Gruha Lakshmi Scheme New Application: ಗೃಹಲಕ್ಷ್ಮಿ ಯೋಜನೆ ಹೊಸ ಅರ್ಜಿ ಆಹ್ವಾನ: ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

Gruha Lakshmi Scheme New Application: ಗೃಹಲಕ್ಷ್ಮಿ ಯೋಜನೆಯ ಹೊಸ ಅರ್ಜಿ ಸಲ್ಲಿಕೆ, ಬದಲಾದ ನಿಯಮಗಳು, ಬೇಕಾದ ದಾಖಲೆಗಳು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನ ಓದಿ…

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ (Gruha Lakshmi Scheme) ಪ್ರತಿ ತಿಂಗಳು ನೀಡಲಾಗುವ 2,000 ರೂ. ಆರ್ಥಿಕ ನೆರವು ಪಡೆಯಲು ಫಲಾನುಭವಿಗಳು (Beneficiaries) ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂಬ ಮುಖ್ಯಮಂತ್ರಿಗಳ ಇತ್ತೀಚಿನ ಹೇಳಿಕೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿತ್ತು.

ಆದರೆ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ಪಷ್ಟನೆ ನೀಡಿದ್ದು, ಯಾರು ಸಹ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ.

ಇದನ್ನೂ ಓದಿ: Karnataka Rain Deficit: ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ಕೊರತೆ | ಕೃಷಿ ಚಟುವಟಿಕೆ ಕುಂಠಿತ | ಯಾವ್ಯಾವ ಜಿಲ್ಲೆಗಳಿಗೆ ಕಂಟಕ?

ಹೊಸ ಮಾರ್ಗಸೂಚಿ (New Guidelines)

ಸದ್ಯ ರಾಜ್ಯದಲ್ಲಿ ಒಟ್ಟು 1.28 ಕೋಟಿ ಮಹಿಳೆಯರು ಈ ಯೋಜನೆಯ ಅಧಿಕೃತ ಫಲಾನುಭವಿಗಳಾಗಿದ್ದಾರೆ. ಯಾರೂ ಗೊಂದಲಕ್ಕೊಳಗಾಗಬೇಕಿಲ್ಲ, ಸದ್ಯದಲ್ಲೇ ಹೊಸ ಮಾರ್ಗಸೂಚಿ (New Guidelines) ಪ್ರಕಟಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಕೇವಲ ನೈಜ ಅರ್ಹರಿಗೆ ಮಾತ್ರ ಈ ಯೋಜನೆಯ ಆರ್ಥಿಕ ಲಾಭ (Financial Benefits) ತಲುಪಿಸುವ ಸದುದ್ದೇಶದಿಂದ ಸರ್ಕಾರವು ಈ ಮಹತ್ವದ ಕ್ರಮ ಕೈಗೊಳ್ಳುತ್ತಿದೆ.

ಇದನ್ನೂ ಓದಿ: Free Sheep Farming Training: ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ | ಊಟ-ವಸತಿಯೊಂದಿಗೆ 13 ದಿನಗಳ ತರಬೇತಿ

ಇಲ್ಲಿ ಮಾತ್ರ ಗೃಹಲಕ್ಷ್ಮಿ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ

ಹೊಸ ಅರ್ಜಿ ಸಲ್ಲಿಕೆಗೆ (New Application Submission) ಸರ್ಕಾರ ಕೇವಲ ಮೂರು ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ತಮ್ಮ ಹತ್ತಿರದ ಬೆಂಗಳೂರು ಒನ್ ಅಥವಾ ಜಿಲ್ಲಾ ಒನ್ ಕೇಂದ್ರಗಳು (Bangalore One / District One), ಕರ್ನಾಟಕ ಒನ್ (Karnataka One) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ (Grama One Centers) ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಿದೆ.

