Gruha Jyothi Scheme Door to Door Verification: ಗೃಹ ಜ್ಯೋತಿ ಉಚಿತ ವಿದ್ಯುತ್ ಮನೆ-ಮನೆ ಪರಿಶೀಲನೆ ಆರಂಭ| ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

Spread the love

WhatsApp Group Join Now
Telegram Group Join Now

Gruha Jyothi Scheme Door to Door Verification: ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಆರಂಭವಾಗಿದೆ. ಯಾವೆಲ್ಲಾ ದಾಖಲೆ ನೀಡಬೇಕು? ಸರಾಸರಿ ಬಿಲ್ ಲೆಕ್ಕಾಚಾರ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯಡಿ (Gruha Jyothi Scheme) ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಬಹುಮುಖ್ಯ ಅಪ್‌ಡೇಟ್ ಇಲ್ಲಿದೆ. ಜುಲೈ 1ರಿಂದ ರಾಜ್ಯದ ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ (ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್) ವ್ಯಾಪ್ತಿಯಲ್ಲಿ ಮನೆ-ಮನೆ ಪರಿಶೀಲನಾ (Door to Door Verification) ಕಾರ್ಯ ಶುರುವಾಗಲಿದೆ.

ಹೌದು, ಈ ಯೋಜನೆಯು ಜಾರಿಗೆ ಬಂದು ಒಂದು ವರ್ಷ ಕಳೆಯುತ್ತಾ ಬಂದಿದ್ದು, ಈಗ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಇಂಧನ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಖುದ್ದು ವಿದ್ಯುತ್ ಇಲಾಖೆಯ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.

ಇದನ್ನೂ ಓದಿ: Gruhalakshmi Scheme Voter ID Mandatory: ವೋಟರ್ ಐಡಿ ಇದ್ದರೆ ಮಾತ್ರ ಗೃಹಲಕ್ಷ್ಮೀ ಹಣ | ಮಹಿಳೆಯರ ಖಾತೆಗೆ ಶೀಘ್ರದಲ್ಲೇ ಬಾಕಿ ಹಣ ಜಮಾ

ಪರಿಶೀಲನೆ ಹೇಗೆ ನಡೆಯುತ್ತೆ?

ಸಿಬ್ಬಂದಿ ನಿಮ್ಮ ಮನೆಗೆ ಬಂದಾಗ, ಯೋಜನೆಯ ಲಾಭ ಪಡೆಯುತ್ತಿರುವವರ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಮೊಬೈಲ್ ಆ್ಯಪ್ ಮೂಲಕ ಸ್ಥಳದಲ್ಲೇ ಮಾಹಿತಿಯನ್ನು ಅಪ್‌ಡೇಟ್ ಮಾಡಿ, ಒಂದು ಘೋಷಣಾ ಪತ್ರವನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ, ಸಿಬ್ಬಂದಿ ಬಂದಾಗ ಅವರಿಗೆ ಸಂಪೂರ್ಣ ಸಹಕಾರ ನೀಡುವುದು ಬಹಳ ಮುಖ್ಯ.

ಇದನ್ನೂ ಓದಿ: Tande Maga PM Kisan Hana: ತಂದೆ-ಮಗ ಇಬ್ಬರಿಗೂ ಪಿಎಂ-ಕಿಸಾನ್ ಹಣ? ಇಲ್ಲಿದೆ ಸರ್ಕಾರದ ಹೊಸ ನಿಯಮ

ಯಾವೆಲ್ಲಾ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಬೇಕು?

