Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನ! 2026-27ನೇ ಸಾಲಿನ ಸ್ಕಾಲರ್ಶಿಪ್ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ…
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಕಲ್ಯಾಣ ಯೋಜನೆಯಡಿ (Labour Welfare Scheme) 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿವೇತನವನ್ನು ಘೋಷಿಸಲಾಗಿದ್ದು; ಇದೀಗ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಬಾರಿಯ ವಿಶೇಷತೆಯೆಂದರೆ, 1ನೇ ತರಗತಿಯ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿಪರ (Professional) ಪದವಿ ಕೋರ್ಸ್ ಹಾಗೂ ಉನ್ನತ ಸಂಶೋಧನಾ ಹಂತದವರೆಗಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.
ಕೇಂದ್ರ ಸಚಿವಾಲಯವು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (National Scholarship Portal – NSP) ಮೂಲಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿದ್ದು, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೈಜ ಫಲಾನುಭವಿಗಳಿಗೆ ಹಣ ತಲುಪಲಿದೆ.
ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಈ ವಿದ್ಯಾರ್ಥಿವೇತನವನ್ನು ಬೀಡಿ, ಸಿನೆಮಾ, ಸುಣ್ಣದ ಕಲ್ಲು (Limestone) ಮತ್ತು ಡೊಲಮೈಟ್ ಗಣಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬೆಳಗಲು ಈ ಆರ್ಥಿಕ ನೆರವು (Financial Assistance) ನೀಡಲಾಗುತ್ತದೆ.
ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅಧಿಕೃತ ಪೋರ್ಟಲ್ scholarships.gov.in ಮೂಲಕವೇ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Karnataka Rain Alert: 18 ಜಿಲ್ಲೆಗಳಲ್ಲಿ ಭಾರೀ ಮಳೆ | ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಒನ್ ಟೈಮ್ ರಿಜಿಸ್ಟ್ರೇಷನ್ (One Time Registration – OTR): ಅರ್ಜಿ ಸಲ್ಲಿಕೆಗೆ ಈ ಬಾರಿ OTR ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿಯ ಸಕ್ರಿಯ ಆಧಾರ್ ಸಂಖ್ಯೆ (Aadhaar Number) ಅತ್ಯಗತ್ಯ.
ಒಮ್ಮೆ ನೀವು ನೋಂದಾಯಿಸಿದ ನಂತರ, ಪೋರ್ಟಲ್ನಲ್ಲಿ ಅಭ್ಯರ್ಥಿಯ ವಿವರಗಳು ಹಾಗೂ ಶುಲ್ಕದ ಮಾಹಿತಿಯು ಸ್ವಯಂಚಾಲಿತವಾಗಿ ಭರ್ತಿಯಾಗುವುದರಿಂದ (Auto-fill) ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ.
ಸ್ವತಃ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾದರೆ, ನಿಮ್ಮ ಹತ್ತಿರದ ಗ್ರಾಮ ಒನ್ (Grama One) ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Coconut Farming Subsidy: ಹೊಸದಾಗಿ ತೆಂಗಿನ ತೋಟ ಮಾಡ್ತಿದ್ದೀರಾ? ಸರ್ಕಾರದಿಂದ ಸಿಗುತ್ತೆ ₹56,000 ಸಹಾಯ!

ವಿದ್ಯಾರ್ಥಿವೇತನ ಪಾವತಿ ವಿಧಾನ (Payment Method)
ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ತಲುಪಿಸಲು ‘ಆಧಾರ್ ಪೇಮೆಂಟ್ ಬ್ರಿಡ್ಜ್’ (Aadhaar Payment Bridge – APB) ವ್ಯವಸ್ಥೆಯನ್ನು ಬಳಸಲಾಗುತ್ತದೆ.
- ಅರ್ಜಿದಾರರು ಯಾವುದೇ ರಾಷ್ಟ್ರೀಕೃತ, ನಿಗದಿತ, ಸಹಕಾರಿ, ಗ್ರಾಮೀಣ ಅಥವಾ ಖಾಸಗಿ ಬ್ಯಾಂಕ್ನಲ್ಲಿ ತಮ್ಮ ಸ್ವಂತ ಹೆಸರಿನಲ್ಲೇ ಉಳಿತಾಯ ಖಾತೆ (Savings Account) ಹೊಂದಿರಬೇಕು.
