್ ಮಾಡಿಕೊಳ್ಳಿ.

ಮುಖದ ಸ್ಕ್ಯಾನ್ (Face Authentication) ಮೂಲಕ ಸುಲಭವಾಗಿ ಇ-ಕೆವೈಸಿ ಮುಗಿಸಬಹುದು. ಯಾವುದೇ ಗೊಂದಲವಿದ್ದರೆ ಗ್ರಾಮ ಪಂಚಾಯಿತಿಯ ಕೃಷಿ ಅಧಿಕಾರಿಗಳನ್ನು (Village Nodal Officer) ಸಂಪರ್ಕಿಸಿ ನೆರವು ಪಡೆಯಬಹುದು.

ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ

ಫಲಾನುಭವಿ ಸ್ಟೇಟಸ್ (Beneficiary Status) ಚೆಕ್ ಮಾಡುವುದು ಹೇಗೆ?

WhatsApp Group Join Now
Telegram Group Join Now

ನಿಮ್ಮ ಖಾತೆಗೆ ಹಣ ಬರುತ್ತದೋ ಇಲ್ಲವೋ ಎಂಬುದನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಬಹುದು:

  • ಮೊದಲು pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ‘ಬೆನಿಫಿಶಿಯರಿ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟ್ರೇಷನ್ ನಂಬರ್ (Registration Number) ಮತ್ತು ಅಲ್ಲಿರುವ ಅಕ್ಷರಗಳನ್ನು (Captcha Code) ಹಾಕಿ ಒಟಿಪಿ ಪಡೆದುಕೊಳ್ಳಿ.
  • ಮೊಬೈಲ್‌ಗೆ ಬಂದ ಒಟಿಪಿ (OTP) ದಾಖಲಿಸಿದ ತಕ್ಷಣ ನಿಮ್ಮ ಖಾತೆಯ ಸಂಪೂರ್ಣ ವಿವರ ಕಾಣಿಸುತ್ತದೆ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಒಂದು ವೇಳೆ ರಿಜಿಸ್ಟ್ರೇಷನ್ ನಂಬರ್ ನೆನಪಿಲ್ಲದಿದ್ದರೆ ಚಿಂತೆ ಬೇಡ. ಪಕ್ಕದಲ್ಲೇ ಇರುವ ‘Know Your Registration No’ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ನಂಬರ್ ಹಾಕಿ ಒಟಿಪಿ ಪಡೆದರೆ ನಿಮ್ಮ ನೋಂದಣಿ ಸಂಖ್ಯೆ ಸುಲಭವಾಗಿ ಸಿಗುತ್ತದೆ.

ಹಣ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಇದುವರೆಗೂ ಇ-ಕೆವೈಸಿ ಮಾಡಿಸದ ರೈತರು ತಕ್ಷಣವೇ ಈ ಕೆಲಸ ಮುಗಿಸಿ, ಸರ್ಕಾರದ ನೆರವನ್ನು ಪಡೆದುಕೊಳ್ಳಿ.

Karnataka Rain Update: ಸೈಕ್ಲೋನ್ ಅಬ್ಬರ | ಕರ್ನಾಟಕದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ | ಧಾರಾಕಾರ ಮಳೆ ಮುನ್ಸೂಚನೆ


Spread the love
error: Content is protected !!