ರಾಜ್ಯಾದ್ಯಂತ ಒಟ್ಟು 15,000 ಅಧಿಕೃತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಕಾರಣಕ್ಕೂ ಖಾಸಗಿ ಸೈಬರ್ ಸೆಂಟರ್ (Cyber Centers) ಅಥವಾ ಮೊಬೈಲ್ ಆಪ್‌ಗಳ (Mobile Apps) ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಇದನ್ನೂ ಓದಿ: KMF – SHIMUL Recruitment 2026: ಕೆಎಂಎಫ್-ಶಿಮುಲ್ ನೇಮಕಾತಿ 2026: 194 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಐಟಿಐ, ಪದವೀಧರರಿಗೆ ಭರ್ಜರಿ ಅವಕಾಶ

ಯೋಜನೆಯಲ್ಲಿನ ಪ್ರಮುಖ ಬದಲಾವಣೆಗಳು ಮತ್ತು ಅರ್ಹತೆ

ಈ ಯೋಜನೆಯಲ್ಲಿ ಪ್ರಮುಖವಾಗಿ ಕೆಲವು ಬದಲಾವಣೆಗಳನ್ನು (Major Updates) ತರಲಾಗುತ್ತಿದೆ. ಒಂದು ವೇಳೆ ಈ ಹಿಂದೆ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ನಿಧನರಾಗಿದ್ದರೆ, ಅವರ ಮುಂದಿನ ವಾರಸುದಾರರಾದ ಸೊಸೆ ಅಥವಾ ಮಗಳು ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Gruha Jyothi Scheme New Rules: ಗೃಹಜ್ಯೋತಿ ಯೋಜನೆ ಹೊಸ ನಿಯಮ | ಇನ್ನು ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್? ಇಲ್ಲಿದೆ ಸಂಪೂರ್ಣ ಮಾಹಿತಿ

ಆದರೆ, ಅವರ ಹೆಸರು ಕಡ್ಡಾಯವಾಗಿ ಅದೇ ಪಡಿತರ ಚೀಟಿಯಲ್ಲಿ (Ration Card) ಇರುವುದು ಅವಶ್ಯಕವಾಗಿದೆ. ಇದರೊಂದಿಗೆ ಅರ್ಜಿ ಸಲ್ಲಿಸಲು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಕಡ್ಡಾಯವಾಗಿದೆ (BPL or APL Card Mandatory).

ಆದಾಯ ತೆರಿಗೆ ಪಾವತಿದಾರರು (Income Tax Payers) ಹಾಗೂ ಇದೇ ಕಾರಣದಿಂದ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾದ ಕಾರ್ಡುದಾರರು ಈ ಯೋಜನೆಗೆ ಅರ್ಹರಲ್ಲ. ಇಂಥವರು ಹೊಸದಾಗಿ ಅರ್ಜಿ ಸಲ್ಲಿಸಿದರೂ ಅವರಿಗೆ ಯೋಜನೆ ಅನ್ವಯವಾಗುವುದಿಲ್ಲ.

WhatsApp Group Join Now
Telegram Group Join Now

ಇದನ್ನೂ ಓದಿ: El Nino Impact: ಎಲ್ ನಿನೊ ಎಫೆಕ್ಟ್ | ಮಂಕಾದ ಮುಂಗಾರು ಮಳೆ | ಕರ್ನಾಟಕದ ಈ ಜಿಲ್ಲೆಗಳಿಗೆ ಬರದ ಭೀತಿ!

Gruha Lakshmi Scheme New Application
Gruha Lakshmi Scheme New Application

ಮತ್ತೆ ಅರ್ಜಿ ಕರೆಯಲು ಪ್ರಮುಖ ಕಾರಣಗಳು

ಸರ್ಕಾರ ಮತ್ತೆ ಅರ್ಜಿ ಕರೆಯುತ್ತಿರುವುದರ ಹಿಂದೆ ಪ್ರಮುಖ ಕಾರಣಗಳಿವೆ. ಯೋಜನೆ ಆರಂಭವಾದಾಗಿನಿAದ ಇದುವರೆಗೆ ಸುಮಾರು 72 ಸಾವಿರ ಕೋಟಿಗೂ ಅಧಿಕ ಹಣವನ್ನು ವಿತರಿಸಲಾಗಿದೆ. ಆದರೆ ಇಲಾಖೆಯ ಸಮೀಕ್ಷೆಯ ಪ್ರಕಾರ (Department Survey) ಅರ್ಹರಲ್ಲದವರೂ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಹಣ ಪಡೆಯುತ್ತಿದ್ದರು ಹಾಗೂ 1 ಲಕ್ಷಕ್ಕೂ ಹೆಚ್ಚು ಮಂದಿ ಮರಣ ಹೊಂದಿದವರ ಹೆಸರಿನಲ್ಲಿ ಅಕ್ರಮವಾಗಿ ಹಣ ಡ್ರಾ ಆಗುತ್ತಿತ್ತು. ಇಂತಹ ಅನರ್ಹರನ್ನು ಯೋಜನೆಯಿಂದ ಕೈಬಿಡಲು (Remove Ineligible Beneficiaries) ಈ ನವೀಕರಣ ಪ್ರಕ್ರಿಯೆ (Renewal Process) ನಡೆಸಲಾಗುತ್ತಿದೆ.

