PM Kiasa 23rd Installment: ರೈತರ ಖಾತೆಗೆ ಪಿಎಂ ಕಿಸಾನ್ ₹2,000 ಹಣ ಜಮಾ | ಈ ರೈತರಿಗೆ ಮಾತ್ರ ಸಿಗಲಿದೆ 23ನೇ ಕಂತಿನ ಹಣ

Spread the love

WhatsApp Group Join Now
Telegram Group Join Now

PM Kiasa 23rd Installment: ನಾಳೆ ಪಿಎಂ ಕಿಸಾನ್ 23ನೇ ಕಂತಿನ ₹2,000 ಹಣ ರೈತರ ಖಾತೆಗೆ ಜಮಾ ಆಗಲಿದೆ. ಅರ್ಹ ರೈತರು, ಫಲಾನುಭವಿಗಳ ಪಟ್ಟಿ ಪರಿಶೀಲನೆ ಹಾಗೂ ಹಣ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದ ಕೋಟ್ಯಂತರ ರೈತರು ಕಾತರದಿಂದ ಕಾಯುತ್ತಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Scheme) 23ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದೆ.

ಇದನ್ನೂ ಓದಿ: karnataka Gruha Lakshmi Yojane: ಗೃಹಲಕ್ಷ್ಮಿ ಯೋಜನೆ ಹೊಸ ಅರ್ಜಿ ಆಹ್ವಾನ: ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, 2026ರ ಜೂನ್ 20ರಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ (PM Kisan 23rd Installment Release) ಮಾಡಲಿದ್ದಾರೆ.

ಈ ಮೂಲಕ ಅರ್ಹ ರೈತರ ಖಾತೆಗೆ ತಲಾ ₹2,000 ಮೊತ್ತ ಜಮೆಯಾಗಲಿದೆ. ರೈತರ ಆರ್ಥಿಕ ನೆರವಿಗಾಗಿ ಜಾರಿಗೊಳಿಸಿರುವ ಈ ಯೋಜನೆಯಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ (Direct Benefit Transfer – DBT) ಮಾಡಲಾಗುತ್ತದೆ.

ಇದನ್ನೂ ಓದಿ: Crop Loan Waiver: ರೈತರಿಗೆ ಭರ್ಜರಿ ಗಿಫ್ಟ್ | ₹75,000 ಸಾಲ ಮನ್ನಾ ಘೋಷಣೆ; ಕರ್ನಾಟಕದಲ್ಲೂ ಜಾರಿಯಾಗುತ್ತಾ?

ಪಿಎಂ ಕಿಸಾನ್ 23ನೇ ಕಂತು ರೈತರಿಗೆ ಏಕೆ ಮುಖ್ಯ?

ಕೃಷಿ ಚಟುವಟಿಕೆಗಳ ಆರಂಭದ ಸಮಯದಲ್ಲಿ ರೈತರಿಗೆ ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಭೂಮಿ ಸಿದ್ಧಪಡಿಸುವುದು, ಬಿತ್ತನೆ ಕಾರ್ಯ, ಬೀಜ ಖರೀದಿ, ರಸಗೊಬ್ಬರ ಹಾಗೂ ಕೀಟನಾಶಕ ಖರೀದಿ ಸೇರಿದಂತೆ ಹಲವು ಕೆಲಸಗಳಿಗೆ ಹೆಚ್ಚಿನ ವೆಚ್ಚವಾಗುತ್ತದೆ.

ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಸಿಗುವ ₹2,000 ಪಿಎಂ ಕಿಸಾನ್ ಹಣ (PM Kisan 2000 Rupees Installment) ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚುವರಿ ಆರ್ಥಿಕ ಸಹಾಯವಾಗಲಿದೆ.