ಅಧಿಕಾರಿಗಳು ಕೇಳಿದ ತಕ್ಷಣ ತೋರಿಸಲು ಅನುಕೂಲವಾಗುವಂತೆ ಈ ಕೆಳಗಿನ ದಾಖಲೆಗಳನ್ನು ಈಗಲೇ ಎತ್ತಿಟ್ಟುಕೊಳ್ಳಿ:

  • ಆಧಾರ್ ಕಾರ್ಡ್
  • ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಫೋಟೋ
  • ವೋಟರ್ ಐಡಿ (ಮತದಾರರ ಗುರುತಿನ ಚೀಟಿ)
  • ಪಾನ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಬಾಡಿಗೆ ಕರಾರು ಪತ್ರ (ನೀವು ಬಾಡಿಗೆ ಮನೆಯಲ್ಲಿದ್ದರೆ ಮಾತ್ರ ಇದು ಬೇಕಾಗುತ್ತದೆ)

ಇದನ್ನೂ ಓದಿ: Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ

ಸಿಬ್ಬಂದಿ ಏನೇನು ಮಾಹಿತಿ ಕೇಳ್ತಾರೆ?

ಮುಖ್ಯವಾಗಿ ನಿಮ್ಮ ಬಳಿ ಯಾವ ರೇಷನ್ ಕಾರ್ಡ್ (ಎಪಿಎಲ್ ಅಥವಾ ಬಿಪಿಎಲ್) ಇದೆ? ನೀವು ಕರ್ನಾಟಕದ ವೋಟರ್ ಹೌದಾ? ಆದಾಯ ತೆರಿಗೆ ಕಟ್ಟುತ್ತೀರಾ? ನಿಮ್ಮ ಉದ್ಯೋಗ ಏನು? ಹಾಗೂ ನೀವು ಯಾವ ವರ್ಗಕ್ಕೆ ಸೇರಿದವರು ಎನ್ನುವಂತಹ ಸಾಮಾನ್ಯ ಮಾಹಿತಿಗಳನ್ನು ಅವರು ಕೇಳಿ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: PM Awas Yojana 2026: ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ | ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

Gruha Jyothi Scheme Door to Door Verification
Gruha Jyothi Scheme Door to Door Verification

ಫ್ರೀ ಕರೆಂಟ್ ಲೆಕ್ಕಾಚಾರ ಹೇಗಿರುತ್ತೆ ಗೊತ್ತಾ?

ಗೃಹ ಜ್ಯೋತಿ ಯೋಜನೆ ಇರೋದು ಕೇವಲ ಮನೆಗಳ ಬಳಕೆಗೆ ಮಾತ್ರ, ಅಂಗಡಿ ಅಥವಾ ಕಮರ್ಷಿಯಲ್ ಕಟ್ಟಡಗಳಿಗಲ್ಲ. ಬಾಡಿಗೆ ಮನೆಯಲ್ಲಿದ್ದರೂ ಈ ಸೌಲಭ್ಯ ಸಿಗುತ್ತದೆ. ಆದರೆ, ನೆನಪಿರಲಿ ಒಂದು ಆಧಾರ್ ಕಾರ್ಡ್ಗೆ ಒಂದೇ ಮೀಟರ್ ಲಿಂಕ್ ಮಾಡಲು ಮಾತ್ರ ಅವಕಾಶವಿದೆ.

ಇದನ್ನೂ ಓದಿ: Gruha Lakshmi Scheme Doorstep Verification: ಮನೆ ಬಾಗಿಲಲ್ಲೇ ಗೃಹಲಕ್ಷ್ಮೀ ಯೋಜನೆಗೆ ಮರು ಅರ್ಜಿ | ಸರ್ಕಾರದ ಮಹತ್ವದ ನಿರ್ಧಾರ

ಇನ್ನು ನಿಮಗೆ ಪ್ರತಿ ತಿಂಗಳೂ 200 ಯೂನಿಟ್ ಪೂರ್ತಿ ಫ್ರೀ ಸಿಗುವುದಿಲ್ಲ. ಬದಲಾಗಿ, 2022-23ನೇ ಸಾಲಿನಲ್ಲಿ ನೀವು ಬಳಸಿದ ವಿದ್ಯುತ್‌ನ ಸರಾಸರಿಯನ್ನು ಲೆಕ್ಕ ಹಾಕಿ, ಅದಕ್ಕೆ ಶೇಕಡಾ 10ರಷ್ಟು ಹೆಚ್ಚುವರಿ ಸೇರಿಸಿ ಉಚಿತ ಮಿತಿ ನಿಗದಿ ಮಾಡಲಾಗುತ್ತದೆ.

