KCET Result 2026: ಕರ್ನಾಟಕ ಸಿಇಟಿ 2026 ಫಲಿತಾಂಶ ಪ್ರಕಟಣೆಗೆ ಸಂಬAಧಿಸಿದAತೆ ಕೆಇಎ ಮಹತ್ವದ ಮಾಹಿತಿ ನೀಡಿದ್ದು; ಫಲಿತಾಂಶ ಪ್ರಕಟಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಎದುರು ನೋಡುತ್ತಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET/CET-2026) ಫಲಿತಾಂಶ ಪ್ರಕಟಣೆ ಮತ್ತೊಮ್ಮೆ ವಿಳಂಬವಾಗುವ ಸಾಧ್ಯತೆ ಎದುರಾಗಿದೆ.
ಇದನ್ನೂ ಓದಿ: Monsoon Delay Karnataka: ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಡೇಟ್ ಫಿಕ್ಸ್ | ಈ ದಿನದಿಂದ ಭಾರೀ ಮಳೆ ಶುರು
ಕೃಷಿ ಕೋಟಾ (Agriculture Quota) ಪ್ರವೇಶಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆ ಮುಂದೂಡಲ್ಪಟ್ಟಿರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇದೀಗ ಗೊಂದಲದ ಪರಿಸ್ಥಿತಿಯಲ್ಲಿ ಸಿಲುಕಿದೆ.
ಬೆಂಗಳೂರು ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕೇಂದ್ರದಲ್ಲಿ ಮೇ 26ರಂದು ನಡೆಯಬೇಕಿದ್ದ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಇದೀಗ ಜೂನ್ 1ಕ್ಕೆ ಮುಂದೂಡಲಾಗಿದೆ. ಈ ಬದಲಾವಣೆ ನೇರವಾಗಿ ಸಿಇಟಿ ಫಲಿತಾಂಶ ಪ್ರಕಟಣೆಯ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ
ಕೃಷಿ ಪ್ರಾಯೋಗಿಕ ಪರೀಕ್ಷೆ ಮುಂದೂಡಲು ಕಾರಣವೇನು?
ಮೊದಲಿನಿಂದಲೂ ಮೇ 26ರಂದು ಮರು ಪರೀಕ್ಷೆ (Re-Exam) ನಡೆಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದೇ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದ ಸಿಯುಇಟಿ-ಐಸಿಎಆರ್ (CUET-ICAR 2026) ಪ್ರವೇಶ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ವ್ಯಕ್ತಪಡಿಸಿದ್ದರು.
ಹಲವು ವಿದ್ಯಾರ್ಥಿಗಳು ಎರಡೂ ಪರೀಕ್ಷೆಗಳು ಒಂದೇ ಅವಧಿಯಲ್ಲಿ ಬಂದಿರುವುದರಿಂದ ದಿನಾಂಕ ಬದಲಾಯಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ಕೆಇಎ ಹಾಗೂ ಸಂಬAಧಿತ ಅಧಿಕಾರಿಗಳು ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಜೂನ್ 1ರಂದು ಬೆಳಗ್ಗೆ 9 ಗಂಟೆಗೆ ನಡೆಸಲು ನಿರ್ಧರಿಸಿದ್ದಾರೆ.
ಜೂನ್ 2ರಂದು ಕೃಷಿ ಫಲಿತಾಂಶ?
ಈ ಕುರಿತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (Keladi Shivappa Nayaka University of Agricultural and Horticultural Sciences) ಕುಲಸಚಿವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಜೂನ್ 2ರಂದು ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದರಿಂದ ಕೆಇಎ ಮುಂದೆ ಇದೀಗ ಎರಡು ಆಯ್ಕೆಗಳು ಉಳಿದಂತಾಗಿದೆ. ಕೃಷಿ ವಿಭಾಗದ ಫಲಿತಾಂಶ ಸೇರಿಸಿ ಸಂಪೂರ್ಣ CET Result ಪ್ರಕಟಿಸುವುದೇ? ಅಥವಾ ಕೃಷಿ ವಿಜ್ಞಾನ ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳ ಫಲಿತಾಂಶವನ್ನು ಮೊದಲು ಬಿಡುಗಡೆ ಮಾಡುವುದೇ? ಈ ಕುರಿತು ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ.
ಈ ವಾರಾಂತ್ಯದಲ್ಲಿ CET Result?
