Free Student Bus Pass and Insurance: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತು ಇನ್ಸೂರೆನ್ಸ್ ಸೌಲಭ್ಯ ಆರಂಭ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

Free Student Bus Pass and Insurance: ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಅಪಘಾತ ವಿಮಾ ಸೌಲಭ್ಯದ ಮಾರ್ಗಸೂಚಿ ಪ್ರಕಟವಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಪ್ರಾಥಮಿಕ ಶಾಲೆಯಿಂದ (Primary School) ಹಿಡಿದು ಸ್ನಾತಕೋತ್ತರ ಪದವಿ (PG Courses) ಹಾಗೂ ವೃತ್ತಿಪರ ಕೋರ್ಸ್’ಗಳನ್ನು ಓದುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಸಾರಿಗೆ ಇಲಾಖೆಯು ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ.

ಬಹುನಿರೀಕ್ಷಿತ ಉಚಿತ ಬಸ್ ಪಾಸ್ (Free Student Bus Pass) ಹಾಗೂ ಅಪಘಾತ ವಿಮಾ ಯೋಜನೆಯ (Accident Insurance) ಅಧಿಕೃತ ಮಾರ್ಗಸೂಚಿ ಇದೀಗ ಪ್ರಕಟವಾಗಿದೆ. ಈ ಕುರಿತಾದ ಸಂಪೂರ್ಣ ವಿವರಗಳನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246 ಕೋಟಿ ಪರಿಹಾರ ಜಮಾ | ನಿಮ್ಮ ಹಣ ಬಂದಿದೆಯೇ ಈಗಲೇ ಚೆಕ್ ಮಾಡಿ

ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್

ಈ ಯೋಜನೆಯ ಅತ್ಯಂತ ಗಮನಾರ್ಹ ಅಂಶವೆAದರೆ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ವಿಮಾ ಸೌಲಭ್ಯ. ಉಚಿತವಾಗಿ ಬಸ್ ಪಾಸ್ ಪಡೆದು ಓಡಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಪಘಾತ ವಿಮೆ ಸಿಗಲಿದ್ದು, ಇದಕ್ಕಾಗಿ ಪ್ರತಿ ತಿಂಗಳು ಕಟ್ಟಬೇಕಾದ ₹5 ಕಂತನ್ನು (Premium) ಸರ್ಕಾರವೇ ಭರಿಸಲಿದೆ.

ಅಷ್ಟೇ ಅಲ್ಲ, ಪ್ರತಿ ಪಾಸ್ ಮಾಡಿಸಲು ತಗಲುವ ₹100 ಸಂಸ್ಕರಣಾ ಶುಲ್ಕವನ್ನು (Processing fee) ಕೂಡ ವಿದ್ಯಾರ್ಥಿಗಳ ಬದಲಿಗೆ ಸರ್ಕಾರವೇ ಸಾರಿಗೆ ನಿಗಮಗಳಿಗೆ ನೀಡಲಿದೆ. ಈ ವಿಮೆ ಮತ್ತು ಸಂಸ್ಕರಣೆಗೆ ತಗಲುವ ಸುಮಾರು ₹15 ಕೋಟಿ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್ ನೀಡಿದೆ.

ಇದನ್ನೂ ಓದಿ: KCET Counseling Delay: ಕರ್ನಾಟಕ ಸಿಇಟಿ ಕೌನ್ಸೆಲಿಂಗ್ ಯಾವಾಗ? ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…

ಗಡಿಭಾಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್

ಇನ್ನೊಂದು ಖುಷಿಯ ವಿಚಾರವೆಂದರೆ, ಗಡಿಭಾಗದ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗುತ್ತಿದೆ. ಅಂದರೆ, ಕರ್ನಾಟಕದಲ್ಲಿ ವಾಸವಿದ್ದು ಪಕ್ಕದ ರಾಜ್ಯಗಳಲ್ಲಿ ಓದುತ್ತಿರುವವರು ಹಾಗೂ ನೆರೆ ರಾಜ್ಯದ ಗಡಿಯಲ್ಲಿ ವಾಸವಿದ್ದು ನಮ್ಮ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಈ ಉಚಿತ ಬಸ್ ಪಾಸ್ ಯೋಜನೆಯ ಲಾಭ (Benefits) ಪಡೆಯಬಹುದಾಗಿದೆ.