ಉದಾಹರಣೆಗೆ, ನಿಮ್ಮ ಸರಾಸರಿ ಬಳಕೆ 100 ಯೂನಿಟ್ ಇದ್ದರೆ, ನಿಮಗೆ 110 ಯೂನಿಟ್‌ವರೆಗೆ ಮಾತ್ರ ಬಿಲ್ ಬರುವುದಿಲ್ಲ. ಒಂದು ವೇಳೆ ನಿಮ್ಮ ಬಳಕೆ 200 ಯೂನಿಟ್ ದಾಟಿದರೆ, ಆ ತಿಂಗಳ ಪೂರ್ತಿ ಬಿಲ್ ನೀವೇ ಕಟ್ಟಬೇಕಾಗುತ್ತದೆ.

WhatsApp Group Join Now
Telegram Group Join Now

ಇದನ್ನೂ ಓದಿ: E-Swathu: ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಇ-ಸ್ವತ್ತು’ ನಿಯಮ ಸಡಿಲಿಕೆ | ಸರ್ಕಾರದ ಮಹತ್ವದ ಘೋಷಣೆ

ಜುಲೈ ತಿಂಗಳಲ್ಲಿ ನಿಮಗೆ ಬರಲಿದೆ ‘ಸರಾಸರಿ ಬಿಲ್’!

ಬೆಸ್ಕಾಂ ವ್ಯಾಪ್ತಿಯ ಜನರಿಗೆ ಇದೊಂದು ಮುಖ್ಯ ಮಾಹಿತಿ. ಜುಲೈ ತಿಂಗಳಲ್ಲಿ ಮೀಟರ್ ರೀಡರ್‌ಗಳು ಮನೆ-ಮನೆ ಪರಿಶೀಲನೆಯಲ್ಲಿ ಬ್ಯುಸಿ ಇರುವುದರಿಂದ, ಅವರು ಎಂದಿನAತೆ ನಿಮ್ಮ ಮನೆಗೆ ರೀಡಿಂಗ್ ಮಾಡಲು ಬರುವುದಿಲ್ಲ.

ಇದನ್ನೂ ಓದಿ: Karnataka Pension Scheme: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಕ್ಕೆ ಹೊಸ ನಿಯಮ | 18.45 ಲಕ್ಷ ಜನರಿಗೆ ಪೆನ್ಷನ್ ಬಂದ್!

ಹೀಗಾಗಿ, ಕಳೆದ ಮೂರು ತಿಂಗಳ ನಿಮ್ಮ ವಿದ್ಯುತ್ ಬಳಕೆಯ ಆಧಾರದ ಮೇಲೆ ‘ಸರಾಸರಿ ಬಿಲ್’ ಅನ್ನು ಕಳುಹಿಸಲಾಗುತ್ತದೆ. ಈ ಬಿಲ್ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಬರುತ್ತದೆ.

ಆಗಸ್ಟ್ನಿಂದ ಮೊದಲಿನಂತೆಯೇ ಮನೆಗೆ ಬಂದು ಮೀಟರ್ ರೀಡಿಂಗ್ ಮಾಡಲಿದ್ದು, ಜುಲೈ ಬಿಲ್‌ನಲ್ಲಿ ಏನಾದರೂ ವ್ಯತ್ಯಾಸಗಳಾಗಿದ್ದರೆ ಅದನ್ನು ಆಗಸ್ಟ್ ಬಿಲ್‌ನಲ್ಲಿ ಸರಿಹೊಂದಿಸಲಾಗುತ್ತದೆ (ಅಡ್ಜಸ್ಟ್ ಮಾಡಲಾಗುತ್ತದೆ) ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ


Spread the love
error: Content is protected !!