- ಈ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಲಿಂಕ್ (Aadhaar Seeded) ಆಗಿರಬೇಕು.
- ಬ್ಯಾಂಕ್ ಖಾತೆಗೆ NEFT ಮತ್ತು CBS ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ:
- ಕುಟುಂಬದ ಅಧಿಕೃತ ಆದಾಯ ಪ್ರಮಾಣಪತ್ರ (Income Certificate).
- ಪೋಷಕರು ಉದ್ಯೋಗದಲ್ಲಿರುವುದನ್ನು ದೃಢೀಕರಿಸಲು, ಸಂಬಂಧಪಟ್ಟ ಆಡಳಿತ ಮಂಡಳಿಯು ನೀಡಿದ ಬೀಡಿ/ಗಣಿ ಕಾರ್ಮಿಕರ ಗುರುತಿನ ಚೀಟಿ (Labour ID Card).
- ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ (Passport Size Photo).
- ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhaar Card).
- ಬ್ಯಾಂಕ್ ಪಾಸ್ ಬುಕ್ (Bank Passbook).
ಇದನ್ನೂ ಓದಿ: VB Gram G Scheme 2026: ಪ್ರತಿ ಕುಟುಂಬಕ್ಕೂ ವರ್ಷಕ್ಕೆ ₹47,750 ಆದಾಯ! ಗ್ರಾಮ ಪಂಚಾಯಿತಿಯಿಂದ ಅರ್ಜಿ ಆಹ್ವಾನ
ತರಗತಿವಾರು ವಿದ್ಯಾರ್ಥಿವೇತನದ ಮೊತ್ತ (Scholarship Amount Details)
ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಹಾಗೂ ತರಗತಿಗಳ ಆಧಾರದ ಮೇಲೆ ವಾರ್ಷಿಕ ಪ್ರೋತ್ಸಾಹ ಧನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- 1 ರಿಂದ 4 ನೇ ತರಗತಿ ರೂ. 1,000/-
- 5 ರಿಂದ 8 ನೇ ತರಗತಿ ರೂ. 1,500/-
- 9 ಮತ್ತು 10 ನೇ ತರಗತಿ ರೂ. 2,000/-
- ಪ್ರಥಮ ಹಾಗೂ ದ್ವಿತೀಯ ಪಿಯುಸಿ (PUಅ) ರೂ. 3,000/-
- ಐಟಿಐ (ITI), ಪಾಲಿಟೆಕ್ನಿಕ್ ಮತ್ತು ಪದವಿ (ಬಿ.ಎಸ್ಸಿ ಕೃಷಿ ಸೇರಿದಂತೆ)ರೂ. 6,000/-
- ವೃತ್ತಿಪರ ಕೋರ್ಸ್’ಗಳು (Professional Courses) ರೂ. 25,000/-
ನೆನಪಿಡಬೇಕಾದ ಪ್ರಮುಖ ದಿನಾಂಕಗಳು (Important Dates)
ಗಮನಿಸಿ: ಕೊನೆಯ ದಿನಗಳಲ್ಲಿ ಸರ್ವರ್ ದಟ್ಟಣೆ (Server Issue) ಎದುರಾಗುವ ಸಾಧ್ಯತೆಗಳಿರುವುದರಿಂದ, ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
- ಮೆಟ್ರಿಕ್ ಪೂರ್ವ ಯೋಜನೆ (Pre-Matric Scheme – 1 ರಿಂದ 10 ನೇ ತರಗತಿ): ಆಗಸ್ಟ್ 31, 2026
- ಮೆಟ್ರಿಕ್ ನಂತರದ ಯೋಜನೆ (Post-Matric Scheme – 11 ನೇ ತರಗತಿ ಮತ್ತು ಮೇಲ್ಪಟ್ಟು): ಅಕ್ಟೋಬರ್ 31, 2026
ಇದನ್ನೂ ಓದಿ: KFD Forest Watcher Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Helpline Info)
ವಿದ್ಯಾರ್ಥಿವೇತನದ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ, ಇಲಾಖೆಯ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಿ:
- ಮೊಬೈಲ್ ಸಂಖ್ಯೆ: 9148240554
- ದೂರವಾಣಿ ಸಂಖ್ಯೆ: 080-23471406
ಅರ್ಜಿ ಲಿಂಕ್: Apply Now

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.