ಕೆಇಎ ಮೂಲಗಳ ಪ್ರಕಾರ, ಈ ವಾರಾಂತ್ಯದಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲು ಸಿದ್ಧತೆಗಳು ನಡೆಯುತ್ತಿವೆ. ಆದರೆ ತಾಂತ್ರಿಕ ಹಾಗೂ ಆಡಳಿತಾತ್ಮಕ (Administrative) ಅಡೆತಡೆಗಳಿಂದ ಅಂತಿಮ ದಿನಾಂಕ ಘೋಷಣೆ ಆಗಿಲ್ಲ.
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಹೆಚ್ಚಾಗಿದ್ದು, ‘ಫಲಿತಾಂಶ ಯಾವಾಗ?’ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ವಿಶೇಷವಾಗಿ ಎಂಜಿನಿಯರಿಂಗ್ (Engineering), ಫಾರ್ಮಸಿ (Pharmacy), ವೆಟರ್ನರಿ (Veterinary), ಬಿ.ಎಸ್ಸಿ ಅಗ್ರಿಕಲ್ಚರ್ (BSc Agriculture) ಸೇರಿದಂತೆ ವಿವಿಧ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: RTE Free Education Extended: ಇನ್ಮುಂದೆ 10ನೇ ತರಗತಿವರೆಗೂ ಆರ್ಟಿಇ ಸೀಟು | ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಇನ್ನೂ 5,508 ವಿದ್ಯಾರ್ಥಿಗಳು ಅಂಕಗಳನ್ನು ಅಪ್ಲೋಡ್ ಮಾಡಿಲ್ಲ
ಸಿಇಟಿ ಫಲಿತಾಂಶ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ. ರಾಜ್ಯ ಪಠ್ಯಕ್ರಮದ ಹೊರತಾಗಿ CBSE, ICSE ಹಾಗೂ ಇತರ ರಾಜ್ಯಗಳ ಮಂಡಳಿಗಳಲ್ಲಿ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಏಇಂ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕು.
ಆದರೆ ಇನ್ನೂ 5,508 ಅಭ್ಯರ್ಥಿಗಳು ತಮ್ಮ ಅಂಕಗಳನ್ನು ದಾಖಲಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಅಂಕಗಳನ್ನು ಪರಿಶೀಲಿಸಿ, ಮಾನ್ಯಗೊಳಿಸಿ (Verification) ಬಳಿಕವೇ ಅಂತಿಮ ರ್ಯಾಂಕ್ ಪಟ್ಟಿ ಸಿದ್ಧಪಡಿಸಬೇಕಾಗುತ್ತದೆ. ಹೀಗಾಗಿ ಫಲಿತಾಂಶ ಬಿಡುಗಡೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: A Kharabu B Kharabu Land: ‘ಅ’ ಖರಾಬು, ‘ಬ’ ಖರಾಬು ಜಮೀನು ಅಂದ್ರೇನು? ರೈತರು ತಪ್ಪದೇ ತಿಳಿಯಬೇಕಾದ ಮಾಹಿತಿ
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಸಿಇಟಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ.
‘ಕೇಂದ್ರ ಪಠ್ಯಕ್ರಮ, ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಜೊತೆಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಕ್ಕೂ ಕಾಯುತ್ತಿದ್ದೇವೆ. ಹೀಗಾಗಿ ಸಿಇಟಿ ಫಲಿತಾಂಶದ ದಿನಾಂಕ ಕುರಿತು ಈಗಲೇ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಏನು ಮಾಡಬೇಕು?
ಸದ್ಯ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ (Official Website) ಪ್ರಕಟವಾಗುವ ಮಾಹಿತಿಯನ್ನೇ ನಂಬುವುದು ಸೂಕ್ತ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ದಿನಾಂಕಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ವಿಶೇಷವಾಗಿ CBSE, ICSE ಹಾಗೂ ಇತರ ಮಂಡಳಿಗಳ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ (Marks Card) ಹಾಗೂ ಅಗತ್ಯ ದಾಖಲೆಗಳನ್ನು ತಕ್ಷಣವೇ ಅಪ್ಲೋಡ್ ಮಾಡುವಂತೆ ಕೆಇಎ ಸೂಚಿಸಿದೆ.
ಮುಂದಿನ ಕೆಲ ದಿನಗಳಲ್ಲಿ ಏಇಂ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಸಿಇಟಿ ಫಲಿತಾಂಶದ ಮೇಲೆ ರಾಜ್ಯದ ಗಮನ ನೆಟ್ಟಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.