ಪಿಎಂ ಕಿಸಾನ್ ಯೋಜನೆಯ ಉದ್ದೇಶವೇ ರೈತರಿಗೆ ಕೃಷಿ ಸಂಬಂಧಿತ ಖರ್ಚುಗಳನ್ನು ನಿರ್ವಹಿಸಲು ನಿಯಮಿತ ಆದಾಯ ಬೆಂಬಲ ನೀಡುವುದಾಗಿದೆ. ವರ್ಷಕ್ಕೆ ಒಟ್ಟು ₹6,000 ಹಣವನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Free Sheep Farming Training: ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ | ಊಟ-ವಸತಿಯೊಂದಿಗೆ 13 ದಿನಗಳ ತರಬೇತಿ

ಯಾರಿಗೆ ಪಿಎಂ ಕಿಸಾನ್ ಹಣ ಸಿಗಲಿದೆ?

ಪಿಎಂ ಕಿಸಾನ್ ಯೋಜನೆಯ ಎಲ್ಲಾ ನೋಂದಾಯಿತ ಫಲಾನುಭವಿಗಳಿಗೆ (PM Kisan Beneficiary) ಈ ಹಣ ಸಿಗುವುದಿಲ್ಲ. ಸರ್ಕಾರದ ನಿಯಮಗಳ ಪ್ರಕಾರ ಅರ್ಹತೆ ಹೊಂದಿರುವ ಹಾಗೂ ಅಗತ್ಯ ದಾಖಲೆಗಳನ್ನು ಸರಿಯಾಗಿ ಪೂರ್ಣಗೊಳಿಸಿರುವ ರೈತರಿಗೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.ರೈತರು ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿಕೊಳ್ಳಬೇಕು:

  • ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು
  • ಬ್ಯಾಂಕ್ ಖಾತೆ ವಿವರಗಳು ಸರಿಯಾಗಿರಬೇಕು
  • ಜಮೀನು ದಾಖಲೆಗಳ ಮಾಹಿತಿ ಸರಿಯಾಗಿರಬೇಕು
  • ಇ-ಕೆವೈಸಿ (e-KYC) ಪೂರ್ಣಗೊಂಡಿರಬೇಕು

ಯಾವುದೇ ಮಾಹಿತಿ ತಪ್ಪಾಗಿದ್ದರೆ ಅಥವಾ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಕಂತಿನ ಹಣ ತಡೆಹಿಡಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: Gruha Jyothi Scheme New Rules: ಗೃಹಜ್ಯೋತಿ ಯೋಜನೆ ಹೊಸ ನಿಯಮ | ಇನ್ನು ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್? ಇಲ್ಲಿದೆ ಸಂಪೂರ್ಣ ಮಾಹಿತಿ

PM Kiasa 23rd Installment
PM Kiasa 23rd Installment

ಇ-ಕೆವೈಸಿ (e-KYC) ಮಾಡಿಸದಿದ್ದರೆ ಹಣ ಬರಲ್ಲ

ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಲು ಕೇಂದ್ರ ಸರ್ಕಾರ ಇ-ಕೆವೈಸಿ (e-KYC Verification) ಕಡ್ಡಾಯಗೊಳಿಸಿದೆ. ನಕಲಿ ಫಲಾನುಭವಿಗಳನ್ನು ತಡೆಯುವುದು ಹಾಗೂ ನಿಜವಾದ ರೈತರಿಗೆ ಮಾತ್ರ ಹಣ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

WhatsApp Group Join Now
Telegram Group Join Now

ಇನ್ನೂ e-KYC ಪೂರ್ಣಗೊಳಿಸದ ರೈತರ ಖಾತೆಗೆ 23ನೇ ಕಂತಿನ ಹಣ ಜಮೆಯಾಗದೇ ಇರಬಹುದು. ಆದ್ದರಿಂದ ರೈತರು ತಮ್ಮ e-KYC ಸ್ಥಿತಿಯನ್ನು (PM Kisan e-KYC Status) ಕೂಡಲೇ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ: Gruha Lakshmi Gruha Jyothi Re Application: ಗೃಹಲಕ್ಷ್ಮೀ-ಗೃಹಜ್ಯೋತಿ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಕಡ್ಡಾಯ | ಮನೆಗೇ ಬರಲಿದೆ ಅರ್ಜಿ ನಮೂನೆ

ನಿಮಗೆ 23ನೇ ಕಂತಿನ ಹಣ ಸಿಗುತ್ತಾ?