ಇದನ್ನೂ ಓದಿ: Gruha Lakshmi Scheme New Rules: ಗೃಹಲಕ್ಷ್ಮಿ ಯೋಜನೆ: ಮತ್ತೆ ಅರ್ಜಿ ಸಲ್ಲಿಕೆಗೆ ಸರ್ಕಾರದ ಸಿದ್ಧತೆ | ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಆದೇಶ

Free Student Bus Pass and Insurance
Free Student Bus Pass and Insurance

ಈಗಾಗಲೇ ಪಾಸ್ ಪಡೆದವರಿಗೆ ಹಣ ವಾಪಾಸ್

ಹಾಗಾದರೆ, ‘ನಾನು ಈಗಾಗಲೇ ದುಡ್ಡು ಕೊಟ್ಟು ಪಾಸ್ ಮಾಡಿಸಿದ್ದೇನಲ್ಲ?’ ಎಂದು ನೀವು ಚಿಂತಿಸುವ ಅಗತ್ಯವಿಲ್ಲ. ಈಗಾಗಲೇ ವಿತರಿಸಲಾಗಿರುವ ಬಸ್‌ಪಾಸ್‌ಗಳನ್ನೇ ಬಳಸಿ ನೀವು ಧೈರ್ಯವಾಗಿ ಪ್ರಯಾಣಿಸಬಹುದು.

ಅದಕ್ಕಾಗಿ ನೀವು ಪಾವತಿಸಿರುವ ಹಣವನ್ನು ಕೇವಲ 15 ದಿನಗಳ ಒಳಗೆ ನಿಮಗೆ ಮರುಪಾವತಿ (Refund) ಮಾಡಲಾಗುತ್ತದೆ. ಆದರೆ, ಶೈಕ್ಷಣಿಕ ಅರ್ಹತೆ, ಪ್ರಯಾಣದ ದೂರ ಹಾಗೂ ಪಾಸ್‌ನ ಕಾಲಾವಧಿಯ (Validity) ಕುರಿತಂತೆ ಸಾರಿಗೆ ಇಲಾಖೆಯ ಹಳೆಯ ನಿಯಮಗಳೇ ಮುಂದುವರಿಯಲಿವೆ ಎಂಬುದನ್ನು ನೆನಪಿನಲ್ಲಿಡಬೇಕು.

ಇದನ್ನೂ ಓದಿ: Daughter Property Rights: ಹೆಣ್ಣುಮಕ್ಕಳೇ ಗಮನಿಸಿ: ತಂದೆಯ ಈ ಆಸ್ತಿಗಳ ಮೇಲೆ ನಿಮಗೆ ಹಕ್ಕಿಲ್ಲ | ಪ್ರಮುಖ ಕಾನೂನು ಮಾಹಿತಿ

ಅರ್ಜಿ ಸಲ್ಲಿಸುವ ವಿಧಾನ

ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ (NWKRTC) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ (KKRTC) ಬಸ್‌ಗಳಲ್ಲಿ ಉಚಿತವಾಗಿ ಓಡಾಡಬಹುದು.

ಇದಕ್ಕಾಗಿ ನೀವು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್ (Seva Sindhu Portal) sevasindhuservices.karnataka.gov.in ಮುಖಾಂತರ ಆನ್‌ಲೈನ್‌ನಲ್ಲಿ ಎಲ್ಲಿಂದ ಬೇಕಾದರೂ ನಿಮ್ಮ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಇದನ್ನೂ ಓದಿ: Karnataka New BPL Ration Card : ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ | ಹೊಸ ಅಪ್ಡೇಟ್ ಪ್ರಕಟ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ 123 ಪಾಸ್ ವಿತರಣಾ ಕೌಂಟರ್‌ಗಳನ್ನು ಕೂಡ ತೆರೆಯಲಾಗಿದ್ದು, ಇದರ ವಿವರಗಳನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ksrtc.karnataka.gov.in ನಲ್ಲಿ ಪಡೆದುಕೊಳ್ಳಬಹುದು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ‘ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಓದುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಬಹಳ ದೊಡ್ಡ ಮಟ್ಟದ ಅನುಕೂಲವಾಗಲಿದೆ’ ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದೆ.

Airtel Scholarship 2026: ಏರ್‌ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್ಟಾಪ್ + ಸಂಪೂರ್ಣ ಫೀಸ್ ಫ್ರೀ | ವಿದ್ಯಾರ್ಥಿಗಳಿಗೆ ಗೋಲ್ಡನ್ ಚಾನ್ಸ್


Spread the love
error: Content is protected !!