ಇದನ್ನೂ ಓದಿ: Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246 ಕೋಟಿ ಪರಿಹಾರ ಜಮಾ | ನಿಮ್ಮ ಹಣ ಬಂದಿದೆಯೇ ಈಗಲೇ ಚೆಕ್ ಮಾಡಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಏಕಕಾಲಕ್ಕೆ ಎಲ್ಲರೂ ಮುನ್ನುಗ್ಗಿದರೆ ಸರ್ವರ್ ಡೌನ್ ಅಥವಾ ತಾಂತ್ರಿಕ ಸಮಸ್ಯೆ (Server and Technical Issues) ಎದುರಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಹಂತ-ಹAತವಾಗಿ ಅರ್ಜಿ ಸಲ್ಲಿಸಲು ಇಲಾಖೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ.

ಯೋಜನೆ ನವೀಕರಿಸಿಕೊಳ್ಳುವ ಕುರಿತು ಫಲಾನುಭವಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ (Registered Mobile Number) ನೇರವಾಗಿ ಸಂದೇಶ (SMS Alert) ಕಳುಹಿಸಲು ಇಲಾಖೆ ಚಿಂತನೆ ನಡೆಸಿದೆ.

ಇದನ್ನೂ ಓದಿ: Mini Tractor Subsidy Karnataka: ಟ್ರ‍್ಯಾಕ್ಟರ್ ಖರೀದಿಗೆ ರೈತರಿಗೆ ಸಹಾಯಧನ | ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವಾಗ ಕೆಲವು ಅಗತ್ಯ ದಾಖಲೆಗಳನ್ನು (Required Documents) ಕಡ್ಡಾಯವಾಗಿ ಒದಗಿಸಬೇಕು.

  • ಮನೆ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ (Aadhaar Number)
  • ಬ್ಯಾಂಕ್ ಖಾತೆಯ ವಿವರಗಳಿರುವ ಪಾಸ್‌ಬುಕ್ ಫೋಟೋ ಕಾಪಿ (Bank Passbook Copy)
  • ಫಲಾನುಭವಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and Income Certificate)
  • ಪತಿಯ ಹೆಸರು ಜತೆಗೆ ಆಧಾರ್ ಸಂಖ್ಯೆ
  • ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ

ಈ ದಾಖಲೆಗಳನ್ನು ಅರ್ಜಿಯೊಂದಿಗೆ ನೀಡಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಮೇ ತಿಂಗಳ ಹಣ ಬಿಡುಗಡೆಗೆ ಪ್ರಸ್ತಾವನೆ

ಪ್ರಸ್ತುತ ಹಣ ಬಿಡುಗಡೆಯ ಸ್ಟೇಟಸ್ (Fund Release Status) ಬಗ್ಗೆ ಹೇಳುವುದಾದರೆ, ಮಾರ್ಚ್ ತಿಂಗಳ ಕಂತಿನ ಹಣ ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿದೆ.

ಮೇ ತಿಂಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆಯಾದ ತಕ್ಷಣ ನೇರವಾಗಿ ಖಾತೆಗಳಿಗೆ ಜಮೆಯಾಗಲಿದೆ. ಇದಾದ ಬಳಿಕವಷ್ಟೇ ಹೊಸ ಅರ್ಜಿ ಸಲ್ಲಿಕೆಗೆ (New Registration) ಅಧಿಕೃತ ಚಾಲನೆ ಸಿಗಲಿದೆ ಎಂದು ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ.

Gruha Lakshmi Gruha Jyothi Re Application: ಗೃಹಲಕ್ಷ್ಮೀ-ಗೃಹಜ್ಯೋತಿ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಕಡ್ಡಾಯ | ಮನೆಗೇ ಬರಲಿದೆ ಅರ್ಜಿ ನಮೂನೆ


Spread the love
error: Content is protected !!