23ನೇ ಕಂತಿನ ಹಣ ಪಡೆಯುವ ಮೊದಲು ರೈತರು ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ (PM Kisan Beneficiary List) ಇದೆಯೇ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ. ಪರಿಶೀಲಿಸುವ ವಿಧಾನ:

  • ಪಿಎಂ ಕಿಸಾನ್ ಅಧಿಕೃತ ಪೋರ್ಟಲ್‌ pmkisan.gov.inಗೆ ಭೇಟಿ ನೀಡಿ
  • Beneficiary List ಅಥವಾ Status ಆಯ್ಕೆ ಮಾಡಿ
  • ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದ ವಿವರ ನಮೂದಿಸಿ
  • ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಪರಿಶೀಲಿಸಿ

ಅಥವಾ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯ ಮೂಲಕವೂ ಫಲಾನುಭವಿಗಳ ಸ್ಥಿತಿ (Beneficiary Status) ನೋಡಬಹುದು.

ಇದನ್ನೂ ಓದಿ: Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246 ಕೋಟಿ ಪರಿಹಾರ ಜಮಾ | ನಿಮ್ಮ ಹಣ ಬಂದಿದೆಯೇ ಈಗಲೇ ಚೆಕ್ ಮಾಡಿ

ಹಣ ಬರದಿದ್ದರೆ ಏನು ಮಾಡಬೇಕು?

ಕೆಲವು ರೈತರಿಗೆ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮೆಯಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ:

  • e-KYC ಪೂರ್ಣಗೊಂಡಿದೆಯೇ ಪರಿಶೀಲಿಸಿ
  • ಆಧಾರ್ ಮತ್ತು ಬ್ಯಾಂಕ್ ಮಾಹಿತಿ ಸರಿಯಾಗಿದೆಯೇ ನೋಡಿ
  • ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ ಖಚಿತಪಡಿಸಿಕೊಳ್ಳಿ
  • ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು
  • ದಾಖಲೆಗಳಲ್ಲಿ ತಪ್ಪಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: PM Kisan Money Stopped: ಕರ್ನಾಟಕದ ಲಕ್ಷಾಂತರ ರೈತರಿಗೆ ಪಿಎಂ ಕಿಸಾನ್ ಹಣ ಬಂದ್ | ನೀವೂ ಈ ಪಟ್ಟಿಯಲ್ಲಿದ್ದೀರಾ? ಈಗಲೇ ಪರಿಶೀಲಿಸಿ…

ಮುಂಗಾರು ಸಮಯದಲ್ಲಿ ರೈತರಿಗೆ ಆರ್ಥಿಕ ನೆರವು

ಮುಂಗಾರು ಕೃಷಿ ಚಟುವಟಿಕೆಗಳ ನಡುವೆ ಬಿಡುಗಡೆಯಾಗುತ್ತಿರುವ ಪಿಎಂ ಕಿಸಾನ್ 23ನೇ ಕಂತಿನ ಹಣ ರೈತರಿಗೆ ಹೆಚ್ಚಿನ ಸಹಾಯವಾಗಲಿದೆ. ಕೃಷಿ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ಆರ್ಥಿಕ ನೆರವು ರೈತರ ಹೂಡಿಕೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಆದರೆ ಹಣ ಪಡೆಯಲು e-KYC, ಆಧಾರ್ ಲಿಂಕ್, ಬ್ಯಾಂಕ್ ಖಾತೆ ಪರಿಶೀಲನೆ ಹಾಗೂ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇರುವಿಕೆ (PM Kisan Beneficiary Status Check) ಅತ್ಯಂತ ಮುಖ್ಯವಾಗಿದೆ.

Drought Alert Karnataka: ಈ ವರ್ಷ ಬರ ಖಚಿತ? ಕರ್ನಾಟಕ ಸೇರಿ 12 ರಾಜ್ಯಗಳಿಗೆ ಕೇಂದ್ರದಿಂದ ತುರ್ತು ಎಚ್ಚರಿಕೆ!


Spread the love
error: Content is protected !!